ಇಂಡಿಯಾ ಟುಡೇ ಎಕ್ಸಿಟ್ ಪೋಲ್: 'ಚೌಕೀದಾರ್ ಚೋರ್ ನಹೀ ಹೇ'
ಹದಿನೇಳನೇ ಲೋಕಸಭೆಗೆ ಮತದಾನ ಮುಗಿಯುತ್ತಿದ್ದಂತೆಯೇ ಬಹು ನಿರೀಕ್ಷಿತ ಚುನಾವಾಣೋತ್ತರ ಸಮೀಕ್ಷೆಗಳು ಹೊರಬಿದ್ದಿವೆ. ಒಂದೆರಡು ವಾಹಿನಿಗಳು ಎನ್ಡಿಎ ಮೈತ್ರಿಕೂಟ ಸರಳ ಬಹುಮತದ ಬಾಗಿಲಲ್ಲಿ ಎಡವಲಿದೆ ಎಂದರೆ, ಇನ್ನುಳಿದ ಸಮೀಕ್ಷೆಗಳೆಲ್ಲಾ 'ಫಿರ್ ಸೆ ಮೋದಿ' ಎಂದಿವೆ.
ಇಂಡಿಯಾ ಟುಡೇ- ಏಕ್ಸಿಸ್ ಮೈಇಂಡಿಯಾ ಜಂಟಿಯಾಗಿ ನಡೆಸಿದ ಸಮೀಕ್ಷೆ, ಎನ್ಡಿಎ ಮೈತ್ರಿಕೂಟ ಮುನ್ನೂರರ ಗಡಿ ದಾಟಲಿದೆ ಎಂದಿದೆ. ಕಳೆದ ಬಾರಿಗಿಂತಲೂ ಬಿಜೆಪಿ ಉತ್ತಮ ಸಾಧನೆ ಮಾಡಲಿದೆ ಎನ್ನುತ್ತದೆ ಈ ಸಮೀಕ್ಷೆಯ ಫಲಿತಾಂಶ.
ಕರ್ನಾಟಕ ಸೇರಿದಂತೆ ಹಿಂದಿ ಬೆಲ್ಟ್ ನಲ್ಲಿ ಉತ್ತಮ ಸಾಧನೆಯನ್ನು ಬಿಜೆಪಿ ಮಾಡಲಿದೆ ಎನ್ನುವ ಸಮೀಕ್ಷಾ ವರದಿಯಂತೆ, ದಕ್ಷಿಣ ಭಾರತದ ಇತರ ರಾಜ್ಯಗಳಲ್ಲಿ ಬಿಜೆಪಿಗೆ ಇನ್ನೂ ನೆಲೆಯಿಲ್ಲ.
ಸಂಖ್ಯಾಬಲದ ಆಧಾರದಲ್ಲಿ ಉತ್ತರಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಬಿಹಾರ, ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್, ಕರ್ನಾಟಕ ಮುಂತಾದ ರಾಜ್ಯಗಳಲ್ಲೂ 'ಮೋದಿ ಅಲೆ' ಇನ್ನೂ ಜೀವಂತವಾಗಿದೆ. ಒಟ್ಟಾರೆಯಾಗಿ ಸಮೀಕ್ಷೆಯ ಹೈಲೆಟ್ಸ್ ಇಂತಿದೆ:

ಕರ್ನಾಟಕ, ಮಹಾರಾಷ್ಟ್ರ
ಕರ್ನಾಟಕ
ಒಟ್ಟು ಸ್ಥಾನಗಳು : 28
ಬಿಜೆಪಿ: 21-25
ಕಾಂಗ್ರೆಸ್ : 3-6
ಇತರರು : 0-1
ಮಹಾರಾಷ್ಟ್ರ
ಒಟ್ಟು ಸ್ಥಾನಗಳು : 48
ಬಿಜೆಪಿ, ಶಿವಸೇನೆ : 38-42
ಕಾಂಗ್ರೆಸ್ : 06-10
ಇತರರು : 0-

ದೆಹಲಿ ಮತ್ತು ಪಶ್ಚಿಮ ಬಂಗಾಳ
ದೆಹಲಿ
ಒಟ್ಟು ಸ್ಥಾನಗಳು : 07
ಬಿಜೆಪಿ : 06-07
ಕಾಂಗ್ರೆಸ್ : 01-00
ಆಮ್ ಆದ್ಮಿ ಪಕ್ಷ : 0
ಪಶ್ಚಿಮ ಬಂಗಾಳ
ಒಟ್ಟು ಸ್ಥಾನ: 42
ಟಿಎಂಸಿ : 19-22
ಬಿಜೆಪಿ : 19-23
ಕಾಂಗ್ರೆಸ್ : 01-00
ಎಡಪಕ್ಷ/ಇತರರು : 0

ಬಿಹಾರ, ಮಧ್ಯಪ್ರದೇಶ
ಬಿಹಾರ
ಒಟ್ಟು ಸ್ಥಾನ: 40
ಎನ್ಡಿಎ ಮೈತ್ರಿಕೂಟ : 38-40
ಯುಪಿಎ ಮೈತ್ರಿಕೂಟ : 00-02
ಇತರರು : 0
ಮಧ್ಯಪ್ರದೇಶ
ಒಟ್ಟು ಸ್ಥಾನ: 29
ಎನ್ಡಿಎ ಮೈತ್ರಿಕೂಟ : 26-28
ಯುಪಿಎ ಮೈತ್ರಿಕೂಟ : 01-03
ಇತರರು : 0

ಉತ್ತರಪ್ರದೇಶ, ಗುಜರಾತ್
ಉತ್ತರಪ್ರದೇಶ
ಒಟ್ಟು ಸ್ಥಾನ: 80
ಎನ್ಡಿಎ ಮೈತ್ರಿಕೂಟ : 62-68
ಎಸ್ಪಿ-ಬಿಎಸ್ಪಿ : 10-16
ಕಾಂಗ್ರೆಸ್ : 1-2
ಇತರರು : 0
ಗುಜರಾತ್
ಒಟ್ಟು ಸ್ಥಾನ: 26
ಎನ್ಡಿಎ ಮೈತ್ರಿಕೂಟ : 25-26
ಕಾಂಗ್ರೆಸ್ : 0-1
ಇತರರು : 0

ಮೋದಿ ಚೋರ್ ನಹೀ ಹೇ
ರಾಜಸ್ಥಾನ
ಒಟ್ಟು ಸ್ಥಾನ: 25
ಎನ್ಡಿಎ ಮೈತ್ರಿಕೂಟ : 23-25
ಕಾಂಗ್ರೆಸ್ : 0-2
ಇತರರು : 0
ಒಟ್ಟಾರೆಯಾಗಿ
ಒಟ್ಟು ಸ್ಥಾನ: 542
ಎನ್ಡಿಎ ಮೈತ್ರಿಕೂಟ : 339-365
ಯುಪಿಎ ಮೈತ್ರಿಕೂಟ : 77-108
ಎಸ್ಪಿ, ಬಿಎಸ್ಪಿ : 10-16
ಇತರರು : 69-95












Click it and Unblock the Notifications