ಓಂಕಾರದಿಂದ ಮಾನಸಿಕ ನೆಮ್ಮದಿ ಪಡೆಯಲು ಸಾಧ್ಯ: ಹೇಗೆ?
ನಾವೆಷ್ಟೇ ಸಂಪಾದಿಸಿದರೂ, ಸಿರಿ ಸಂಪತ್ತನ್ನು ಕೂಡಿ ಹಾಕಿಕೊಂಡರೂ ಮಾನಸಿಕ ನೆಮ್ಮದಿ ಇಲ್ಲದೆ ಹೋದರೆ ಅದೊಂದು ಬದುಕಾಗಿರಲು ಸಾಧ್ಯವಿಲ್ಲ. ಹೀಗಾಗಿ ಎಲ್ಲರೂ ಮಾನಸಿಕ ನೆಮ್ಮದಿಗಾಗಿ ಪ್ರಾರ್ಥನೆ ಮಾಡುತ್ತಾರೆ. ಇಷ್ಟಕ್ಕೂ ನೆಮ್ಮದಿ ಪಡೆಯಲು ಏನೇನು ಮಾಡಬೇಕು? ಎಂಬುದನ್ನು ತಮ್ಮದೇ ವ್ಯಾಖ್ಯಾನಗಳ ಮೂಲಕ ಆಧ್ಯಾತ್ಮಿಕ ಚಿಂತಕರು ಅಭಿಪ್ರಾಯಗಳನ್ನು ನಮ್ಮ ಮುಂದಿಟ್ಟಿದ್ದಾರೆ.
ಬಹಳಷ್ಟು ಸಲ ಮಾನಸಿಕ ನೆಮ್ಮದಿ ಹಾಳಾಗಲು ನಾವೇ ಕಾರಣ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಕೆಲವೊಮ್ಮೆ ನಾವು ಮಾಡುವ ಎಡವಟ್ಟುಗಳು ನೆಮ್ಮದಿ ಕೆಡಿಸಿದರೆ, ಮಾಡುವ ಕೆಲಸಗಳು, ಒತ್ತಡದ ಜೀವನಗಳು ಕೂಡ ಬೇಸರ ತರಿಸಿ ಬಿಡುತ್ತವೆ. ಹಿಂದಿನ ಕಾಲದಲ್ಲಿ ಒಂದಷ್ಟು ಸಮಯವನ್ನು ದೇವರ ಧ್ಯಾನ, ಭಜನೆ ಮಾಡುವ ಮೂಲಕ ಕಳೆಯುತ್ತಿದ್ದರು ಇದರಿಂದ ಮಾನಸಿಕ ನೆಮ್ಮದಿ ಪಡೆಯುತ್ತಿದ್ದರು.

ಇವತ್ತು ಕೂಡ ಆ ರೀತಿಯಿಂದ ಮಾನಸಿಕ ನೆಮ್ಮದಿ ಪಡೆಯಲು ಸಾಧ್ಯವಿದೆ. ಆದರೆ ನಾವು ಕಾಲದ ಜತೆ ಓಡುತ್ತಿದ್ದೇವೆ. ಹೀಗಾಗಿ ಪ್ರಶಾಂತ ವಾತಾವರಣದಲ್ಲಿರುವ ಯಾವುದಾದರೊಂದು ದೇವಾಲಯಕ್ಕೆ ಹೋಗಿ ಒಂದಷ್ಟು ಹೊತ್ತು ಹಸಿರು ಪರಿಸರದ ನಡುವೆ ಕಳೆದು ಬರಲು ಸಾಧ್ಯವಾಗುತ್ತಿಲ್ಲ. ಆದರೆ ಇದನ್ನು ರೂಢಿಸಿಕೊಂಡರೆ ಮಾನಸಿಕ ನೆಮ್ಮದಿ ಸಾಧ್ಯವಾಗುತ್ತದೆ.
ಒತ್ತಡದ ಮಧ್ಯೆ ಆರೋಗ್ಯಕರ ಜೀವನ ಹೇಗೆ?
