ರಾಜಸ್ಥಾನದಲ್ಲಿ ವಿಶ್ವದ ಅತಿ ಎತ್ತರದ ಶಿವನ ಪ್ರತಿಮೆ; ಪ್ರತಿಮೆ ವೈಶಿಷ್ಟ್ಯತೆಗಳೇನು?
ರಾಜಸ್ಥಾನದಲ್ಲಿ ಈಗ 369 ಅಡಿಯ ಹಾಗೂ ವಿಶ್ವದ ಅತಿ ಎತ್ತರದ ಶಿವನ ಪ್ರತಿಮೆ ಲೋರ್ಕಾಪಣೆಯಾಗಿದೆ. ಇಂದು ರಾಜಸ್ಥಾನದ ರಾಜ್ಸಮಂದ್ ಜಿಲ್ಲೆಯ ನಾಥದ್ವಾರದಲ್ಲಿ ನಿರ್ಮಿಸಲಾಗಿರುವ ಈ ಶಿವನ ಪ್ರತಿಮೆಯ ಸಮರ್ಪಣೆ ಹಾಗೂ ಲೋಕಾರ್ಪಣೆ ಸಮಾರಂಭ ಆರಂಭವಾಗಿದ್ದು, ನವೆಂಬರ್ 6ಕ್ಕೆ ಸಂಪನ್ನಗೊಳ್ಳಲಿದೆ. ಇಂದು ಇದು ಮೊರಾರಿ ಬಾಪು ಅವರ ರಾಮ್ ಕಥಾದಿಂದ ಪ್ರಾರಂಭವಾಗುತ್ತದೆ. ಮೊರಾರಿ ಬಾಪು ಅವರು ಈ ಪ್ರತಿಮೆಯನ್ನು ನವೆಂಬರ್ 6ರಂದು ಅನಾವರಣಗೊಳಿಸಲಿದ್ದಾರೆ. ಈ ಪ್ರತಿಮೆಗೆ ಸಂಬಂಧಿಸಿದ ವಿಶೇಷ ವಿಷಯಗಳನ್ನು ತಿಳಿಯಿರಿ..
ಇಂದು ಮೊರಾರಿ ಬಾಪು, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಅಸೆಂಬ್ಲಿ ಸ್ಪೀಕರ್ ಸಿಪಿ ಜೋಶಿ ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ಈ ಶಿವನ ವಿಗ್ರಹದ ಅನಾವರಣ ಸಮಾರಂಭವು ನಾಥದ್ವಾರದಲ್ಲಿ ಪ್ರಾರಂಭವಾಗುತ್ತದೆ. ಈ ವಿಗ್ರಹಕ್ಕೆ ವಿಶ್ವ ಸ್ವರೂಪಂ ಎಂದು ಹೆಸರಿಡಲಾಗಿದೆ. 'ವಿಶ್ವ ಸ್ವರೂಪಂ' ವಿಶ್ವದ ಅತಿ ಎತ್ತರದ ಪ್ರತಿಮೆ ಎಂದು ಕರೆಯಲಾಗುತ್ತಿದೆ. ಈ ಶಿವನ ಪ್ರತಿಮೆಯ ಎತ್ತರ 369 ಅಡಿ. ಈ ವಿಗ್ರಹವಿರುವ ನಾಥದ್ವಾರವು ಉದಯಪುರದಿಂದ 45 ಕಿಮೀ ದೂರದಲ್ಲಿದೆ.
ವಿಶ್ವದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳ ಪಟ್ಟಿ
ಶಿವನ ಪ್ರತಿಮೆ ನಿರ್ಮಾಣಕ್ಕೆ 10 ವರ್ಷ ಬೇಕಾಯಿತು
"ವಿಶ್ವ ಸ್ವರೂಪಂ" ಶಿವನ ಪ್ರತಿಮೆ ನಿರ್ಮಾಣಕ್ಕೆ 10 ವರ್ಷ ಬೇಕಾಯಿತು. 50 ಸಾವಿರಕ್ಕೂ ಹೆಚ್ಚು ಜನರು ಈ ಪ್ರತಿಮೆಯನ್ನು ತಯಾರಿಸಿದ್ದಾರೆ. ಇದನ್ನು ನಿರ್ಮಿಸಿದ ಸಂಕೀರ್ಣಕ್ಕೆ ಪದಮ್ ಉಪವನ ಎಂದು ಹೆಸರಿಸಲಾಗಿದೆ. ಒಂದು ವೇಳೆ ನೀವು ಭೇಟಿ ನೀಡಿದರೆ, 7 ರಿಂದ 8 ಗಂಟೆಗಳ ಈ ಪ್ರತಿಮೆ ದರ್ಶನದ ಜೊತೆ ನೀವು ಇಲ್ಲಿ ಧಾರ್ಮಿಕ ಪ್ರವಾಸದ ಹಾಗೆ ಸಮಯ ಕಳೆಯಲು ಸಾಧ್ಯವಾಗುತ್ತದೆ.
