Google pixel 7 ಮೇಲೆ ಭರ್ಜರಿ ಡಿಸ್ಕೌಂಟ್: 16 ಸಾವಿರ ರೂ. ಕಡಿಮೆ
ಇ ಕಾಮರ್ಸ್ ವೆಬ್ ಸೈಟ್‌ನಲ್ಲಿ ಈಗ ಭರ್ಜರಿ ಡಿಸ್ಕೌಂಟ್ ಆರಂಭವಾಗಿದೆ. ಅಮೇಜಾನ್, ಫ್ಲಿಪ್‌ಕಾರ್ಟ್‌ನಲ್ಲಿ ಗ್ರಾಹಕರು ಶಾಪಿಂಗ್ ಮಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ಒಂದು ವೇಳಿ ನೀವು ಸಹ ಒಳ್ಳೆಯ ಹೈ ಕ್ವಾಲಿಟ್, ಅತ್ಯುತ್ತಮ ತಂತ್ರಜ್ಞಾನದ ಸ್ಮಾರ್ಟ್ ಫೋನ್ ತೆಗೆದುಕೊಳ್ಳಲು ಬಯಸ್ಸಿದ್ದರೆ, ನಿಮಗೆ ಇಲ್ಲಿದೆ ಭರ್ಜರಿ ಆಫರ್. ಅಲ್ಲದೆ ಜೇಬಿನ ಭಾರ ಕಡಿಮೆ ಮಾಡಲು ಇ ಕಾಮರ್ಸ್ ವೆಬ್ ಸೈಟ್‌ಗಳು ಮುಂದಾಗುತ್ತಿವೆ. ಫ್ಲಿಪ್ ಕಾರ್ಟ್ ಬಿಗ್ ಸೇವಿಂಗ್ ಡೇ ಸೇಲ್ ಮೇ 9ರವರೆಗೆ ನಡೆಯಲಿದೆ. ಈ ವೇಳೆ ಕಂಪನಿ ಗ್ರಾಹಕರಿಗೆ ಬಂಪರ್ ಆಫರ್ ನೀಡಿದೆ.
ಪೀಮಿಯಂ ಫೋನ್ ತೆಗೆದುಕೊಳ್ಳುವ ಆಸೆಯನ್ನು ಹೊಂದಿರು ಗ್ರಾಹಕರಿಗೆ ಇದು ಒಳ್ಳೆಯ ಸುದ್ದಿ. ಇನ್ನು ಮಿಡ್ ರೇಂಜ್ ಫೋನ್ ತೆಗೆದುಕೊಳ್ಳುವ ಗ್ರಾಹಕ, ಪ್ರೀಮಿಯಂ ಫೋನ್ ತೆಗೆದುಕೊಳ್ಳಲು ಬಯಸಿದ್ದು, ನನ್ನ ಬಳಿ ಅಷ್ಟು ಹಣ ಸಾಕಾಗುತ್ತಿಲ್ಲ ಎಂದು ಒದ್ದಾಡುತ್ತಿರುವವರಿಗೂ ಕಂಪನಿ ಹಲವು ಆಫರ್ ನೀಡುತ್ತಿದೆ. ಒಂದು ವೇಳೆ ನೀವು ಪ್ಲಿಕ್ ಕಾರ್ಟ್ ವೆಬ್ ಸೈಟ್‌ನಿಂದ ಪ್ರೀಮಿಯಂ ಸ್ಮಾರ್ಟ್‌ಫೋನ್ ತೆಗೆದುಕೊಳ್ಳಲು ಬಯಸ್ಸಿದ್ದರೆ, ಇದೋ ನಿಮಗೆ ಸುವರ್ಣ ಅವಕಾಶ. ಒಂದಿ ವೇಳೆ ನೀವು ಗೂಗಲ್ ಪಿಕ್ಸಲ್ ಸ್ಮಾರ್ಟ್‌ಫೋನ್‌ಗಳನ್ನು ತೆಗೆದುಕೊಳ್ಳುವ ಮನಸ್ಸು ಮಾಡಿದ್ದರೆ ಫ್ಲಿಪ್ ಕಾರ್ಟ್ ಒಳ್ಳೆಯ ಆಫರ್ ನೀಡಲು ಮುಂದಾಗಿದೆ.

