Karnataka Assembly Election -2023 ಬೆಳಗಾವಿ ಜಿಲ್ಲೆ 09 ಕ್ಷೇತ್ರಗಳ ಟಿಕೆಟ್ ಆಕಾಂಕ್ಷಿಗಳು
ಎರಡು ಲೋಕಸಭಾ ಕ್ಷೇತ್ರಗಳನ್ನು ಹಾಗೂ 18 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿಯು ಕರ್ನಾಟಕ ರಾಜ್ಯದ ದೊಡ್ಡ ಜಿಲ್ಲೆ ಹಾಗೂ ಉತ್ತರ ಕರ್ನಾಟಕದ ಪ್ರಭಾವಿ ಜಿಲ್ಲೆಯು ಆಗಿದೆ. ಒಟ್ಟು 13 ತಾಲೂಕುಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆಯಲ್ಲಿ ರಾಜಕೀಯವಾಗಿ ಬಿಜೆಪಿಯು ಪ್ರಬಲವಾಗಿದೆ.
ಕರ್ನಾಟಕದ ಗಡಿ ಜಿಲ್ಲೆಯೂ ಆಗಿರುವ ಬೆಳಗಾವಿ ಭಾಗದಲ್ಲಿ ಕನ್ನಡಪರ ಚಳವಳಿ, ಹೋರಾಟಗಳಿಗೇನು ಕಡಿಮೆ ಇಲ್ಲ. ನೆರೆ ರಾಜ್ಯದವರ ಖ್ಯಾತೆ ಕಂಡಾಗಲೆಲ್ಲ ಅದರ ವಿರುದ್ಧ ಗಟ್ಟಿ ಧ್ವನಿ ಎತ್ತುವ ಹಾಗೂ ಉಗ್ರ ಹೋರಾಟ ನಡೆಸಿ ತಮ್ಮ ಹಕ್ಕು ಚಲಾಯಿಸುವ ಗಟ್ಟಿಗರನ್ನು ಇಲ್ಲಿದ್ದಾರೆ. ಗಡಿ ವಿಚಾರಕ್ಕೆ ಮಾತ್ರವಲ್ಲದೇ ಆಗಾಗ ರಾಜಕೀಯವಾಗಿಯೂ ಬೆಳಗಾವಿ ಸುದ್ದಿಯಲ್ಲಿರುತ್ತದೆ. ರಾಜ್ಯದಲ್ಲಿ ಅಧಿಕಾರ ಹಿಡಿಯಲು ಇಲ್ಲಿನ ಗೆಲುವು ಪ್ರಭಾವ ಬೀರಲಿದೆ. ಜಿಲ್ಲೆಯಲ್ಲಿ ಒಟ್ಟು 37,23,585 ಮತದಾರರು ಇದ್ದಾರೆ.
ಇತಿಹಾಸ ನೋಡುವುದಾದರೆ ಬ್ರಿಟಿಷರ ವಿರುದ್ಧ ಹೋರಾಡಿದ ಕಿತ್ತೂರು ರಾಣಿ ಚನ್ನಮ್ಮ ಇಲ್ಲಿನ ಕಿತ್ತೂರು ಸಂಸ್ಥಾನದವರು. ಅವರಿಗೆ ಬಲಗೈ ಬಂಟನಾಗಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನೆಲೆಸಿದ, ಮಡಿದ ಪುಣ್ಯ ಭೂಮಿ ಇದಾಗಿದೆ. ಭೌಗೋಳಿಕವಾಗಿ, ಸಾಂಸ್ಕೃತಿಕ, ಐತಿಹಾಸಿಕವಾಗಿ ಅಲ್ಲದೇ ರಾಜ್ಯದ ಆರ್ಥಿಕತೆಯ ವಿಚಾರದಲ್ಲಿ ಜಿಲ್ಲೆ ಮುಂಚೂಣಿಯಲ್ಲಿದೆ. ಭಾರತದ ಅಲ್ಯೂಮಿಯಂ ಕಂಪನಿ, ದೇಶದ ಸೇನಾಪಡೆಗಳ ತರಬೇತಿ ಕೇಂದ್ರ ಇಲ್ಲಿ ಸ್ಥಾಪಿತಗೊಂಡಿವೆ.
