ಹಾರಾಟದ ವೇಳೆ ಅಲುಗಾಡಿದ ವಿಮಾನ: ಅಯ್ಯೋ... ಹೋಯ್ತು ಜೀವ ಎಂದ ಪ್ರಯಾಣಿಕರು!
ದೆಹಲಿ ಫೆಬ್ರವರಿ 20: ಪ್ರತಿಕೂಲ ಹವಾಮಾನದಿಂದಾಗಿ ವಿಮಾನವೊಂದು ಹಾರಾಟದ ವೇಳೆ ನಿರಂತವಾಗಿ ಅಲುಗಾಡಿದ ಅಘಾತಕಾರಿ ಘಟನೆ ನಡೆದಿದೆ.
ಸೋಮವಾರ ಹೊಸದಿಲ್ಲಿಯಿಂದ ಶ್ರೀನಗರಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನ ತೆರಳುತ್ತಿತ್ತು. ಪ್ರತಿಕೂಲ ಹವಾಮಾನದಿಂದಾಗಿ ಭಾರೀ ಅಲುಗಾಡಿದ್ದು ಒಳಗಿದ್ದ ಪ್ರಯಾಣಿಕರು ಗಾಬರಿಗೊಂಡಿದ್ದಾರೆ. ಒಂದು ಕ್ಷಣ ಏನಾಯ್ತು ಎಂದು ತೋಚದ ಜನ ಪ್ರಾಣವನ್ನೇ ಕೈಯಲ್ಲಿಡಿದುಕೊಂಡು ಕುಳಿತಿರುವುದು ಒಳಗಿದ್ದ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿಮಾನದ ಒಳಗಡೆ ಇದ್ದ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ.

6E6125 ವಿಮಾನ ದೆಹಲಿ ವಿಮಾನ ನಿಲ್ದಾಣದಿಂದ ಸಂಜೆ 5.25 ಕ್ಕೆ ಟೇಕಾಫ್ ಆಗಿತ್ತು. ಈ ವೇಳೆ ಭಾರೀ ಮಳೆಯಿಂದಾಗಿ ತೊಂದರೆಯನ್ನು ಎದುರಿಸಿದೆ. ಆಗ ಏಕಾಏಕಿ ವಿಮಾನ ಅಲುಗಾಡಿದೆ. ಒಂದು ಬಾರಿ ವಿಮಾನ ಅಲುಗಾಡಿದ್ದರೆ ಯಾರಿಗೂ ಹೆಚ್ಚು ಭಯವಾಗುತ್ತಿರಲಿಲ್ಲ. ಆದರೆ ವಿಮಾನ ಅಲುಗಾಡುವುದನ್ನು ಮುಂದುವರೆಸಿದಾಗ ಪ್ರಯಾಣಿಕರು ತಮ್ಮ ಕುರ್ಚಿಗಳನ್ನು ಹಿಡಿದುಕೊಂಡು ಭಯಭೀತರಾಗಿರುವುದು ಕಂಡು ಬಂದಿದೆ.
ಈ ವೇಳೆ ಕಾಶ್ಮೀರ ಸೇವಾ ಸಂಘದ ಮುಖ್ಯಸ್ಥ ಬಾಬಾ ಫಿರ್ದೌಸ್ ಕೂಡ ವಿಮಾನದಲ್ಲಿದ್ದರು. ವಿಮಾನ ಅಲುಗಾಡಿಸುವುದನ್ನು ನಿಲ್ಲಿಸಿದಾಗ ಅವರು ತನಗೆ ಮತ್ತು ವಿಮಾನದಲ್ಲಿದ್ದ ಇತರ ಎಲ್ಲ ಪ್ರಯಾಣಿಕರಿಗೆ ಹೊಸ ಜೀವ ಬಂದಿದೆ ಎಂದು ಹೇಳಿದರು.
An Indigo flight from Delhi to Srinagar was hit by severe turbulence due to bad weather. A narrow escape.
