• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾಗತಿಕ ತಾಪಮಾನ ವರದಿ: ವಿಜ್ಞಾನಿಗಳಿಂದ ರಿಯಾಲಿಟಿ ಚೆಕ್

|
Google Oneindia Kannada News

ಇಡೀ ವಿಶ್ವವನ್ನೇ ಕಾಡುತ್ತಿದೆ 'ಜಾಗತಿಕ ತಾಪಮಾನ ಹಾಗೂ ಹವಾಮಾನ ಬದಲಾವಣೆ

ಜಗತ್ತು ಎಷ್ಟು ಮಾಲಿನ್ಯಗೊಂಡಿದೆ, ಇಂಗಾಲದ ಡೈ ಆಕ್ಸೈಡ್ ಎಷ್ಟೊಂದು ಪ್ರಮಾಣದಲ್ಲಿ ವಾತಾವರಣ ಸೇರುತ್ತಿದೆ
ಎಂದರೆ ಈ ಶತಮಾನ ಕಳೆದರೆ ಭೂಮಿ ಎಷ್ಟು‌ ಮಲಿನಗೊಳ್ಳಬಹುದು ಎಂದು ಅಂದಾಜಿಸಲಾಗಿತ್ತೋ ಅದು ಇನ್ನು 15 ವರ್ಷದಲ್ಲೇ ಆಗುತ್ತದೆ ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಅಂದರೆ ಅಷ್ಟೊಂದು ವೇಗವಾಗಿ ಜಾಗತಿಕ ವಾತಾವರಣ ಕಲುಷಿತಗೊಳ್ಳುತ್ತಿದೆ. ಇದನ್ನು ಯಾರೋ ಸುಖಾಸುಮ್ಮನೆ ಹೇಳಿದ್ದಲ್ಲ. ವಿಶ್ವದ 195 ರಾಷ್ಟ್ರಗಳಲ್ಲಿ ವಿಜ್ಞಾನಿಗಳು ತಯಾರಿಸಿದ ವರದಿಯಿಂದ ಇದು ದೃಢಪಟ್ಟಿದೆ.

 ತಾಪಮಾನ ಏರಿಕೆಯ ಗಂಭೀರ ಸವಾಲುಗಳು: ಐಪಿಸಿಸಿ ವರದಿ ಏನು ಹೇಳುತ್ತೆ? ತಾಪಮಾನ ಏರಿಕೆಯ ಗಂಭೀರ ಸವಾಲುಗಳು: ಐಪಿಸಿಸಿ ವರದಿ ಏನು ಹೇಳುತ್ತೆ?

'ಇಂಟರ್ ಗವರ್ನಮೆಂಟಲ್ ಪ್ಯಾನಲ್ ಕ್ಲೈಮ್ಯಾಟ್ ಚೆಂಚ್' ಎಂಬ ವಿಭಾಗವು ಈ ಆತಂಕಕಾರಿ ಅಂಶವನ್ನು ಬಹಿರಂಗಗೊಳಿಸಿದೆ.

ಹೌದು! ಮಾಲಿನ್ಯತೆ ಹಾಗೂ ಹವಾಮಾನ ಬದಲಾವಣೆ ಸದ್ಯ ಜಗತ್ತನ್ನು ಕಾಡುತ್ತಿರುವ ಸಮಸ್ಯೆಗಳಲ್ಲಿ ಒಂದು. ಇದಕ್ಕೆ ಬಡವ, ಶ್ರೀಮಂತ ರಾಷ್ಟ್ರ ಎಂಬ ಗಡಿಗಳಿಲ್ಲ. ಎಲ್ಲಾ ರಾಷ್ಟ್ರಗಳಲ್ಲೂ ಹವಾಮಾನ ಬದಲಾವಣೆ ಉಂಟಾಗುತ್ತಿದೆ. ಮಳೆಗಾಲ, ಬೇಸಿಗೆಗಾಲ, ಚಳಿಗಾಲದಲ್ಲೂ ವ್ಯತ್ಯಾಸ ಕಂಡುಬರುತ್ತಿದೆ. ಮಳೆಗಾಲದಲ್ಲಿ ಬಿಸಿಲು ಬರುತ್ತಿದೆ. ಚಳಿಗಾಲದಲ್ಲಿ ಮಳೆ ಆಗುತ್ತಿದೆ. ಈ ಬದಲಾವಣೆಗೆ ಇಂಗಾಲದ ಡೈ ಆಕ್ಸೈಡ್ ಹೆಚ್ಚಳವೇ ಕಾರಣವಾಗಿದೆ. ಈ ಮಾಲಿನ್ಯವನ್ನು ನಿಯಂತ್ರಣ ಮಾಡುವ ತಜ್ಞ ವಿಜ್ಞಾನಿಗಳು ಜಗತ್ತಿನಲ್ಲಿ ಇದ್ದಾರೆ. ಆದರೆ, ಅವರು ಕೂಡ ಏನು ಮಾಡಲಾಗದ ಪರಿಸ್ಥಿತಿಗೆ ಬಂದು ನಿಂತಿದ್ದಾರೆ.

ಹವಾಮಾನ ಬದಲಾವಣೆಯ ಕೆಟ್ಟ ಪರಿಣಾಮಗಳಿಗೆ ಸಾಕ್ಷಿಯಾಗಲಿದೆ ಭೂಮಿ; ಐಪಿಸಿಸಿ ಎಚ್ಚರಿಕೆಹವಾಮಾನ ಬದಲಾವಣೆಯ ಕೆಟ್ಟ ಪರಿಣಾಮಗಳಿಗೆ ಸಾಕ್ಷಿಯಾಗಲಿದೆ ಭೂಮಿ; ಐಪಿಸಿಸಿ ಎಚ್ಚರಿಕೆ

ಐಪಿಸಿಸಿ ಸಮಿತಿಯ ಸಹ ಮುಖ್ಯಸ್ಥರಾದ ವೆಲೇರಿಯೆ ಮಾಕ್ಸನ್ ಡೆಲ್ಮಾರ್ಟ್ ಪ್ರಕಾರ, ಈ ಶತಮಾನದಲ್ಲಿ ಆಗುವ ಮಾಲಿನ್ಯತೆ ಇನ್ನು 15 ವರ್ಷದೊಳಗೆ ಆಗುತ್ತದೆ ಎಂಬ ವಾದದಲ್ಲಿ ಸತ್ಯಾಸತ್ಯತೆ ಎಷ್ಟಿದೆ ಎಂದು ತಿಳಿಯುವ ಸಲುವಾಗಿ ಈ ವರದಿಯನ್ನು ತಯಾರು ಮಾಡಲಾಗಿದೆ ಎಂದಿದ್ದಾರೆ.

 ಹಸಿರು ಮನೆ ಪರಿಣಾಮದಿಂದ ತೀಕ್ಷ್ಣ ಬಿಸಿಲು

ಹಸಿರು ಮನೆ ಪರಿಣಾಮದಿಂದ ತೀಕ್ಷ್ಣ ಬಿಸಿಲು

ಬೇಡದ ಇಂಧನವನ್ನು (ಪಳೆಯುಳಿಕೆ ಇಂಧನ) ಸುಡುವುದರಿಂದ ಉತ್ಪತಿಯಾಗುವ ಗ್ಯಾಸ್ ಭೂಮಿಯನ್ನು ಭೀಕರವಾಗಿ ಕಲುಷಿತಗೊಳಿಸುತ್ತಿದೆ. ಎಷ್ಟರಮಟ್ಟಿಗೆ ನಮ್ಮ ಭೂಮಿ ಹಾಳಾಗಿದೆ ಎಂದರೆ ಯಾವಾಗ ಎಲ್ಲಿ ಮಳೆ ಬರುತ್ತದೆ. ಯಾವಾಗ ಎಲ್ಲಿ ಬಿಸಿಲಿರುತ್ತದೆ ಎಂಬುದೇ ಗೊತ್ತಾಗುತ್ತಿಲ್ಲ. ಹಸಿರು ಮನೆ ಪರಿಣಾಮದಿಂದ ತೀಕ್ಷ್ಣ ಬಿಸಿಲು, ಭಾರಿ ಮಳೆಗೆ ಜಗತ್ತು ತತ್ತರಿಸಿ ಹೋಗುತ್ತಿದೆ. ಹಲವೆಡೆ ಸೈಕ್ಲೋನ್, ಬರ, ಪ್ರವಾಹ ತೀವ್ರವಾಗಿ ಬಹುಕಾಲದವರೆಗೂ ಕಾಡುತ್ತಿದೆ.

