• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಹಿಳಾ ದಿನಾಚರಣೆ ವಿಶೇಷ: ಸ್ವಿಗ್ಗಿಯಲ್ಲಿ ಮಹಿಳೆಯರ ಯಶೋಗಾಥೆ!

|

ಈ ಬಾರಿಯ ಮಹಿಳಾ ದಿನಾಚರಣೆಯನ್ನು ವಿಭಿನ್ನವಾಗಿ ಆಚರಿಸಲು ನಿರ್ಧರಿಸಿರುವ ದೇಶದ ಅತಿದೊಡ್ಡ ಆಹಾರ ವಿತರಣೆ ಸಂಸ್ಥೆಯಾಗಿರುವ ಸ್ವಿಗ್ಗಿ ಮಹಿಳೆಯರನ್ನೂ ತನ್ನ ವಿತರಕರನ್ನಾಗಿ ನೇಮಕ ಮಾಡಿಕೊಂಡಿದ್ದು, ಈ ಬಾರಿಯ ಮಹಿಳಾ ದಿನವನ್ನು ಅವರಿಗೆ ಅರ್ಪಣೆ ಮಾಡಿದೆ. #BalanceForBetter ಎಂಬ ಥೀಮ್‍ನೊಂದಿಗೆ ಈ ಮಹಿಳಾ ದಿನವನ್ನು ವಿಭಿನ್ನಗೊಳಿಸಲಿದೆ.

ಸ್ವಿಗ್ಗಿಗೆ ವಿತರಕರೇ ಬೆನ್ನೆಲುಬಾಗಿದ್ದಾರೆ. ಇದರಿಂದ ದೇಶದ ಅತಿದೊಡ್ಡ ಆಹಾರ ವಿತರಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲು ಸಾಧ್ಯವಾಗಿದೆ. ಕಳೆದ ಹಲವು ವರ್ಷಗಳಲ್ಲಿ ಸ್ವಿಗ್ಗಿ ಮಹಿಳಾ ವಿತರಕರನ್ನು ನೇಮಕ ಮಾಡಿಕೊಂಡು ಅವರಿಗೆ ಸೂಕ್ತ ತರಬೇತಿ ನೀಡುವತ್ತ ಗಮನಹರಿಸಿದೆ.

ಕೃಷಿ ಕ್ಷೇತ್ರದಲ್ಲಿ ದಿಟ್ಟ ಹೆಜ್ಜೆ ಇಟ್ಟ ದೊಡ್ಡಬಳ್ಳಾಪುರದ ಉಮಾದೇವಿ

ಪ್ರಸ್ತುತ ದೇಶದ 20 ಕ್ಕೂ ಹೆಚ್ಚು ನಗರಗಳಲ್ಲಿ ಸ್ವಿಗ್ಗಿಯ 200 ಕ್ಕೂ ಹೆಚ್ಚು ಮಹಿಳಾ ವಿತರಕರು ಕಾರ್ಯನಿರ್ವಹಿಸುತ್ತಿದ್ದಾರೆ. ಮುಂಬೈ, ನವದೆಹಲಿ, ಹೈದ್ರಾಬಾದ್, ಬೆಂಗಳೂರು, ಪುಣೆ, ಚೆನ್ನೈ, ಕೊಚ್ಚಿ, ನಾಗ್ಪುರ, ಅಹ್ಮದಾಬಾದ್, ಕೋಲ್ಕತ್ತಾ ಸೇರಿದಂತೆ ಇನ್ನೂ ಹಲವು ನಗರಗಳಲ್ಲಿ ಮಹಿಳಾ ವಿತರಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಸ್ವಿಗ್ಗಿಯು ಸುರಕ್ಷತಾ ವಲಯವನ್ನು' ಗುರುತಿಸುವ ಮೂಲಕ ಮಹಿಳಾ ವಿತರಕರಿಗೆ ಸುರಕ್ಷತೆ ಮತ್ತು ಸಮಗ್ರತಾ ಪರಿಸರವನ್ನು ಸೃಷ್ಟಿಸಿದೆ. ಈ ಸುರಕ್ಷತಾ ವಲಯದ ಮೂಲಕ ಮಹಿಳಾ ವಿತರಕರಿಗೆ ಸ್ವಿಗ್ಗಿಯು ನಮ್ಮ ನಗರಗಳಲ್ಲಿ ಸಂಜೆ 6 ಗಂಟೆಯೊಳಗೆ ಆಹಾರ ವಿತರಣೆ ಚಟುವಟಿಕೆಯನ್ನು ಮುಗಿಸಲು ಪ್ರೋತ್ಸಾಹ ನೀಡಲಾಗುತ್ತಿದೆ. ಈ ಮೂಲಕ ಮಹಿಳಾ ಪ್ರತಿನಿಧಿಗಳು work life balance ಅಡಿಯಲ್ಲಿ ಆರಾಮವಾಗಿ ತಮ್ಮ ಕರ್ತವ್ಯ ನಿರ್ವಹಿಸಬಹುದಾಗಿದೆ. ಅದೇರೀತಿ, ಆಹಾರ ತಯಾರಿಕಾ ಸಂಸ್ಥೆಗಳಲ್ಲಿ ಈ ಮಹಿಳಾ ವಿತರಕರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಸೇರಿದಂತೆ ಮತ್ತಿತರೆ ಸೌಲಭ್ಯಗಳನ್ನು ಕಲ್ಪಿಸುತ್ತಿವೆ. ಇಷ್ಟೇ ಅಲ್ಲ. ಸ್ವಿಗ್ಗಿಯು ಬೆಳವಣಿಗೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಹಿಳಾ ವ್ಯವಸ್ಥಾಪನಾ ಪಾತ್ರಗಳನ್ನೂ ನಿರ್ವಹಿಸುವಂತೆ ಮಾಡುತ್ತಿದೆ. ಅಂದರೆ, ವ್ಯವಸ್ಥಾಪನಾ ಹುದ್ದೆಗಳಿಗೆ ಮಹಿಳೆಯರನ್ನು ನೇಮಕ ಮಾಡಿಕೊಳ್ಳುತ್ತಿದೆ.