— Kashur Tamadun (@kashur_tamadun) February 19, 2024
Avoid traveling in bad weather. pic.twitter.com/yX1Z4fhQcv
ಜಮ್ಮು ಮತ್ತು ಕಾಶ್ಮೀರದಲ್ಲಿ ಸೋಮವಾರ ಹಿಮಪಾತ ಶುರುವಾಗಿ ಎರಡನೇ ದಿನ. ಜಮ್ಮು ಮತ್ತು ಕಾಶ್ಮೀರದ ಕೆಲವು ಭಾಗಗಳಲ್ಲಿ ಅಧಿಕ ಮಳೆ ಮತ್ತು ಭಾರೀ ಹಿಮಪಾತವಾಗುತ್ತಿದೆ. ಹೀಗಾಗಿ 270-ಕಿಮೀ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಮತ್ತು ರಾಂಬನ್ ಜಿಲ್ಲೆಯ ಹೆಚ್ಚು ಸ್ಥಳಗಳಲ್ಲಿ ಗುಡ್ಡಗಳಿಂದ ಕಲ್ಲುಗಳು ಉರುಳಿ ಬಿದ್ದಿವೆ. ಇದರಿಂದಾಗಿ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ದೋಡಾ ಜಿಲ್ಲೆಯ ಭದೇರ್ವಾಹ್‌ನ ಮೇಲ್ಭಾಗದಲ್ಲಿ ಹಿಮಪಾತದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಎರಡು ಅಂತರರಾಜ್ಯ ಹೆದ್ದಾರಿಗಳನ್ನು ಮುಚ್ಚಲಾಗಿದೆ. ದಿಢೀರ್ ರಸ್ತೆ ಬಂದ್ ಆಗಿದ್ದರಿಂದ ನೂರಾರು ಪ್ರಯಾಣಿಕರು ಪರದಾಡುವಂತಾಗಿದೆ. ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ರಸ್ತೆಯನ್ನು ತೆರವುಗೊಳಿಸುವವರೆಗೆ ಮತ್ತು ಹವಾಮಾನ ಸುಧಾರಿಸುವವರೆಗೆ ಹೆದ್ದಾರಿಯಲ್ಲಿ ಪ್ರಯಾಣಿಸುವುದನ್ನು ತಪ್ಪಿಸಲು ಅಧಿಕಾರಿಗಳು ಜನರಿಗೆ ಸಲಹೆ ನೀಡಿದ್ದಾರೆ.
ಕಾಶ್ಮೀರದಲ್ಲಿ ಹಿಮಪಾತ
ಕಾಶ್ಮೀರದಲ್ಲಿ ಭಾರೀ ಹಿಮಪಾತವಾಗುತ್ತಿದ್ದು ಇದರೊಂದಿಗೆ ಮಳೆ ಕೂಡ ಶುರುವಾಗಿದೆ. ಹೀಗಾಗಿ ಗುಡ್ಡ ಕುಸಿತ ಹಾಗೂ ರಸ್ತೆ ಕುಸಿತದಿಂದಾಗಿ ಸಂಚಾರಕ್ಕೆ ಭಾರೀ ತೊಂದರೆಯಾಗುತ್ತಿದೆ.
ಇತ್ತೀಚೆಗೆ ಉತ್ತರ ಕಾಶ್ಮೀರದಲ್ಲಿ ಭಾರಿ ಹಿಮಪಾತದಿಂದಾಗಿಸಂಚಾರ ಅಸ್ತವ್ಯಸ್ಥವಾಗಿತ್ತು. ಈ ಸಂದರ್ಭದಲ್ಲಿ ಗರ್ಭಿಣಿಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಸೈನಿಕರೊಬ್ಬರು ದೇವರಂತೆ ಬಂದು ಆಕೆಯನ್ನು ಆಸ್ಪತ್ರೆಗೆ ಸೇರಿಸಲು ನೆರವಾಗಿದ್ದರು. ಜಿಲ್ಲೆಯ ಖಾನಬಾಲ್‌ನಿಂದ ಪಿಎಚ್‌ಸಿ ವಿಲ್ಗಾಮಾವರೆಗೆ ಭಾರೀ ಹಿಮಪಾತವಾಗಿ, ಇದರಿಂದ ಇಲ್ಲಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಮಹಿಳೆಯೊಬ್ಬರು ಹೆರಿಗೆ ನೋವಿನಿಂದ ಬಳಲುತ್ತಿದ್ದರು.
ಹೇಗೋ, ಭಾರೀ ಹಿಮಪಾತದ ನಡುವೆ, ಸ್ಥಳೀಯ ಆಶಾ ಕಾರ್ಯಕರ್ತೆಯರನ್ನು ಮೊದಲು ಕರೆಸಲಾಯಿತು. ಮಹಿಳೆಯ ಸ್ಥಿತಿ ಹದಗೆಡಲು ಪ್ರಾರಂಭಿಸಿದಾಗ, ಸ್ಥಳೀಯ ಆರೋಗ್ಯ ಕಾರ್ಯಕರ್ತರು ಅವಳನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯುವಂತೆ ಕೇಳಿಕೊಂಡರು. ಆಗ ಆಕೆಯನ್ನು ಸೈನಿಕರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.












Click it and Unblock the Notifications