ಹಾಗೇ ನೋಡಿದರೆ 2014ರಲ್ಲೇ ಐಪಿಸಿಸಿ ಸಮಿತಿಯ ವಿಜ್ಞಾನಿಗಳೆಲ್ಲಾ ಸೇರಿ ವರದಿಯೊಂದನ್ನು ತಯಾರಿಸಿದ್ದರು. ಹವಾಮಾನ ಬದಲಾವಣೆಗೆ ಏನು ಪರಿಹಾರ ಕಂಡುಕೊಳ್ಳಬಹುದು ಎಂಬುದರ ಬಗ್ಗೆ ಅಲ್ಲಿ ಚರ್ಚೆ ನಡೆಸಲಾಗಿತ್ತು. ಪರಿಸ್ಥಿತಿ ತೀವ್ರ ಸ್ವರೂಪಕ್ಕೆ ತಿರುಗುವ ಮೊದಲು ಪಳೆಯುಳಿಕೆ‌ ಇಂಧನ ಸುಡುವುದನ್ನು ನಿಲ್ಲಿಸಬೇಕಿದೆ ಎಂಬ ಅಂಶವನ್ನು ವಿಜ್ಞಾನಿಗಳು ಪ್ರಬಲವಾಗಿ‌ ಪ್ರತಿಪಾದಿಸಿದ್ದರು. ಆದರೆ, ಸರಕಾರ, ಉದ್ಯಮಿಗಳು ಪಳೆಯುಳಿಕೆ ಇಂಧನ ಸುಡುವುದನ್ನು ಜಾಸ್ತಿ ಮಾಡಿದರೆ ಹೊರತು ವಿನಃ ಕಡಿಮೆ‌ ಮಾಡಲಿಲ್ಲ.

ಸ್ವಿಜರ್ಲೆಂಡ್ ನ ವಿಜ್ಞಾನಿ ಸೋನಿಯಾ ಜೂರಿಕ್ ಅವರು ಹೇಳುವಂತೆ, ನಾವು ಈಗಾಗಲೇ ಅಪಾಯಕಾರಿ ಸ್ಥಿತಿಯಲ್ಲಿ ಇದ್ದೇವೆ. ಕೊನೆಯ ಹಂತ ದಿನಗಳನ್ನು ಎಣಿಸುತ್ತಿದ್ದೇವೆ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

