• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸುದ್ದಿಮನೆ ಸದ್ದು: ಪಬ್ಲಿಕ್ ಟಿವಿ, ಸುವರ್ಣ ಹಿಂದಿಕ್ಕಿದ ನ್ಯೂಸ್ 18 ಕನ್ನಡ

By ಜೇಮ್ಸ್ ಮಾರ್ಟಿನ್
|

ಕನ್ನಡ ಮಾಧ್ಯಮ ಜಗತ್ತಿನ ಇತ್ತೀಚಿನ ಆಗು ಹೋಗುಗಳತ್ತ ಈ ವಾರದ ವಾರೆ ನೋಟ ಇಲ್ಲಿದೆ. BARC ರಿಪೋರ್ಟ್ ನಲ್ಲಿ ಯಾವ ಸುದ್ದಿ ವಾಹಿನಿ ಮುಂದಿದೆ. ಯಾವ ಹೊಸ ಚಾನೆಲ್ ಬರುತ್ತಿದೆ, ಯಾವ ರಿಯಾಲಿಟಿ ಶೋ ಮತ್ತೆ ಆರಂಭ ಎಲ್ಲದರ ಸಂಕ್ಷಿಪ್ತ ಸುದ್ದಿ ನಿಮಗಿಲ್ಲಿ ಸಿಗಲಿದೆ.

ಸುದ್ದಿ ವಾಹಿನಿಗಳಿಂದ ವಲಸೆ ಸದ್ಯಕ್ಕೆ ಕಡಿಮೆಯಾಗಿದೆ. ಒಂದಿಬ್ಬರು ಅಂಕರ್ ಗಳು ಮದುವೆಯಾಗಿ ಟಿವಿಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ, ಕೆಲವರು ಚಾನೆಲ್ ನಿಂದ ಚಾನೆಲ್ ಗೆ ಜಂಪ್ ಮಾಡಿದ್ದಾರೆ.

ಡಿಸ್ಕವರಿ ಕನ್ನಡ ವಾಹಿನಿ ನೋಡಲು ಡಿಟಿಎಚ್ ಸೆಟಪ್ ಹೇಗೆ?

ಆದರೆ, ಧಾರಾವಾಹಿಗಳ ಭರಾಟೆಯ ನಡುವೆ ರಿಯಾಲಿಟಿ ಶೋ, ಟಾಕ್ ಶೋ, ಗೇಮ್ ಶೋಗಳು ಹೆಚ್ಚಾಗುವ ಮುನ್ಸೂಚನೆ ಸಿಕ್ಕಿದೆ. ಸುವರ್ಣ ಪ್ಲಸ್ , ಜೀ ಕನ್ನಡ, ಕಲರ್ಸ್ ಕನ್ನಡ, ಕಲರ್ಸ್ ಸೂಪರ್ ಗಳ ಉದಯ ಟಿವಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಯತ್ನಿಸುತ್ತಿದೆ. ಆದರೆ, ಬೇರೇನೂ ಹೊಸತನವಿಲ್ಲ. ಚಂದನ ವಾಹಿನಿಗೆ ಪ್ರಸಾರ ಭಾರತಿ ಕಡೆಯಿಂದ ಹೊಸ ಸಲಹೆಗಳೇನು ಬಂದಿಲ್ಲ,

ಸುದ್ದಿ ವಾಹಿನಿ ಮುಚ್ಚಿದ ಬಳಿಕ ಶಶಿಧರ ಭಟ್ ಅವರು ಹೊಸ ವಾಹಿನಿ ಮಾಡುತ್ತಾರಂತೆ ಎಂಬ ಸುದ್ದಿಯಿತ್ತು. ಆದರೆ, ಕನ್ನಡ ಸುದ್ದಿ ವಾಹಿನಿ ಮೇಲೆ ಹೂಡಿಕೆ ಮಾಡುವವರು ಸಿಗುತ್ತಿಲ್ಲ. ಟಿವಿ9ನಲ್ಲಿದ್ದ ಶಿವಪ್ರಸಾದ್ ಅವರು ಎಸ್ ಟಿವಿ ಎಂಬ ಹೊಸ ಚಾನೆಲ್ ಆರಂಭಿಸುತ್ತಿದ್ದಾರೆ. ಸದ್ಯಕ್ಕೆ ಇಪೇಪರ್ ಕೆಲಸ ಜೋರಾಗಿ ಸಾಗಿದೆ.

ಬಿಗ್ ಬಾಸ್ ಕನ್ನಡ ಯಾವಾಗ ಬರಲಿದೆ?

ಬಿಗ್ ಬಾಸ್ ಕನ್ನಡ ಯಾವಾಗ ಬರಲಿದೆ?

