ಜಿಯೋದಿಂದ ಕಡಿಮೆ ಬೆಲೆಗೆ ಹೈ ಸ್ಪೀಡ್ ಇಂಟರ್ನೆಟ್: ಹಲವು ಒಟಿಟಿಗಳು ಉಚಿತ
ರಿಲಯನ್ಸ್ ಜಿಯೋ ದೇಶದ ಅತಿ ದೊಡ್ಡ ಟೆಲಿಕಾಂ ಕಂಪನಿ. ಈ ಸಂಸ್ಥೆಗೆ ಗ್ರಾಹಕರ ಬೇಡಿಕೆಗಳು ಏನು ಎಂಬುದು ಅರ್ಥವಾಗುತ್ತದೆ. ಹೀಗಾಗಿಯೆ ಕಾಲ ಕಾಲಕ್ಕೆ ತಕ್ಕಂತೆ ಜಿಯೋ, ಅಗ್ಗದ ಹಾಗೂ ಭಾರೀ ಲಾಭದಾಯಕ ಸೇವೆಗಳನ್ನು ತನ್ನ ಬಳಕೆದಾರರಿಗೆ ನೀಡುತ್ತಾ ಬರುತ್ತಿದೆ. ಈಗ ಮತ್ತೊಮ್ಮೆ ತನ್ನ ಗ್ರಾಹಕರಿಗೆ ಖುಷಿ ಪಡಿಸುವ ಕೆಲಸಕ್ಕೆ ಜಿಯೋ ಮುಂದಾಗಿದೆ.
ಭಾರತದಲ್ಲಿ ಜಿಯೋ 46 ಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿದೆ. ಜಿಯೋ ಟೆಲಿಕಾಂ ಕ್ಷೇತ್ರವನ್ನು ಪ್ರವೇಶಿಸಿದಾಗಿನಿಂದ, ಕಂಪನಿಯು ಬಳಕೆದಾರರ ಅಗತ್ಯಗಳನ್ನು ಪೂರೈಸುತ್ತಾ ಬಂದಿದೆ. ಇದಕ್ಕಾಗಿಯೇ ಜಿಯೋ ತನ್ನ ಗ್ರಾಹಕರಿಗೆ ಪ್ರಿಪೇಯ್ಡ್, ಪೋಸ್ಟ್‌ಪೇಯ್ಡ್ ಮತ್ತು ಬ್ರಾಡ್‌ಬ್ಯಾಂಡ್‌ನಂತಹ ಎಲ್ಲಾ ಸೇವೆಗಳನ್ನು ಒದಗಿಸುತ್ತದೆ. ಈ ಎಲ್ಲಾ ಮೂರು ವಿಭಾಗಗಳಲ್ಲಿ, ಕಂಪನಿಯು ತನ್ನ ಬಳಕೆದಾರರಿಗೆ ಉತ್ತಮ ಪ್ರಯೋಜನಗಳೊಂದಿಗೆ ಯೋಜನೆಗಳನ್ನು ನೀಡುತ್ತದೆ. ಜಿಯೋ ಕಡಿಮೆ ಬೆಲೆಯಲ್ಲಿ 800 ಟಿವಿ ಚಾನೆಲ್‌ಗಳನ್ನು ಉಚಿತವಾಗಿ ವೀಕ್ಷಿಸುವ ಅವಕಾಶವನ್ನು ಬಳಕೆದಾರರಿಗೆ ನೀಡಲು ಮುಂದಾಗಿದೆ.

ಜಿಯೋ ರಿಚಾರ್ಜ್ ಪ್ಲ್ಯಾನ್‌ನಲ್ಲಿ ಅಗ್ಗದ ಹಾಗೂ ದುಬಾರಿ ರಿಚಾರ್ಜ್ ಪ್ಲ್ಯಾನ್ ಸೇರಿಸಿದೆ. ಈ ಎರಡೂ ಕೊಡುಗೆಗಳಲ್ಲಿ ಹಲವು ಕೊಡುಗೆಗಳನ್ನು ಕಂಪನಿ ನೀಡಲು ಮುಂದಾಗಿದೆ. Jio ಇತ್ತೀಚೆಗೆ ತನ್ನ ಇತ್ತೀಚಿನ ಬ್ರಾಡ್‌ಬ್ಯಾಂಡ್ Jio AirFiberನಲ್ಲಿ ಹಲವು ಜನ ಹಿತ ಯೋಜನೆಯನ್ನು ಸೇರಿಸಿದೆ. ಇದು ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಸಿಗಲಿದೆ. ಅಲ್ಲದೆ ಇದನ್ನು ರಿಚಾರ್ಜ್ ಮಾಡಿಸಿಕೊಂಡು ಗ್ರಾಹಕ ಹಲವು ಟಿವಿ ಚಾನೆಲ್‌ಗಳನ್ನು ಉಚಿತವಾಗಿ ನೋಡಬಹುದು.