 3 ಡಿಗ್ರಿ ಸೆಲ್ಸಿಯಸ್ ತಾಪಮಾನ ಏರಿಕೆ

3 ಡಿಗ್ರಿ ಸೆಲ್ಸಿಯಸ್ ತಾಪಮಾನ ಏರಿಕೆ

2015ರಲ್ಲಿ ವಿಶ್ವದ ನಾನಾ‌ ದೇಶದ ರಾಜಕೀಯ ನಾಯಕರು ಒಂದೆಡೆ ಸೇರಿ‌ ಜಾಗತಿಕ ತಾಪಮಾನವನ್ನು 1.5 ಡಿಗ್ರಿ ಸೆಲ್ಸಿಯಸ್‌ಗೆ ಇಳಿಸಬೇಕೆಂದು ಪಣ‌ತೊಟ್ಟಿದ್ದರು. ಹೀಗೆ ಮಾಡಿದರೆ ಮಾತ್ರ ಕಾಲಕಾಲಕ್ಕೆ ಎಷ್ಟು ‌ಮಳೆ, ಬಿಸಿಲು ಬರಬೇಕೋ ಅಷ್ಟು ಆಗುತ್ತದೆ ಎಂದು ತೀರ್ಮಾನಿಸಿದ್ದರು. ಆದರೆ, ಈಗ ಬಿಸಿಲಿನ‌ ಪ್ರಖರತೆ ಏರುತ್ತಿರುವುದನ್ನು‌ ನೋಡಿದರೆ ಇದು ಕಡಿಮೆ‌ ಆಗುವ ಲಕ್ಷಣವಂತೂ ಕಾಣುತ್ತಿಲ್ಲ. ಈ ಶತಮಾನ ಮುಗಿಯುವ ವೇಳೆಗೆ 3 ಡಿಗ್ರಿ ಸೆಲ್ಸಿಯಸ್ ತಾಪಮಾನ ಏರಿಕೆ ಆಗುತ್ತದೆ. ತಾಪಮಾನ ವನ್ನು 2 ಡಿಗ್ರಿ ಸೆಲ್ಸಿಯಸ್ ನಿಂದ 1.5 ಕ್ಕೆ ಇಳಿಸುವ ಪ್ರಕ್ರಿಯೆಗೆ ತಡೆ ಆಗಲಿದೆ ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ವಿಜ್ಞಾನಿ ಸ್ಟೀವ್ ಅವರ ಪ್ರಕಾರ, ವಾತಾವರಣದಲ್ಲಿ ಇರುವ ಇಂಗಾಲದ ಡೈಆಕ್ಸೈಡ್ ಅದನ್ನು ಹೀರಿಕೊಳ್ಳುವ ಯಂತ್ರದ ಮೂಲಕ ತಾಪಮಾನವನ್ನು ಸುಲಭವಾಗಿ 1.5 ಡಿಗ್ರಿ ಸೆಲ್ಸಿಯಸ್ ಗೆ ಇಳಿಸಬಹುದು. ಆದರೆ, ಇಡೀ ವಾತಾವರಣದಲ್ಲಿರುವ ಇಂಗಾಲದ ಡೈಆಕ್ಸೈಡ್ ಹೀರಿಕೊಳ್ಳುವ ಆ ಯಂತ್ರದ ವೆಚ್ಚ ಹಾಗೂ ತಂತ್ರಜ್ಞಾನ ದುಬಾರಿಯಾಗಿದ್ದು, ಅದನ್ನು ಖರೀದಿ ಮಾಡುವುದು ಕಷ್ಟಸಾಧ್ಯವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಭಾರತದಲ್ಲಿ ಇನ್ನಷ್ಟು ತೀವ್ರವಾಗಲಿದೆ ಮುಂಗಾರು; ಐಪಿಸಿಸಿಭಾರತದಲ್ಲಿ ಇನ್ನಷ್ಟು ತೀವ್ರವಾಗಲಿದೆ ಮುಂಗಾರು; ಐಪಿಸಿಸಿ

 ಪ್ರಕೃತಿಗೆ ಏನು ಮಾಡಬಹುದು?

ಪ್ರಕೃತಿಗೆ ಏನು ಮಾಡಬಹುದು?

ಆದರೆ ಈ ಅಭಿಪ್ರಾಯ ಒಪ್ಪದ ಮತ್ತೊಬ್ಬ ವಿಜ್ಞಾನಿ, ಸದ್ಯ ಇದು ದುಬಾರಿ ತಂತ್ರಜ್ಞಾನವೆಂದು ಅನ್ನಿಸಬಹುದು. ಆದರೆ, ಆ ಯಂತ್ರದ ಬಳಕೆಗೆ ಇದು ಸಕಾಲ. ಈಗ ನಾವದನ್ನು ಮಾಡಲಿಲ್ಲವೆಂದರೆ ಮುಂದೊಂದು ದಿನ ಎಷ್ಟೆಲ್ಲಾ ಖರ್ಚು ಮಾಡಲು ಸಿದ್ಧರಿದ್ದರೂ ಪರಿಸ್ಥಿತಿ ಕೈ ಮೀರಿ ಹೋಗಿರುತ್ತದೆ. ಆಗ ಏನನ್ನೂ ಮಾಡಲಾಗದೆ ಅಸಹಾಯಕರಾಗಬೇಕುತ್ತದೆ ಎಂದು ಎಚ್ಚರಿಸಿದ್ದಾರೆ. ಹಣ್ಣು ಕೈಗೆ ಎಟುಕುವಾಗ ಏನಾದರೂ ಮಾಡಬಹುದು. ಭವಿಷ್ಯದಲ್ಲಿ ಆ ಯಂತ್ರದ ವೆಚ್ಚ ಇನ್ನೂ ದುಬಾರಿಯಾದರೆ ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಹವಾಮಾನ ಬದಲಾವಣೆ ಪ್ರಕೃತಿಗೆ ಏನು ಮಾಡಬಹುದು?