ಇದು ವಿಶ್ವದ ಟಾಪ್ 5 ಎತ್ತರದ ಪ್ರತಿಮೆಗಳಲ್ಲಿ ಸ್ಥಾನ ಪಡೆದಿದೆ. ಇದನ್ನು ಸಂತ ಕೃಪಾ ಸನಾತನ ಸಂಸ್ಥಾನ ಸಿದ್ಧಪಡಿಸಿದೆ. ಬಿಡುಗಡೆ ಸಮಾರಂಭವು ಅಕ್ಟೋಬರ್ 29ರಿಂದ ಪ್ರಾರಂಭವಾಗಲಿದೆ ಮತ್ತು ನವೆಂಬರ್ 6ರವರೆಗೆ ಮುಂದುವರಿಯುತ್ತದೆ ಮತ್ತು ಮುರಾರಿ ಬಾಪು ಅವರ ರಾಮ್ ಕಥಾದೊಂದಿಗೆ ಪ್ರಾರಂಭವಾಗುತ್ತದೆ. 'ನಂಬಿಕೆಯ ಪ್ರತಿಮೆ' ಎಂದೂ ಕರೆಯಲ್ಪಡುವ ನಾಥದ್ವಾರದಲ್ಲಿರುವ ಭವ್ಯವಾದ ಶಿವನ ಪ್ರತಿಮೆ ಇದಾಗಿದೆ.
ಜಗತ್ತಿನ ಅತಿ ಎತ್ತರದ ಶಿವನ ಮೂರ್ತಿ ನಿರ್ಮಿಸಿದ್ದು ಹೀಗೆ...
ಈ ಪ್ರತಿಮೆಯಲ್ಲಿ ಶಿವನು ಧ್ಯಾನ ಭಂಗಿಯಲ್ಲಿ ಕುಳಿತಿದ್ದಾನೆ. ಪ್ರತಿಮೆಯ ಎತ್ತರವು ಹಲವಾರು ಕಿಲೋಮೀಟರ್ ದೂರದಿಂದ ನೋಡಬಹುದಾಗಿದೆ. ರಾತ್ರಿ ವೇಳೆಯೂ ಈ ಪ್ರತಿಮೆ ಸ್ಪಷ್ಟವಾಗಿ ಗೋಚರಿಸುವಂತೆ ವಿಶೇಷ ದೀಪಗಳ ವ್ಯವಸ್ಥೆ ಮಾಡಲಾಗಿದೆ. ಪ್ರತಿಮೆಯು ಎಷ್ಟು ದೊಡ್ಡದಾಗಿದೆ ಎಂದರೆ ಅದನ್ನು ಸಂಪೂರ್ಣವಾಗಿ ನೋಡಲು ಕನಿಷ್ಠ 4 ಗಂಟೆಗಳು ಬೇಕಾಗುತ್ತದೆ.
ಈ ಪ್ರತಿಮೆಯನ್ನು ರಾಜಸಮಂದ್ನ ನಾಥದ್ವಾರದ ಗಣೇಶ್ ಟೆಕ್ರಿ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ನೀವು ನಾಥದ್ವಾರದಿಂದ ಗಣೇಶ್ ಟೆಕ್ರಿಗೆ ಹೋದಾಗ, ಪ್ರಯಾಣದ 2 ಕಿಲೋಮೀಟರ್ ಮೊದಲು ನಿಮ್ಮ ಕಣ್ಣಿಗೆ ಶಿವನ ಪ್ರತಿಮೆಯನ್ನು ನೋಡುತ್ತೀರಿ. ಈ ಪ್ರತಿಮೆಯನ್ನು ಗುರ್ಗಾಂವ್ನ ನರೇಶ್ ಕುಮಾವತ್ ಸಿದ್ಧಪಡಿಸಿದ್ದಾರೆ.