* ಜೀ ಟಿವಿ ಕನ್ನಡದಲ್ಲಿ ಸರಿಗಮಪ ಮುಗಿದಿದೆ. ಕಾಮಿಡಿ ಕಿಲಾಡಿ 3ರಲ್ಲಿ ರಕ್ಷಿತಾ, ಯೋಗರಾಜ್ ಭಟ್, ಜಗ್ಗೇಶ್ ಪ್ಲಸ್ ಆನಂದ್ ಮತ್ತೊಮ್ಮೆ ಕಂಡು ಬರಲಿದ್ದಾರೆ.

* ಹೊಸ ಆಂಕರ್ ಗಳ ಪೈಕಿ ರೇಡಿಯೋ ಜಾಕಿಯಾಗಿರುವ ಆರ್ ಜೆ ಸಿರಿ ಅವರು ಕಲರ್ಸ್ ಸೂಪರ್ ನಲ್ಲಿ ಬಂದ ಕನ್ನಡದ ಕೋಗಿಲೆಯಲ್ಲಿ ನಿರೂಪಕಿಯಾಗಿ ಜನಮೆಚ್ಚುಗೆ ಗಳಿಸಿದ್ದಾರೆ. ಮಿಕ್ಕಂತೆ, ಅನುಶ್ರೀ, ಅನುಪಮಾ ಗೌಡ, ಸುಷ್ಮಾ ಮುಂದುವರೆದಿದ್ದಾರೆ.

* ಕನ್ನಡದ ಕೋಟ್ಯಧಿಪತಿ, ಸೂಪರ್ ಮಿನಿಟ್, ಮಜಾ ಟಾಕೀಸ್, ಸವಾಲಿಗೆ ಸೈ ಏನೇ ರಿಯಾಲಿಟಿ, ಟಾಕ್, ಗೇಮ್ ಶೋ ಬಂದರೂ ಪ್ರೇಕ್ಷಕರು ನಿರೀಕ್ಷೆಯಿಂದ ಕಾದಿರುವುದು ಬಿಗ್ ಬಾಸ್ ಗಾಗಿ, ಬಿಗ್ ಬಾಸ್ ಮುಂದಿನ ಆವೃತ್ತಿ ಸೆಪ್ಟೆಂಬರ್ ತಿಂಗಳ ಕೊನೆಯಲ್ಲಿ ಮತ್ತೆ ಪ್ರತ್ಯಕ್ಷವಾಗುವ ಸೂಚನೆ ಸದ್ಯಕ್ಕೆ ಸಿಕ್ಕಿದೆ.

ಟಾಪ್ 05 ಸುದ್ದಿ ವಾಹಿನಿಗಳು

ಟಾಪ್ 05 ಸುದ್ದಿ ವಾಹಿನಿಗಳು

2019ರ 33ನೇ ವಾರದ ಅಂಕಿ ಅಂಶಗಳಂತೆ ಹೆಚ್ಚು ಪ್ರಭಾವ ಬೀರಿ ಪ್ರೇಕ್ಷಕರನ್ನು ಗೆದ್ದಿರುವ ಟಾಪ್ ಕನ್ನಡ ಸುದ್ದಿ ವಾಹಿನಿಗಳು, ಕರ್ನಾಟಕ(KTK), ಬೆಂಗಳೂರು(BLR), ನಗರ(Urban) ಹಾಗೂ ಗ್ರಾಮೀಣ(Rural) ವಿಭಾಗದ ವರದಿ ಆಧಾರಿತ Channel-KTK-BLR-Urban-Rural (ratings)

1. ಟಿವಿ ಕನ್ನಡ: 120128 Impressions

2. ನ್ಯೂಸ್18 ಕನ್ನಡ: 62943

3. ಪಬ್ಲಿಕ್ ಟಿವಿ: 62264

4. ಸುವರ್ಣ ನ್ಯೂಸ್ 24‍X7: 48929

5. ದಿಗ್ವಿಜಯ 24‍X7 ನ್ಯೂಸ್: 24229

ಲೋಕ ಚುನಾವಣೆ ಸಂದರ್ಭದಲ್ಲಿ ಹರಿದಾಡಿದ್ದು, 1.30 ಲಕ್ಷ ಫೇಕ್ ಸುದ್ದಿಗಳು!

ಟಿವಿ9 ಅತ್ಯಂತ ವಿಶ್ವಾಸಾರ್ಹ ಸುದ್ದಿವಾಹಿನಿ

ಟಿವಿ9 ಅತ್ಯಂತ ವಿಶ್ವಾಸಾರ್ಹ ಸುದ್ದಿವಾಹಿನಿ

ಕನ್ನಡ ನ್ಯೂಸ್ ಚಾನಲ್ ಗಳಲ್ಲಿ ಟಿವಿ9 ಎಂದಿನಂತೆ ಅತ್ಯಂತ ವಿಶ್ವಾಸರ್ಹ ಸುದ್ದಿವಾಹಿನಿ ಎನಿಸಿಕೊಂಡಿದೆ. 200 ಪಾಯಿಂಟ್ ಗಳೊಂದಿಗೆ ಮೊದಲ ಸ್ಥಾನ ಉಳಿಸಿಕೊಂಡಿದೆ.