ನಮ್ಮಲ್ಲಿನ ಮಾನಸಿಕ ನೆಮ್ಮದಿ ಹಲವು ಕಾಯಿಲೆಯಿಂದ ನಮ್ಮನ್ನು ರಕ್ಷಿಸುತ್ತದೆ. ಅಧ್ಯಾತ್ಮಿಕ ಚಿಂತಕರ ಪ್ರಕಾರ ಮಾನಸಿಕ ನೆಮ್ಮದಿ ಪಡೆಯಲು ತೀರ್ಥಕ್ಷೇತ್ರಗಳಿಗೆ ಹೋಗ ಬೇಕಾಗಿಲ್ಲ. ಇದ್ದಲ್ಲಿಯೇ ಕುಳಿತು ಏಕಾಗ್ರತೆಯಿಂದ ಓಂಕಾರದ ಜಪ ಮಾಡಿದರೂ ಸಾಕು ಎಂದು ಹೇಳಿದ್ದಾರೆ. ಅವರ ಪ್ರಕಾರ ಒಂದೆಡೆ ಏಕಾಂತದಲ್ಲಿ ಕೂತು ಓಂಕಾರದ ಜಪ ಮಾಡಿ ಮಾನಸಿಕ ನೆಮ್ಮದಿ ನಿಮ್ಮಲ್ಲಿ ಕಾಣಿಸುತ್ತದೆ ಎಂದಿದ್ದಾರೆ.

ನಿಜಹೇಳಬೇಕೆಂದರೆ ಇವತ್ತಿನ ಒತ್ತಡದ ಬದುಕಿನಲ್ಲಿ ಕೂತರೂ, ನಿಂತರೂ ಏನಾದರೊಂದು ಯೋಚನೆ ಮಾಡುತ್ತಲೇ ಇರುತ್ತೇವೆ. ಅದು ಅನಿವಾರ್ಯವೂ ಹೌದು. ಆದರೆ ಅದರಲ್ಲೂ ಆಗಾಗ್ಗೆ ರಿಂಗಣಿಸುವ ಮೊಬೈಲ್, ಇನ್ನೇನೋ ಒತ್ತಡಗಳು ನಮ್ಮನ್ನು ಏಕಾಂತವಾಗಿ ಇರಲು ಬಿಡುತ್ತಿಲ್ಲ. ಹಾಗಾಗಿ ಒತ್ತಡದ ಮಧ್ಯೆ ಆರೋಗ್ಯಕರ ಬದುಕನ್ನು ಕಟ್ಟಿಕೊಳ್ಳಲು ಹೆಣಗಾಡಬೇಕಾಗಿದೆ.
ಓಂಕಾರದ ಬಗ್ಗೆ ವಿವೇಕಾನಂದರು ಹೇಳಿದ್ದೇನು?
ದೈಹಿಕವಾಗಿ ಆರೋಗ್ಯವಾಗಿ ಇರಬೇಕಾದರೆ ಮಾನಸಿಕ ನೆಮ್ಮದಿ ಅಗತ್ಯ. ಮಾನಸಿಕವಾಗಿ ಆರೋಗ್ಯವಾಗಿದ್ದರೆ ನಾವು ನಮ್ಮ ಕೆಲಸವನ್ನು ಉತ್ಸಾಹದಿಂದ ಮಾಡಲು ಸಾಧ್ಯವಾಗುತ್ತದೆ. ಓಂಕಾರದ ಕುರಿತಂತೆ ಹಿಂದಿನ ಕಾಲದಿಂದಲೂ ಮಹರ್ಷಿಗಳು, ಆಧ್ಯಾತ್ಮಿಕ ಚಿಂತಕರು ತಮ್ಮದೇ ಆದ ವ್ಯಾಖ್ಯಾನ ನೀಡಿರುವುದನ್ನು ನಾವು ಕಾಣಬಹುದು. ಅದರ ಮಹಿಮೆಯನ್ನು ಅರಿತು ಸಾರ್ಥಕತೆಯನ್ನು ಕಂಡಿದ್ದಾರೆ.