ಈ ವೆಬ್ ಸೈಟ್‌ನಲಿ Google Pixel 7, Pixel 7 Pro, Google Pixel 7a, Google Pixel 8 ಫೋನ್‌ಗಳ ಮೇಲೆ ಭಾರೀ ಡಿಸ್ಕೌಂಟ್ ನೀಡುತ್ತಿದೆ. ಬಿಗ್ ಸೇವಿಂಗ್ ಡೇ ಆರಂಭವಾಗಿದ್ದು, ಈ ವೇಳೆ ಫ್ಲಿಪ್ ಕಾರ್ಟ್ ಗ್ರಾಹಕರನ್ನು ತನ್ನತ್ತ ಹಿಡಿದಿಟ್ಟುಕೊಳ್ಳಲು ಮೆಗಾ ಪ್ಲ್ಯಾನ್ ಮಾಡಿದೆ.
Google Pixel 7 ಬೆಲೆಯಲ್ಲಿ ಭಾರೀ ಇಳಿಕೆ
ಬಿಗ್ ಸೇವಿಂಗ್ ಡೇಯಲ್ಲಿ ಫ್ಲಿಪ್ ಕಾರ್ಟ್ ಕಂಪನಿ Google Pixel 7 ತೆಗೆದುಕೊಳ್ಳುವ ಗ್ರಾಹಕರ ಜೇಬಿನ ಹೊರೆಯನ್ನು ಕಡಿಮೆ ಮಾಡಿದೆ. ಗೂಗಲ್ ಪಿಕ್ಸಲ್ 7 ಬೆಲೆ ಆಫರ್‌ಗೂ ಮೊದಲು 59,999 ಆಗಿತ್ತು. ಬಿಗ್ ಸೇವಿಂಗ್ ಡೇ ಅಡಿಯಲ್ಲಿ ಗ್ರಾಹಕರು ಈ ಫೋನ್ ಮೇಲೆ ಶೇಕಡಾ 26 ರಷ್ಟು ರಿಯಾಯಿಯಿ ಪಡೆಯುತ್ತಿದ್ದಾರೆ. ಡಿಸ್ಕೌಂಟ್ ಎಲ್ಲ ತೆಗೆದ ಬಳಿಕ ಈ ಪ್ರೀಮಿಯಂ ಫೋನ್‌ನ್ನು ಗ್ರಾಹಕ 43,999ರಲ್ಲಿ ಪಡೆಯಬಹುದಾಗಿದೆ.
ಇದೇ ಮೊದಲ ಬಾರಿಗೆ ಗೂಗಲ್ ಪಿಕ್ಸಲ್ 7 ಮೇಲೆ ಇಷ್ಟು ದೊಡ್ಡ ಡಿಸ್ಕೌಂಟ್ ನೀಡಲಾಗುತ್ತಿದೆ. ಫ್ಲಿಪ್ ಕಾರ್ಟ್ ನೀಡುತ್ತಿರುವ ಈ ಡಿಸ್ಕೌಂಟ್ ಮೇಲೆ ಬ್ಯಾಂಕ್ ಡಿಸ್ಕೌಂಟ್ ಹಾಗೂ ಎಕ್ಸ್‌ಜೇಂಬ್ ಬೇನಿಫಿಟ್ ಸಹ ಪಡೆಯಬಹುದಾಗಿದೆ. ಈ ಫೋನ್ ಖರೀದಿಯ ಮೇಲೆ ಫ್ಲಿಪ್‌ಕಾರ್ಟ್ ತನ್ನ ಗ್ರಾಹಕರಿಗೆ ರೂ 39 ಸಾವಿರದವರೆಗೆ ಬಲವಾದ ವಿನಿಮಯ ಕೊಡುಗೆಯನ್ನು ನೀಡುತ್ತಿದೆ.

ಫೋನ್‌ನಲ್ಲಿರುವ ವಿಶೇಷತೆ ಏನು?
ಕಂಪನಿಯು ಗೂಗಲ್ ಪಿಕ್ಸೆಲ್ 7 ನಲ್ಲಿ 6.3 ಇಂಚಿನ ದೊಡ್ಡ ಪರದೆಯನ್ನು ನೀಡುತ್ತಿದೆ. ಅಲ್ಲದೆ AMOLED ಡಿಸ್‌ಪ್ಲೇ ಹೊಂದಿದ್ದು, ಇದು 90Hz ನ ರಿಫ್ರೆಶ್ ದರವನ್ನು ಹೊಂದಿದೆ. 1400 ನಿಟ್ಸ್‌ನ ಗರಿಷ್ಠ ಹೊಳಪನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ Android 13 ನಲ್ಲಿ ಕಾರ್ಯನಿರ್ವಹಿಸುತ್ತದೆ.
ಗೂಗಲ್ ಈ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್ ಟೆನ್ಸರ್ ಜಿ2 ಪ್ರೊಸೆಸರ್ ಅನ್ನು ನೀಡಿದೆ. Google Pixel 7 8GB RAM ಮತ್ತು 256GB ಇಂಟರ್ನಲ್ ಸ್ಟೋರೇಜ್ ಹೊಂದಿದೆ. ಹಿಂಭಾಗದಲ್ಲಿ 50+12 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ 10.8 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ನೀಡಲಾಗಿದೆ.











Click it and Unblock the Notifications