ಗಮನಿಸಬಹುದಾದ ಬೆಳವಣಿಗೆಯೆಂದರೆ ಕರ್ನಾಟಕ(KTK) ವಿಭಾಗದಲ್ಲಿ ಪಬ್ಲಿಕ್ ಟಿವಿ, ಸುವರ್ಣ 24/7 ವಾಹಿನಿಯನ್ನು ಹಿಂದಿಕ್ಕಿ ನ್ಯೂಸ್ 18 ಕನ್ನಡ ಮುಂದಕ್ಕೆ ಬಂದಿದೆ.

1. ಟಿವಿ9 ಕನ್ನಡ: 200-190-207-119.

2. ನ್ಯೂಸ್18 ಕನ್ನಡ : 107-65-103-121

2. ಪಬ್ಲಿಕ್ ಟಿವಿ : 105-102-118-101

3. ಸುವರ್ಣ ನ್ಯೂಸ್ 24/7 : 84-69-93-84

4. ದಿಗ್ವಿಜಯ : 41-35-51-38

5. ಬಿಟಿವಿ : 19-22-17-19

6. ಟಿವಿ 5 ಕನ್ನಡ : 17-7-27-16

7. ಪ್ರಜಾ ಟಿವಿ : 13-14-14-12

8. ರಾಜ್ ನ್ಯೂಸ್ ಕನ್ನಡ : 9-9-11-9

9. ಪವರ್ ಟಿವಿ: 9-9-11-8

10. ಕಸ್ತೂರಿ : 8-78-8

11. ಟಿವಿ1 ನ್ಯೂಸ್ 24 ‍X 7 : 5-7-6-4

12. ನ್ಯೂಸ್ ಎಕ್ಸ್ ಕನ್ನಡ : 1-0-0-1

ಟಾಪ್ ಕನ್ನಡ ಮನರಂಜನೆ ವಾಹಿನಿಗಳು

ಟಾಪ್ ಕನ್ನಡ ಮನರಂಜನೆ ವಾಹಿನಿಗಳು

2019ರ 33ನೇ ವಾರದ ಅಂಕಿ ಅಂಶಗಳಂತೆ ಹೆಚ್ಚು ಪ್ರಭಾವ ಬೀರಿ ಪ್ರೇಕ್ಷಕರನ್ನು ಗೆದ್ದಿರುವ ಟಾಪ್ ಕನ್ನಡ ಮನರಂಜನೆ ವಾಹಿನಿಗಳು:

1. ಜೀ ಕನ್ನಡ: 450642 ಅಂಕಗಳು

2. ಕಲರ್ಸ್ ಕನ್ನಡ: 294524

3. ಸ್ಟಾರ್ ಸುವರ್ಣ: 213154

4. ಉದಯ ಟಿವಿ: 207310

5. ಉದಯ ಮೂವೀಸ್: 132019

ಜೀ ಕನ್ನಡದ ಬೆಳವಣಿಗೆಗೆ ಸೀರಿಯಲ್ ಗಳೇ ಕಾರಣ ಎನ್ನಬಹುದು.

ಟಾಪ್ 05 ಕಾರ್ಯಕ್ರಮಗಳು

ಟಾಪ್ 05 ಕಾರ್ಯಕ್ರಮಗಳು

2019ರ 33ನೇ ವಾರದ ಅಂಕಿ ಅಂಶಗಳಂತೆ ಟಾಪ್ 05 ಕಾರ್ಯಕ್ರಮಗಳು

1. ಸ್ಟಾರ್ ಸುವರ್ಣ: ಯಜಮಾನ (ಸಿನಿಮಾ) 7214 ಅಂಕ

2. ಜೀ ಕನ್ನಡ: ಪಾರು (ಸೀರಿಯಲ್) 5672

3. ಜೀ ಕನ್ನಡ: ಗಟ್ಟಿಮೇಳ(ಸೀರಿಯಲ್) 5248

4. ಕಲರ್ಸ್ ಕನ್ನಡ: ಮಂಗಳ ಗೌರಿ ಮದುವೆ:4717

5. ಜೀ ಕನ್ನಡ: ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಫ್ಯಾಮಿಲಿ ವಾರ್ 2: 4604

English summary
Kannada electronic media developments : BARC and TRP report of 33rd week of 2019 includes News and other Kannada channels. News18Kannada gained to second position, TV9 Kannada channel gained the top position.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X