ಹವಾಮಾನ ಬದಲಾವಣೆಯಿಂದ ಸಾಕಷ್ಟು ಹಾನಿ ಪ್ರಕೃತಿಗೆ ಉಂಟಾಗುತ್ತದೆ. ಇದರಿಂದ ಸೈಕ್ಲೋನ್, ಪ್ರವಾಹ ಭೀತಿ ಉಂಟಾಗುತ್ತದೆ. ಏಷ್ಯಾ ಖಂಡದಲ್ಲಿ ಮಳೆಗಾಲವಂತೂ ಯಾವ ಯಾವ ಕಾಲದಲ್ಲಾದರೂ ಬರಬಹುದು. ಮಳೆ, ಬಿಸಿಲು, ಬರ ಎಲ್ಲವೂ ತೀವ್ರ ಸ್ವರೂಪ ಪಡೆದುಕೊಳ್ಳುತ್ತದೆ. ದಶಕಕ್ಕೊಮ್ಮೆ ಬರುತ್ತಿದ್ದ ಭಾರೀ ಮಳೆ ಇದೀಗ ಪ್ರತಿ ವರ್ಷ ಸಾಮಾನ್ಯ ಎನ್ನುವಂತಾಗಿದೆ. ಶೇ.30ರಷ್ಟು ಮಳೆ ಪ್ರಮಾಣ ಹೆಚ್ಚಾಗಿದೆ. ಮಳೆ ಪ್ರವಾಹದಂತೆ ಜನರನ್ನು ಕಾಡುತ್ತಿದೆ. 10 ವರ್ಷಕ್ಕೊಮ್ಮೆ ಕಾಣಿಸಿಕೊಳ್ಳುತ್ತಿದ್ದ ಬರ ಇದೀಗ 3-4 ಬಾರಿ ಕಾಣಿಸಿಕೊಳ್ಳುತ್ತಿದೆ. ಬರದಿಂದ ನೆಲ ಮರುಭೂಮಿಯಂತೆ ಆಗುವ ಮೂಲಕ ಭೂಮಿ ಮಣ್ಣಿನ ಫಲವತ್ತತೆಯನ್ನು ಕಳೆದುಕೊಳ್ಳುತ್ತಿದೆ. ಇದರಿಂದ ತುಂಬಾ ವರ್ಷಗಳವರೆಗೂ ಅಲ್ಲಿ ಏನನ್ನೂ ಬೆಳೆಯಲು ಆಗುವುದಿಲ್ಲ ಎಂಬ ಪರಿಸ್ಥಿತಿಗೆ ನಾವೀಗ ತಲುಪಿದ್ದೇವೆ.

 50 ವರ್ಷದಲ್ಲಿ 39 ಬಾರಿ ಬಿಸಿಗಾಳಿ ಬರುವ ಸಾಧ್ಯತೆ

50 ವರ್ಷದಲ್ಲಿ 39 ಬಾರಿ ಬಿಸಿಗಾಳಿ ಬರುವ ಸಾಧ್ಯತೆ

ಬಿಸಿಗಾಳಿಯು ಸದ್ಯ ನಮ್ಮನ್ನು ಕಾಡುತ್ತಿರುವ ಸಮಸ್ಯೆಗಳಲ್ಲಿ ಒಂದು. ಜನಜಂಗುಳಿ ಪ್ರದೇಶದಲ್ಲಿ ಇದರ ತೀವ್ರತೆ ಅಷ್ಟಾಗಿ ಕಂಡು ಬರುತ್ತಿಲ್ಲ. ಆದರೆ, ಮರಳುಗಾಡಿನಲ್ಲಿ ಇದರ ಪರಿಣಾಮ ಹೆಚ್ಚಾಗಿದೆ. ಹಿಂದೆಲ್ಲಾ ಈ ಬಿಸಿಗಾಳಿ 50 ವರ್ಷಕ್ಕೊಮ್ಮೆ ಬರುತ್ತಿತ್ತು. ಆದರೆ ಜಾಗತಿಕ ತಾಪಮಾನ ಹೆಚ್ಚಳದಿಂದ 50 ವರ್ಷದಲ್ಲಿ 39 ಬಾರಿ ಬಿಸಿಗಾಳಿ ಬರುವ ಸಾಧ್ಯತೆ ಇದೆ.

