ಹೊಸವರ್ಷ ಆಚರಣೆಗೆ ಮಂಜಿನ ನಗರಿ ಸಜ್ಜು: ಕೊಡಗಿನಲ್ಲಿ ಪ್ರವಾಸಿಗರ ಕಲರವ
ಮಡಿಕೇರಿ, ಡಿಸೆಂಬರ್ 29: ವಾರಾಂತ್ಯದ ರಜೆಗಳ ಜೊತೆಯಲ್ಲಿಯೇ ಹೊಸವರ್ಷವೂ ಆಗಮನವಾಗುತ್ತಿರುವ ಕಾರಣದಿಂದಾಗಿ ಎಲ್ಲೆಡೆ ಪ್ರವಾಸಿಗರು ತುಂಬಿ ತುಳುಕುತ್ತಿದ್ದಾರೆ. ನಗರದಲ್ಲಿ ಸದಾ ಕೆಲಸದಲ್ಲಿ ನಿರತರಾಗಿದ್ದವರು ತಮ್ಮ ಎಲ್ಲ ಜಂಜಡಗಳನ್ನು ಬದಿಗೊತ್ತಿ ರಿಲ್ಯಾಕ್ಸ್ ಗಾಗಿ ಪ್ರವಾಸಿ ತಾಣಗಳತ್ತ ಮುಖ ಮಾಡುತ್ತಿದ್ದಾರೆ. ಹೆಚ್ಚಿನವರು ಕೊಡಗಿನ ಕಡೆಗೆ ಆಗಮಿಸುತ್ತಿರುವುದರಿಂದ ಇಲ್ಲಿನ ಹೋಟೆಲ್, ರೆಸಾರ್ಟ್ ಮತ್ತು ಹೋಂಸ್ಟೇಗಳು ಭರ್ತಿಯಾಗಿವೆ. ದೂರದ ಊರುಗಳಲ್ಲಿ ಕೆಲಸ ಮಾಡಿಕೊಂಡಿದ್ದವರು ತಮ್ಮ ಊರಿಗೆ ಮರಳಿರುವ ಕಾರಣದಿಂದಾಗಿ ಜನಜಂಗುಳಿ ಕಾಣಿಸುತ್ತಿದೆ.
ಒಂದೆರಡು ದಶಕಗಳ ಹಿಂದೆ ಕೇವಲ ಕೃಷಿ ಚಟುವಟಿಕೆಯಷ್ಟೇ ಕೊಡಗಿನ ಆದಾಯದ ಮೂಲವಾಗಿತ್ತು. ಆದರೆ ಪ್ರವಾಸೋದ್ಯಮ ಅಭಿವೃದ್ಧಿಯಾದ ಬಳಿಕ ವ್ಯಾಪಾರ ವಹಿವಾಟುಗಳು ಹೆಚ್ಚಾಗಿವೆ. ಹೋಟೆಲ್ ಉದ್ಯಮವೂ ಚೇತರಿಸಿದೆ. ಹೋಂಸ್ಟೇಗಳು ಹುಟ್ಟಿಕೊಂಡಿರುವುದರಿಂದ ಆರ್ಥಿಕ ಚೇತರಿಕೆ ಕಂಡು ಬಂದಿದೆ. ಬಹುತೇಕ ವ್ಯಾಪಾರ ವಹಿವಾಟುಗಳು ಪ್ರವಾಸಿಗರನ್ನು ನಂಬಿ ನಡೆಯುತ್ತಿದೆ. ಹೋಂಸ್ಟೇಗಳು ಕೂಡ ಪ್ರವಾಸಿಗರನ್ನು ಅವಲಂಭಿಸಿರುವ ಕಾರಣದಿಂದಾಗಿ ಪ್ರವಾಸಿಗರನ್ನು ಸೆಳೆಯುವುದು ಅನಿವಾರ್ಯವಾಗಿದೆ.

ಭೂಕುಸಿತ ಮತ್ತು ಕೊರೋನಾದಿಂದಾಗಿ ಕೊಡಗಿನಲ್ಲಿ ಪ್ರವಾಸೋದ್ಯಮ ನೆಲಕಚ್ಚಿತ್ತು. ಪ್ರವಾಸಿಗರು ಜಿಲ್ಲೆಯತ್ತ ಬರಲು ಹಿಂದೇಟು ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ವೇಳೆ ಹಲವು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಪ್ರವಾಸಿಗರನ್ನು ಸೆಳೆಯುವ ಪ್ರಯತ್ನಗಳನ್ನು ಮಾಡಲಾಗಿತ್ತು. ಆದರೆ ಕಳೆದ ಒಂದೆರಡು ವರ್ಷಗಳಿಂದ ಕೊಡಗಿನಲ್ಲಿ ಪ್ರವಾಸೋದ್ಯಮ ಚೇತರಿಸಿಕೊಂಡಿದೆ. ಹೊರಗಿನವರು ಬಂದು ಬಂಡವಾಳ ಸುರಿದು ಹೋಟೆಲ್, ಹೋಂಸ್ಟೇ, ರೆಸಾರ್ಟ್ ಗಳನ್ನು ನಿರ್ಮಿಸುತ್ತಿದ್ದಾರೆ. ಇದರಿಂದ ಸ್ಥಳೀಯವಾಗಿ ಉದ್ಯೋಗಾವಕಾಶಗಲು ಸೃಷ್ಟಿಯಾಗುತ್ತಿವೆ.
ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದರಿಂದ ವ್ಯಾಪಾರ ವಹಿವಾಟುಗಳು ಜೋರಾಗಿ ನಡೆಯುತ್ತಿವೆ. ಹಾಗೆಯೇ ಟ್ರಾವೆಲ್ಸ್ ಉದ್ಯಮ ಚೇತರಿಕೆ ಕಂಡಿದೆ. ಮೊದಲೆಲ್ಲ ಕೆಲವೇ ಕೆಲವು ಸಮಯಗಳಲ್ಲಿ ಮಾತ್ರ ಪ್ರವಾಸಿಗರು ಬರುತ್ತಿದ್ದರು. ಆದರೆ ಬದಲಾದ ಕಾಲದಲ್ಲಿ ವರ್ಷಪೂರ್ತಿ ಪ್ರವಾಸಿಗರು ಕೊಡಗಿಗೆ ಬರುತ್ತಾರೆ. ಅದರಲ್ಲೂ ವಾರಾಂತ್ಯದ ದಿನಗಳಲ್ಲಿ ಸಾಗರೋಪಾದಿಯಲ್ಲಿ ಆಗಮಿಸುವುದು ಸಾಮಾನ್ಯವಾಗಿದೆ. ಕಳೆದೊಂದು ದಶಕದಲ್ಲಿ ಕೊಡಗು ಸಾಕಷ್ಟು ಅಭಿವೃದ್ಧಿಯನ್ನು ಕಾಣುವಂತಾಗಿದೆ.
ಇದೀಗ ಕೃಷಿ ಜತೆಗೆ ಹಲವು ರೀತಿಯ ವ್ಯಾಪಾರ ವಹಿವಾಟುಗಳು ತೆರೆದುಕೊಂಡಿವೆ. ಅಲ್ಲಲ್ಲಿ ಹೋಟೆಲ್ ಗಳು, ಮಾಲ್ ಗಳು, ಅಂಗಡಿ ಮಳಿಗೆಗಳು ನಿರ್ಮಾಣವಾಗಿವೆ. ಇವೆಲ್ಲವೂ ಕೊಡಗಿನ ಬದಲಾವಣೆಗೆ ಕಾರಣವಾಗುತ್ತಿವೆ. ಕೊಡಗಿನಲ್ಲಿ ಎಲ್ಲ ರೀತಿಯ ಮೂಲ ಸೌಕರ್ಯಗಳು ದೊರೆಯುತ್ತಿರುವುದರಿಂದ ಹೊರಗಿನಿಂದ ಬರುವ ಪ್ರವಾಸಿಗರಿಗೆ ಪ್ರವಾಸ ಕಷ್ಟವಾಗುತ್ತಿಲ್ಲ. ಇನ್ನು ನಿನ್ನೆ ಮೊನ್ನೆಯವರೆಗೂ ಇಲ್ಲಿ ಮಳೆಯಿತ್ತು. ಇದೀಗ ಆಹ್ಲಾದಕರ ವಾತಾವರಣ ನಿರ್ಮಾಣವಾಗಿದೆ. ಮಂಜಿನ ನಡುವೆ ಸಣ್ಣಗೆ ನಡುಕ ಹುಟ್ಟಿಸುವ ಚಳಿಯಲ್ಲಿ ಮೈಕೊಟ್ಟು ಓಡಾಡುವುದು ಮಜಾ ಕೊಡುತ್ತಿದೆ.