ಜಿಲ್ಲೆಯ ಕೋಟೆ ಕರೆ ಮೈದುಂಬಿಕೊಂಡಿದ್ದು, ಜನರನ್ನು ಸದಾ ತನ್ನ ಸೆಳೆಯುತ್ತದೆ. ವರ್ಷಗಳ ಹಿಂದಷ್ಟೇ ಕೆರೆ ದಡದಲ್ಲಿ ಅತ್ಯಂತ ಎತ್ತರದ ಧಜಸ್ತಂಭ ನಿರ್ಮಿಸಲಾಗಿದ್ದು, ಸಂಜೆ ವಿದ್ಯುತ್ ದೀಪಗಳಿಗೆ ಕಂಗೊಳಿಸುತ್ತದೆ. ಬಾನೆತ್ತರಕ್ಕೆ ತ್ರಿವರ್ಣ ಧ್ವಜ ರಾರಾಜಿಸುವುದನ್ನು ನೋಡುವುದೆ ಚೆಂದ. ಇದು ದೇಶದ ಎರಡನೇಯ ಅತೀ ಎತ್ತರದಲ್ಲಿ ಹಾರಾಡುವ ತ್ರೀವರ್ಣ ಧ್ವಜವಾಗಿದೆ.
ಬೆಳಗಾವಿಯಲ್ಲಿ 2018ರ ವಿಧಾನಸಭೆ ಚುನಾವಣೆಗೂ 2023ರ ಚುನಾವಣೆಗೂ ಹಲವು ವ್ಯತ್ಯಾಸ ಕಂಡು ಬರುತ್ತಿವೆ. ಬಿಜೆಪಿ ಕಾಂಗ್ರೆಸ್ ಮಧ್ಯೆ ತೀವ್ರ ಪೈಪೋಟಿ ನಡೆಯಲಿದೆ. ಕಳೆದ (2018ರಲ್ಲಿ) ಬಾರಿ 13 ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿ 9-10ಕ್ಷೇತ್ರ ಗೆಲ್ಲುವ ಸಾಧ್ಯತೆ ಇದೆ. ಕಾರಣ ಬಿಜೆಪಿ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ. 40 ಪರ್ಸೆಂಟ್ ಸರ್ಕಾರ ಎಂಬ ಹಣೆಪಟ್ಟಿ ಹೊತ್ತಿದೆ. ಕಳೆದ ಬಾರಿ (2018ರಲ್ಲಿ) 5 ಸ್ಥಾನ ಗೆದ್ದಿದ್ದ ಕಾಂಗ್ರೆಸ್ ಪಕ್ಷ ಈ ಸಲ 7 ರಿಂದ 8 ರಿಂದ ಕಾಂಗ್ರೆಸ್ ಗೆಲ್ಲಬಹುದು ಎನ್ನಲಾಗುತ್ತಿದೆ. ಚುನಾವಣೆ ವಿಚಾರದಲ್ಲಿ ಕಾಂಗ್ರೆಸ್ ಹೆಚ್ಚು ಸಕ್ರಿಯವಾಗಿದ್ದೆ ಇದಕ್ಕೆ ಕಾರಣ ಎನ್ನಲಾಗಿದೆ.
ಬೆಳಗಾವಿ ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳ ಪೈಕಿ ಎಂಟು ಕ್ಷೇತ್ರಗಳಾದ 'ಅರಬಾವಿ, ಬೈಲಹೊಂಗಲ, ಬೆಳಗಾವಿ ದಕ್ಷಿಣ, ಬೆಳಗಾವಿ ಉತ್ತರ, ಬೆಳಗಾವಿ ಗ್ರಾಮಾಂತರ, ಸವದತ್ತಿ, ಗೋಕಾಕ್, ರಾಮದುರ್ಗ ಮತ್ತು ಯಮಕನಮರಡಿ ಕ್ಷೇತ್ರಗಳಲ್ಲಿ ಚುನಾವಣೆ ಕಣ ಸಿದ್ಧವಾಗುತ್ತಿದೆ. ಇಲ್ಲಿ ಜೆಡಿಎಸ್ ಸ್ಪರ್ಧಿಗಳ ಕೊರತೆ ಈ ಬಾರಿ ಮುಂದುವರಿಯಲಿದೆ. ಉಳಿದಂತೆ ಬಿಜೆಪಿ-ಕಾಂಗ್ರೆಸ್ ಆಯಾ ಪಕ್ಷ ವರಿಷ್ಠರು ಟಿಕೆಟ್ ನೀಡುವ ಬಗ್ಗೆ ನಿರ್ಧರಿಸಲಿದ್ದಾರೆ. ಹೀಗಿದ್ದರು ಈ 09 ಕ್ಷೇತ್ರಗಳಲ್ಲಿ ಟೀಕೆಟ್ ಆಕಾಂಕ್ಷಿಗಳಿದ್ದು, ಅವರ ಮಾಹಿತಿ ಇಲ್ಲಿದೆ.

ಬೆಳಗಾವಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರ : ಲಕ್ಷ್ಮೀ ಹೆಬ್ಬಾಳ್ಕರ್
ಒಟ್ಟು ಮತದಾರರು- 2,38,753
ಪುರುಷರು - 1,21,313
ಮಹಿಳೆಯರು -1,17,421
ಇತರ - 19
ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದು, ಈ ಬಾರಿ ಅವರಿಗೆ ಟಿಕೆಟ್ ಖಚಿತ ಎನ್ನಲಾಗುತ್ತಿದೆ. ಅವರನ್ನು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೋಲಿಸುವುದಾಗಿ ಹೇಳಿಕೊಂಡಿದ್ದಾರೆ. ಆದರೆ ಅವರದ್ದು ಗೋಕಾಕ್ ಕ್ಷೇತ್ರ. ಇವರಿಬ್ಬರ ನಡುವೆ ಸಾಕಷ್ಟು ರಾಜಕೀಯ ಜಿದ್ದಾಜಿದ್ದಿ ಇದೆ.
ಬಿಜೆಪಿ ಟಿಕೆಟ್ ಆಕಾಂಕ್ಷಿಯಾದ ಮಾಜಿ ಸಚಿವ ಸಂಜಯ್ ಪಾಟೀಲ್ ಕಣಕ್ಕಿಳಿಯುವ ಸಾಧ್ಯತೆ ಇದೆ. ಇವರು ಬಿಜೆಪಿಯಿಂದ ಪ್ರಬಲ ಟಿಕೆಟ್ ಆಕಾಂಕ್ಷಿ ಎನ್ನಬಹುದು. ಸಂಜಯ್ ಪಾಟೀಲ್ ಅವರಿಗೆ ಬಿಜೆಪಿಯ ಮತ್ತೊಬ್ಬ ನಾಯಕ ಧನಂಜಯ್ ಜಾಧವ್ ಅವರು ಟಿಕೆಟ್ ಆಕಾಂಕ್ಷಿ.
ಆಗಿದ್ದರಿಂದ ಬಿಜೆಪಿಯಲ್ಲಿ ಪೈಪೋಟಿ ಏರ್ಪಡುವ ಸಾಧ್ಯತೆ ಇದ್ದು, ಇದು ಕಾಂಗ್ರೆಸ್ ವರದಾನವಾದರು ಅಚ್ಚರಿ ಇಲ್ಲ. ಆದರೆ ಬಿಜೆಪಿ ಯಾರಿಗೆ ಮಣೆ ಹಾಕಲಿದೆ ಎಂಬುದನ್ನು ನೋಡಬೇಕಿದೆ. ಜೆಡಿಎಸ್ ಈ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಕೊರತೆ ಎದುರಿಸುತ್ತಿದೆ.

ಗೋಕಾಕ ವಿಧಾನಸಭಾ ಕ್ಷೇತ್ರದಲ್ಲಿ ಯಾರಿಗೆ ಮುನ್ನಡೆ
ಗೋಕಾಕ್ ವಿಧಾನಸಭಾ ಕ್ಷೇತ್ರ : ರಮೇಶ್ ಜಾರಕಿಹೊಳಿ ಪ್ರಬಲ ಆಕಾಂಕ್ಷಿ
ಒಟ್ಟು ಮತದಾರರು- 2,41,197
ಪುರುಷರು - 1,18952
ಮಹಿಳೆಯರು -1,22,229
ಇತರೆ - 16
ಈ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಪೈಪೋಟಿ ನೀಡಿದ್ದ ರಮೇಶ್ ಜಾರಕಿಹೊಳಿ ಬಿಜೆಪಿ ಸೇರಿದ್ದಾರೆ. ರಮೇಶ್ ಜಾರಕಿಹೊಳಿಗೆ ಐದು ಭಾರಿ ಶಾಸಕರಾಗಿದ್ದು, ಸಚಿವರಾಗಿ ಕೆಲಸ ಮಾಡಿದ ಅನುಭವವು ಅವರಿಗೆ ಇದೆ. ಇಲ್ಲಿ ಅವರೇ ನಿರ್ಣಾಯಕ ಎನ್ನಬಹುದು. ಬಿಜೆಪಿಯಿಂದ ರಮೇಶ್ ಜಾರಕಿಹೊಳಿ ಅವರಿಗೆ ನೀಡುವ ಸಾಧ್ಯತೆ ಹೆಚ್ಚಿದೆ.
ಕಾರಣ ಅವರು ಪ್ರಕರಣವೊಂದರೆ ಆರೋಪ ಮುಕ್ತರಾಗಿದ್ದಾರೆ. ಸಚಿವ ಸ್ಥಾನದ ಆಕಾಂಕ್ಷಿಯು ಆಗಿದ್ದರು. ಅವರಿಗೆ ಬಿಜೆಪಿಯಲ್ಲಿ ಪೈಪೋಟಿ ಯಾರು ಇಲ್ಲ ಎನ್ನಲಾಗಿದೆ. ಇನ್ನೂ ಕಾಂಗ್ರೆಸ್‌ನಿಂದ ಅಶೋಕ್ ಪೂಜಾರಿ ಪ್ರಬಲ ಟಿಕೆಟ್ ಆಕಾಂಕ್ಷಿ ಆಗಿದ್ದಾರೆ.

ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರ
ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರ: ಅಭಯ್ ಪಾಟೀಲ್
ಒಟ್ಟು ಮತದಾರರು - 2,34,509
ಪುರುಷರು - 1,18,464
ಮಹಿಳೆಯರು - 1,15,983
ಇತರೆ - 62
ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಬಿಜೆಪಿಯಿಂದ ಅಭಯ್ ಪಾಟೀಲ್ ಹಾಲಿ ಶಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರೇ ಮುಂಬರಲಿರುವ ವಿಧಾನಸಭಾ ಚುನಾವಣೆ ಪ್ರಬಲ ಟಿಕೆಟ್ ಆಕಾಂಕ್ಷಿ ಆಗಿದ್ದಾರೆ.
ಇನ್ನೂ ಕಾಂಗ್ರೆಸ್‌ನಿಂದ ಎಂ.ಡಿ. ಲಕ್ಷ್ಮೀ ನಾರಾಯಣ ಅವರು 2018ರಲ್ಲಿ ಅಭಯ್ ಪಾಟೀಲ್ ವಿರುದ್ಧ ಸೋಲು ಅನುಭವಿಸಿದ್ದರು. ಅವರು ಕೇವಲ 25,806 ಮತಗಳನ್ನು ಪಡೆದಿದ್ದರು. ಈ ಭಾರಿ ಅವರು ಟಿಕೆಟ್ ಆಕಾಂಕ್ಷಿ ಎನ್ನಲಾಗಿದೆ.
ಜೊತೆಗೆ ಮಾಜಿ ಜಿ.ಪಂ ಸದಸ್ಯ ರಮೇಶ್ ಗೋರಲ್, ಚಂದ್ರಹಾಸ್ ಅಣ್ವೇಕರ್ ಅವರು ಅರ್ಜಿ ಸಲ್ಲಿಸಿದ್ದಾರೆ. ಆದರೆ ಕಾಂಗ್ರೆಸ್ ಇವರಿಗೆ ಮಣೆ ಹಾಕಲಿದಿಯೋ ಅಥವಾ ಹೊಸಬರನ್ನು ಆಯ್ಕೆ ಮಾಡಲಿದೆಯೋ ಎಂಬುದನ್ನು ಕಾದು ನೋಡಬೇಕಿದೆ. ಮುಖ್ಯವಾಗಿ ಇಲ್ಲಿ ಎಂಇಎಸ್ ಮತದಾರರು ಹೆಚ್ಚಿದ್ದಾರೆ. ಎಇಎಸ್‌ನಿಂದ ಶುಭಂ ಸೆಳಕೆ ಟಿಕೆಟ್ ಆಕಾಂಕ್ಷಿ ಎನ್ನಲಾಗುತ್ತಿದೆ.

ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರ : ಅನಿಲ್ ಎಸ್.ಬೆನಕೆ
ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರ
ಒಟ್ಟು ಮತದಾರರು - 2,34,887
ಪುರುಷರು - 1,17,571
ಮಹಿಳೆಯರು - 1,17,290
ಇತರೆ - 26
ಈ ಕ್ಷೇತ್ರದಲ್ಲಿ ಸಹ ಬಿಜೆಪಿಯ ಮುಷ್ಟಿಯಲ್ಲಿದೆ. ಕಳೆದ 2018ರ ಚುನಾವಣೆಯಲ್ಲಿ ಬಿಜೆಪಿಯ ಅನಿಲ್ ಎಸ್.ಬೆನಕೆ ಅವರು ವಿಜಯ ಸಾಧಿಸಿದ್ದರು. ಅವರ ವಿರುದ್ಧ ನಿಂತಿದ್ದ ಕಾಂಗ್ರೆಸ್‌ನ ಕೇವಲ ಫೈರೋಜ್ ಎನ್ ಸೇಠ್ ಅವರು 17,276 ಮತಗಳಿಂದ ಸೋಲನ್ನು ಕಂಡಿದ್ದರು.
ಇವರು 2013ರಲ್ಲಿ ಬಹುಮತ ಗಳಿಸಿ ಬೆಳಗಾವಿ ಉತ್ತರದಲ್ಲಿ ಗೆಲುವಿನ ನಗೆ ಬೀರಿದ್ದರು. ಅವರ ಕುಟುಂಬದಲ್ಲೇ ಈ ಬಾರಿ ಕಾಂಗ್ರೆಸ್‌ನಿಂದ ಟಿಕೆಟ್ ಗಾಗಿ ಕಿತ್ತಾಟ ಶುರುವಾಗಿದೆ. ಬೆಳಗಾವಿಯಿಂದ ಎರಡು ಬಾರಿ ಆಯ್ಕೆಯಾಗಿದ್ದ ಫಿರೋಜ್ ಸೇಠ್, ಸಹೋದರ ರಾಜು ಸೇಠ್ ಹಾಗೂ ಫಿರೋಜ್ ಪುತ್ರ ಫೈಜಾನ್ ಸೇಠ್ ಒಂದೇ ಕುಟುಂಬ ಈ ಮೂವರು ಸೇರಿದಂತೆ ಒಟ್ಟು ಎಂಟು ಮಂದಿ ಕಾಂಗ್ರೆಸ್‌ನಿಂದ ಉತ್ತರ ಕ್ಷೇತ್ರ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಕ್ಷೇತ್ರದ ಟಿಕೆಟ್ ನೀಡುವುದು ಕಾಂಗ್ರೆಸ್ ಕಗ್ಗಂಟಾಗಿ ಪರಿಣಮಿಸಲಿದೆ.

ಬೈಲಹೊಂಗಲ ವಿಧಾನಸಭಾ ಕ್ಷೇತ್ರ: ಮಹಾಂತೇಶ್ ಕೌಜಲಗಿ
ಬೈಲಹೊಂಗಲ ವಿಧಾನಸಭಾ ಕ್ಷೇತ್ರ: ಮಹಾಂತೇಶ್ ಕೌಜಲಗಿ
ಒಟ್ಟು ಮತದಾರರು - 1,18,116
ಪುರುಷರು - 92,866
ಮಹಿಳೆಯರು - 91,246
ಇತರೆ - 04
ಕಾಂಗ್ರೆಸ್‌ನಿಂದ ಮಹಾಂತೇಶ್ ಕೌಜಲಗಿ ಅವರು ಎರಡು ಬಾರಿ ಶಾಸಕರಾಗಿದ್ದಾರೆ. ಅವರೇ ಕಾಂಗ್ರೆಸ್ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದು, ಈಗಾಗಲೇ ಅವರು ಅರ್ಜಿ ಸಲ್ಲಿಸಿದ್ದಾರೆ. ಇಲ್ಲಿ ಜೆಡಿಎಸ್ ಪಕ್ಷ ಸಹ ಉಸಿರಾಡುವ ಪರಿಸ್ಥಿತಿಯಲ್ಲಿದೆ. ಆದರೆ ಯಾರನ್ನು ತಂದು ನಿಲ್ಲಿಸಲಿದಿಯೋ ಎಂಬುದು ಕುತೂಹಲ ಮೂಡಿಸಿದೆ.
