Get Updates
Get notified of breaking news, exclusive insights, and must-see stories!

ದೇಶದಲ್ಲೇ ಮೊದಲು ಕರ್ನಾಟಕದಲ್ಲಿ 'ಕಭಿ' ಯೋಜನೆ, ವಿವರಗಳು

ದೇಹದ ಆರೋಗ್ಯದಂತೆ ಮೆದುಳಿನ ಆರೋಗ್ಯವು ಮುಖ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಮಾನಸಿಕ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ. ಮೆದುಳಿನ ಆರೋಗ್ಯ ನಮ್ಮ ದಿನನಿತ್ಯದ ಜೀವವನಕ್ಕೆ ಅತ್ಯಗತ್ಯ, ಸಂವಹನ ನಡೆಸುವ, ನಿರ್ಧಾರಗಳನ್ನು ತೆಗೆದುಕೊಳ್ಳುವ, ಸಮಸ್ಯೆ ಪರಿಹರಿಸುವ, ಉತ್ಪಾದಕ ಮತ್ತು ಉಪಯುಕ್ತ ಜೀವನವನ್ನು ನಡೆಸಲು ಮೆದುಳು ಆರೋಗ್ಯವಾಗಿರುವುದು ಮುಖ್ಯವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯು ಸಹ ಈಗ ಮೆದುಳಿನ ಆರೋಗ್ಯದ ಬಗ್ಗೆ ಮಾತನಾಡುತ್ತಿದೆ.

ಕರ್ನಾಟಕ ಸರ್ಕಾರ ದೇಶದಲ್ಲಿಯೇ ಮೊದಲ ಕರ್ನಾಟಕ ಬ್ರೇನ್ ಹೆಲ್ತ್ ಇನಿಷಿಯೇಟಿವ್ (ಕಭಿ) ಎಂಬ ಯೋಜನೆ ಜಾರಿಗೆ ತಂದಿದೆ. ಮಾನಸಿಕ ರೋಗಿಗಳಿಗೆ, ಮಾನಸಿಕ ಅನಾರೋಗ್ಯ, ಖಿನ್ನತೆ ಮುಂತಾದ ಮಿದುಳಿನ ಕಾಯಿಲೆಗಳಿಗೆ ತುತ್ತಾದವರಿಗೆ ಚಿಕಿತ್ಸೆ ನೀಡಲು ಈ ಯೋಜನೆ ಸಹಕಾರಿಯಾಗಿದೆ. ನಿಮ್ಹಾನ್ಸ್ ಸಹಯೋಗದೊಂದಿಗೆ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಮೆದುಳಿನ ಆರೋಗ್ಯ ಚಿಕಿತ್ಸಾಲಯಗಳನ್ನು ಸ್ಥಾಪನೆ ಮಾಡಲು ಆರೋಗ್ಯ ಇಲಾಖೆ ಮುಂದಾಗಿದೆ.

Karnataka Government Launches KABHI Project For Brain Health

ದೇಶದಲ್ಲಿಯೇ ಮೊದಲು ಕರ್ನಾಟಕ ಸರ್ಕಾರ ನಿಮ್ಹಾನ್ಸ್ ಸಹಯೋಗದೊಂದಿಗೆ ಕಭಿ ಕ್ಲಿನಿಕ್ ಮೂಲಕ ಮೆದುಳಿನ ಆರೋಗ್ಯಕ್ಕಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ನರರೋಗ, ಮೆದುಳಿನ ಸಂಬಂಧಿಸಿದ ಕಾಯಿಲೆಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಜನರಿಗೆ ಚಿಕಿತ್ಸೆ ಹೊರೆಯಾಗುತ್ತದೆ. ಸರ್ಕಾರಿ ಆಸ್ಪತ್ರೆಯಲ್ಲಿ ಮೆದುಳಿನ ಆರೋಗ್ಯ ಚಿಕಿತ್ಸೆಗೆ ಅತ್ಯಾಧುನಿಕ ಉಪಕರಗಳೊಂದಿಗೆ ನುರಿತ ವೈದ್ಯರತಂಡ ಜನರಿಗೆ ಸೇವೆ ನೀಡುತ್ತಿದ್ದು ಸ್ಟ್ರೋಕ್,ಅಪಘಾತ, ಇನ್ನಿತರ ಘಟನೆಗಳಲ್ಲಿ ಮೆದುಳಿಗೆ ಸಮಸ್ಯೆ ಉಂಟದಾಗ ಮೊದಲು ಆಸ್ಪತ್ರೆ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಬರಲು ಸಾಧ್ಯವಾಗದ ಸಂದರ್ಭದಲ್ಲಿ ಮನೆಯಲ್ಲಿಯೇ ಟೆಲಿಕಾಲ್ ಮೂಲಕ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.