ವೆರೋನಿಕ ಏರನ್ ಹೇಳುವ ಪ್ರಕಾರ, ಐಸಿಸಿಸಿ ವರದಿಯು ನಾವೀಗ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಇದ್ದೇವೆ ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿ ಆಗಿದೆ ಎಂದು ತಿಳಿಸಿದ್ದಾರೆ

ತಾಪಮಾನದ ಶಾಖ ಎಷ್ಟು ನಮ್ಮನ್ನು ತಾಕುತ್ತಿದೆ ಎಂದರೆ ಇಂಗಾಲದ ಡೈಆಕ್ಸೈಡ್ ಎಲ್ಲವನ್ನೂ ನಾಶ ಮಾಡುತ್ತಿದೆ. ಅರ್ಕಾಟಿಕ್ ಹಾಗೂ ಅಂಟಾಟಿಕ್ ಖಂಡವು ಹಿಮದಿಂದಲೇ ಕೂಡಿದೆ. ಅಲ್ಲಿ ಯಾರೂ ಹೋಗಲು ಆಗಲ್ಲ. ವಾಸ ಮಾಡಲು ಆಗುವುದಿಲ್ಲ. ಆದರೆ, ಜಾಗತಿಕ ತಾಪಮಾನದಿಂದ 2050ಕ್ಕೆ ಒಮ್ಮೆಯಾದರೂ ಅಂಟಾಟಿಕ್ ಭಾಗವು ಹಿಮದಿಂದ ಮುಕ್ತವಾಗುತ್ತದೆ ಎಂದೇ ಊಹಿಸಲಾಗಿದೆ. ಹೀಗೆ ಕರಗಿದ ಹಿಮ ನೀರಾಗಿ ಮತ್ತೆಲ್ಲೋ ಹರಿಯಬೇಕು. ಆಗ ಮತ್ತೆ ಬರ, ಪ್ರವಾಹ ಉಂಟಾಗುತ್ತದೆ.

ಕುದಿಯುತ್ತಿದೆ ಭೂಮಿ, 2020 ಅತಿಹೆಚ್ಚು ತಲೆ'ಬಿಸಿ'ಯ ವರ್ಷ..!ಕುದಿಯುತ್ತಿದೆ ಭೂಮಿ, 2020 ಅತಿಹೆಚ್ಚು ತಲೆ'ಬಿಸಿ'ಯ ವರ್ಷ..!

 ಐಪಿಸಿಸಿ ವರದಿ ಎಲ್ಲಾ ರಾಷ್ಟ್ರಗಳನ್ನು ತಲುಪಿದೆ.

ಐಪಿಸಿಸಿ ವರದಿ ಎಲ್ಲಾ ರಾಷ್ಟ್ರಗಳನ್ನು ತಲುಪಿದೆ.

