• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

International Joke Day 2022 : ಇತಿಹಾಸ, ಮಹತ್ವ, ಹಾಸ್ಯದ ಪ್ರಯೋಜನಗಳಿವು

|
Google Oneindia Kannada News

ಹಾಸ್ಯವಿಲ್ಲದ ಜೀವನವನ್ನು ನಾವು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಗು ನಮಗೆ ಎಷ್ಟು ಮುಖ್ಯ ಅಂದರೆ ಅದು ನಮ್ಮ ಆಯಸ್ಸನ್ನು ಹೆಚ್ಚಿಸುವ ಶಕ್ತಿಯನ್ನು ಹೊಂದಿದೆ. ಹೀಗಾಗಿ ಯೋಗಾಭ್ಯಾಸದಲ್ಲಿ ನಗುವಿಗೆ ಹೆಚ್ಚು ಪ್ರಾಮುಖ್ಯತೆ ಇದೆ. ಹಾಗೇ ಸಮಾಜದಲ್ಲಿ ರಾಜಕೀಯ, ಸಾಂಸ್ಕೃತಿಕ ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ ನಿಗದ ಪ್ರಾಶಸ್ತ್ಯವನ್ನು ನಗೆ ಕಾರ್ಯಕ್ರಮಗಳಿಗೆ ಜನ ನೀಡುತ್ತಾರೆ. ಹಾಸ್ಯ ಕಾರ್ಯಕ್ರಮಗಳಿಗೆ ಕರೆಯದೇ ಜನ ಸೇರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಹಾಸ್ಯಾಸ್ಪದ ಕಾರ್ಯಕ್ರಮಗಳು, ವಿಡಿಯೋಗಳು ವೈರಲ್ ಆಗುವುದರ ಹಿಂದನ ಕಾರಣ ನಗಲು ಜನ ಇಷ್ಟ ಪಡುತ್ತಾರೆ. ನಗು ಮನುಷ್ಯನನ್ನು ನೋವು ಮುಕ್ತನನ್ನಾಗಿಸುತ್ತದೆ. ಒತ್ತಡವನ್ನು ನಿವಾರಿಸುತ್ತದೆ.

ಎಷ್ಟೇ ಕಷ್ಟಗಳಿದ್ದರು ನಗು ಅದನ್ನು ಮರೆಸುವ ಶಕ್ತಿಯನ್ನು ಹೊಂದಿದೆ. ನೀವು ನಗುತ್ತಿರುವಾಗ, ಹಾಸ್ಯಗಳನ್ನು ಹಂಚಿಕೊಳ್ಳುವಾಗ ಮತ್ತು ನೀವು ಪ್ರೀತಿಸುವ ಜನರೊಂದಿಗೆ ಹಾಸ್ಯಾಸ್ಪದ ಘಟನೆಗಳನ್ನು ನೆನಪು ಮಾಡಿಕೊಳ್ಳುವಾಗ ಜೀವನವು ಉತ್ತಮವಾಗಿರುತ್ತದೆ ಎಂಬ ಅಂಶವನ್ನು ಪ್ರಶಂಸಿಸಲು ಪ್ರತಿ ವರ್ಷ ಜುಲೈ 1 ರಂದು ಅಂತರರಾಷ್ಟ್ರೀಯ ಜೋಕ್ ದಿನವನ್ನಾಗಿ ಆಚರಿಸಲಾಗುತ್ತದೆ.

ಜೋಕ್‌ಗಳನ್ನು ಹಂಚಿಕೊಳ್ಳುವ ಪ್ರಯೋಜನಗಳು

ಹೃತ್ಪೂರ್ವಕ ನಗುಗಿಂತ ಉತ್ತಮ ಔಷಧವಿಲ್ಲ ಎಂದು ವಿಜ್ಞಾನವೂ ಸಹ ಬೆಂಬಲಿಸುತ್ತದೆ. ಚಿಕಿತ್ಸೆಯಲ್ಲಿ ತೊಡಗಿಸಿಕೊಳ್ಳುವ ಒದಲು ಆರೋಗ್ಯ ಸಮಸ್ಯೆಗಳಿಂದ ದೂರವಾಗಲು ಒಂದು ಮಾರ್ಗವೆಂದರೆ ನಿಮ್ಮ ಪ್ರೀತಿಪಾತ್ರರ ಜೊತೆ ಜೋಕ್‌ಗಳನ್ನು ಹಂಚಿಕೊಳ್ಳುವುದು ನಗುವುದು ಮತ್ತು ಅವರೊಂದಿಗೆ ನೀವು ನಗುವುದು. ಆದರೆ ಈ ಜೋಕುಗಳಿಂದ ಯಾರ ಭಾವನೆಗಳಿಗೂ ಧಕ್ಕೆಯಾಗದಂತೆ ನೋಡಿಕೊಳ್ಳುವುದು ಮುಖ್ಯ.

