Karnataka Assembly Election: ಬೆಂಗಳೂರು ಉತ್ತರದ ವಿಧಾನಸಭಾ ಕ್ಷೇತ್ರಗಳ ಟಿಕೆಟ್ ಆಕಾಂಕ್ಷಿಗಳು

2023 ಮೇ ತಿಂಗಳೊಳಗೆ ನಡೆಯಬೇಕಾಗಿರುವ ಕರ್ನಾಟಕ ಅಸೆಂಬ್ಲಿ ಚುನಾವಣೆಗೆ ಪ್ರಬಲ ಪಕ್ಷಗಳು ಸಿದ್ಧತೆ ನಡೆಸಿವೆ. ಆಡಳಿತರೂಢ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮಾತ್ರವಲ್ಲದೇ ಈ ಬಾರಿ ಆಮ್ ಆದ್ಮಿ ಕೂಡ ಅಖಾಡಕ್ಕೆ ಇಳಿಯಲಿದೆ.

ಕರ್ನಾಟಕ ರಾಜ್ಯದ 224 ಕ್ಷೇತ್ರಗಳ ಪೈಕಿ ಬೆಂಗಳೂರು ಉತ್ತರದ ಯಲಹಂಕ, ಬ್ಯಾಟರಾಯನಪುರ, ಯಶವಂತಪುರ, ದಾಸರಹಳ್ಳಿ, ಮಹದೇವಪುರ, ಬೆಂಗಳೂರು ದಕ್ಷಿಣ, ಆನೇಕಲ್ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಸದ್ಯ ಈ ಏಳು ವಿಧಾನಸಭಾ ಕ್ಷೇತ್ರಗಳು ಚುನಾವಣಾ ಸಮರಕ್ಕೆ ಸಜ್ಜಾಗುತ್ತಿವೆ. ಈ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಪ್ರಬಲ ಪಕ್ಷಗಳ ನಡುವೆ ಜಿದ್ದಾಜಿದ್ದಿ ನಡೆಯಲಿದೆ.

ಮಕರ ಸಂಕ್ರಾಂತಿ ವಿಶೇಷ ಪುಟ

ನಗರದ ಸಮ್ಯಸ್ಯೆಗಳಾದ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ, ಸ್ಲಂಗಳ ಸುಧಾರಣೆ, ರಸ್ತೆ ಸೇರಿದಂತೆ ಹಲವು ಮೂಲಭೂತ ವ್ಯವಸ್ಥೆಗಳ ಕುರಿತು ಈ ಚುನಾವಣೆಯಲ್ಲಿ ಹೆಚ್ಚು ಚರ್ಚೆಯಾಗುವ ಸಂಭವವಿದೆ. ಆಣೆಕಲ್‌ ಕ್ಷೇತ್ರವೊಂದನ್ನು ಹೊರತುಪಡಿಸಿ ಉಳಿದ ಕ್ಷೇತ್ರಗಳು ಹೆಚ್ಚುಕಮ್ಮಿ ಬೆಂಗಳೂರು ನಗರ ವ್ಯಾಪ್ತಿಗೆ ಬರುತ್ತದೆ.

ಆನೇಕಲ್‌ ಕ್ಷೇತ್ರವು ಮೀಸಲು ಕ್ಷೇತ್ರವಾಗಿದ್ದು, ಬೆಂಗಳೂರು ಉತ್ತರದಲ್ಲಿ ಬರುವ ಉಳಿದ ವಿಧಾನಸಭಾ ಕ್ಷೇತ್ರಗಳು ಸಾಮಾನ್ಯ ಕ್ಷೇತ್ರಗಳಾಗಿವೆ. ಒಕ್ಕಲಿಗರು ಹಾಗೂ ಹಿಂದುಳಿದ ವರ್ಗಗಳ ಮತಗಳು ನಿರ್ಣಾಯಕವಾಗಿವೆ. ಈ ಕ್ಷೇತ್ರಗಳ ಇತಿಹಾಸ ನೋಡುವುದಾದರೆ:

 ಬೆಂಗಳೂರು ಉತ್ತರದ ವಿಧಾನಸಭಾ ಕ್ಷೇತ್ರಗಳು - ಒಟ್ಟು 7 ಸ್ಥಾನಗಳು

ಬೆಂಗಳೂರು ಉತ್ತರದ ವಿಧಾನಸಭಾ ಕ್ಷೇತ್ರಗಳು - ಒಟ್ಟು 7 ಸ್ಥಾನಗಳು

ಬಿಜೆಪಿ- 4
ಕಾಂಗ್ರೆಸ್- 2
ಜೆಡಿಎಸ್‌- 1

ಹಾಲೀ ಬೆಂಗಳೂರು ಉತ್ತರ ವಿಧಾನಸಭಾ ಕ್ಷೇತ್ರಗಳಲ್ಲಿರು ಶಾಸಕರು

ಯಲಹಂಕ ವಿಧಾನಸಭಾ ಕ್ಷೇತ್ರ - ಎಸ್. ಆರ್. ವಿಶ್ವನಾಥ್ (ಬಿಜೆಪಿ)
ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ - ಕೃಷ್ಣ ಭೈರೇಗೌಡ (ಕಾಂಗ್ರೆಸ್)
ಯಶವಂತಪುರ ವಿಧಾನಸಭಾ ಕ್ಷೇತ್ರ - ಎಸ್. ಟಿ.ಸೋಮಶೇಖರ (ಬಿಜೆಪಿ)
ದಾಸರಹಳ್ಳಿ ವಿಧಾನಸಭಾ ಕ್ಷೇತ್ರ - ಮಂಜುನಾಥ್ (ಜೆಡಿಎಸ್‌)
ಮಹದೇವಪುರ ವಿಧಾನಸಭಾ ಕ್ಷೇತ್ರ - ಅರವಿಂದ ಲಿಂಬಾವಳಿ (ಬಿಜೆಪಿ)
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ - ಎಂ ಕೃಷ್ಣಪ್ಪ (ಬಿಜೆಪಿ)
ಆನೇಕಲ್ - ಬಿ.ಶಿವಣ್ಣ (ಕಾಂಗ್ರೆಸ್)

 ಯಲಹಂಕ ಕ್ಷೇತ್ರದಲ್ಲಿ ವಿಶ್ವನಾಥ್ ಪಾರುಪತ್ಯ

ಯಲಹಂಕ ಕ್ಷೇತ್ರದಲ್ಲಿ ವಿಶ್ವನಾಥ್ ಪಾರುಪತ್ಯ

ಯಲಹಂಕ ವಿಧಾನಸಭಾ ಕ್ಷೇತ್ರ
ಒಟ್ಟು ಮತದಾರರ ಸಂಖ್ಯೆ-3,73,987
ಪುರುಷ ಮತದಾರರು- 1,92,813
ಮಹಿಳಾ ಮತದಾರರು- 1,81,125
ಇತರರು- 49

ಕಳೆದ ಬಾರಿ (2018) ಯಲಹಂಕದ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಪಕ್ಷದ ಅಭ್ಯರ್ಥಿ ಜಯ ಗಳಿಸಿದ್ದರು. 2018ರಲ್ಲಿ ಭಾರತೀಯ ಜನತಾ ಪಾರ್ಟಿಯ ಎಸ್. ಆರ್. ವಿಶ್ವನಾಥ್ ಬಹುಮತದಿಂದ ಗೆಲುವು ಸಾಧಿಸಿದ್ದರು. ಯಲಹಂಕ ವಿಧಾನಸಭಾ ಕ್ಷೇತ್ರ ಈಗ ಬಿಜೆಪಿಯ ಭದ್ರಕೋಟೆಯಾಗಿದೆ. ಎಸ್‌.ಆರ್ ವಿಶ್ವನಾಥ್ ಹಾಗೂ ಗೋಪಾಲಕೃಷ್ಣ ಅವರ ವೈರತ್ವ ಸಾಕಷ್ಟು ಪ್ರಬಲವಾಗಿದೆ. ಹೀಗಾಗಿ ಈ ಬಾರಿಯ ಚುನಾವಣೆ ಮತ್ತಷ್ಟು ಚುರುಕುಗೊಳ್ಳುವ ಸಾಧ್ಯತೆಗಳು ಇವೆ.