ಹೋಂಸ್ಟೇ, ರೆಸಾರ್ಟ್, ಹೋಟೆಲ್ ಗಳು ಭರ್ತಿ
ಇಂತಹ ಸುಂದರ ಪರಿಸರದಲ್ಲಿ ಒಂದೆರಡು ದಿನಗಳ ಕಾಲ ಇದ್ದು ಹೋಗಲೆಂದು ಬರುವವರ ಸಂಖ್ಯೆ ಜಾಸ್ತಿಯಿದೆ. ಉಳಿದಂತೆ ನಿಸರ್ಗ ನಿರ್ಮಿತ ಹಲವು ಪ್ರವಾಸಿ ತಾಣಗಳೆಲ್ಲವನ್ನು ನೋಡಿಕೊಂಡು ಒಂದಷ್ಟು ಹೊತ್ತು ಅಲ್ಲಿಯೇ ಕಾಲ ಕಳೆದು ಹೋಗುವುದು ಪ್ರವಾಸಿಗರ ಇರಾದೆಯಾಗಿದೆ. ಪ್ರತಿ ವರ್ಷ ಕೊಡಗಿನಲ್ಲಿಯೇ ವರ್ಷಾಚರಣೆ ಮಾಡಬೇಕೆಂದು ಬಹಳಷ್ಟು ಮಂದಿಯ ಬಯಕೆಯಾಗಿದೆ. ಅಂತಹವರು ಪ್ರತಿವರ್ಷವೂ ಇಲ್ಲಿಗೆ ಬರುತ್ತಾರೆ. ಇದಕ್ಕಾಗಿ ಮೊದಲೇ ರೆಸಾರ್ಟ್, ಹೋಟೆಲ್ ಗಳಲ್ಲಿ ಕೊಠಡಿಗಳನ್ನು ಕಾಯ್ದಿರಿಸುತ್ತಾರೆ.
ಈ ಬಾರಿಯಂತು ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು ಕೊಡಗು ಮಾತ್ರವಲ್ಲದೆ, ಮಲೆನಾಡು ಕಡೆಗೆ ಮುಖ ಮಾಡಿರುವ ಪ್ರವಾಸಿಗರ ಸಂಖ್ಯೆ ದೊಡ್ಡಮಟ್ಟದಲ್ಲಿದೆ. ಹೀಗಾಗಿ ಹೋಟೆಲ್, ರೆಸಾರ್ಟ್, ಹೋಂಸ್ಟೇ ಗಳು ಭರ್ತಿಯಾಗಿವೆ. ಆದುದರಿಂದ ಕೊನೆಗಳಿಗೆಯಲ್ಲಿ ಮಲೆನಾಡಿನ ಕಡೆಗೆ ಹೋಗಲು ಮನಸ್ಸು ಮಾಡಿದವರು ವಾಸ್ತವ್ಯದ ಬಗ್ಗೆ ಮೊದಲೇ ತಿಳಿದುಕೊಂಡು ತೆರಳುವುದು ತುಂಬಾ ಒಳ್ಳೆಯದು. ಅದು ಏನೇ ಇರಲಿ ಈ ಸಮಯದಲ್ಲಿ ಪ್ರವಾಸಿಗರಿಗೆ ಮಲೆನಾಡಿನ ಅನುಭವ ವಿಭಿನ್ನವಾಗಿರುತ್ತದೆ.

ಇದೆಲ್ಲದರ ನಡುವೆ ಕೊಡಗಿಗೆ ಹೋದವರು ಭಾಗಮಂಡಲದ ತ್ರಿವೇಣಿಸಂಗಮದಲ್ಲಿ ಮಿಂದು ತಲಕಾವೇರಿಗೆ ತೆರಳಿ ಕಾವೇರಿಯ ದರ್ಶನ ಮಾಡಿಕೊಂಡು ಮಡಿಕೇರಿಯ ಕೋಟೆ ಕೊತ್ತಲಗಳನ್ನು ನೋಡಿ ಹಾಗೆಯೇ ಓಂಕಾರೇಶ್ವರನ ಪ್ರಾರ್ಥಿಸಿ, ರಾಜಾಸೀಟಿನಲ್ಲಿ ನಿಸರ್ಗದ ಚೆಲುವನ್ನು ಆಸ್ವಾದಿಸಿ, ಅಬ್ಬಿ ಜಲಪಾತದ ಭೋರ್ಗರೆತವನ್ನು ಕಣ್ಣಾರೆ ಕಂಡು, ಮಂದಾಲಪಟ್ಟಿಯಲ್ಲಿ ಮೈಚೆಲ್ಲಿ ನಿಸರ್ಗಧಾಮದಲ್ಲಿ ಅಡ್ಡಾಡಿ ಬಂದರೆ ಇಲ್ಲಿನ ಅನುಭವಗಳು ರೋಮಾಂಚನವಾಗಿರುತ್ತವೆ. ಅಷ್ಟೇ ಅಲ್ಲದೆ ಮರೆಯಲಾರದ ನೆನಪಾಗಿ ಉಳಿದು ಬಿಡುತ್ತದೆ.
-
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
Prem: ಆಗ ಅಪ್ಪಾಜಿ-ಅಂಬರೀಷಣ್ಣ ಇದ್ರು, ಈಗ ಯಾರಿದ್ದಾರೆ; ಕೆಡಿ ವಿವಾದ ಆದಾಗಲೂ ಯಾರೂ ಸಪೋರ್ಟ್ಗೆ ಬರಲಿಲ್ಲ: ಪ್ರೇಮ್ ಬೇಸರ












Click it and Unblock the Notifications