ಜಿಯೋ ಬೆಸ್ಟ್ ಪ್ಲ್ಯಾನ್ಸ್
ಗ್ರಾಹಕರಿಗೆ ವೇಗದ ಇಂಟರ್ನೆಟ್ ಅವಶ್ಯಕತೆ ಇದ್ದಲ್ಲಿ ಅವರು ಜಿಯೋ ಏರ್ ಫೈಬರ್ ಖರೀದಿಸಬಹುದು. ಈ ವ್ಯವಸ್ಥೆಯನ್ನು ಪಡೆದುಕೊಂಡ ಬಳಿಕ ಗ್ರಾಹಕ ಕಂಪನಿಯ 599 ರೂ ಯೋಜನೆಯನ್ನು ಸಹ ಖರೀದಿಸಬಹುದು. ಇದು ಜಿಎಸ್‌ಟಿ ರಹಿತವಾಗಿದ್ದು, ಜಿಎಸ್‌ಟಿ ಸೇರಿದರೆ ಇದರ ಬೆಲೆ ಇನ್ನು ಹೆಚ್ಚಾಗುತ್ತದೆ.
ಈ ಯೋಜನೆಯಲ್ಲಿ ವೇಗದ ಡೇಟಾ ಸೌಲಭ್ಯ ಸಿಗಲಿದೆ. 599 ರೂ. ರಿಚಾರ್ಜ್ ಮಾಡಿಸಿಕೊಂಡಲ್ಲಿ ನೀವು 30 ದಿನಗಳ ಮಾನ್ಯತೆಯನ್ನು ಪಡೆಯುತ್ತೀರಿ. ಇದರಲ್ಲಿ ಕಂಪನಿಯು ತನ್ನ ಗ್ರಾಹಕರಿಗೆ 30Mbps ವೇಗದಲ್ಲಿ ಡೇಟಾವನ್ನು ನೀಡುತ್ತದೆ. ಜಿಯೋ ಈ ಯೋಜನೆಯಲ್ಲಿ 30 ದಿನಗಳವರೆಗೆ 1000GB ಡೇಟಾವನ್ನು ನೀಡುತ್ತದೆ. 30 ದಿನಗಳ ವ್ಯಾಲಿಡಿಟಿ ನೀಡುತ್ತಿದ್ದು, ನಿಮ್ಮ ಕಾರ್ಯವನ್ನು ಸಲೀಸಾಗಿ ಮಾಡಿಕೊಳ್ಳಬಹುದು.
ಜಿಯೋ ಒಟಿಟಿ ಆಫರ್
ಜಿಯೋ ಪ್ರಿಪೇಯ್ಡ್ ಯೋಜನೆಯಂತೆ, ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಜಿಯೋ ಏರ್ ಫೈಬರ್ ಪ್ಲಾನ್‌ನಲ್ಲಿಯೂ ಒಟಿಟಿ ವೀಕ್ಷಣೆಯ ಅವಕಾಶವನ್ನು ನೀಡುತ್ತದೆ. ರೂ 599 ರ ಯೋಜನೆಯೊಂದಿಗೆ ಬಳಕೆದಾರ SonyLiv, Jio ಸಿನಿಮಾ, Disney+Hotstar, Lionsgate Play, Zee5 ನಂತಹ ಅನೇಕ OTT ಪ್ಲಾಟ್‌ಫಾರ್ಮ್‌ಗಳ ಉಚಿತ ಚಂದಾದಾರರು ಆಗಬಹುದು. ಓಟಿಟಿಗಳ ಜೊತೆಗೆ ಕಂಪನಿ ಬಳಕೆದಾರನಿಗೆ 800 ಕ್ಕೂ ಹೆಚ್ಚು ಟಿವಿ ಚಾನೆಲ್‌ಗಳನ್ನು ಉಚಿತವಾಗಿ ವೀಕ್ಷಿಸುವ ಅವಕಾಶವನ್ನು ನೀಡುತ್ತಿದೆ.












Click it and Unblock the Notifications