2018 ರಲ್ಲಿ ಭಾರತೀಯ ಜನತಾ ಪಾರ್ಟಿ ಯ ಎಸ್ ಆರ್ ವಿಶ್ವನಾಥ್ 120,110 ಮತಗಳೊಂದಿಗೆ ಗೆಲುವು ಸಾಧಿಸಿದ್ದರು. ಜನತಾದಳ (ಜಾತ್ಯತೀತ)ಯ ಎ.ಎಂ.ಹನುಮಂತೇಗೌಡ 42,503 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು. 41,449 ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಎಂ.ಎನ್. ಗೋಪಾಲಕೃಷ್ಣ ಮೂರನೇ ಸ್ಥಾನಕ್ಕಿಳಿದರು.

 ಮತ್ತೆ ಜಯ ಸಾಧಿಸುವರೇ ಕೃಷ್ಣ ಭೈರೇಗೌಡ?

ಮತ್ತೆ ಜಯ ಸಾಧಿಸುವರೇ ಕೃಷ್ಣ ಭೈರೇಗೌಡ?

ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ
ಒಟ್ಟು ಮತದಾರರ ಸಂಖ್ಯೆ-4,19,587
ಪುರುಷ ಮತದಾರರು- 2,19,775
ಮಹಿಳಾ ಮತದಾರರು- 1,99,733
ಇತರರು- 79

ಬ್ಯಾಟರಾಯನಪುರ ಕ್ಷೇತ್ರ ಕರ್ನಾಟಕ ರಾಜ್ಯದ 224 ಕ್ಷೇತ್ರಗಳ ಪೈಕಿ ಒಂದು. 2023 ಮೇ ತಿಂಗಳೊಳಗೆ ನಡೆಯಬೇಕಾಗಿರುವ ಕರ್ನಾಟಕ ಅಸೆಂಬ್ಲಿ ಚುನಾವಣೆಗೆ ಪ್ರಬಲ ಪಕ್ಷಗಳು ಜಯ ಸಾಧಿಸಲು ತೊಡೆತಟ್ಟಿ ನಿಂತಿವೆ. ಬ್ಯಾಟರಾಯನಪುರ ಕ್ಷೇತ್ರದ ರಾಜಕೀಯದ ಬಗ್ಗೆ ಮಾತನಾಡುವುದಾದರೆ ಕೃಷ್ಣ ಭೈರೇಗೌಡ ಮೊದಲಿಗರು.

2008ರಿಂದ ಕಾಂಗ್ರೆಸ್ ಕೈಯಲ್ಲಿರೋ ಬ್ಯಾಟರಾಯನಪುರ ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರಾಗಿರುವ ಕೃಷ್ಣ ಭೈರೇಗೌಡ ಹ್ಯಾಟ್ರಿಕ್ ಬಾರಿಸಿದ್ದಾರೆ. ಆದರೆ ಈ ಬಾರಿ ಚುನಾವಣೆಯಲ್ಲಿ ಜಯ ಸಾಧಿಸಲು ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸಿದೆ. ಮತ್ತೊಂದೆಡೆ ಒಕ್ಕಲಿಗರ ಪಾರಮ್ಯ ಇರುವುದರಿಂದ ಜೆಡಿಎಸ್‌ ಕೂಡ ಇಲ್ಲಿ ಪ್ರಬಲವಾಗಿದೆ.

2018 ಕಳೆದ ಚುನಾವಣೆಯಲ್ಲಿ ಇಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಯ ಗಳಿಸಿದ್ದರು. ಬ್ಯಾಟರಾಯನಪುರ ಕ್ಷೇತ್ರದ ಚುನಾವಣಾ ಇತಿಹಾಸ ನೋಡುವುದಾದರೆ ಇಲ್ಲಿ 2018 ರಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ನ ಕೃಷ್ಣ ಬೈರೇಗೌಡ ಗೆಲುವು ಸಾಧಿಸಿದ್ದರು. ಭಾರತೀಯ ಜನತಾ ಪಾರ್ಟಿಯ ಎ. ರವಿ 5671 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು.

