Maruti Suzuki: ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಮಾರುತಿ ಸುಜುಕಿಯ ಹೊಸ ಮಾದರಿಯ ಕಾರಿನ ದರ, ವಿಶೇಷತೆಗಳನ್ನು ತಿಳಿಯಿರಿ

ಪ್ರಸಿದ್ಧ ಕಾರು ಉತ್ಪಾದನಾ ಕಂಪನಿಗಳಲ್ಲೊಂದಾದ ಮಾರು ಸುಜುಕಿಯು ಕೈಗೆಟಕುವ ದರದಲ್ಲಿ ಉತ್ತಮ ಸೌಲಭ್ಯಗಳನ್ನು ಹೊಂದಿರುವ ಹೊಸ ಮಾದರಿಯ ಕಾರುಗಳನ್ನು ಬಿಡುಗಡೆ ಮಾಡುವ ಮೂಲಕ ಗ್ರಾಹಕರನ್ನು ಸೆಳೆಯುತ್ತಲೇ ಇದೆ. ಇನ್ನು ಇದೀಗ ಈ ಕಂಪನಿಯು ಫ್ರಾಂಕ್ಸ್ ಕಂಪ್ಯಾಕ್ಟ್ ಎಸ್‌ಯುವಿಯಲ್ಲಿ ಹೊಸದಾಗಿ ವೆಲೋಸಿಟಿ ಎಡಿಷನ್ ಬಿಡುಗಡೆ ಮಾಡಿದೆ. ಹಾಗಾದರೆ ಇದರ ದರ ಹಾಗೂ ವೀಶೇಷತೆಗಳ ವಿವರವನ್ನು ಇಲ್ಲಿ ತಿಳಿಯಿರಿ.

ಆಟೋಮೊಬೈಲ್‌ ಕ್ಷೇತ್ರದಲ್ಲಿ ಭಾರೀ ಪೈಪೋಟಿ ಏರ್ಪಟ್ಟಿದೆ. ಅದರಲ್ಲೂ ಕಾರುಗಳ ಮಾರಾಟದಲ್ಲಿ ಭಾರೀ ಪೈಪೋಟಿ ಇದ್ದು, ಎಲ್ಲಾ ಕಂಪನಿಗಳು ತಾವೇನು ಕಡಿಮೆಯಿಲ್ಲ ಎಂಬಂತೆ ಉತ್ತಮ ಸೌಲಭ್ಯಗಳುಳ್ಳ, ಕಡಿಮೆ ಬೆಲೆಯ ಕಾರುಗಳು ಬಿಡುಗಡೆ ಮಾಡುವ ಮೂಲಕ ಗ್ರಾಹಕರನ್ನು ಸೆಳೆಯುವ ಕೆಲಸವನ್ನು ಮಾಡುತ್ತಿದೆ. ಅದರಲ್ಲೂ ಮೊದಲಿನಿಂದಲೂ ಗುರುತಿಸಿಕೊಂಡಿರುವ ಮಾರುತಿ ಸುಜುಕಿ ಕಂಪನಿ ಕೂಡ ಗ್ರಾಹಕರ ಅಭಿರುಚಿಗೆ ತಕ್ಕಂತೆ ಹೊಸ ವಿನ್ಯಾಸಲ್ಲಿ ಕಾರುಗಳನ್ನು ಬಿಡುಗಡೆ ಮಾಡುತ್ತಲೇ ಇದೆ.

Know Maruti Suzuki new model car price Specialty

ಮಾರುತಿ ಸುಜುಕಿ ಕಂಪನಿಯು ತನ್ನ ಜನಪ್ರಿಯ ಕಾರು ಮಾದರಿ ಫ್ರಾಂಕ್ಸ್ ಕಂಪ್ಯಾಕ್ಟ್ ಎಸ್‌ಯುವಿಯಲ್ಲಿ ಹೊಸದಾಗಿ ವೆಲೋಸಿಟಿ ಎಡಿಷನ್ ಬಿಡುಗಡೆ ಮಾಡಿದ್ದು, ಹೊಸ ಆವೃತ್ತಿಯು ವಿವಿಧ ವೆರಿಯೆಂಟ್‌ಗಳೊಂದಿಗೆ ಎಕ್ಸ್‌ ಶೋರೊಂ ದರ 7.29 ಲಕ್ಷದಿಂದ ಆರಂಭವಾಗಲಿದೆ. ಫ್ರಾಂಕ್ಸ್ ಹೊಸದಾಗಿ ವೆಲೋಸಿಟಿ ಎಡಿಷನ್ ಒಟ್ಟು 14 ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ರೆಡ್ ಹೈಲೆಟ್ಸ್‌ನೊಂದಿಗೆ ಈ ಕಾರು ಗ್ರಾಹಕರನ್ನು ಸೆಳೆಯುವ ಮೂಲಕ ಇತರ ಕಂಪನಿಗಳ ಕಾರುಗಳಿಗೆ ಭಾರೀ ಪೈಪೋಟಿ ನೀಡುತ್ತಿವೆ.

ಫ್ರಾಂಕ್ಸ್ ವೆಲೋಸಿಟಿ ಎಡಿಷನ್‌ನಲ್ಲಿ ಮಾರುತಿ ಸುಜುಕಿ ಕಂಪನಿಯು ಸಾಮಾನ್ಯ ಮಾದರಿಗಿಂತಲೂ ವಿಭಿನ್ನವಾಗಿ ಗಮನ ಸೆಳೆಯುತ್ತಿರುವ ಫ್ರಂಟ್ ಬಂಪರ್, ಗ್ರೀಲ್, ಹೆಡ್ ಲೈಟ್ಸ್, ರಿಯಲ್ ವ್ಯೂ ಮಿರರ್, ರಿಯರ್ ಸ್ಪಾಯ್ಲರ್ ಮತ್ತು ವೀಲ್ಹ್‌ಗಳಲ್ಲಿ ರೆಡ್ ಹೈಲೆಟ್ಸ್ ನೀಡಿದ್ದು, ಒಳಭಾಗದಲ್ಲಿ ಇಲ್ಯೂಮಿನೆಟೆಡ್ ಡೋರ್ ಸೀಲ್ ಮತ್ತು ರೆಡ್ ಡ್ಯಾಶ್ ಮ್ಯಾಟ್ ಅನ್ನು ಒಳಗೊಂಡಿರಲಿದೆ.

