ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೈಲಿನಲ್ಲೇ ಜೀವನ: ಪ್ರತ್ಯೇಕವಾದಿ ಯಾಸಿನ್ ಮಲಿಕ್ ಈಗ ತಿಹಾರ್ ಜೈಲಿನ 7ನೇ ಕೊಠಡಿಯಲ್ಲಿ

|
Google Oneindia Kannada News

ಶ್ರೀನಗರ್, ಮೇ 26: ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕರಲ್ಲಿ ಒಬ್ಬ, ಮಾಜಿ ಉಗ್ರಗಾಮಿ ಮತ್ತು ಜಮ್ಮು ಕಾಶ್ಮೀರ ಲಿಬರೇಶನ್ ಫ್ರಂಟ್ (ಜೆಕೆಎಲ್‌ಎಫ್) ಅಧ್ಯಕ್ಷ ಯಾಸಿನ್ ಮಲಿಕ್, ಭಯೋತ್ಪಾದನೆ ನಿಧಿ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದು, ದೆಹಲಿಯ ತಿಹಾರ್ ಜೈಲಿನಲ್ಲಿ ಇರಿಸಲಾಗುವುದು ಎಂದು ತಿಳಿದು ಬಂದಿದೆ.

ದೆಹಲಿಯ ಎನ್ಐಎ ನ್ಯಾಯಾಲಯವು ಜೀವಾವಧಿ ಶಿಕ್ಷೆಯ ತೀರ್ಪು ಪ್ರಕಟಿಸಿದಕ್ಕೆ ಕೆಲವೇ ನಿಮಿಷಗಳಲ್ಲಿ ತಿಹಾರ್ ಜೈಲಿನ ಅಧಿಕಾರಿಗಳು ಸಭೆ ನಡೆಸಿದರು. ಯಾಸಿನ್ ಮಲಿಕ್ ಭದ್ರತಾ ಅಂಶಗಳನ್ನು ನಿರ್ಧರಿಸುವುದು, ಆತನ ಚಲನವಲನಗಳ ಮೇಲೆ ನಿಗಾ ಇಡುವುದಕ್ಕೆ ಸಂಬಂಧಿಸಿದಂತೆ ತಿಹಾರ್ ಜೈಲಿನ ಅಧಿಕಾರಿಗಳು ಚರ್ಚಿಸಿದರು.

Breaking: ಕಾಶ್ಮೀರ ಪ್ರತ್ಯೇಕವಾದಿ ಯಾಸಿನ್ ಮಲಿಕ್‌ಗೆ ಜೀವಾವಧಿ ಶಿಕ್ಷೆ Breaking: ಕಾಶ್ಮೀರ ಪ್ರತ್ಯೇಕವಾದಿ ಯಾಸಿನ್ ಮಲಿಕ್‌ಗೆ ಜೀವಾವಧಿ ಶಿಕ್ಷೆ

ಭಯೋತ್ಪಾದಕ ಅಪರಾಧಿ ಆಗಿರುವ ಯಾಸಿನ್ ಮಲಿಕ್ ಅನ್ನು ಗರಿಷ್ಠ ಭದ್ರತೆಯಲ್ಲಿ ಇರಿಸುವುದಕ್ಕೆ ತಿಹಾರ್ ಜೈಲಿನ ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಕುರಿತು ಒಂದು ವರದಿ ಇಲ್ಲಿದೆ ಓದಿ.

ತಿಹಾರ್ ಕಾರಾಗೃಹದ ಜೈಲು ಸಂಖ್ಯೆ 7ರಲ್ಲಿ ಮುಂದಿನ ಜೀವನ

ತಿಹಾರ್ ಕಾರಾಗೃಹದ ಜೈಲು ಸಂಖ್ಯೆ 7ರಲ್ಲಿ ಮುಂದಿನ ಜೀವನ

ಕಾಶ್ಮೀರಿ ಪ್ರತ್ಯೇಕವಾದಿ ಯಾಸಿನ್ ಮಲಿಕ್ ಅನ್ನು ತಿಹಾರ್ ಕಾರಾಗೃಹದ ಸಂಖ್ಯೆ 7ರ ವಾರ್ಡ್‌ನಲ್ಲಿ ಪ್ರತ್ಯೇಕವಾಗಿ ಇರಿಸಲಾಗಿತ್ತು. ಯಾಸಿನ್ ಮಲಿಕ್ ಅನ್ನು ಸಿಸಿಟಿವಿ ಕಣ್ಗಾವಲಿನಲ್ಲಿ ಇರಿಸಿದ್ದ ಬಗ್ಗೆ ಜೈಲು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಕೋರ್ಟ್ ಶಿಕ್ಷೆ ಅವಧಿ ಪ್ರಕಟಿಸಿದ ನಂತರದಲ್ಲಿ ಅವನನ್ನು ಬೇರೆ ವಾರ್ಡ್‌ಗೆ ಅಥವಾ ಜೈಲಿಗೆ ಸ್ಥಳಾಂತರಿಸಬೇಕೆ ಎಂದು ನಿರ್ಧರಿಸಲಾಗಿಲ್ಲ ಎಂದು ಅವರು ಹೇಳಿದರು.