ಜೆಡಿಎಸ್‌ ನಿಂದ ಚಂದ್ರಣ್ಣ 22,490 ಮತಗಳನ್ನು ಪಡೆಯುವ ಮೂಲಕ ಮೂರನೇ ಸ್ಥಾನ ಪಡೆದುಕೊಂಡರು. ಮುಂಬರುವ ಚುನಾವಣೆಯಲ್ಲಿ ಈ ಮೂರು ಪಕ್ಷಗಳ ಅಭ್ಯರ್ಥಿಗಳು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಬಿಜೆಪಿಯಲ್ಲಿ ತಮ್ಮೇಶ್ ಗೌಡ ಕೂಡಾ ಪ್ರಬಲ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

 ಚುನಾವಣೆಯಲ್ಲಿ ಸ್ಪರ್ಧಿಸಲು ಕಲಮ-ಕೈ ಸಿದ್ಧತೆ

ಚುನಾವಣೆಯಲ್ಲಿ ಸ್ಪರ್ಧಿಸಲು ಕಲಮ-ಕೈ ಸಿದ್ಧತೆ

ಯಶವಂತಪುರ ವಿಧಾನಸಭಾ ಕ್ಷೇತ್ರ
ಒಟ್ಟು ಮತದಾರರ ಸಂಖ್ಯೆ- 4,53,546
ಪುರುಷ ಮತದಾರರು- 2,36,223
ಮಹಿಳಾ ಮತದಾರರು- 2,17,276
ಇತರರು- 47

ಮತ್ತೊಮ್ಮೆ ಚುನಾವಣಾ ಸಮರಕ್ಕೆ ಸಜ್ಜಾಗಿರುವ ಯಶವಂತಪುರ ಕ್ಷೇತ್ರ ಕರ್ನಾಟಕ ರಾಜ್ಯದ 224 ಕ್ಷೇತ್ರಗಳ ಪೈಕಿ ಒಂದು. 2019 ಕಳೆದ ಚುನಾವಣೆಯಲ್ಲಿ ಇಲ್ಲಿ ಭಾರತೀಯ ಜನತಾ ಪಾರ್ಟಿ ಪಕ್ಷದ ಅಭ್ಯರ್ಥಿ ಜಯ ಗಳಿಸಿದ್ದರು. ಇಲ್ಲಿ 2019 ರಲ್ಲಿ ಭಾರತೀಯ ಜನತಾ ಪಾರ್ಟಿ ಯ ಎಸ್ ಟಿ ಸೋಮಶೇಖರ ಗೆಲುವು ಸಾಧಿಸಿದ್ದರು.

ಜನತಾ ದಳ (ಜಾತ್ಯತೀತ)ಯ ಟಿ.ಎನ್. ಜವರಾಯಿಗೌಡ 27,699 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು. ಐಎನ್‌ಸಿಯಿಂದ ಪಿ. ನಾಗರಾಜ್ 15,714 ಮತಗಳನ್ನು ಗಳಿಸಿದ್ದರು. ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಸಕಲ ಸಿದ್ಧತೆಯನ್ನು ನಡೆಸಿದ್ದಾರೆ.

 ಎಸ್ ಮುನಿರಾಜು ಒಲಿಯಲಿದಿಯೆ ಟಿಕೆಟ್‌?

ಎಸ್ ಮುನಿರಾಜು ಒಲಿಯಲಿದಿಯೆ ಟಿಕೆಟ್‌?

