ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೇಮಿಗಳ ದಿನದಂದು ಇಸ್ರೋದ 2022ರ ಮೊದಲ ಮಿಷನ್ PSLV-C52 ಉಡಾವಣೆ: ವೀಕ್ಷಣೆ ಹೇಗೆ?

|
Google Oneindia Kannada News

ಅಮರಾವತಿ, ಫೆಬ್ರವರಿ 13: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಫೆಬ್ರವರಿ 14ರ ಸೋಮವಾರದಂದು 2022 ರ ಮೊದಲ ಉಡಾವಣಾ ಕಾರ್ಯಾಚರಣೆಗೆ ಸಜ್ಜಾಗಿದೆ. ಇಸ್ರೋ ಪಿಎಸ್‌ಎಲ್‌ವಿ-ಸಿ52 ಮಿಷನ್ ಅನ್ನು ಪ್ರೇಮಿಗಳ ದಿನದಂದೇ ಉಡಾವಣೆ ಮಾಡಲಿದೆ.

ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV-C52) ಉಡಾವಣೆಯು ಸೋಮವಾರ (ಫೆ 14) ಬೆಳಗ್ಗೆ 05:59 ಗಂಟೆಗೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಮೊದಲ ಉಡಾವಣಾ ಪ್ಯಾಡ್‌ನಿಂದ ಉಡಾವಣೆ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಬೆಂಗಳೂರು ಕೇಂದ್ರ ಕಚೇರಿಯ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.

ಆಗಸ್ಟ್‌ನಲ್ಲಿ ಚಂದ್ರಯಾನ-3 ಉಡಾವಣೆಗೆ ಇಸ್ರೋ ಸಜ್ಜುಆಗಸ್ಟ್‌ನಲ್ಲಿ ಚಂದ್ರಯಾನ-3 ಉಡಾವಣೆಗೆ ಇಸ್ರೋ ಸಜ್ಜು

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ದ 2022 ರ ಮೊದಲ ಉಡಾವಣಾ ಕಾರ್ಯಾಚರಣೆ ಇದಾಗಿದ್ದು, ಯಶಸ್ವಿಯಾಗಿ ಉಡಾವಣೆ ಮಾಡಲು ಎಲ್ಲಾ ತಯಾರಿಯನ್ನು ಇಸ್ರೋ ಮಾಡಿಕೊಂಡಿದೆ. ಈ ನಡುವೆ ಆಗಸ್ಟ್‌ನಲ್ಲಿ ಚಂದ್ರಯಾನ-3 ಉಡಾವಣೆಗೆ ಇಸ್ರೋ ಸಜ್ಜಾಗುತ್ತಿದೆ ಎಂಬುವುದನ್ನು ನಾವು ಈ ಸಂದರ್ಭದಲ್ಲೇ ಸ್ಮರಿಸಬಹುದು. ಇನ್ನು ಪ್ರೇಮಿಗಳ ದಿನದಂದು ಇಸ್ರೋದ ಪಿಎಸ್‌ಎಲ್‌ವಿ-ಸಿ52 ಮಿಷನ್‌ ಉಡಾವಣೆಯನ್ನು ನಾವು ಹೇಗೆ ವೀಕ್ಷಣೆ ಮಾಡುವುದು, ಯಾವ ಸಮಯಕ್ಕೆ ಉಡಾವಣೆ ಮಾಡಲಾಗುತ್ತದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...

ಆಂತರಿಕ್ಷ್‌-ದೇವಾಸ್ ಡೀಲ್ ಪ್ರಕರಣದ Timelineಆಂತರಿಕ್ಷ್‌-ದೇವಾಸ್ ಡೀಲ್ ಪ್ರಕರಣದ Timeline

 PSLV-C52 ಮಿಷನ್ ಬಗ್ಗೆ ಮಾಹಿತಿ

PSLV-C52 ಮಿಷನ್ ಬಗ್ಗೆ ಮಾಹಿತಿ

ಈ ರಾಕೆಟ್​ ಮೂಲಕ ಎರಡು ದೇಶದ ರಾಡಾರ್ ಇಮೇಜಿಂಗ್ ಉಪಗ್ರಹವಾದ RISAT-1A ಅನ್ನು ಉಡಾವಣೆ ಮಾಡಲಾಗುತ್ತದೆ. ಈಗ RISAT-1A ಉಪಗ್ರಹವನ್ನು ಭೂ ವೀಕ್ಷಣಾ ಉಪಗ್ರಹ-04 (Earth Observation Satellite-04) ಎಂದು ನಾಮಕರಣ ಮಾಡಲಾಗಿದೆ. PSLV-C52 ಅನ್ನು 1710 ಕೆಜಿ ತೂಕದ ಮಿಷನ್‌ ಆಗಿದ್ದು, ಉಡಾವಣೆಯಾದ ಕೇವಲ 17 ನಿಮಿಷಗಳಲ್ಲಿ 1,710 ಕೆಜಿ ತೂಕದ ಭೂ ವೀಕ್ಷಣಾ ಉಪಗ್ರಹವನ್ನು 529 ಕಿಮೀ ದೂರದ ಕಕ್ಷೆಗೆ ತಲುಪಿಸಲಾಗುತ್ತದೆ. ಇದನ್ನು 529 ಕಿಮೀ ಸೂರ್ಯನ ಸಿಂಕ್ರೊನಸ್ ಧ್ರುವೀಯ ಕಕ್ಷೆಯಲ್ಲಿ ಸುತ್ತುವಂತೆ ವಿನ್ಯಾಸಗೊಳಿಸಲಾಗಿದೆ. ನಾಲ್ಕು ಹಂತಗಳು ಅಥವಾ ಇಂಜಿನ್​ಗಳನ್ನು ಹೊಂದಿರುವ ಪಿಎಸ್​ಎಲ್​ವಿ ರಾಕೆಟ್‌ನ ಒಂದೊಂದು ಹಂತದಲ್ಲಿ ಒಂದೊಂದು ರೀತಿಯ ಇಂಧನವನ್ನು ತುಂಬಲಾಗಿದೆ. ಮೊದಲ ಮತ್ತು ಮೂರನೇ ಹಂತದಲ್ಲಿ ಘನ ಇಂಧನ, ಎರಡನೇ ಮತ್ತು ನಾಲ್ಕನೇ ಹಂತದಲ್ಲಿ ದ್ರವ ಇಂಧನ ಇದೆ. 44.4 ಮೀಟರ್ ಎತ್ತರ ಮತ್ತು 321 ಟನ್ ತೂಕದ ಪಿಎಸ್‌ಎಲ್‌ವಿ ರಾಕೆಟ್​ನ ಒಟ್ಟು ಇಂಧನದ ತೂಕವೇ 9 ಟನ್ ಇರಲಿದೆ. ಹಾಗೆಯೇ ಆರು ಬೂಸ್ಟರ್ ಮೋಟಾರ್​ಗಳನ್ನು ಇದು ಹೊಂದಿದ್ದು, ಇಂಧನ ಸಾಮರ್ಥ್ಯ ಹೆಚ್ಚಿಸಲಾಗಿದೆ.