ಯಾಸಿನ್ ಮಲಿಕ್ ಮರಣ ದಂಡನೆಗೆ ಎನ್ಐಎ ಮನವಿ

ಯಾಸಿನ್ ಮಲಿಕ್ ಮರಣ ದಂಡನೆಗೆ ಎನ್ಐಎ ಮನವಿ

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನ್ನ ವಿರುದ್ಧದ ಎಲ್ಲಾ ಆರೋಪಗಳನ್ನು ಒಪ್ಪಿಕೊಂಡಿರುವ ಯಾಸಿನ್ ಮಲಿಕ್‌ಗೆ ಮರಣದಂಡನೆ ವಿಧಿಸುವಂತೆ ಕೋರಿತ್ತು. ಜಮ್ಮು ಮತ್ತು ಕಾಶ್ಮೀರದಲ್ಲಿ "ಸ್ವಾತಂತ್ರ್ಯ ಹೋರಾಟ"ದ ಹೆಸರಿನಲ್ಲಿ ಭಯೋತ್ಪಾದಕ ಮತ್ತು ಇತರ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸಲು ನಿಧಿ ಸಂಗ್ರಹಿಸಲು ಯಾಸಿನ್ ಮಲಿಕ್ ಪ್ರಪಂಚದಾದ್ಯಂತ ವಿಸ್ತಾರವಾದ ರಚನೆ ಮತ್ತು ಕಾರ್ಯವಿಧಾನವನ್ನು ಸ್ಥಾಪಿಸಿದ್ದಾರೆ ಎಂದು ನ್ಯಾಯಾಲಯವು ಈ ಹಿಂದೆ ಹೇಳಿತ್ತು.

ಈ ಹಿಂದಿನ ವಿಚಾರಣೆಯ ಸಂದರ್ಭದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮಲಿಕ್‌ಗೆ ಮರಣದಂಡನೆ ವಿಧಿಸಲು ಕೋರಿತ್ತು. ಮೇ 19ರಂದು ವಿಶೇಷ ನ್ಯಾಯಾಧೀಶ ಪ್ರವೀಣ್ ಸಿಂಗ್, ಮಲಿಕ್ ದೋಷಿ ಎಂದು ಘೋಷಿಸಿದರು. ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ (ಜೆಕೆಎಲ್ಎಫ್) ನಾಯಕನಿಗೆ ವಿಧಿಸಬಹುದಾದ ದಂಡದ ಮೊತ್ತವನ್ನು ನಿರ್ಧರಿಸಲು ಮಲಿಕ್ ಆರ್ಥಿಕ ಪರಿಸ್ಥಿತಿಯನ್ನು ನಿರ್ಣಯಿಸಲು NIA ಗೆ ನಿರ್ದೇಶನ ನೀಡಿದರು. ಆದಾಯ ಮತ್ತು ಆಸ್ತಿಯ ಎಲ್ಲಾ ಮೂಲಗಳನ್ನು ಬಹಿರಂಗಪಡಿಸುವ ಅಫಿಡವಿಟ್ ಸಲ್ಲಿಸುವಂತೆ ನ್ಯಾಯಾಲಯವು ಮಲಿಕ್‌ಗೆ ಸೂಚಿಸಿತ್ತು.

ಯಾಸಿನ್ ಮಲಿಕ್‌ಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ

ಯಾಸಿನ್ ಮಲಿಕ್‌ಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನ್ಯಾಯಾಲಯವು ಯಾಸಿನ್ ಮಲಿಕ್‌ಗೆ ಐಪಿಸಿಯ ಸೆಕ್ಷನ್ 121ರ ಭಾರತದ ವಿರುದ್ಧ ಯುದ್ಧ ಮಾಡುವುದು ಮತ್ತು ಯುಎಪಿಎ ಸೆಕ್ಷನ್ 17ರ ಭಯೋತ್ಪಾದನಾ ಕೃತ್ಯಕ್ಕೆ ನಿಧಿ ಸಂಗ್ರಹಿಸುವುದರ ಅಡಿಯಲ್ಲಿ ಜೀವಾವಧಿ ಶಿಕ್ಷೆ ಪ್ರಕಟಿಸಿದೆ. ನ್ಯಾಯಾಲಯವು ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ (ಜೆಕೆಎಲ್‌ಎಫ್) ಮುಖ್ಯಸ್ಥನಿಗೆ 10 ಲಕ್ಷ ರೂಪಾಯಿಗೂ ಹೆಚ್ಚು ದಂಡವನ್ನು ವಿಧಿಸಿದೆ.

