2024ರ ಏಪ್ರಿಲ್, ಮೇನಲ್ಲಿ ಅತೀ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿ ಹೀಗಿದೆ-ಮಹೀಂದ್ರಾವನ್ನೇ ಹಿಂದಿಕ್ಕಿ ಮುನ್ನುಗ್ಗಿದ ಮಾರುತಿ
ದೇಶದಲ್ಲಿ ವರದಿಗಳ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಬೈಕ್‌ಗಳಿಗಿಂತ ಕಾರುಗಳ ಮೇಲೆಯೇ ಒಲವು ತೋರುವವರ ಸಂಖ್ಯೆಯೇ ಹೆಚ್ಚಾಗಿದೆ. ಇನ್ನು 2024ರ ಏಪ್ರಿಲ್, ಮೇನಲ್ಲಿ ಅತೀ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿ ಇಲ್ಲಿದೆ. ಹಾಗಾದರೆ ಯಾವ ಕಂಪನಿಯ ಕಾರು ಹೆಚ್ಚು ಮಾರಾಟವಾಗಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಮೇ 2024ರಲ್ಲಿ ಟಾಟಾ ಪಂಚ್, ಮಾರುತಿ ಡಿಜೈರ್ ಮತ್ತು ಹ್ಯುಂಡೈ ಕ್ರೆಟಾದಂತಹ ಕಾರುಗಳನ್ನು ಮೀರಿಸಿ ಅತೀ ಹೆಚ್ಚು ಮಾರಾಟವಾದ ಕಾರುಗಳಲ್ಲಿ ಮಾರುತಿ ಸ್ವಿಫ್ಟ್ ಮೊದಲ ಸ್ಥಾನದಲ್ಲಿದೆ. ಹಾಗಾದರೆ ಯಾವ್ಯಾವ ಕಂಪನಿಯ ಎಷ್ಟು ಮಾರಾಟವಾಗಿವೆ ಎನ್ನುವ ಅಂಕಿಅಂಅಶಗಳ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

1. ಮಾರುತಿ ಸ್ವಿಫ್ಟ್ ಕಾರು: ಮೇ 2023ರಲ್ಲಿ 17,346, ಏಪ್ರಿಲ್ 2024ರಲ್ಲಿ 4,094, ಮೇ 2024ರಲ್ಲಿ 19,393 ಕಾರುಗಳು ಮಾರಾಟವಾಗಿವೆ.
2. ಟಾಟಾ ಪಂಚ್: ಮೇ 2023ರಲ್ಲಿ 11,124, ಏಪ್ರಿಲ್ 2024ರಲ್ಲಿ 19,158, ಮೇ 2024ರಲ್ಲಿ 18,949 ಟಾಟಾ ಪಂಚ್ ಕಾರುಗಳು ಮಾರಾಟವಾಗಿವೆ.
3. ಮಾರುತಿ ಸ್ವಿಫ್ಟ್ ಡಿಜೈರ್: ಮೇ 2023ರಲ್ಲಿ 11,315, ಏಪ್ರಿಲ್ 2024ರಲ್ಲಿ 15,825, ಮೇ 2024ರಲ್ಲಿ 16,061 ಮಾರುತಿ ಸ್ವಿಫ್ಟ್ ಡಿಜೈರ್ ಕಾರುಗಳು ಮಾರಾಟವಾಗಿವೆ.
4. ಹುಂಡೈ ಕ್ರೆಟಾ: ಮೇ 2023ರಲ್ಲಿ 14,449, ಏಪ್ರಿಲ್ 2024ರಲ್ಲಿ 15,447, ಮೇ 2024ರಲ್ಲಿ 14,662 ಹುಂಡೈ ಕ್ರೆಟಾ ಕಾರುಗಳು ಮಾರಾಟವಾಗಿವೆ.
5. ಮಾರುತಿ ವ್ಯಾಗ್ನರ್: ಮೇ 2023ರಲ್ಲಿ 16,258, ಏಪ್ರಿಲ್ 2024ರಲ್ಲಿ 17,850, ಮೇ 2024ರಲ್ಲಿ 14,492 ಮಾರುತಿ ವ್ಯಾಗ್ನರ್ ಕಾರುಗಳು ಮಾರಾಟವಾಗಿವೆ.
6. ಮಾರುತಿ ಬ್ರೆಜ್ಜಾ: ಮೇ 2023ರಲ್ಲಿ 13,398, ಏಪ್ರಿಲ್ 2024ರಲ್ಲಿ 17,113, ಮೇ 2024ರಲ್ಲಿ 14,186 ಮಾರುತಿ ಬ್ರೆಜ್ಜಾ ಕಾರುಗಳು ಮಾರಾಟವಾಗಿವೆ.
7. ಮಾರುತಿ ಎರ್ಟಿಗಾ: ಮೇ 2023ರಲ್ಲಿ 10,528, ಏಪ್ರಿಲ್ 2024ರಲ್ಲಿ 13,544, ಮೇ 2024ರಲ್ಲಿ 13,893 ಮಾರುತಿ ಎರ್ಟಿಗಾ ಕಾರುಗಳು ಮಾರಾಟವಾಗಿವೆ.
8. ಮಹೀಂದ್ರ ಸ್ಕಾರ್ಪಿಯೋ: ಮೇ 2023ರಲ್ಲಿ 9,318, ಏಪ್ರಿಲ್ 2024ರಲ್ಲಿ 14,807, ಮೇ 2024ರಲ್ಲಿ 13,717 ಮಹೀಂದ್ರ ಸ್ಕಾರ್ಪಿಯೋ ಕಾರುಗಳು ಮಾರಾಟವಾಗಿವೆ.
9. ಮಾರುತಿ ಬಲೆನೋ: ಮೇ 2023ರಲ್ಲಿ 18,733, ಏಪ್ರಿಲ್ 2024ರಲ್ಲಿ 14,049, ಮೇ 2024ರಲ್ಲಿ 12,842 ಮಾರುತಿ ಬಲೆನೋ ಕಾರುಗಳು ಮಾರಾಟವಾಗಿವೆ.
10. ಮಾರುತಿ ಫ್ರಾಂಕ್ಸ್: ಮೇ 2023ರಲ್ಲಿ 9,863, ಏಪ್ರಿಲ್ 2024ರಲ್ಲಿ 14,286, ಮೇ 2024ರಲ್ಲಿ 12,681 ಮಾರುತಿ ಫ್ರಾಂಕ್ಸ್ ಕಾರುಗಳು ಮಾರಾಟವಾಗಿವೆ.
11. ಟಾಟಾ ನೆಕ್ಸಾನ್: ಮೇ 2023ರಲ್ಲಿ 14,423, ಏಪ್ರಿಲ್ 2024ರಲ್ಲಿ 11,168, ಮೇ 2024ರಲ್ಲಿ 11,457 ಟಾಟಾ ನೆಕ್ಸಾನ್ ಕಾರುಗಳು ಮಾರಾಟವಾಗಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications