ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ ಭಾರತೀಯ ಸಮುದಾಯದವರನ್ನು ಗುರಿ ಮಾಡಿ ಕೊಲ್ಲಲಾಗ್ತಿದೆಯಾ?

|
Google Oneindia Kannada News

ವಾಷಿಂಗ್ಟನ್, ಅ. 7: ವಿದೇಶಕ್ಕೆ ಹೋಗುವ ಕನಸು ಕಾಣುವ ಭಾರತೀಯರಿಗೆ ಮೊದಲು ಬರುವ ಹೆಸರು ಅಮೆರಿಕ. ಈಗ ಬ್ರಿಟನ್, ಕೆನಡಾ, ಆಸ್ಟ್ರೇಲಿಯಾ, ಗಲ್ಫ್ ದೇಶಗಳ ಆಯ್ಕೆ ಇದೆಯಾದರೂ ಭಾರತೀಯರಿಗೆ ಈಗಲೂ ಫೇವರಿಟ್ ದೇಶವಾಗಿರುವುದು ಅಮೆರಿಕವೇ. ಅಲ್ಲಿ ಸಿಗುವ ಅವಕಾಶಗಳು, ಬಣ್ಣ ಬಣ್ಣದ ಜೀವನ, ಉದಾರ ಸಮಾಜ ಇತ್ಯಾದಿ ಅಂಶಗಳು ಭಾರತೀಯರನ್ನು ಈಗಲೂ ಅಲ್ಲಿಗೆ ಸೆಳೆಯುತ್ತವೆ. ಆದರೆ, ಇತ್ತಿಚಿನ ವರ್ಷಗಳಲ್ಲಿ ಅಮೆರಿಕದಲ್ಲಿ ಭಾರತೀಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಬೇರೆಯೇ ಕಥೆ ಹೇಳುತ್ತವೆ.

ಅಮೆರಿಕದ ಆರ್ಥಿಕ ಮತ್ತು ವೈಜ್ಞಾನಿಕ ಪ್ರಗತಿಯಲ್ಲಿ ಭಾರತೀಯರ ಕೊಡುಗೆ ಬಹಳ ಇದೆ. ಅದರ ಫಲವಾಗಿ ರಾಜಕೀಯ ಸೇರಿದಂತೆ ವಿವಿಧ ಆಯಕಟ್ಟಿನ ಜಾಗದಲ್ಲಿ ಭಾರತೀಯರು ಆವರಿಸಿಕೊಂಡಿರುವುದು ಹೌದು. ಅಮೆರಿಕದ ಉಪಾಧ್ಯಕ್ಷ ಸ್ಥಾನ ಪಡೆಯುವ ಹಂತಕ್ಕೆ ಭಾರತೀಯರು ಹೋಗಿದ್ದಾರೆ.

ಯುಎಸ್‌ನಲ್ಲಿ ಭಾರತೀಯ ವಿದ್ಯಾರ್ಥಿ ಮನೀಶ್ ಛೇಡಾ ಹತ್ಯೆಯುಎಸ್‌ನಲ್ಲಿ ಭಾರತೀಯ ವಿದ್ಯಾರ್ಥಿ ಮನೀಶ್ ಛೇಡಾ ಹತ್ಯೆ

ಇದೇ ಸಂದರ್ಭದಲ್ಲಿ ಭಾರತೀಯರ ಮೇಲೆ ಧ್ವೇಷ ಮೂಡಿಸುವ ವಾತಾವರಣ ಹೆಚ್ಚುತ್ತಿರುವುದು ವೇದ್ಯವಾಗಿದೆ. ಕಳೆದ ಕೆಲ ದಿನಗಳ ಅಂತರದಲ್ಲಿ ಆರು ಭಾರತೀಯರ ಹತ್ಯೆಯಾದ ಘಟನೆಗಳು ಬೆಳಕಿಗೆ ಬಂದಿವೆ.

Indian Americans Targeted; Are These Hate and Racial Crimes

ಒಂದೇ ಕುಟುಂಬದ ನಾಲ್ವರ ಹತ್ಯೆ

ಇದೇ ಅಕ್ಟೋಬರ್ 5ರಂದು ಭಾರತೀಯ ಸಿಖ್ ಕುಟುಂಬಕ್ಕೆ ಸೇರಿದ ನಾಲ್ವರು ವ್ಯಕ್ತಿಗಳನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೆಳಕಿಗೆ ಬಂದಿತ್ತು. 8 ತಿಂಗಳ ಹಸುಳೆಯನ್ನೂ ದುರುಳರು ಬಿಡಲಿಲ್ಲ. ಜಸ್ಲೀನ್ ಕೌರ್, ಜಸದೀಪ್ ಸಿಂಗ್, ಅಮಾನ್‌ದೀಪ್ ಸಿಂಗ್ ಮತ್ತು ಅರೂಹಿ ಧೇರಿ (ಮಗು) ಕೊಲೆಯಾದವರು. ಅಕ್ಟೋಬರ್ 3ರಂದು ಕ್ಯಾಲಿಫೋರ್ನಿಯಾದ ಮೆರ್ಸೆದ್ ನಗರದಲ್ಲಿ ಟ್ರಕ್ ಬಿಸಿನೆಸ್ ಮಾಡುತ್ತಿದ್ದ ಈ ಕುಟುಂಬವನ್ನು ದುಷ್ಕರ್ಮಿಗಳು ಅಪಹರಿಸಿದ್ದರು. ಎರಡು ದಿನದ ಬಳಿಕ ಫಾರ್ಮ್ ಹೌಸ್‌ವೊಂದರಲ್ಲಿ ನಾಲ್ವರ ಶವಗಳು ಪತ್ತೆಯಾಗಿದ್ದವು.

ಕ್ಯಾಲಿಪೋರ್ನಿಯಾದಲ್ಲಿ ಭಾರತೀಯ ಕುಟುಂಬ ಅಪಹರಿಸಿದ್ದ ವ್ಯಕ್ತಿ ಆತ್ಮಹತ್ಯೆಗೆ ಯತ್ನಕ್ಯಾಲಿಪೋರ್ನಿಯಾದಲ್ಲಿ ಭಾರತೀಯ ಕುಟುಂಬ ಅಪಹರಿಸಿದ್ದ ವ್ಯಕ್ತಿ ಆತ್ಮಹತ್ಯೆಗೆ ಯತ್ನ

ಪೊಲೀಸರು ಈ ಪ್ರಕರಣದಲ್ಲಿ ಜೀಸಸ್ ಮ್ಯಾನುಯಲ್ ಸೆಲ್ಗಾಡೋ (48 ವರ್ಷ) ಎಂಬಾತನನ್ನು ಬಂಧಿಸಿದ್ದಾರೆ. ಈತ ಜಸ್‌ದೀಪ್ ಸಿಂಗ್ ನಡೆಸುತ್ತಿದ್ದ ಟ್ರಕ್ ವ್ಯವಹಾರದ ಕಂಪನಿಯಲ್ಲಿ ಹಿಂದೆ ಕೆಲಸ ಮಾಡುತ್ತಿದ್ದ ನೌಕರ. ಉಂಡ ಮನೆಗೆ ದ್ರೋಹ ಎಸಗಿದ ಪಾತಕಿ ಆತ. ಆದರೆ, ಈತನ ಕೊಲೆಗೆ ಕಾರಣ ಏನೆಂಬುದು ಸ್ಪಷ್ಟವಾಗಿಲ್ಲ. ಅದರೆ, ಉನ್ನತ ಸ್ಥಾನದಲ್ಲಿರುವ ಭಾರತೀಯ ಸಮುದಾಯದವರನ್ನು ಸ್ಥಳೀಯವಾಗಿ ಬೆಳೆಯುತ್ತಿರುವ ಮತ್ಸರ ಮನೋಭಾವದ ಫಲ ಇದಾಗಿರಬಹುದು.

ವಿದ್ಯಾರ್ಥಿ ಹತ್ಯೆ

ಪರ್ಡ್ಯೂ ಯೂನಿವರ್ಸಿಟಿ ಕ್ಯಾಂಪಸ್‌ನಲ್ಲಿ ಇತ್ತೀಚೆಗೆ 20 ವರ್ಷದ ವಿದ್ಯಾರ್ಥಿ ವರುಣ್ ಮನೀಶ್ ಛೇದ ಎಂಬಾತನ ಕೊಲೆಯಾಗಿದೆ. ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್‌ನಲ್ಲಿ ವಾಲ್ಕಾರ್ಟ್ ಉದ್ಯೋಗಿ ಗುರಪ್ರೀತ್ ಕೌರ್ ದೋಸಾಂಜ್ ಎಂಬಾಕೆಯ ಹತ್ಯೆಯಾಗಿದೆ. ಆದರೆ, ಸದ್ಯಕ್ಕೆ ಇದು ಕೌಟುಂಬಿಕ ಕಾರಣವೆಂದು ಶಂಕಿಸಲಾಗಿದೆ.