ಸ್ವಾಮಿ ವಿವೇಕಾನಂದರು ಓಂಕಾರದ ಕುರಿತಂತೆ ಹೇಳುತ್ತಾ ಜೀವದ ಮೇಲೆ ಅನೇಕ ಜನ್ಮ ಸಂಪ್ರದಾಯವಾದ ಸಂಸ್ಕಾರ ಎಂಬುವುದೊಂದೇ ಎಂಬುವುದನ್ನು ನಾವು ಮರೆಯಬಾರದು. ಈ ಸಂಸ್ಕಾರಗಳು ಹೆಚ್ಚು ಹೆಚ್ಚಾಗಿ ಅಂತರ್ಗತವಾಗಿದ್ದುಕೊಂಡು ಒಂದಿಷ್ಟು ಪ್ರಚೋದನೆ ಸಿಕ್ಕಾಗ ಹೊರಕ್ಕೆ ಕಾಣಿಸುತ್ತವೆ. ದ್ರವ್ಯರೂಪದ ಈ ಅಣುಗಳ ಸ್ಪಂದನವಿಲ್ಲ.
ಓಂಕಾರ ಓಡುವ ಮನಸ್ಸಿನ ಲಗಾಮು
ಈ ಜಗತ್ತು ಪ್ರಳಯಕ್ಕೊಳಗಾದ ಎಲ್ಲ ಬ್ರಹತ್ ಸ್ಪಂದನಗಳೂ ಕಾಣದೆ ಇದ್ದಾಗ ಸೂರ್ಯ, ನಕ್ಷತ್ರ, ಚಂದ್ರ ಮತ್ತು ಈ ಭೂಮಿಯೇ ಕರಗಿ ಹೋದರೂ ಅಣುಗಳ ಸ್ಪಂದನ ಮಾತ್ರ ನಿಲ್ಲುವುದೇ ಇಲ್ಲ. ಪ್ರತಿಯೊಂದು ಅಣುವೂ ಈ ದೊಡ್ಡ ದೊಡ್ಡ ಜಗತ್ತುಗಳು ಮಾಡುವ ಕೆಲಸವನ್ನೇ ಮಾಡುತ್ತವೆ. ಹಾಗೆಯೇ ಚಿತ್ತದ ಸ್ಪಂದನವೂ ಉಪಶಮನಗೊಂಡರೂ ಅದರ ದ್ರವ್ಯರೂಪವಾಗಿರುವ ಅಣುಗಳ ಸ್ಪಂದನವು ಮುಂದುವರಿದೇ ಇರುತ್ತದೆ.
ಯಾವುದೇ ಪ್ರೇರಣೆ ಒದಗಿದರೂ ಮತ್ತೆ ಮೈದೋರುತ್ತದೆ. ಓಂಕಾರ ಜಪದ ಪುನರಾವೃತ್ತಿಯೂ ಹಾಗೆಯೇ ಏಕೆಂದರೆ ಪವಿತ್ರವಾದುದರೊಂದಿಗಿನ ಒಂದು ಕ್ಷಣದ ಸಹವಾಸವಷ್ಟೆ ಸಾಕು ಅದೇ ಭವಸಾಗರವನ್ನು ದಾಟಿಸುವ ಹಡಗಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಮನಸ್ಸಿನಿಂದ ಬೇರ್ಪಡಿಸಿಕೊಂಡು ನೋಡುವುದನ್ನು ಕಲಿಯಬೇಕು. ಪವಿತ್ರವಾದ ಓಂಕಾರವನ್ನು ಜಪಿಸುವುದರಿಂದ ಸಾಧ್ಯವಾದಷ್ಟು ಮಟ್ಟಿಗೆ ಹುಚ್ಚು ಕುದುರೆಯಂತೆ ಓಡುವ ನಮ್ಮ ಮನಸ್ಸಿಗೆ ಲಗಾಮು ಹಾಕಲು ಸಾಧ್ಯವಾಗುತ್ತದೆ.