ಸದ್ಯ ಐಪಿಸಿಸಿ ವರದಿ ಎಲ್ಲಾ ರಾಷ್ಟ್ರಗಳನ್ನು ತಲುಪಿದೆ. ಹಾಗಂತ ಎಲ್ಲರೂ ಆತಂಕಪಡಬೇಕಿಲ್ಲ. ಪ್ರತಿಯೊಂದು ದೇಶವು ತಮ್ಮ ಅಭಿಪ್ರಾಯವನ್ನು ದಾಖಲಿಸಬೇಕು. ಭವಿಷ್ಯದಲ್ಲಿ ಉಂಟಾಗುವ ಭೀಕರತೆಯನ್ನು ಎದುರಿಸಲು ಮಾನಸಿಕವಾಗಿ ಸಿದ್ಧರಾಗಬೇಕಿದೆ. ಆ ಮೂಲಕ ಎಲ್ಲರೂ ಒಂದಾಗಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ. ಸದ್ಯ ಈ ಶತಮಾನದಲ್ಲಿ ಸಮುದ್ರದ ಮಟ್ಟ ಅರ್ಧ ಮೀಟರ್ ಈಗಾಗಲೇ ಹೆಚ್ಚಾಗಿದೆ. ಇದರಿಂದ ಕರಾವಳಿ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಬಂದರೆ ಊರಿಗೆ ಊರೇ ಕೊಚ್ಚಿಕೊಂಡು ಹೋಗುವ ಸಾಧ್ಯತೆ ಹೆಚ್ಚು. 2100 ನೇ ಇಸವಿಗೆ ಐಸ್ ಶೀಟ್ ಎರಡು ಮೀಟರ್‌ ಕರಗಿ ಹೋಗಲಿದೆ. 2150 ನೇ ವರ್ಷಕ್ಕೆ 15 ಮೀಟರ್ ಕರಗಿ ಹೋಗುತ್ತದೆ. ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲವೆಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಆಸ್ಟ್ರೀಯಾದ ವಿಜ್ಞಾನಿಯೊಬ್ಬರು ಹೇಳುವಂತೆ, ಜಾಗತಿಕ‌ ತಾಪಮಾನ ಕಡಿಮೆ‌ ಮಾಡಲು ನಾವು ಮಾಡುವ ಪ್ರತಿಯೊಂದು ಸಣ್ಣ ಕೆಲಸವೂ ಉಪಯೋಗವಾಗುತ್ತದೆ. ಇಂಗಾಲ ಡೈಆಕ್ಸೈಡ್ ಅನ್ನು ಈ ದಿನ ಬಳಸುವುದಿಲ್ಲ. ಪಾಯಿಂಟ್ ಒನ್ ಪಾರ್ಸೆಂಟ್ ಕಡಿಮೆ‌ ಮಾಡುತ್ತೇವೆ ಎಂದುಕೊಂಡರೂ ನಮ್ಮ ಸಂಕಷ್ಟದ ದಿನಗಳನ್ನು ಕೆಲವು ದಿನದ ಮಟ್ಟಿಗಾದರೂ ಮುಂದೆ ಹಾಕಬಹುದು.

 ಬದಲಾವಣೆ ಮಾಡುತ್ತಿರುವುದೇ ತೈಲ‌ ಮತ್ತು ಅನಿಲ

ಬದಲಾವಣೆ ಮಾಡುತ್ತಿರುವುದೇ ತೈಲ‌ ಮತ್ತು ಅನಿಲ

ಪ್ರಸ್ತುತ ಹವಾಮಾನ ಬದಲಾವಣೆ ಮಾಡುತ್ತಿರುವುದೇ ತೈಲ‌ ಮತ್ತು ಅನಿಲ. ಸದ್ಯ ವಿಜ್ಞಾನಿಗಳು ತಯಾರಿಸಿರುವ ಈ ವರದಿ 43 ಪುಟಗಳನ್ನು ಒಳಗೊಂಡಿದೆ. ಆದರೆ ವಿಜ್ಞಾನಿಗಳು ಪರಿಸ್ಥಿತಿ ಗಂಭೀರವಾಗಿ ಎಂದು ಎಚ್ಚರಿಸಬಹುದು. ವರದಿ ನೀಡಬಹುದು ಅಷ್ಟೇ. ಆದರೆ, ಇದಕ್ಕೆ ಕಾಯಿದೆ ಮಾಡಬೇಕಾದ ಕೆಲಸ ಮಾತ್ರ ಸರಕಾರದ್ದು. ಆದರೆ, ವರದಿಯಲ್ಲಿ ಎಲ್ಲೆಲ್ಲಿ ಪಳೆಯುಳಿಕೆ ಇಂಧನ ಎಂದು ಬರೆಯಲಾಗಿತ್ತು. ಆ ಅಕ್ಷರಗಳನ್ನು ಸರಕಾರವೇ ಒಡೆದು ಹಾಕಿದೆ. ಅಲ್ಲದೆ, ಪಳೆಯುಳಿಕೆ ಇಂಧನ ಬಗ್ಗೆ ವರದಿಯಲ್ಲಿ ಇರಬಾರದು ಎಂದು ಕೂಡ ಹೇಳಿದೆ.

