Nissan Magnite: ಕೇವಲ ₹6 ಲಕ್ಷಕ್ಕೆ ಸಿಗುವ ಮಾರುತಿ ಕಂಪನಿಯ 5 ಸೀಟರ್ ಕಾರಿನ ಬಗ್ಗೆ ತಿಳಿಯಿರಿ
ಟೋಮೊಬೈಲ್ ಕ್ಷೇತ್ರದಲ್ಲಿ ಭಾರೀ ಪೈಪೋಟಿ ಎದುರಾಗಿದ್ದು, ಒಂದಕ್ಕಿಂದ ಒಂದು ಕಂಪನಿಗಳು ನಾ ಮುಂದು- ತಾಮುಂದು ಎನ್ನುವ ರೀತಿಯಲ್ಲಿ ಗ್ರಾಹಕರ ಅಭಿರುಚಿಗೆ ತಕ್ಕಂತೆ ಹೊಸ ಮಾದರಿಯ ಕಾರುಗಳನ್ನು ಬಿಡುಗಡೆ ಮಾಡುತ್ತಲೇ ಇವೆ. ಹಾಗೆಯೇ ಇದೀಗ ಕಡಿಮೆ ಬೆಲೆಯಲ್ಲಿ ಸಿಗುವಂತಹ ಮಾರುತಿ ಕಂಪನಿಯ ಐದು ಸೀಟರ್ ಹೊಸ ಕಾರಿನ ಬಗ್ಗೆ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
Nissan Magnite ಕಾರು ಗ್ರಾಹಕರ ಗೈಗೆಟಕುವ ದರದಲ್ಲಿ ಸಿಗುತ್ತಿದ್ದು, ಇದು ಪ್ರೀಮಿಯಂ ಫೀಚರ್‌ಗಳನ್ನು ಕೂಡ ಒಳಗೊಂಡಿದೆ. ಎಲ್ಇಡಿ ಹೆಡ್ ಲ್ಯಾಂಪ್‌ಗಳ ಜೊತೆ 17 ಇಂಚುಗಳ ಅಲಾಯ್ ವೀಲ್‌ಳನ್ನು ಸಹ ಈ ಕಾರಿನಲ್ಲಿ ಕಾಣಬಹುದಾಗಿದೆ. ವಯರ್ಲೆಸ್ ಆಪಲ್ ಕಾರ್ಪೆ ಹಾಗೂ ಆಂಡ್ರಾಯ್ಡ್ ಆಟೋ ಎರಡು ಕೂಡ ನಿಮಗೆ ಈ ಕಾರಿನಲ್ಲಿ ಸಪೋರ್ಟ್ ಆಗಲಿದೆ. 8 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಹಾಗೂ 360 ಡಿಗ್ರಿ ಕ್ಯಾಮೆರಾವನ್ನು ಕೂಡ ಹೊಂದಿದೆ.

ಈ ಕಾರಿನಲ್ಲಿ ಎರಡು ಇಂಜಿನ್ ಆಯ್ಕೆಗಳು ಸಿಗುತ್ತದೆ. ಮೊದಲನೇದಾಗಿ 1.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಹಾಗೂ 1.0 ಲೀಟರ್ ನ್ಯಾಚುರಲ್ ಅಸ್ಪಿರೇಟೆಡ್ ಪೆಟ್ರೋಲ್ ಇಂಜಿನ್ ಆಗಿವೆ. ಮೂಲಗಳ ಪ್ರಕಾರ, ಪ್ರತಿ ಲೀಟರ್ ಪೆಟ್ರೋಲ್‌ಗೆ ಈ ಕಾರು 21.7 ಕಿಲೋ ಮೀಟರ್ ಮೈಲೇಜ್ ನೀಡುತ್ತದೆ ಎಂದು ಹೇಳಲಾಗತ್ತದೆ.
ಈ 5 Seater ಒಳಗೊಂಡ Nissan Magnite ಉತ್ತಮ ಹಾಗೂ ಅಡ್ವಾನ್ಸ್ ಟೆಕ್ನಾಲಜಿಯನ್ನು ಹೊಂದಿದೆ. ಇನ್ನು ಸೇಫ್ಟಿ ವಿಚಾರಕ್ಕೆ ಬಂದರೆ ನಾಲ್ಕು ಸ್ಟಾರ್ ರೇಟಿಂಗ್ ಅನ್ನು ಇದು ಪಡೆದುಕೊಂಡಿದೆ. ಮಾರುಕಟ್ಟೆಯಲ್ಲಿ ಹುಂಡೈ ಕ್ರೆಟಾ ಕಾರು ಇದಕ್ಕೆ ಕಾಂಪಿಟೇಟರ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನವ ಮಾತುಗಳು ಕೂಡ ಕೇಳಿಬರುತ್ತಿವೆ.
ಈ ಕಾರಿನ ಎಕ್ಸ್ ಶೋರೂಮ್ ಬೆಲೆ 6 ಲಕ್ಷ ರೂಪಾಯಿಗಳಿಂದ ಪ್ರಾರಂಭವಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆದ್ದರಿಂದ ನೀವು ಕಡಿಮೆ ಬೆಲೆಯ ಕಾರನ್ನು ಕೊಂಡುಕೊಳ್ಳುವ ಯೋಚನೆ ಇದ್ದರೆ, ಅತ್ಯಾಧುನಿಕ ವೈಶಿಷ್ಟ್ಯತಗಳನ್ನು ಒಳಗೊಂಡಿರುವ 5 Seater Nissan Magnite ಉತ್ತಮ ಆಯ್ಕೆಯಾಗಿದೆ.












Click it and Unblock the Notifications