ಮುಖ್ಯವಾಗಿ ಇಲ್ಲಿಯು ಮರಾಠಿಗರ ಹೆಚ್ಚು ಮತಗಳಿವೆ. ಆದರೆ ಎಂಇಎಸ್ ಇಲ್ಲಿ ಗೆಲುವುದು ಕಷ್ಟವಾದರೂ ಸಹ ನೇರಾ ಹಣಾಹಣಿಯಲ್ಲಿರುವ ಬಿಜೆಪಿ-ಕಾಂಗ್ರೆಸ್‌ನ ಒಂದಷ್ಟು ಮತಗಳನ್ನು ಕಸಿದುಕೊಳ್ಳುವಲ್ಲಿ ಯಶಸ್ವಿಯಾಗಲಿದೆ. ಕೆಜೆಪಿ ಅಭ್ಯರ್ಥಿಯಾಗಿದ್ದ ಡಾ.ವಿ.ಐ ಪಾಟೀಲ್ 2014ರಲ್ಲಿ ಬಿಜೆಪಿ ಸೇರಿದ್ದರು. ಇದರಿಂದ ಮೂಲ ಬಿಜೆಪಿಗ ಜಗದೀಶ್ ಮೆಟ್ಟಗುಡ್ಡ ಅವರು ಪಕ್ಷೇತರ ನಿಂತರು.
ಅದರ ಲಾಭ ಕಾಂಗ್ರೆಸ್ ಪಡೆದು ಅಧಿಕಾರ ಪಡೆಯಿತು. ಈ ಸಲ ಈ ಇಬ್ಬರಿಗೆ ಬಿಜೆಪಿ ಟಿಕೆಟ್ ಆಕಾಂಕ್ಷಿ ಜೊತೆಗೆ ಶಾಸಕ ಡಾ.ವಿಶ್ವನಾಥ್ ಪಾಟೀಲ್ ಅವರು ಆಕಾಂಕ್ಷಿಗಳಾಗಿದ್ದಾರೆ. ಆದರೆ ಜಗದೀಶ್‌ರನ್ನು ಸೆಳೆದು ಇಬ್ಬರು ಒಬ್ಬರನ್ನು ಬಿಜೆಪಿ ನಿಲ್ಲಿಸಬಹುದು ಎಂಬ ಗುಮಾನಿ ಇದೆ.

ಯಮಕನಮರಡಿ ವಿಧಾನಸಭಾ ಕ್ಷೇತ್ರ: ಸತೀಶ್ ಜಾರಕಿಹೊಳಿ ಪ್ರಾಬಲ್ಯ
ಯಮಕನಮರಡಿ ವಿಧಾನಸಭಾ ಕ್ಷೇತ್ರ
ಒಟ್ಟು ಮತದಾರರು - 1,86,859
ಪುರುಷರು - 93,481
ಮಹಿಳೆಯರು - 93,368
ಇತರೆ - 10
ಈ ಯಮಕನಮರಡಿ ಕ್ಷೇತ್ರವು ಎಸ್‌ಟಿ ಮೀಸಲು ಕ್ಷೇತ್ರವಾಗಿದೆ. ಕಾಂಗ್ರೆಸ್ ಮುಖಂಡ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿಯವರು ಹಾಲಿ ಶಾಸಕ. ಈ ಮೊದಲು ಅವರು ತಮ್ಮ ಸ್ವಕ್ಷೇತ್ರದಲ್ಲಿ ಪುತ್ರಿ ಪ್ರಿಯಾಂಕಾ ಅವರನ್ನು ಸ್ಪರ್ಧೆಗಿಳಿಸಿ , ತಾವು ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸಲು ಚಿಂತನೆ ನಡೆಸಿ ಕೊನೆಗೆ ಕೈ ಬಿಟ್ಟಿದ್ದಾರೆ.