ಶಿವಮೊಗ್ಗ ಜಿಲ್ಲೆಯಲ್ಲಿ 'ಕಭಿ' ಕೇಂದ್ರದ ಮೂಲಕ ಮೆದುಳಿನ ಆರೋಗ್ಯದ ಕುರಿತು ವಿಶೇಷ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಜಿಲ್ಲಾ ಮೆಗ್ಗಾನ್ ಬೋಧನಾ ಆಸ್ಪತ್ರೆಯಲ್ಲಿ 'ಕಭಿ' ಕ್ಲಿನಿಕ್ ಮೂಲಕ ತಲೆನೋವಿಗೆ 1457 ಜನರು, ಎಪಿಲೆಪ್ಸಿ 500, ಪಾರ್ಶ್ವವಾಯು 356, ಬುದ್ಧಿಮಾಂದ್ಯತೆ 28, ಇತರ ನರರೋಗ ಪ್ರಕರಣಗಳು 395, ಫಿಸಿಯೋಥೆರಪಿ ಚಿಕಿತ್ಸೆ 488 ರೋಗಿಗಳಿಗೆ ಚಿಕಿತ್ಸೆ ಮಾಡಲಾಗಿದೆ.

ಮೆದಳಿನ ರಕ್ಷಣೆ ಹೇಗೆ?: ಮೆದುಳಿನ ಆರೋಗ್ಯದ ಕುರಿತು 'ಕಭಿ' ಯೋಜನೆಯಲ್ಲಿ ಹಲವು ಕ್ರಮಗಳನ್ನು ತಿಳಿಸಲಾಗಿದೆ. ಅದರಲ್ಲಿ ದೈಹಿಕ ಚಟುವಟಿಕೆ, ಆರೋಗ್ಯಕರ ಹವ್ಯಾಸಗಳು, ಹೊಸ ಚಟುವಟಿಕೆಗಳನ್ನು ರೂಢಿಸಿಕೊಳ್ಳುವುದು, ಯೋಗ ಮತ್ತು ಧ್ಯಾನ, ಸಾಕಷ್ಟು ನಿದ್ರೆ, ಸಂಘಜೀವಿಯಾಗಿರುವುದು ಮುಂತಾದವು ಸೇರಿವೆ.

ಮೆದುಳಿನ ಆರೋಗ್ಯಕ್ಕೆ ದೈಹಿಕ ಚಟುವಟಿಕೆಗಳು ಅಗತ್ಯ. ಪ್ರತಿನಿತ್ಯ ವ್ಯಾಯಾಮ ಮಾಡುವುದರಿಂದ ಜ್ಞಾಪಕ ಶಕ್ತಿ ಸುಧಾರಣೆಯಾಗುತ್ತದೆ. ವಾಕಿಂಗ್, ಸ್ಕಿಪ್ಪಿಂಗ್, ಸೈಕ್ಲಿಂಗ್, ಈಜು, ಯೋಗ, ಮತ್ತಿತ್ತರ ಚಟುವಟಿಗಳಿಂದ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. 'ಸದೃಢ ದೇಹದಲ್ಲಿ ಸದೃಢ ಮನಸ್ಸು' ಇರಲು ಸಾಧ್ಯ ಎಂಬ ಹೇಳಿಕೆಗೆ ಪೂರಕವಾಗಿ ವಿವೇಕಾನಂದರು ಸಹ ಯುವ ಜನತೆಗೆ ಬಲಿಷ್ಠವಾದ ದೇಹ, ಬಲಿಷ್ಠವಾದ ಮೆದುಳನ್ನು ಹೊಂದುವುದು ಅತ್ಯಂತ ಅವಶ್ಯಕವಾದ್ದರಿಂದ ಪ್ರತಿದಿನ ದೈಹಿಕ ವ್ಯಾಯಾಮ ಮಾಡಬೇಕೆಂದು ಕರೆ ನೀಡಿದ್ದರು.