ಜೋರಾಗಿ ನಗುವುದರಿಂದ ಆಗುವ ಹಲವಾರು ಪ್ರಯೋಜನಗಳ ಬಗ್ಗೆ ಮಾತನಾಡುತ್ತಾ ಡಾ. ಝೆನ್ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್ ಚೆಂಬೂರ್‌ನ ಕನ್ಸಲ್ಟಿಂಗ್ ಫಿಸಿಶಿಯನ್, ಇಂಟೆನ್ಸಿವಿಸ್ಟ್ ಮತ್ತು ಇನ್‌ಫೆಕ್ಷನ್ ರೋಗ ತಜ್ಞ ವಿಕ್ರಾಂತ್ ಶಾ ಅವರು, "ನೀವು ಅಧಿಕ ರಕ್ತದೊತ್ತಡ ಹೊಂದಿದ್ದರೆ ನಗು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಅಧಿಕ ರಕ್ತದೊತ್ತಡದೊಂದಿಗೆ ಸಂಬಂಧಿಸಿದ ಪಾರ್ಶ್ವವಾಯು ಅಥವಾ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ. ನಗುವುದು ಒತ್ತಡದ ಹಾರ್ಮೋನುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಪ್ರತಿರಕ್ಷಣಾ ಕೋಶಗಳು ಮತ್ತು ಸೋಂಕು-ಹೋರಾಟದ ಪ್ರತಿಕಾಯಗಳನ್ನು ಹೆಚ್ಚಿಸುತ್ತದೆ. ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹೀಗಾಗಿ, ನಿಮ್ಮ ಒಟ್ಟಾರೆ ಯೋಗಕ್ಷೇಮವನ್ನು ಸುಧಾರಿಸಲು ನಿಮಗೆ ಸಾಧ್ಯವಾಗುತ್ತದೆ. ಒಳ್ಳೆಯ ನಗುವು ರಕ್ತನಾಳಗಳ ಕಾರ್ಯವನ್ನು ಹೆಚ್ಚಿಸುತ್ತದೆ ಮತ್ತು ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಹೀಗಾಗಿ, ನೀವು ಹೃದಯರಕ್ತನಾಳದ ಸಮಸ್ಯೆಗಳನ್ನು ನಿಯಂತ್ರಣದಲ್ಲಿ ಇಡಲು ಸಾಧ್ಯವಾಗುತ್ತದೆ" ಎನ್ನುತ್ತಾರೆ.

International Joke Day 2022: Date, History, Significance & benefits of sharing jokes in Kannada

ಅಂತರಾಷ್ಟ್ರೀಯ ಜೋಕ್ ದಿನದ ಇತಿಹಾಸ

ಇಂಟರ್‌ನ್ಯಾಷನಲ್ ಜೋಕ್ ಡೇ ಆಚರಣೆಯು 90 ರ ದಶಕದ ಮಧ್ಯಭಾಗದಲ್ಲಿ ವೇಯ್ನ್ ರೀನಾಗೆಲ್ ಎಂಬ ಅಮೆರಿಕನ್ ಲೇಖಕರಿಂದ ಪ್ರಾರಂಭವಾಯಿತು. ಅವರು ತಮ್ಮ ಹಾಸ್ಯದ ಪುಸ್ತಕಗಳನ್ನು ಪ್ರಚಾರ ಮಾಡಲು ಈ ದಿನವನ್ನು ರಚಿಸಿದರು. ನಮ್ಮ ಜೀವನದಲ್ಲಿ ಹಾಸ್ಯ ಮತ್ತು ನಗುವಿನ ಪ್ರಾಮುಖ್ಯತೆಯನ್ನು ಗುರುತಿಸಲು, ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯಕರವಾಗಿರಲು ದೈನಂದಿನ ಒತ್ತಡಗಳ ವಿರುದ್ಧ ಹೋರಾಡಲು ಅಂತರರಾಷ್ಟ್ರೀಯ ಜೋಕ್ ದಿನವನ್ನು ಆಚರಿಸುವುದು ಕಾಣಬಹುದು.

Recommended Video

   Ganga ನದಿಯ ಸೇತುವೆಯ ಮೇಲಿಂದ ಅಜ್ಜಿ ಸಾಹಸ | *India | OneIndia Kannada
   English summary
   International Joke Day 2022: Know Date, History, Significance and Benefits of Sharing Jokes in Kannada.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X