ಇಲ್ಲಿ ಸತೀಶ್ ಜಾರಕಿಹೊಳಿ ಅವರನ್ನು ಸೋಲಿಸಲು ಬಿಜೆಪಿ ಸಿದ್ಧತೆ ನಡೆಸಿದೆ. ಕಳೆದ ಬಾರಿ ಸ್ವಲ್ಪ ಮತಗಳ ಅಂತರದಿಂದ ಪರಾಭವಗೊಂಡಿದ್ದ ಬಿಜೆಪಿಯ ಮಾರುತಿ ಅಷ್ಟಗಿ, ಈ ಬಾರಿ ಬಿಜೆಪಿಯಿಂದ ಟಿಕೆಟ್ ಪಡೆದು ಮತ್ತೊಮ್ಮೆ ಯತ್ನ ಮಾಡಲು ತಂತ್ರ ರೂಪಿಸಿದ್ದಾರೆ.
ಆದರೆ ಬಿಜೆಪಿ ಬಸವರಾಜ ಹುಂದ್ರಿ ಅವರನ್ನು ಯಮಕನಮರಡಿಯಲ್ಲಿ ನಿಲ್ಲಿಸಲು ನಿರ್ಧರಿಸಿದೆ. ಈ ಕ್ಷೇತ್ರ ಬಿಜೆಪಿಗೂ ಹಾಗೂ ಸತೀಶ್ ಜಾರಿಕಿಹೊಳಿಗೆ ಪ್ರತಿಷ್ಠೆಯ ಕಣವಾಗಿದ್ದು, ತೀವ್ರ ಪೈಪೋಟಿ ನಡೆಯುವುದರಲ್ಲಿ ಎರಡು ಮಾತಿಲ್ಲ. ಕಾಂಗ್ರೆಸ್‌ನಲ್ಲಿ ಸತೀಶ್ ಜಾರಕಿಹೊಳಿಯೇ ಅಂತಿಮ ಅಭ್ಯರ್ಥಿ ಎನ್ನಬಹುದು.

ಸವದತ್ತಿ ವಿಧಾನಸಭಾ ಕ್ಷೇತ್ರ: ಆನಂದ ಮಾಮನಿ ಆಕಾಂಕ್ಷಿ
ಸವದತ್ತಿ ಯಲ್ಲಮ್ಮ ವಿಧಾನಸಭಾ ಕ್ಷೇತ್ರ
ಒಟ್ಟು ಮತದಾರರು : 1,89,556
ಪುರುಷರು: 95,518
ಮಹಿಳೆಯರು: 93,644
2018 ರಲ್ಲಿ ಬಿಜೆಪಿ ಅಭ್ಯರ್ಥಿ ಆನಂದ ಮಾಮನಿ ಗೆಲುವು ಸಾಧಿಸಿದ್ದರು. ಅವರು ಪಕ್ಷೇತರ ಅಭ್ಯರ್ಥಿ ಆನಂದ ಚೋಪ್ರಾ ಅವರನ್ನು 6,291 ಮತಗಳ ಅಂತರದಿಂದ ಸೋಲಿಸಿದ್ದರು.
ಈಗ ಬಿಜೆಪಿಯಿಂದ ಆನಂದ ಮಾಮನಿ ಕುಟುಂಬದ ಸದಸ್ಯರೊಬ್ಬರಿಗೆ ಬಿಜೆಪಿ ಟಿಕೆಟ್ ನೀಡಬಹುದು ಎಂಬ ಮಾತುಗಳು ಕೇಳಿಬಂದಿವೆ. ಇನ್ನು ಕಾಂಗ್ರೆಸ್‌ನಿಂದ ಸತೀಶ ಜಾರಕಿಹೊಳಿ, ವಿಶ್ವಾಸ್ ವೈದ್ಯ, ಸೌರಭ್ ಚೋಪ್ರಾ (ಆನಂದ ಚೋಪ್ರಾ ಪುತ್ರ) ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

ರಾಮದುರ್ಗ ವಿಧಾನಸಭಾ ಕ್ಷೇತ್ರ: ಮಹಾದೇವಪ್ಪ ಯಾದವಾಡ
ರಾಮದುರ್ಗ ವಿಧಾನಸಭಾ ಕ್ಷೇತ್ರ
ಒಟ್ಟು ಮತದಾರರು : 1,97,637
ಪುರುಷ ಮತದಾರರು: 1,00,607
ಮಹಿಳಾ ಮತದಾರರು: 96,601
ಕಳೆದ ಬಾರಿ ರಾಮದುರ್ಗ ಕ್ಷೇತ್ರದಲ್ಲಿ ಮಹಾದೇವಪ್ಪ ಯಾದವಾಡ ಅವರು ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಅವರ ವಿರುದ್ಧ ಕಣಕ್ಕಿಳಿದಿದ್ದ ಅಶೋಕ್ ಪಟ್ಟಣ ಅವರು ಕೇವಲ 2,875 ಮತಗಳ ಅಂತರದಲ್ಲಿ ಪರಾಭವಗೊಂಡಿದ್ದರು.