Indian Americans Targeted; Are These Hate and Racial Crimes

ಇದೇ ಜೂನ್ ತಿಂಗಳಲ್ಲಿ 31 ವರ್ಷದ ಸತ್ನಾಮ್ ಸಿಂಗ್ ಎಂಬಾತನನ್ನು ನ್ಯೂಯಾರ್ಕ್‌ನ ಆತನ ಮನೆ ಬೀದಿಯಲ್ಲೇ ದುರುಳರು ಗುಂಡಿಟ್ಟು ಹತ್ಯೆಗೈದಿದ್ದರು.

ಮೇ ತಿಂಗಳಲ್ಲಿ ತೆಲಂಗಾಣ ಮೂಲದ 25 ವರ್ಷದ ಸಾಯಿ ಚರಣ್ ನಕ್ಕಾ ಎಂಬಾತನನ್ನು ಮೇರಿಲ್ಯಾಂಡ್‌ನಲ್ಲಿ ಗುಂಡಿಟ್ಟು ಸಾಯಿಸಲಾಗಿತ್ತು.

ಇತ್ತೀಚೆಗೆ ಸಂಭವಿಸಿದ ಕೊಲೆಗಳು ಇವು. ಆದರೆ, ಭಾರತೀಯರನ್ನು ಗುರಿಯಾಗಿಸಿ ಸಂಭವಿಸಿದ ದ್ವೇಷಾಪರಾಧ ಘಟನೆಗಳಂತೂ ಬಹಳ ಇವೆ. 2019ರಲ್ಲಿ ಏಷ್ಯನ್ನರ ವಿರುದ್ಧ ಸಂಭವಿಸಿದ ಹೇಟ್ ಕ್ರೈಮ್‌ಗಳ ಸಂಖ್ಯೆ 161 ಇದೆ. 2020ರಲ್ಲಿ ಈ ಸಂಖ್ಯೆ 279ಕ್ಕೆ ಏರಿದೆ.

ಭಾರತೀಯರನ್ನು ನಿಂದಿಸುವ ಘಟನೆಗಳಂತೂ ತೀರಾ ಸಾಮಾನ್ಯವಾಗಿ ಜರುಗುತ್ತವೆ. ನೀವು ಅಮೆರಿಕವನ್ನು ಹಾಳು ಮಾಡುತ್ತಿದ್ದೀರಿ. ಭಾರತಕ್ಕೆ ವಾಪಸ್ ಹೋಗಿ ಎಂದು ಟೆಕ್ಸಾಸ್ ನಗರದಲ್ಲಿ ಮೆಕ್ಸಿಕನ್ ಮೂಲದ ಮಹಿಳೆಯೊಬ್ಬಳು ಭಾರತದ ನಾಲ್ವರು ಹುಡುಗಿಯರನ್ನು ನಿಂದಿಸಿದ ಘಟನೆ ವೈರಲ್ ಆಗಿತ್ತು. ಕೃಷ್ಣನ್ ಜಯರಾಮನ್ ಎಂಬುವರನ್ನು ಕ್ಷುದ್ರ ಹಿಂದು ಎಂದು ನಿಂದಿಸಿದ ಘಟನೆಯೂ ವೈರಲ್ ಆಗಿತ್ತು.

ನ್ಯೂಯಾರ್ಕ್ ಮತ್ತಿತರ ಅಮೆರಿಕನ್ ನಗರಗಳಲ್ಲಿ ಮಹಾತ್ಮ ಗಾಂಧಿ ಪ್ರತಿಮೆಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದ ಘಟನೆಗಳೂ ಬೆಳಕಿಗೆ ಬಂದಿವೆ. ಹಾಗೆಯೇ, ಹಿಂದೂ ಸಂಪ್ರದಾಯದಂತೆ ಒಡವೆಗಳನ್ನು ಧರಿಸಿ ಹೊರಗೆ ಹೋಗಲು ಜನರು ಭಯಪಡುವಂತಾಗಿದೆ.

(ಒನ್ಇಂಡಿಯಾ ಸುದ್ದಿ)

English summary
Indian community living in US have become target for hate crimes and racial crimes. This can be seen in the numbers of hate crimes recently.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X