ಒಂಟಿತನ ಮೆದುಳಿನ ಆರೋಗ್ಯವನ್ನು ಹದಗೆಡಿಸುತ್ತದೆ. ಇದನ್ನು ನಾವು ಸಾಮಾನ್ಯವಾಗಿ ಅನೇಕರಲ್ಲಿ ನೋಡುತ್ತಿದ್ದೇವೆ. ಒಂಟಿಯಾಗಿ ಒಂದು ಕಡೆ ಕುಳಿತುಕೊಂಡು ಯೋಚನೆ ಮಾಡುವುದು, ಸದಾ ಚಿಂತಾಗ್ರಸ್ತರಾಗಿರುವುದರಿಂದ ಮಾನಸಿಕವಾಗಿ ಕುಗ್ಗತ್ತಾ ಹೋಗುತ್ತಾರೆ. ಯಾವುದೇ ಚಿಂತೆಗಳಿಗೆ ಒಳಗಾಗದೆ, ಸಾಮಾಜಿಕ ಚುಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು, ಹತ್ತಾರು ಜನರೊಂದಿಗೆ ಮಾತುಕಥೆ, ಹರಟೆ, ಚೆರ್ಚೆಗಳನ್ನು ನಡೆಸುವುದರಿಂದ ಮಾನಸಿಕ ಒತ್ತಡದಿಂದ ಹೊರಬರಬಹುದು.

ಹೊಸ ಕೌಶಲ್ಯಗಳ ಅಭ್ಯಾಸ ಹಾಗೂ ಹವ್ಯಾಸಗಳನ್ನು ರೂಢಿಸಿಕೊಳ್ಳುವುದು ಜ್ಞಾನವನ್ನು ಹೆಚ್ಚಿಸುತ್ತದೆ. ಪತ್ರಿಕೆಗಳಲ್ಲಿ ಬರುವ ಪದಜೋಡಣೆ, ಪದಬಂಧ, ಚದುರಂಗ, ಒಗಟುಗಳನ್ನು ಬಿಡಿಸುವುದು ಹೀಗೆ ಮೆದುಳಿಗೆ ಕೆಲಸ ಕೊಡುವ ಹವ್ಯಾಸವನ್ನು ರೂಢಿಸಿಕೊಂಡರೆ ಮೆದುಳು ಚುರುಕಾಗುತ್ತದೆ. ಕುಂಬಾರಿಕೆ, ಚಿತ್ರಕಲೆ, ಗಾಳಿಪಟ ತಯಾರಿಕೆ, ಪತ್ರಿಕೆಗಳಲ್ಲಿ ದೋಣಿ ತಯಾರಿಕೆ, ವಾದ್ಯಗಳನ್ನು ನುಡಿಸುವುದು ಹೀಗೆ ಕಲೆ ಮತ್ತು ಕರಕುಶಲ ಕೆಲಸಗಳ ಅಭ್ಯಾಸದ ಮೂಲಕ ಮನಸ್ಸು ಉಲ್ಲಾಸದಾಯಕವಾಗಿರುತ್ತದೆ. ಕರಕುಶಲ ಕೌಶಲ್ಯಗಳಿಂದ ಜ್ಞಾಪಕ ಶಕ್ತಿ ಮತ್ತು ಅರಿವು ಹೆಚ್ಚುತ್ತದೆ.

