ಹಾಯ್ ಬೆಂಗಳೂರ್ ಸಂಪಾದಕ ರವಿ ಬೆಳಗೆರೆ ನೋಟ್ಸ್ ಫ್ರಮ್ ಸೆಂಟ್ರಲ್ ಜೈಲ್

"ಒಬ್ಬ ಸುಪಾರಿ ಹಂತಕ. ಒಬ್ಬ ಪೊಲೀಸ್ ಅಧಿಕಾರಿ. ಹೀಗೆ ನಾಲ್ಕೈದು ಜನ ಸೇರಿ ನೇಯ್ದ ಅತ್ಯಂತ ಬಲಹೀನ ಜಾಲವಿದು" ಎಂದು ಕರೆದಿದ್ದಾರೆ 'ಹಾಯ್ ಬೆಂಗಳೂರ್!' ವಾರಪತ್ರಿಕೆ ಸಂಪಾದಕ- ಹಿರಿಯ ಪತ್ರಕರ್ತ ತಮ್ಮ ವಿರುದ್ಧ ಬಂದಿರುವ ಸುಪಾರಿ ಹತ್ಯೆಗೆ ಯತ್ನಿಸಿದ ಆರೋಪಕ್ಕೆ ನೀಡಿರುವ ಪ್ರತಿಕ್ರಿಯೆ. ತಮ್ಮದೇ ವಾರಪತ್ರಿಕೆಯ ಅಂಕಣ 'ಸಾಫ್ಟ್ ಕಾರ್ನರ್' ನಲ್ಲಿ ಹೇಳಿರುವ ಮಾತಿದು.

ಆಫೀಸಿನಲ್ಲಿ ಆಗಷ್ಟೇ ಬರೆದು ನಿದ್ರೆಯಲ್ಲಿದ್ದೆ. ಪೊಲೀಸ್ ಅಧಿಕಾರಿಯೊಬ್ಬರು ಬಂದು ನಿಮ್ಮನ್ನ arrest ಮಾಡ್ತಿದೀನಿ ಅಂದರು. Fine, ಹಲ್ಲುಜ್ಜಿಕೊಂಡು ಬರ್ತೀನಿ. ನೀವು ಅಲ್ಲೀ ತನಕ ಕೂತಿರಿ ಅಂದೆ.

ಒಂದು ಮೂಲೆ ಬಿಡದೆ search ಮಾಡಿದರು. ಸಿಗರೇಟು ತುಂಡು ಬಿಟ್ಟು ಇನ್ನೇನು ಸಿಕ್ಕೀತು?

Recommended Video

      ನನ್ನ ತಂದೆ ನಿರಪರಾಧಿ ಎಂದ ರವಿ ಬೆಳಗೆರೆ ಮಗಳು ಭಾವನಾ ಬೆಳಗೆರೆ | Oneindia Kannada

      ಅಷ್ಟರಲ್ಲಿ ಸುನೀಲ್ ನ chapter ಬಂತು. ಅವನು ಹದಿನೈದು ವರ್ಷದ ನಂತರ ಕೆಲಸ ಬಿಟ್ಟು ಅಲ್ಲಲ್ಲಿ ಪರದಾಡಿ ಮೊನ್ನೆಯಷ್ಟೇ ಕೆಲಸಕ್ಕೆ ಬಂದಿದ್ದ. Cool. He was working. ಹದಿನೈದು ವರ್ಷದ ಜೊತೆಗಾರ.

      ಎಲ್ಲಿಂದ ನಗಬೇಕು?

      ಎಲ್ಲಿಂದ ನಗಬೇಕು?

      But Shashi ಹೇಳಿದ್ದು? ಸುನೀಲ್ ನ ಹತ್ಯೆಗೆ ನಾನು 30 ಲಕ್ಷ ಸುಪಾರಿ ಕೊಟ್ಟೆನಂತೆ. ಹದಿನೈದು ಸಾವಿರ advance ಕೊಟ್ಟೆನಂತೆ! What a stupid talk. "ರವಿ ಬೆಳಗೆರೆ ನನ್ನ ಕೊಲ್ಲಿಸ್ತಾರೆ. ಜೀವಭಯ ಇದೆ" ಅಂದನಂತೆ. ಇದಕ್ಕೆ ಎಲ್ಲಿಂದ ನಗಬೇಕು? ಹದಿನೈದು ವರ್ಷ ಜೊತೆಗೆ ದುಡಿದೋನ್ನ ಸುಪಾರಿ ಕೊಟ್ಟು ಕೊಲ್ಲಿಸಲಾ? ಆಯ್ತು, ಕಟಕಟೆ, ಆಸ್ಪತ್ರೆ, ಜೈಲು- ಈಗ ಮೇಲು! I am safe and cheerful.

      ನಿಮ್ಮ ಆಶೀಸ್ಸುಗಳೇ ಧೈರ್ಯ. ಕೊಂಚ ತಡವಾಗಿದೆ ಪ್ರಿಂಟಿಗೆ. ವಿವರ ಬರೀತೇನೆ; ಬರೆಯಲೇ ಬೇಕು ಕೂಡ. ಉಸಿರುಗಟ್ಟಿಸುವಷ್ಟು. I love you

      ಅವನ್ನೊಂದಿಗೆ ಕೆಲಸ ಮಾಡಿದ ಹುಡುಗನನ್ನು ಕೊಂದು ಹಾಕಲು ಸುಪಾರಿ ಕೊಡುತ್ತೇನಾ?