ದಾಸರಹಳ್ಳಿ ವಿಧಾನಸಭಾ ಕ್ಷೇತ್ರ
ಒಟ್ಟು ಮತದಾರರ ಸಂಖ್ಯೆ-4,37,077
ಪುರುಷ ಮತದಾರರು- 2,36,853
ಮಹಿಳಾ ಮತದಾರರು- 2,00,138
ಇತರರು- 86

ದಾಸರಹಳ್ಳಿ ಕ್ಷೇತ್ರದಲ್ಲಿ 2018 ಕಳೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಎಸ್. ಮುನಿರಾಜು 10,675 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು. ಜನತಾದಳ (ಜಾತ್ಯತೀತ) ದ ಮಂಜುನಾಥ್ ಗೆಲುವು ಸಾಧಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಪಿ ಎನ್ ಕೃಷ್ಣ ಮೂರ್ತಿ 31,711 ಮತಗಳನ್ನು ಪಡೆಯುವ ಮೂಲಕ ಮೂರನೇ ಸ್ಥಾನವನ್ನು ಪಡೆದಿದ್ದಾರೆ. ಈ ಬಾರಿಯೂ ಮಂಜುನಾಥ್ ಹಾಗೂ ಎಸ್ ಮುನಿರಾಜು ಮತ್ತು ಕಾಂಗ್ರೆಸ್ ಅಭ್ಯರ್ಥಿ ಪಿ ಎನ್ ಕೃಷ್ಣ ಮೂರ್ತಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

 ಮತ್ತೆ ಗೆಲುವಿನ ನಿರೀಕ್ಷೆಯಲ್ಲಿ ಅರವಿಂದ ಲಿಂಬಾವಳಿ

ಮತ್ತೆ ಗೆಲುವಿನ ನಿರೀಕ್ಷೆಯಲ್ಲಿ ಅರವಿಂದ ಲಿಂಬಾವಳಿ

ಮಹದೇವಪುರ ವಿಧಾನಸಭಾ ಕ್ಷೇತ್ರ
ಒಟ್ಟು ಮತದಾರರ ಸಂಖ್ಯೆ-4,70,878
ಪುರುಷ ಮತದಾರರು- 2,56,250
ಮಹಿಳಾ ಮತದಾರರು- 2,14,479
ಇತರರು- 149

ಕಳೆದ ಚುನಾವಣೆಯಲ್ಲಿ ಇಲ್ಲಿ ಭಾರತೀಯ ಜನತಾ ಪಾರ್ಟಿ ಪಕ್ಷದ ಅಭ್ಯರ್ಥಿ ಜಯ ಗಳಿಸಿದ್ದರು. ಇಲ್ಲಿ 2018ರಲ್ಲಿ ಭಾರತೀಯ ಜನತಾ ಪಾರ್ಟಿಯ ಅರವಿಂದ ಲಿಂಬಾವಳಿ ಗೆಲುವು ಸಾಧಿಸಿದ್ದರು. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ಸಿನ ಎ. ಸಿ. ಶ್ರೀನಿವಾಸ 17,784 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು. ಜೊತೆಗೆ ಜೆಡಿಎಸ್‌ ನ ಸತೀಶ್ ಕೆ 6,391 ಮತಗಳಿಂದ ಹೀನಾಯ ಸೊಲು ಅನುಭವಿಸಿದ್ದರು. ಈ ಬಾರಿಯೂ ಇವರೆಲ್ಲಾ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

 ಬೆಂಗಳೂರು ದಕ್ಷಿಣ ಕ್ಷೇತ್ರ

ಬೆಂಗಳೂರು ದಕ್ಷಿಣ ಕ್ಷೇತ್ರ

ಬೆಂಗಳೂರು ದಕ್ಷಿಣ ಕ್ಷೇತ್ರ ವಿಧಾನಸಭಾ ಕ್ಷೇತ್ರ
ಒಟ್ಟು ಮತದಾರರ ಸಂಖ್ಯೆ-5,81,408
ಪುರುಷ ಮತದಾರರು- 3,11,427
ಮಹಿಳಾ ಮತದಾರರು- 2,69,878
ಇತರರು- 103