ಈ ಬಾರಿ ಮಹಾದೇವಪ್ಪ ಯಾದವಾಡ, ಮಲ್ಲಣ್ಣ ಯಾದವಾಡ, ರಮೇಶ ದೇಶಪಾಂಡೆ, ಕೆ.ವಿ.ಪಾಟೀಲ, ಪಿ.ಎಫ್. ಪಾಟೀಲ ಬಿಜೆಪಿ ಆಕಾಂಕ್ಷಿಗಳಾಗಿದ್ದಾರೆ. ಕಾಂಗ್ರೆಸ್‌ನಿಂದ ಮಾಜಿ ಶಾಸಕ ಅಶೋಕ ಪಟ್ಟಣ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ಅರಭಾವಿ ವಿಧಾನಸಭಾ ಕ್ಷೇತ್ರ : ಬಾಲಚಂದ್ರ ಜಾರಕಿಹೊಳಿ
ಅರಭಾವಿ ವಿಧಾನಸಭಾ ಕ್ಷೇತ್ರ
ಒಟ್ಟು ಮತದಾರರು - 2,31,177
ಪುರುಷರು - 1,15,347
ಮಹಿಳೆಯರು - 1,15,813
ಇಲ್ಲಿ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟ (KMF)ದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಈ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದಾರೆ. ಬೆಳಗಾವಿಯಲ್ಲಿ ಜಾರಕಿಹೊಳಿ ಪ್ರಾಬಲ್ಯವಿರುವ ಕ್ಷೇತ್ರಗಳ ಪೈಕಿ ಅರಭಾವಿಯು ಒಂದು. ಈ ಬಾರಿಯೂ ಬಿಜೆಪಿಯಿಂದ ಕಣಕ್ಕೆ ಇಳಿಯುವುದಾಗಿ ಅವರೇ ಸ್ವತಃ ತಿಳಿಸಿದ್ದಾರೆ.
2008ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿ ನಂತರ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಬಾಲಚಂದ್ರ ಜಾರಕಿಹೊಳಿ ಕ್ಷೇತ್ರದಲ್ಲಿ ಪಕ್ಷಕ್ಕಿಂತ ಹೆಚ್ಚು ವೈಯಕ್ತಿಕ ವರ್ಚಸ್ಸನ್ನು ಹೊಂದಿದ್ದಾರೆ. ಬಾಲಚಂದ್ರರವರ ಓಟಕ್ಕೆ ಬ್ರೇಕ್ ಹಾಕಲು ಕಾಂಗ್ರೆಸ್, ಜೆಡಿಎಸ್ ತಂತ್ರಗಾರಿಕೆ ಹೆಣೆಯುತ್ತಿವೆ.
ಕಾಂಗ್ರೆಸ್‌ನಿಂದ ಲಖನ್ ಸವಸುದ್ದಿ, ಭೀಮಶಿ ಹಂದಿಗುದ್ದ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಕಳೆದ ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿ ಸೋತಿದ್ದ ಸಾಮಾಜಿಕ ಹೋರಾಟಗಾರ ಭೀಮಪ್ಪ ಗಡಾದ, ಈ ಬಾರಿಯು ಜೆಡಿಎಸ್‌ನಿಂದ ಸ್ಪರ್ಧಿಸಲಿದ್ದಾರೆ.












Click it and Unblock the Notifications