      ಅವನ್ನೊಂದಿಗೆ ಕೆಲಸ ಮಾಡಿದ ಹುಡುಗನನ್ನು ಕೊಂದು ಹಾಕಲು ಸುಪಾರಿ ಕೊಡುತ್ತೇನಾ?

      ಹಾಂ ನಾನು ಕ್ರೈಮ್ ಬಗ್ಗೆ ಬರೆದಿದ್ದೇನೆ, ಟಿವಿಯಲ್ಲಿ ತೋರಿಸಿದ್ದೇನೆ. ವೈಯಕ್ತಿಕವಾಗಿ ಪಾತಕಿಗಳನ್ನು ನೋಡಿದ್ದೇನೆ. ಎಲ್ಲವೂ ತಿಳಿಸುವ ಕಾನೂನು ಅರಿತಿದ್ದೇನೆ. ಇಷ್ಟೆಲ್ಲ ಇರುವವನು ಹದಿನಾಲ್ಕು-ಹದಿನೈದು ವರ್ಷಗಳಿಂದ ನನ್ನೊಂದಿಗೆ ಕೆಲಸ ಮಾಡಿದ ಹುಡುಗನನ್ನು ಕೊಂದು ಹಾಕಲು ಸುಪಾರಿ ಕೊಡುತ್ತೇನಾ? Am I killer?

      ತಿರುಪತಿ ತಿಮ್ಮಪ್ಪನಿಗೆ ಸಮರ್ಪಿಸಿ ಕೈ ತೊಳೆದುಕೊಂಡು ಬಿಡುತ್ತೇನೆ

      ತಿರುಪತಿ ತಿಮ್ಮಪ್ಪನಿಗೆ ಸಮರ್ಪಿಸಿ ಕೈ ತೊಳೆದುಕೊಂಡು ಬಿಡುತ್ತೇನೆ

      ಸಿಟ್ಟು ಬಂದರೆ ಈ ಹುಡುಗರ ಮೇಲೆ ರೇಗುತ್ತೇನೆ. ತೀರ ನಿರುಪಯೋಗಿಗಳು, ಕೆಲಸಗಳ್ಳರು ಅಥವಾ ವಸೂಲಿ ವೀರರು ಅಂತ ಗೊತ್ತಾದರೆ ತಕ್ಷಣ ತಿರುಪತಿ ತಿಮ್ಮಪ್ಪನಿಗೆ ಸಮರ್ಪಿಸಿ ಕೈ ತೊಳೆದುಕೊಂಡು ಬಿಡುತ್ತೇನೆ. ಇದು my type of functioning. ಇರಲಿ, ನಾನು ಹೇಗೆ ಅಂತ ಎಲ್ಲರೂ ತಿಳಿದುಕೊಂಡಿರಬೇಕು ಎಂಬ ಭ್ರಾಂತು ನನಗಿಲ್ಲ.

      ಅನಾರೋಗ್ಯಗೊಂಡಿದ್ದ ನನ್ನನ್ನು ಅದು ಹೇಗೆ handle ಮಾಡಿದರೋ?

      ಅನಾರೋಗ್ಯಗೊಂಡಿದ್ದ ನನ್ನನ್ನು ಅದು ಹೇಗೆ handle ಮಾಡಿದರೋ?

      ಅರೆಸ್ಟ್ ಮಾಡಿದ ಸಿಸಿಬಿಯ ಅಧಿಕಾರಿ ಎಸಿಪಿ ಸುಬ್ರಹ್ಮಣ್ಯರವರು ಅನೇಕ ವರ್ಷಗಳ ಹಿಂದೆ ತುಂಬಾ ನಟೋರಿಯಸ್ ಆದ ನಂದಗುಡಿ stationನಲ್ಲಿದ್ದರು. Very honest and bold. 'ನಂದಗುಡಿ' ಅಂದ್ರೇನೆ ಅಪಾಯಕಾರಿ. ಅಲ್ಲಿ ಪಾತಕಿಗಳ ಸದ್ದಡಗಿಸಿದವರು. ಇಂತಹ ಅಧಿಕಾರಿ ಅನಾರೋಗ್ಯಗೊಂಡಿದ್ದ ನನ್ನನ್ನು ಅದು ಹೇಗೆ handle ಮಾಡಿದರೋ?

      ಊಟವಾದರೂ ಬಿಟ್ಟೇನು ಸಿಗರೇಟು ಬಿಡಲಾರೆ

      ಊಟವಾದರೂ ಬಿಟ್ಟೇನು ಸಿಗರೇಟು ಬಿಡಲಾರೆ

      ಯಾಕೆಂದರೆ ನಾನು ವಿಪರೀತ ಸಿಗರೇಟಿನ ದಾಸ. ಬೇಕಾದರೆ ಒಂದು ಹೊತ್ತು ಊಟವನ್ನಾದರೂ ಬಿಟ್ಟೇನು; ಸಿಗರೇಟು ಬಿಡಲಾರೆ. ನನಗೆ ಸಿಗರೇಟು ಕೊಟ್ಟು ಪಾಪ ಯಾರ್ಯಾರು ಬೈಸಿಕೊಂಡರೋ? ನಿನ್ನೆ ಮೈ ಅಲುಗಿಸಿ ಎಬ್ಬಿಸಿದಾಗ ಇದೆಲ್ಲ ನೆನಪಾದವು. ನಿಮ್ಮೊಂದಿಗೆ ಹಂಚಿಕೊಂಡೆ. I am bold, honest and upright.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+