369 ಅಡಿ ಎತ್ತರದ ಈ ಮೂರ್ತಿಯು ವಿಶ್ವದ ಅತಿ ಎತ್ತರದ ಶಿವನ ಪ್ರತಿಮೆಯಾಗುವ ಕಥೆಯೂ ಕುತೂಹಲಕಾರಿಯಾಗಿದೆ. ವರದಿಯ ಪ್ರಕಾರ, ಈ ಪ್ರತಿಮೆಯನ್ನು ನಿರ್ಮಿಸಲು 2012ರಲ್ಲಿ ಯೋಜನೆ ಸಿದ್ಧಪಡಿಸಿದಾಗ, ಶಿವನ ಮೂರ್ತಿಯ ಎತ್ತರವನ್ನು 251 ಅಡಿಗಳಲ್ಲಿ ಇರಿಸಲು ಯೋಜಿಸಲಾಗಿತ್ತು. ಆದರೆ ನಂತರ ನಿರ್ಮಾಣದ ಸಮಯದಲ್ಲಿ ಅದರ ಎತ್ತರ 351 ಅಡಿ ತಲುಪಿತು. ಇದರ ನಂತರ, ಶಿವನ ಮುಡಿಯಲ್ಲಿ ಗಂಗಾನದಿಯನ್ನು ಹಾಕುವ ಯೋಜನೆಯನ್ನು ಮಾಡಲಾಯಿತು. ನಂತರ ಅದರ ಎತ್ತರವು 369 ಅಡಿ ತಲುಪಿತು.
2.5 ಲಕ್ಷ ಟನ್ ಕಾಂಕ್ರೀಟ್ ಮತ್ತು ಮರಳು ಬಳಕೆ
ಈ ಪ್ರತಿಮೆಯಲ್ಲಿ ಲಿಫ್ಟ್ಗಳು, ಮೆಟ್ಟಿಲುಗಳು, ಸಭಾಂಗಣಗಳು ಇತ್ಯಾದಿಗಳನ್ನು ಸಹ ಮಾಡಲಾಗಿದೆ. ನಿರ್ಮಾಣದ ವೇಳೆ 3000 ಟನ್ ಉಕ್ಕು ಮತ್ತು ಕಬ್ಬಿಣ, 2.5 ಲಕ್ಷ ಟನ್ ಕಾಂಕ್ರೀಟ್ ಮತ್ತು ಮರಳನ್ನು ಬಳಸಲಾಗಿದೆ. 250 ಕಿ.ಮೀ ವೇಗದಲ್ಲಿ ಬೀಸುವ ಗಾಳಿ ಕೂಡ ಪ್ರತಿಮೆಯ ಮೇಲೆ ಪರಿಣಾಮ ಬೀರುವುದಿಲ್ಲ. 'ಸ್ಟ್ಯಾಚ್ಯೂ ಆಫ್ ಬಿಲೀಫ್' ನ್ನು ಉದಯಪುರದ ಮೀರಜ್ ಗ್ರೂಪ್ನ ಅಧ್ಯಕ್ಷರಾದ ಮದನ್ ಪಲಿವಾಲ್ ಅವರು ದೃಶ್ಯೀಕರಿಸಿದರು. 351 ಅಡಿ ಎತ್ತರದ ಪ್ರತಿಮೆಯನ್ನು ವಿನ್ಯಾಸಗೊಳಿಸಿದ ಸ್ಟುಡಿಯೋ ಮಟುರಾಮ್ ಆರ್ಟ್ ಈ ಪರಿಕಲ್ಪನೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಿತು, ಆದರೆ ರಚನಾತ್ಮಕ ವಿನ್ಯಾಸದ ಸಲಹೆ ಪಡೆದು 2016ರ ಆರಂಭದಲ್ಲಿ ಪ್ರಾರಂಭಿಸಲಾಗಿತ್ತು.
ವಿಶ್ವದ 5 ಅತಿ ಎತ್ತರದ ಶಿವನ ಪ್ರತಿಮೆಗಳು
ವಿಶ್ವಾಸ್
ಸ್ವರೂಪಮ್,
ರಾಜಸ್ಥಾನ
-
369
ಅಡಿ
(112.471
ಮೀಟರ್)
ಕೈಲಾಸನಾಥ
ಮಹಾದೇವ
ದೇವಸ್ಥಾನ,
ನೇಪಾಳ
-
143
ಮೀಟರ್
ಮರುಡೇಶ್ವರ
ದೇವಸ್ಥಾನ,
ಕರ್ನಾಟಕ
-
123
ಮೀ
ಆದಿಯೋಗ
ದೇವಾಲಯ,
ತಮಿಳುನಾಡು
-
112
ಮೀ
ಮಂಗಲ್
ಮಹಾದೇವ್,
ಮಾರಿಷಸ್
-
108
ಮೀಟರ್