ಇನ್ನು ಹೊಸ ಫ್ರಾಂಕ್ಸ್‌ ವೆಲೋಸಿಟಿ ಎಡಿಷನ್‌ನಲ್ಲಿ ಸಾಮಾನ್ಯ ಮಾದರಿಯಲ್ಲಿರುವಂತೆ ತಾಂತ್ರಿಕ ಸೌಲಭ್ಯಗಳನ್ನು ಮುಂದುವರೆಸಲಾಗಿದ್ದು, ಇತ್ತೀಚೆಗೆ ಇದು ಭಾರೀ ಬೇಡಿಕೆಯೊಂದಿಗೆ ಹೊಸ ಮೈಲಿಗಲ್ಲು ಸಾಧಿಸಿದೆ. ಕೈಟಕುವ ದರಗಳ ಕಾರುಗಳ ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ಫ್ರಾಂಕ್ಸ್ ಕಾರು ಬಿಡುಗಡೆಯಾದ ಕೇವಲ 14 ತಿಂಗಳ ಅವಧಿಯಲ್ಲಿ 1.50 ಲಕ್ಷ ಯುನಿಟ್‌ಗಳು ಮಾರಾಟಗೊಂಡಿದೆ. ಈ ಹೊಸ ಫ್ರಾಂಕ್ಸ್ ಕಾರು ಮಾರುತಿ ಸುಜುಕಿಯ ಬಲೆನೊ ಮತ್ತು ಎಸ್ ಕ್ರಾಸ್ ಕಾರುಗಳ ವಿನ್ಯಾಸವನ್ನು ಹೊಂದಿದ್ದು, ಇದು ಸಣ್ಣ ಗಾತ್ರ ಎಸ್‌ಯುವಿ ಬಯಸುವ ಗ್ರಾಹಕರಿಗೆ ಉತ್ತಮ ಆಯ್ಕೆಯಾಗಿದೆ.

ಕ್ರಾಸ್ ಓವರ್ ಎಸ್‌ಯುವಿ ಮಾದರಿಯಾಗಿ ಗುರುತಿಸಿಕೊಂಡಿರುವ ಫ್ರಾಂಕ್ಸ್ ಕಾರು ವಿವಿಧ ಎಂಜಿನ್ ಆಯ್ಕೆಗಳನ್ನು ಹೊಂದಿದ್ದು, ಹೊಸ ಕಾರಿನಲ್ಲಿ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಪ್ರೇರಿತ 1.0 ಲೀಟರ್ ಬೂಸ್ಟರ್ ಜೆಟ್ ಟರ್ಬೊ ಚಾರ್ಜ್ಡ್ ಪೆಟ್ರೋಲ್ ಎಂಜಿನ್ ಮತ್ತು 1.2 ಲೀಟರ್ ಡ್ಯುಯಲ್‌ ಜೆಟ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ. ಇದರಲ್ಲಿ 1.2 ಲೀಟರ್ ಡ್ಯುಯಲ್‌ ಜೆಟ್ ಪೆಟ್ರೋಲ್ ಎಂಜಿನ್ ಮಾದರಿಯು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್‌ನೊಂದಿಗೆ ಪ್ರತಿ ಲೀಟರ್‌ಗೆ ಗರಿಷ್ಠ 22.89 ಕಿಲೋ ಮೀಟರ್‌ ಮೈಲೇಜ್ ನೀಡಲಿದೆ.

ಈ ಹೊಸ ಕಾರಿನ ಮ್ಯಾನುವಲ್ ಆವೃತ್ತಿಯು ಪ್ರತಿ ಲೀಟರ್‌ಗೆ ಗರಿಷ್ಠ 21.79 ಕಿ.ಮೀ ಮೈಲೇಜ್ ಕೊಡಲಿದ್ದು, ಇದರಲ್ಲಿ ಟರ್ಬೊ ಪೆಟ್ರೋಲ್ ಮಾದರಿಯು ಪ್ರತಿ ಲೀಟರ್‌ಗೆ 20.01-21.05 ಕಿಲೋ ಮೀಟರ್‌ ಮೈಲೇಜ್ ನೀಡಲಿದೆ. ಜೊತೆಗೆ ಇದು ಪರ್ಫಾಮೆನ್ಸ್‌ನಲ್ಲೂ ಗ್ರಾಹಕರನ್ನು ಸೆಳೆಯುತ್ತಿದ್ದು, ಇದರಲ್ಲಿ 1.2 ಲೀಟರ್ ಡ್ಯುಯಲ್‌ ಜೆಟ್ ಪೆಟ್ರೋಲ್ ಎಂಜಿನ್ ಮಾದರಿಯು 88.5 ಹಾರ್ಸ್ ಪವರ್ ಮತ್ತು 113 ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದಲ್ಲಿ 1.0 ಲೀಟರ್ ಬೂಸ್ಟರ್ ಜೆಟ್ ಟರ್ಬೊ ಚಾರ್ಜ್ಡ್ ಪೆಟ್ರೋಲ್ ಮಾದರಿಯು 98.06 ಹಾರ್ಸ್ ಪವರ್ ಮತ್ತು 147.6 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+