ಓಂಕಾರ ಜಪದಿಂದ ಸಂಕಲ್ಪ ಶಕ್ತಿ ವೃದ್ಧಿ
ಇನ್ನೊಂದೆಡೆ ಸ್ವಾಮಿ ಬ್ರಹ್ಮಾನಂದರು ಹೇಳುತ್ತಾರೆ ಓಂಕಾರ ಜಪ ದೈನಂದಿನ ಚಟುವಟಿಕೆಗಳ ನಡುವೆ ಚಕ್ರದಂತೆ ತಿರುಗುತ್ತಲೇ ಇರಬೇಕು. ಆಗ ಹೃದಯದ ಬೇಗೆಯೆಲ್ಲವೂ ತಣ್ಣಗಾಗುತ್ತದೆ. ಭಗವಂತನ ಆಶ್ರಯ ಪಡೆದು ಎಷ್ಟೋ ಪಾಪಿಗಳು ಪವಿತ್ರರೂ, ಮುಕ್ತರೂ ಆಗಿದ್ದಾರೆ. ಕೆಲವು ಸಂದರ್ಭಗಳಲ್ಲಿ ಮನಸ್ಸಿನೊಳಗೆ ಅನಪೇಕ್ಷಣೀಯ ವಿಚಾರಗಳು, ಚಾಂಚಲ್ಯಗಳು ಪ್ರವೇಶಿಸುತ್ತವೆ. ಇಂತಹ ಸಂದರ್ಭಗಳಲ್ಲಿ ಓಂಕಾರದ ಜಪ ಮಾಡುವುದರಿಂದ ಅವುಗಳನ್ನು ತಡೆಯಬಹುದಾಗಿದೆ.
ಪತಂಜಲಿಯ ಪ್ರಕಾರ ಓಂಕಾರವನ್ನು ಜಪಿಸಬೇಕು ಮತ್ತು ಅದರ ಅರ್ಥವನ್ನು ಪರಿಭಾವಿಸಬೇಕು. ಹೀಗೆ ಅದನ್ನು ಜಪಿಸುವ ಯೋಗಿಗೆ ಏಕಾಗ್ರತೆಯುಂಟಾಗುತ್ತದೆ. ಆ ಮೂಲಕ ಆತನ ಮನಸ್ಸು ಅಂತರಾತ್ಮದ ಕಡೆ ಹೊರಳಿ ಚಿತ್ತದ ಏಕಾಗ್ರತೆಗೆ ಅಡೆತಡೆಯಾದ ತೊಂದರೆಯಿಂದ ಬಿಡುಗಡೆ ಹೊಂದುತ್ತದೆ. ಓಂಕಾರದ ನಿರಂತರ ಜಪದಿಂದ ಹಾಗೂ ಚಿಂತನೆಯಿಂದ ನಮ್ಮೊಳಗಿನ ಸಂಕಲ್ಪ ಶಕ್ತಿಯು ಹೆಚ್ಚುತ್ತದೆ. ಅಷ್ಟೇ ಅಲ್ಲ ಮಾನಸಿಕ ಮತ್ತು ದೈಹಿಕ ತೊಂದರೆಗಳು ಸದ್ದಿಲ್ಲದೆ ನಿವಾರಣೆಯಾಗುತ್ತದೆ. ಒಂದಷ್ಟು ಹೊತ್ತನ್ನು ತಮ್ಮೆಲ್ಲಾ ಜಂಜಾಟಗಳನ್ನು ಮರೆತು ಓಂಕಾರದ ಜಪದಲ್ಲಿ ತೊಡಗಿಸಿಕೊಂಡಿದ್ದೇ ಆದರೆ ಒಂದಷ್ಟು ಮನಶಾಂತಿ, ನೆಮ್ಮದಿ ಪಡೆಯಬಹುದು ಎಂಬುವುದರಲ್ಲಿ ಎರಡು ಮಾತಿಲ್ಲ.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications