ರಾಯಲ್ ಎನ್‌ಫೀಲ್ಡ್‌ಗೇ.. ಸೆಡ್ಡು ಹೊಡೆಯಲು ಸಜ್ಜಾಗುತ್ತಿದೆ ಮಹೀಂದ್ರಾ ಕಂಪನಿಯ ಹೊಸ ಬೈಕ್, ದರ, ವಿಶೇಷತೆ ತಿಳಿಯಿರಿ
Mahindra Company New Bike: ಇದೀಗ ಭಾರತದಲ್ಲಿ ಆಟೋಮೊಬೈಲ್ ಕ್ಷೇತ್ರದಲ್ಲಿ ಅಭಿವೃದ್ಧಿ ಕ್ರಾಂತಿಯೇ ಆಗುತ್ತಿದೆ. ಅದರಲ್ಲೂ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಭಾರೀ ಪೈಪೋಟಿ ಏರ್ಪಟ್ಟಿದೆ. ಇದರ ನಡುವೆಯೇ ಇದೀಗ ರಾಯಲ್ ಎನ್‌ಫೀಲ್ಡ್‌ಗೇ... ಸೆಡ್ಡು ಹೊಡೆಯಲು ಮಹೀಂದ್ರಾ ಬೈಕ್‌ವೊಂದನ್ನು ತಯಾರು ಮಾಡುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಇದರ ವಿಶೇಷತೆ, ದರಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ರಾಯಲ್ ಎನ್‌ಫೀಲ್ಡ್ ಬೈಕ್ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಈ ಬೈಕ್ ಅನ್ನು ಇಷ್ಟಪಡದವರೇ ಇಲ್ಲ ಎನ್ನುವಂತಾಗಿದೆ. ಯಾಕೆಂದರೆ ಇದರ ಮೇಲೆ ಕುಳಿತು ರೈಡ್ ಹೋಗುವುದೇ ಒಂಥರಾ ಮಜಾ.. ರಾಜ ಮರ್ಯಾದೇ ಅಂದರೆ ತಪ್ಪಾಗಲಾರದು. ಮೊದಲೆಲ್ಲ ದೊಡ್ಡ ದೊಡ್ಡ ರಾಜಕಾರಣಿಗಳು, ಪೊಲೀಸ್ ಅಧಿಕಾರಿಗಳ ಬಳಿಯಷ್ಟೇ ಈ ಬೈಕ್ ಇರುತ್ತಿತ್ತು. ಆದರೆ ಇದೀಗ ಎಲ್ಲಿ ನೋಡಿದರೂ ಈ ಬೈಕ್ ಕಾಣುತ್ತದೆ. ಅಷ್ಟರ ಮಟ್ಟಿಗೆ ಇದು ಪ್ರಸಿದ್ಧಿ ಪಡೆಯುವ ಮೂಲಕ ಗ್ರಾಹಕರನ್ನು ತನ್ನೆಡೆಗೆ ಸೆಳೆಯುತ್ತಲೇ ಇದೆ.

ಇದರ ನಡುವೆಯೇ ಇದೀಗ ಈ ರಾಯಲ್ ಎನ್‌ಫೀಲ್ಡ್‌ಗೆ ಸೆಡ್ಡು ಹೊಡೆಯಲು ಇದೇ ವಿನ್ಯಾಸದ ಬೈಕ್ ಅನ್ನು ತಯಾರು ಮಾಡಲು ಭಾರತರ ದೈತ್ಯ ಕಂಪನಿಗಳಲ್ಲೊಂದಾದ ಮಹೀಂದ್ರಾ ಮುಂದಾಗಿದೆ. ಇದು ರಗಡಾಗಿರುವ ಮಹಿಂದ್ರ BSA ಗೋಲ್ಡ್ ಸ್ಟಾರ್ 650 (Mahindra BSA Gold Star 650) ಬೈಕ್ ಶೀಘ್ರದಲ್ಲೇ ಮಾಡುಕಟ್ಟೆಗೆ ಬರಲು ಸಜ್ಕಾಗುತ್ತಿದೆ.
ಈಗಾಗಲೇ ಕ್ರೂಸರ್ ಸೆಗ್ಮೆಂಟ್‌ನಲ್ಲಿ ಹವಾ ಸೃಷ್ಟಿಸಿರುವ ರಾಯಲ್ ಎನ್ ಫೀಲ್ಡ್ ಬೈಕ್‌ಗೆ ನೇರ ಸ್ಪರ್ಧೆ ನೀಡಲು ಗೋಲ್ಡ್ ಸ್ಟಾರ್ 650 ತಯಾರಾಗುತ್ತಿದ್ದು, ಇದು ಹಸಿರು ಮತ್ತು ಕಪ್ಪು ಬಣ್ಣದಲ್ಲಿ ಲಭ್ಯವಿರಲಿದೆ. ಈ ಬೈಕ್ ನೋಡಲು ತುಂಬಾ ರಗಡಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನವನ್ನು ಅವವಡಿಕೆ ಮೂಲಕ ತಯಾರಾಗುತ್ತಿದೆ.
652cc ಸಿಂಗಲ್ ಸಿಲಿಂಡರ್ ಅಳವಡಿಸಿ ತಯಾರು ಮಾಡಲಾಗಿರುವ ಮಹಿಂದ್ರ ಗೋಲ್ಡ್ ಸ್ಟಾರ್ 650 ಬೈಕ್ 44bhp ಪವರ್ ಮತ್ತು 55 nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರ ಶಕ್ತಿಯುತ ಇಂಧನ ವ್ಯವಸ್ಥೆಗೆ ತಕ್ಕಂತೆ 5 ಸ್ಪೀಡ್ ಗೇರ್ ಬಾಕ್ಸ್ ಅನ್ನು ಒಳಗೊಂಡಿರಲಿದೆ. 12 ಲೀಟರ್ ಇಂಧನ ಸಾಮರ್ಥ್ಯವನ್ನು ಹೊಂದಿರುವ ಈ ಮಹಿಂದ್ರ ಗೋಲ್ಡ್ ಸ್ಟಾರ್ 650 ಯಲ್ಲಿ ಫ್ರಂಟ್ ಬ್ರೇಕ್ ಡಿಸ್ಕ್ & ರೇರ್ ಬ್ರೇಕ್ ಡಿಸ್ಕ್‌ಗಳನ್ನು ಹೊಂದಿರಲಿದೆ.
ಆಧುನಿಕ ತಂತ್ರಜ್ಞಾನದಿಂದ ಈಗಿನ ಜನರೇಶನ್‌ಗೆ ಸರಿದೂಗುವಂತಹ ಬೈಕ್ ಅನ್ನು ತಯಾರು ಮಾಡುವ ನಿಟ್ಟಿನಿಂದ ಮಹೇಂದ್ರ ಕಂಪನಿಯು ಪ್ರೀಮಿಯಂ ಫೀಚಸ್ಟ್‌ಗಳಾದ ಚಾರ್ಜಿಂಗ್ ಪಾಯಿಂಟ್, ಡುಯಲ್ ಚೆನಲ್ ಎಪಿಎಸ್, ಸ್ಪೀಡೋ ಮೀಟರ್, ಡಿಜಿಟಲ್ ಟಚೋಮೀಟರ್ ಹಾಲೊಜನ್ ಅಳವಡಿಸಿ ಮಾಡಲಾಗಿರುವ ಹೆಡ್ ಲೈಟ್ ಹಾಗೂ ನೂತನ ಎಲ್ಇಡಿ ಆಧಾರಿತ ಟೇಲ್ ಲೈಟ್ ಮತ್ತು ಟ್ಯೂಬ್ಲೆಸ್ ಟೈಯರ್‌ನಂತಹ ವಿಶಿಷ್ಟ ಸೌಲಭ್ಯಗಳೊಂದಿಗೆ ಬೈಕ್ ಅನ್ನು ತಯಾರು ಮಾಡುತ್ತಿದೆ.
ಇನ್ನು ಬುಲೆಟ್ ಹಾಗೂ ಜಾವಾ ಬೈಕ್‌ಗಳಿಗೆ ನೇರ ಪೈಪೋಟಿ ನೀಡಲು ಮಾರುಕಟ್ಟೆಗೆ ಬರಲು ಸಜ್ಜಾಗುತ್ತಿರುವ ಗೋಲ್ಡ್ ಸ್ಟಾರ್ 650 ಬೈಕ್ ಬೆಲೆ ಮೂಲಗಳ ಪ್ರಕಾರ, ಎಕ್ಸ್‌ಶೋ ರೂಂ ದರ 3.5ರಿಂದ 6 ಲಕ್ಷದವರೆಗೆ ಇರಲಿದೆ. ರಾಯಲ್ ಎನ್‌ಫೀಲ್ಡ್‌ಗಿಂತ ತುಸು ದರ ಹೆಚ್ಚಿರಲಿದೆ. ಆದರೂ ಸಹ ಇದರ ಅತ್ಯಾಕರ್ಷಕ ಫೀಚರ್ಸ್‌ಗಳು, ಮೈಲೇಜ್, ಲುಕ್ ಹಾಗೂ ವಿನ್ಯಾಸ ಎಂತವಹರನ್ನು ತನ್ನ ಸೆಳೆದೇ ಬಿಡಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.












Click it and Unblock the Notifications