ಮೆದುಳಿನ ಆರೋಗ್ಯ ಕಾಪಾಡಿಕೊಳ್ಳಿ: ತಲೆ ಮತ್ತು ಕುತ್ತಿಗೆ ಭಾಗದಲ್ಲಿ ನೋವು, ಮೈಗ್ರೇನ್, ಉದ್ವೇಗದಿಂದ ಉಂಟಾಗುವ ತಲೆನೋವು, ಕ್ಲಸ್ಟರ್ ತಲೆನೋವು, ದೈನಂದಿನ ತಲೆನೋವು, ಸೈನಸೈಟಿಸ್ ಮತ್ತು ಅಧಿಕ ರಕ್ತದೊತ್ತಡದಂತಹ ಇತರೆ ಕಾರಣಗಳಿಂದ ಉಂಟಾಗುವ ತಲೆನೋವು ಸಹ ಜನರನ್ನು ಕಾಡುತ್ತದೆ. ಒತ್ತಡ ಮತ್ತು ಆತಂಕ, ನಿದ್ರೆಯ ಕೊರತೆ, ಬಿಸಿಲಿನಲ್ಲಿ ಹೆಚ್ಚು ಸಮಯ ಕಳೆಯುವುದು ,ಹವಾಮಾನ ಬದಲಾವಣೆ, ಅತಿಯಾದ ಕಾಫಿ ಸೇವೆನೆ, ಮದ್ಯಪಾನ, ಧೂಮಪಾನ, ಅಧಿಕ ಕಂಪ್ಯೂಟರ್ ಬಳಕೆ, ಇನ್ನೂ ಅನೇಕ ಸಂಗತಿಯಗಳು ತಲೆ ನೋವಿಗೆ ಕಾರಣವಾಗುತ್ತದೆ. ತಲೆನೋವು ತಡೆಯಲು ಆರೋಗ್ಯಕರ ಆಹಾಪದ್ಧತಿ ಮತ್ತು ಜೀವನಶೈಲಿ, ದೈಹಿಕ ಚಟುವಟಿಕೆ, ಹೆಚ್ಚು ನೀರಿನ ಸೇವನೆ, ಕನಿಷ್ಠ 7-8 ಗಂಟೆಗಳ ಕಾಲ ನಿದ್ರೆ, ಪ್ರಕೃತಿಯಲ್ಲಿ ಹೆಚ್ಚು ಕಾಲ ಕಳೆಯುವುದು, ಮೊಬೈಲ್ ಹಾಗೂ ಕಂಪ್ಯೂಟರ್‌ಗಳ ಮಿತ ಬಳಕೆ ಇನ್ನೂ ಅನೇಕ ಚಟುವಟಿಕೆಗಳಿವೆ.

ಪಾರ್ಶ್ವವಾಯು ಅಥವಾ ಮೆದುಳಿನ ಆಘಾತ. ಮೆದುಳಿನ ಭಾಗಕ್ಕೆ ಕಡಿಮೆ ಆಮ್ಲಜನಕ ಪೂರೈಕೆಯಿಂದಾಗಿ ಉಂಟಾಗುವ ಒಂದು ಸ್ಥಿತಿ. ಪಾರ್ಶ್ವವಾಯುವಿನಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ನಾವು ಸಹಾಯ ಮಾಡಬಹುದು. ಔಷಧಿಗಳು, ಜೀವನಶೈಲಿಯಲ್ಲಿ ಬದಲಾವಣೆ, ಫಿಸಿಯೋಥೆರಪಿ/ ಸ್ಪೀಚ್ ಥೆರಪಿ, ಔದ್ಯೋಗಿಕ ಚಿಕಿತ್ಸೆ, ಅರಿವಿನ ಪುನರ್ವಸತಿ (ಕಾಗ್ನಿಟಿವ್ ರಿಹ್ಯಾಬಿಲಿಟೇಶನ್) ಸುತ್ತಮುತ್ತಲಿನ ಪರಿಸರದಲ್ಲಿ ಬದಲಾವಣೆ/ ಆರೈಕೆದಾರರ ಮೂಲಕ ಸಹಾಯವನ್ನು ಮಾಡಬಹುದು. ಅಧಿಕ ರಕ್ತದೊತ್ತಡ, ಮಧುಮೇಹ, ಬೊಜ್ಜು, ಉದ್ವೇಗ ಮತ್ತು ಅಧಿಕ ಕೊಲೆಸ್ಟ್ರಾಲ್, ಹೃದಯ ಕಾಯಿಲೆಗಳು, ಮದ್ಯಪಾನ ಮತ್ತು ಧೂಮಪಾನದಿಂದ ಯುವಜನರೂ ಸಹ ಪಾರ್ಶ್ವವಾಯುವಿನಿಂದ ಬಳಲಬಹುದು.

ಬರಹ: ರಘು. ಆರ್, ಅಪ್ರೆಂಟಿಸ್ ವಾರ್ತಾ ಇಲಾಖೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+