ಅವಳೆಂದರೆ ಎಲ್ಲವೂ... ಅವಳಿಲ್ಲದ ಬದುಕು ಅನೂಹ್ಯ!

ಈ ಮಹಿಳಾ ವಿತರಕರು ಪುರುಷ ವಿತರಣಾ ಪ್ರತಿನಿಧಿಗಳಿಗೆ ಸರಿ ಸಮಾನವಾಗಿ ವೇತನ ಮತ್ತು ಭತ್ಯೆಗಳನ್ನು ಪಡೆಯುತ್ತಿದ್ದಾರೆ. ಸ್ವಿಗ್ಗಿಯ ಸ್ವಿಗ್ಗಿ ಸ್ಮೈಲ್ಸ್', ಮೋಟಿವೇಷನ್ ಮತ್ತು ಬೆನಿಫಿಟ್ ಸ್ಕೀಂಗಳು ಪ್ರತಿನಿಧಿಗಳಿಗೆ ಹೆಚ್ಚುವರಿ ಪ್ರಯೋಜನಗಳನ್ನು ನೀಡಲಿವೆ.

ಅವುಗಳಲ್ಲಿ ಪ್ರಮುಖವಾದ ಪ್ರಯೋಜನಗಳು ಇಂತಿವೆ:

* ಅಪಘಾತ ಮತ್ತು ವೈದ್ಯಕೀಯ ವಿಮೆ

* ಪ್ರತಿನಿಧಿಗಳಿಗೆ ಮತ್ತು ಕುಟುಂಬ ಸದಸ್ಯರ ಚಿಕಿತ್ಸೆಗೆ ವೈದ್ಯರನ್ನು ಕರೆಸುವುದು.

* ಪ್ರತಿನಿಧಿಗಳಿಗೆ/ಅವರ ಮಕ್ಕಳಿಗೆ ಶೈಕ್ಷಣಿಕ ಸ್ಕಾಲತ್ ಶಿಪ್ ಕಾರ್ಯಕ್ರಮಗಳು.

* ವೈಯಕ್ತಿಕ ಸಾಲಕ್ಕೆ ಬ್ಯಾಂಕುಗಳೊಂದಿಗೆ ಒಪ್ಪಂದ.

* ಸುರಕ್ಷತೆ ಮತ್ತು ಆರಾಮದಾಯಕತೆಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಪ್ರಯೋಜನಗಳು/ಉಪಕ್ರಮಗಳು.

* ಉತ್ತಮ ಸಾಧನೆ ತೋರುವವರಿಗೆ ಮಾಸಿಕ ರಿವಾರ್ಡ್‍ಗಳು ಮತ್ತು ಭತ್ಯೆಗಳು.

ಅವಳಿಲ್ಲದ ಜಗತ್ತು ಅನೂಹ್ಯ..! ಮಹಿಳಾ ದಿನದ ಶುಭಾಶಯಗಳು

ಈ ಬಾರಿಯ ಮಹಿಳಾ ದಿನಾಚರಣೆ ಅಂಗವಾಗಿ ನಾವು ಕೆಲವು ಮಹಿಳಾ ವಿತರಣಾ ಪ್ರತಿನಿಧಿಗಳ ಕಾರ್ಯಕ್ಷಮತೆ ಮತ್ತು ವೃತ್ತಿಪರ ಜೀವನಗಾಥೆಯ ಬಗ್ಗೆ ಇಲ್ಲಿ ಬೆಳಕು ಚೆಲ್ಲಿದ್ದೇವೆ. ಈ ಮಹಿಳಾ ಪ್ರತಿನಿಧಿಗಳೆಲ್ಲಾ ಅತ್ಯಂತ ಸಂತೋಷದಿಂದ ಸಾವಿರಾರು ಭಾರತೀಯರಿಗೆ ಆಹಾರ ಪದಾರ್ಥಗಳನ್ನು ವಿತರಿಸುತ್ತಿದ್ದಾರೆ.

ಪೂಜಾ ಪಿ.ಜೈನ್, ಬೆಂಗಳೂರು, ಫ್ಲೀಟ್ ಮ್ಯಾನೇಜರ್: ಪೂಜಾ ಬಿಕಾಂ ಪದವೀಧರೆ. ಈ ಹಿಂದೆ ಯುವ ಅಸೋಸಿಯೇಟ್ ಆಗಿ ಸೇವೆ ಸಲ್ಲಿಸಿದ್ದರು. ಇದೀಗ ಪೂಜಾ ಸ್ವಿಗ್ಗಿಯಲ್ಲಿ ವ್ಯವಸ್ಥಾಪನಾ ವಿಭಾಗದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಇವರು ವಿತರಣಾ ಪ್ರತಿನಿಧಿಯಾಗಿ ಕೆಲಸ ಆರಂಭಿಸಿದ್ದರು. ಆದರೆ, ಅವರಲ್ಲಿರುವ ವ್ಯವಸ್ಥಾಪನಾ ಸಾಮರ್ಥ್ಯ ಇದೆ ಎಂಬುದನ್ನು ಗಮನಿಸಿದ ಸ್ವಿಗ್ಗಿ ಆಡಳಿತ ಮಂಡಳಿ ಅವರಿಗೆ ಬಡ್ತಿ ನೀಡಿತು.

ಮಹಿಳಾ ದಿನಾಚರಣೆ ವಿಶೇಷ:ಸ್ಮಶಾನದಲ್ಲಿ ಕೆಲಸ ಮಾಡುವ ನೀಲಮ್ಮನ ಸಾಹಸಗಾಥೆ

ಪ್ರಸ್ತುತ ಪೂಜಾ ಅವರು ತಮ್ಮ ಹುದ್ದೆಯನ್ನು ಅತ್ಯಂತ ಸಂತಸದಿಂದ ನಿಭಾಯಿಸುತ್ತಿದ್ದಾರೆ. ವಾರಾಂತ್ಯದ ದಿನಗಳಲ್ಲಿ ಅವರು ಸ್ನಾತಕೋತ್ತರ ಪದವಿಯನ್ನು ವ್ಯಾಸಂಗ ಮಾಡುತ್ತಿದ್ದಾರೆ. ಸ್ವಿಗ್ಗಿಯ ಭತ್ಯೆಗಳು ಸೇರಿದಂತೆ ಮತ್ತಿತರೆ ಸೌಲಭ್ಯಗಳಿಂದಾಗಿ ಪೂಜಾ ಅವರ ಜೀವನಶೈಲಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಈಗ ಪೂಜಾ ಅವರು ಪೆಟ್ರೋಲ್, ಆನ್‍ಲೈನ್ ಶಾಪಿಂಗ್ ವೋಚರ್‍ಗಳು, ಶೈಕ್ಷಣಿಕ ಸಾಲಗಳು ಅಥವಾ ಆರೋಗ್ಯ ಆರೈಕೆಗೆ ಹಲವಾರು ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ.

English summary
With #BalanceForBetter dominating the theme this International woman’s day, Swiggy, India’s largest food delivery platform has taken lead and stayed ahead of the curve by making its delivery fleet gender inclusive. With the largest active delivery fleet in the country, delivery partners are the backbone of Swiggy. Over the past year, Swiggy have been working towards on-boarding more and more woman delivery partners and training them for relevant opportunities in this growing sector
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X