ಮತ್ತೊಮ್ಮೆ ಚುನಾವಣಾ ಸಮರಕ್ಕೆ ಸಜ್ಜಾಗಿರುವ ಬೆಂಗಳೂರು ದಕ್ಷಿಣ ಕ್ಷೇತ್ರ ಕರ್ನಾಟಕ ರಾಜ್ಯದ 224 ಕ್ಷೇತ್ರಗಳ ಪೈಕಿ ಒಂದು. 2018, ಕಳೆದ ಚುನಾವಣೆಯಲ್ಲಿ ಇಲ್ಲಿ ಭಾರತೀಯ ಜನತಾ ಪಾರ್ಟಿ ಪಕ್ಷದ ಅಭ್ಯರ್ಥಿ ಜಯ ಗಳಿಸಿದ್ದರು. ಇಲ್ಲಿ 2018 ರಲ್ಲಿ ಭಾರತೀಯ ಜನತಾ ಪಾರ್ಟಿಯ ಎಂ. ಕೃಷ್ಣಪ್ಪ ಗೆಲುವು ಸಾಧಿಸಿದ್ದರು.

ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನ ಆರ್. ಕೆ. ರಮೇಶ್ 30,417 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು. ಜೆಡಿಎಸ್‌ನ ಆರ್ ಪ್ರಭಾಕರ್ ರೆಡ್ಡಿ 36,164 ಮತಗಳಿಗೆ ತೃಪ್ತರಾದರು. ಈ ಬಾರಿ ಕಾಂಗ್ರೆಸ್ಸಿನಿಂದ ಹಲವರು ಅರ್ಜಿ ಸಲ್ಲಿಸಿದ್ದಾರೆ, ಇನ್ನು ಬಿಜೆಪಿ ಮತ್ತು ಜೆಡಿಎಸ್ ನಲ್ಲಿ ಕಳೆದ ಬಾರಿ ಸ್ಪರ್ಧಿಸಿದವರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

 ಶಿವಣ್ಣಗೆ ನಾರಾಯಣಸ್ವಾಮಿ ಸವಾಲು

ಶಿವಣ್ಣಗೆ ನಾರಾಯಣಸ್ವಾಮಿ ಸವಾಲು

ಆನೇಕಲ್ ವಿಧಾನಸಭಾ ಕ್ಷೇತ್ರ
ಒಟ್ಟು ಮತದಾರರ ಸಂಖ್ಯೆ-3,48,102
ಪುರುಷ ಮತದಾರರು- 1,84,795
ಮಹಿಳಾ ಮತದಾರರು- 1,63,229
ಇತರರು- 79

ಅನೇಕಲ್ ಮೀಸಲಾತಿ ಕ್ಷೇತ್ರವಾಗಿದೆ. ಮತ್ತೊಮ್ಮೆ ಚುನಾವಣಾ ಸಮರಕ್ಕೆ ಸಜ್ಜಾಗಿರುವ ಆನೇಕಲ್ ಕ್ಷೇತ್ರ ಕರ್ನಾಟಕ ರಾಜ್ಯದ 224 ಕ್ಷೇತ್ರಗಳ ಪೈಕಿ ಒಂದು. 2018, ಕಳೆದ ಚುನಾವಣೆಯಲ್ಲಿ ಇಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಯ ಗಳಿಸಿದ್ದರು.

ಇಲ್ಲಿ 2018 ರಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ನ ಬಿ ಶಿವಣ್ಣ ಗೆಲುವು ಸಾಧಿಸಿದ್ದರು. ಭಾರತೀಯ ಜನತಾ ಪಾರ್ಟಿಯ ಎ ನಾರಾಯಣಸ್ವಾಮಿ 8,627 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು. ಬಿಎಸ್‌ಪಿ ಯಿಂದ ಜಿ ಶ್ರೀನಿವಾಸ್ 2,932 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತೃಪ್ತರಾದರು. ಈ ಬಾರಿ ಮೂರೂ ಪಕ್ಷದಿಂದ ಟಿಕೆಟ್ ಯಾರಿಗೆ ಸಿಗುತ್ತೆ ಎನ್ನುವ ವಿಚಾರದಲ್ಲಿ ಕುತೂಹಲವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+