"ಯಾಸಿನ್ ಮಲಿಕ್‌ಗೆ ಎರಡು ಜೀವಾವಧಿ ಶಿಕ್ಷೆಯನ್ನು ನೀಡಲಾಗಿದೆ, ಜೊತೆಗೆ 10 ಅಪರಾಧಗಳಲ್ಲಿ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 10 ಲಕ್ಷ ರೂ. ದಂಡ, ಎಲ್ಲಾ ಶಿಕ್ಷೆಗಳು ಏಕಕಾಲದಲ್ಲಿ ನಡೆಯುತ್ತವೆ," ಎಂದು ವಕೀಲ ಉಮೇಶ್ ಶರ್ಮಾ ಉಲ್ಲೇಖಿಸಿದ್ದಾರೆ.

ನನ್ನದೇ ತಪ್ಪು ಎಂದು ಒಪ್ಪಿಕೊಂಡಿದ್ದ ಯಾಸಿನ್ ಮಲಿಕ್ ಹಿನ್ನೆಲೆ ಏನು?

ನನ್ನದೇ ತಪ್ಪು ಎಂದು ಒಪ್ಪಿಕೊಂಡಿದ್ದ ಯಾಸಿನ್ ಮಲಿಕ್ ಹಿನ್ನೆಲೆ ಏನು?

ಸೆಕ್ಷನ್ 16ರ ಭಯೋತ್ಪಾದನಾ ಕೃತ್ಯ, 17ರ ಭಯೋತ್ಪಾದಕ ಕೃತ್ಯಕ್ಕೆ ನಿಧಿ ಸಂಗ್ರಹಿಸುವುದು, 18ರ ಅಡಿ ಭಯೋತ್ಪಾದಕ ಕೃತ್ಯಕ್ಕೆ ಪಿತೂರಿ ನಡೆಸುವುದು ಮತ್ತು 20ರ ಪ್ರಕಾರ ಭಯೋತ್ಪಾದಕ ಕೃತ್ಯಕ್ಕೆ ಪಿತೂರಿ ನಡೆಸುವುದು. ಇದರ ಜೊತೆಗೆ ಯುಎಪಿಎ ಮತ್ತು ಭಾರತೀಯ ದಂಡ ಸಂಹಿತೆಯ 120-ಬಿರ ಕ್ರಿಮಿನಲ್ ಪಿತೂರಿ ಮತ್ತು 124-ಎ ದೇಶದ್ರೋಹದ ಗ್ಯಾಂಗ್ ಅಥವಾ ಸಂಸ್ಥೆ ಕಟ್ಟಿರುವುದು ಸೇರಿದಂತೆ ತನ್ನ ವಿರುದ್ಧ ಹೊರಿಸಲಾದ ಆರೋಪಗಳನ್ನು ತಾನು ವಿರೋಧಿಸುವುದಿಲ್ಲ ಎಂದು ಮಲಿಕ್ ನ್ಯಾಯಾಲಯಕ್ಕೆ ತಿಳಿಸಿದ್ದನು.

ಈ ಭಯೋತ್ಪಾದಕ ನಿಧಿಯ ಹರಿವಿನ ಪ್ರಮುಖ ಮಾರ್ಗಗಳಲ್ಲಿ ಆರೋಪಿ ಜಹೂರ್ ಅಹ್ಮದ್ ಶಾ ವತಾಲಿ ಒಬ್ಬನಾಗಿದ್ದಾನೆ. ಈ ನಿಧಿ ಸಂಗ್ರಹಣೆ ಹಾದಿಯನ್ನು ಆರೋಪಿ ನವಲ್ ಕಿಶೋರ್ ಕಪೂರ್ ಸುಗಮಗೊಳಿಸುವಲ್ಲಿ ಸಕ್ರಿಯ ಪಾತ್ರ ವಹಿಸಿದ್ದಾನೆ ಎಂದುಹೇಳಲಾಗಿದೆ. ರಾಷ್ಟ್ರೀಯ ತನಿಖಾ ತಂಡ (NIA)ದ ಪ್ರಕಾರ ಲಷ್ಕರ್-ಎ-ತೈಬಾ (LeT), ಹಿಜ್ಬುಲ್-ಮುಜಾಹಿದ್ದೀನ್ (HM), ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ (JKLF), ಜೈಶ್-ಎ-ಮೊಹಮ್ಮದ್ (JeM) ಮುಂತಾದ ವಿವಿಧ ಭಯೋತ್ಪಾದಕ ಸಂಘಟನೆಗಳು ಪಾಕಿಸ್ತಾನದ ಐಎಸ್ಐ ಬೆಂಬಲದ ಮೂಲಕ ನಾಗರಿಕರು ಮತ್ತು ಭದ್ರತಾ ಸಿಬ್ಬಂದಿ ಮೇಲೆ ದಾಳಿ ಮಾಡುವ ಮೂಲಕ ಕಣಿವೆಯಲ್ಲಿ ಹಿಂಸಾಚಾರವನ್ನು ನಡೆಸಿದೆ.

English summary
Life In Prison: Kashmiri separatist Yasin Malik in Jail No 7 Inmate To Be Kept Under Maximum Security.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X