 ಸಣ್ಣ ಉಪಗ್ರಹಗಳನ್ನು ಒಯ್ಯುವ PSLV-C52

ಸಣ್ಣ ಉಪಗ್ರಹಗಳನ್ನು ಒಯ್ಯುವ PSLV-C52

PSLV-C52 ಮಿಷನ್ ಸಣ್ಣ ಉಪಗ್ರಹಗಳನ್ನು ಒಯ್ಯುತ್ತದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೇಸ್ ಸೈನ್ಸ್ & ಟೆಕ್ನಾಲಜಿ (IIST) ನಿಂದ ವಿದ್ಯಾರ್ಥಿಗಳು ಮಾಡಿದ ಉಪಗ್ರಹ INSPIREsat-1 ಹಾಗೂ ಇಸ್ರೋ ನಿರ್ಮಾಣ ಮಾಡಿದ INS-2TD ಉಪಗ್ರಹವನ್ನು PSLV-C52 ಮಿಷನ್ ಒಯ್ಯಲಿದೆ. NSPIREsat-1 ಅನ್ನು ಅಮೆರಿಕದ ಕೊಲೊರಾಡೋ ವಿಶ್ವವಿದ್ಯಾಲಯದ ವಾಯುಮಂಡಲ ಮತ್ತು ಬಾಹ್ಯಾಕಾಶ ಭೌತಶಾಸ್ತ್ರದ ಪ್ರಯೋಗಾಲಯದ ಸಹಯೋಗದೊಂದಿಗೆ ಈ ಉಪಗ್ರಹ ನಿರ್ಮಾಣ ಮಾಡಲಾಗಿದೆ.

 EOS-04 ಎಂದರೇನು?

EOS-04 ಎಂದರೇನು?

ಭೂ ವೀಕ್ಷಣಾ ಉಪಗ್ರಹ-04 (Earth Observation Satellite-04) ಎಂಬುದು ರಾಡಾರ್ ಇಮೇಜಿಂಗ್ ಉಪಗ್ರಹವಾಗಿದ್ದು, ಕೃಷಿ, ಅರಣ್ಯ ಮತ್ತು ತೋಟಗಳು, ಮಣ್ಣಿನ ತೇವಾಂಶ ಮತ್ತು ಜಲವಿಜ್ಞಾನ ಮತ್ತು ಪ್ರವಾಹ ಮ್ಯಾಪಿಂಗ್‌ನಂತಹ ಅಪ್ಲಿಕೇಶನ್‌ಗಳಿಗಾಗಿ ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲಿ ಉತ್ತಮ ಗುಣಮಟ್ಟದ ಚಿತ್ರಗಳನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ.

 ಉಡಾವಣೆಯನ್ನು ಎಲ್ಲಿ ವೀಕ್ಷಿಸಬೇಕು?

ಉಡಾವಣೆಯನ್ನು ಎಲ್ಲಿ ವೀಕ್ಷಿಸಬೇಕು?

ISRO ತನ್ನ ಟ್ವಿಟ್ಟರ್‌, ಯೂಟ್ಯೂಬ್‌ ಮತ್ತು ಇತರ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ PSLV-C52 ಉಡಾವಣೆಯನ್ನು ನೇರ ಪ್ರಸಾರ ಮಾಡುತ್ತದೆ. ಅನೇಕ ಸುದ್ದಿ ಚಾನೆಲ್‌ಗಳು ಈ ಉಡಾವಣೆಯನ್ನು ಲೈವ್ ಆಗಿ ಪ್ರಸಾರ ಮಾಡುತ್ತವೆ. ಸಾಮಾಜಿಕ ಮಾಧ್ಯಮಗಳಲ್ಲಿಯೂ ನೇರ ಪ್ರಸಾರ ಮಾಡಲಾಗುತ್ತದೆ. (ಒನ್‌ಇಂಡಿಯಾ ಸುದ್ದಿ)

English summary
ISRO To Launch PSLV-C52, its First Mission of 2022, on Valentines Day, Here's Time, Where to Watch. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X