ಸದ್ಯ ಸಮಿತಿ ಮಂಡಿಸಿರುವ ವರದಿಯಲ್ಲೂ ಪಳಿಯುಳಿಕೆ ಇಂಧನ ಎಂಬುದನ್ನು ಹಾಗೆ ಉಳಿಸಲಾಗಿದೆ ಎಂದು ವಿಜ್ಞಾನಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ತೆಗೆಯಿರಿ ಎಂದು ಸರಕಾರ ಹೇಳಿದ್ದರೂ ಈ ವರದಿಯನ್ನು ಜಗತ್ತಿನ ಎಲ್ಲಾ ದೇಶಗಳ ಮುಂದೆ ಇಟ್ಟಾಗ ವರದಿಯಲ್ಲಿರುವ ಅಂಶಗಳನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ. ಆ ಮೂಲಕ ಸಮಸ್ಯೆಗೆವಪರಿಹಾರಕ್ಕೆ ಹುಡುಕಾಟ ನಡೆಸಲಾಗುತ್ತಿದೆ.

 2030ರೊಳಗೆ ಕಲ್ಲಿದ್ದಲು‌ ಸುಡುವುದನ್ನು‌ ಕಡಿಮೆ

2030ರೊಳಗೆ ಕಲ್ಲಿದ್ದಲು‌ ಸುಡುವುದನ್ನು‌ ಕಡಿಮೆ

ಆಕ್ಸ್‌ಫರ್ಡ್ ವಿವಿಯ ವಿಜ್ಞಾನಿ ಫೆಡ್ರಿಕ್ ಓಟ್ ಹೇಳುವಂತೆ, ವಿಜ್ಞಾನ ತನ್ನಿಂತಾನೆ ನಿಂತಿರುವುದು. ಯಾರೂ ಅದನ್ನು ನೀರೆರದು ಬೆಳೆಸಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಸದ್ಯ ಈ ವರದಿ ಬಗ್ಗೆ ಮತ್ತಷ್ಟು ಚರ್ಚೆಯನ್ನು ಈ ವರ್ಷದ ನವೆಂಬರ್ ನಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಅಮೆರಿಕಾದಲ್ಲಿ ನಡೆಯುವ ಈ ಜಾಗತಿಕ‌ ಸಭೆಯಲ್ಲಿಎಲ್ಲಾ ದೇಶದ ನಾಯಕರು ಭಾಗವಹಿಸಲಿದ್ದಾರೆ. 2030ರೊಳಗೆ ಕಲ್ಲಿದ್ದಲು‌ ಸುಡುವುದನ್ನು‌ ಕಡಿಮೆ ಮಾಡುತ್ತೇವೆ ಎಂದು ಎಲ್ಲಾ ರಾಷ್ಟ್ರ ಗಳು ನಿರ್ಧರಿಸಬೇಕು. ಜೊತೆಗೆ ಕಲ್ಲಿದ್ದಲು ‌ನಂಬಿ‌ ಬದುಕುತ್ತಿರುವ ಸಣ್ಣ ದೇಶಗಳಿಗೆ ಪರಿಹಾರ ನೀಡಲು ದೊಡ್ಡ ದೇಶಗಳು‌ ಈ‌ ಹಿಂದೆಯೇ‌ ನಿರ್ಧರಿಸಿದ್ದವು. ಆದರೆ, ನಂತರ ಯಾವ ಬೆಳವಣಿಗೆ ‌ಆಗಲಿಲ್ಲ. ಇದೀಗ ನವೆಂಬರ್‌ ನಲ್ಲಿ ‌ನಡೆಯುವ ಸಭೆಯಲ್ಲಿ ಎಲ್ಲಾ ದೇಶಗಳು ಈ ಬಗ್ಗೆ ತೀರ್ಮಾನ‌ ಕೈಗೊಳ್ಳಬಹುದು ಎಂದು ಭಾವಿಸಲಾಗಿದೆ.

English summary
World leaders will fail to honor their climate pledges unless they make "immediate, rapid and large-scale reductions" to greenhouse gas emissions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X