ಸ್ವಾತಂತ್ರ್ಯ ಹೋರಾಟದ ಆ ದಿನಗಳ ಸ್ಮ ರಿಸುತ್ತಾ..ಹೊಸದಿಕ್ಕಿನೆಡೆಗೆ ಹೆಜ್ಜೆ ಹಾಕೋಣ
ಸ್ವಾತಂತ್ರ್ಯೋತ್ಸವದ ಸಡಗರದ ಜತೆಜತೆಗೆ ನಾವು ಇತಿಹಾಸದಲ್ಲಿ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟ ಮತ್ತು ಪ್ರಾಣಾರ್ಪಣೆ ಮಾಡಿದವರನ್ನು ನೆನಪಿಸಿಕೊಳ್ಳಬೇಕಿದೆ. ಅವತ್ತು ಎಲ್ಲರೂ ಒಂದಾಗಿ ಬ್ರಿಟೀಷರ ವಿರುದ್ಧ ಹೋರಾಡಿದ್ದರ ಪರಿಣಾಮ ಸ್ವಾತಂತ್ರ್ಯ ಪಡೆಯುವಂತಾಯಿತು. ಸ್ವಾತಂತ್ರ್ಯಕ್ಕಾಗಿ ನಡೆದ ಹಲವು ಘಟನೆಗಳು ಇತಿಹಾಸದ ಗರ್ಭದಲ್ಲಿ ಹುದುಗಿ ಹೋಗಿದೆ. ನಾವು ವರ್ಷಕ್ಕೊಮ್ಮೆಯಾದರೂ ಅದನ್ನು ಮೆಲುಕು ಹಾಕುವ ಕೆಲಸ ಮಾಡಬೇಕಿದೆ. ಹಾಗೆಯೇ ನಮಗೆ ದೊರೆತ ಸ್ವಾತಂತ್ರ್ಯವನ್ನು ಅರ್ಥಪೂರ್ಣಗೊಳಿಸುವುದರತ್ತ ಹೆಜ್ಜೆಯಿಡಬೇಕಾಗಿದೆ.
1947ನೇ ಆಗಸ್ಟ್ 15 ರಂದು ಭಾರದ ದೇಶ ಸ್ವಾತಂತ್ರ್ಯ ಪಡೆಯಿತು ಎನ್ನುವುದು ನಮಗೆಲ್ಲರಿಗೂ ಗೊತ್ತಿರುವ ವಿಚಾರವೇ.... ಅಲ್ಲಿ ತನಕ ಬ್ರಿಟೀಷರ ಹಿಡಿತದಲ್ಲಿದ್ದ ನಮಗೆ ಮೊದಲ ಬಾರಿಗೆ ದಾಸ್ಯದ ಬಿಡುಗಡೆ ದೊರೆತಿತ್ತು. 1947 ಆಗಸ್ಟ್ 14ರ ಮಧ್ಯರಾತ್ರಿ ಜವಾಹರ್ ಲಾಲ್ ನೆಹರೂ ಅವರು ಐತಿಹಾಸಿಕ ಭಾಷಣದಲ್ಲಿ ಮಧ್ಯರಾತ್ರಿಯ ಗಂಟೆ ಬಾರಿಸುತ್ತಲೇ ಜಗತ್ತು ನಿದ್ರಿಸುತ್ತಿರುವ ವೇಳೆಯಲ್ಲಿ ಭಾರತ ಎಚ್ಚೆತ್ತು ಜೀವ ತಳೆಯುತ್ತದೆ. ಸ್ವತಂತ್ರವಾಗುತ್ತದೆ.

ಇತಿಹಾಸದಲ್ಲಿ ಎಂದಾದರೂ ಒಮ್ಮೆ ಬರುವ ಮಹತ್ವದ ಘಳಿಗೆಯೊಂದು ಅಂತಹ ಘಳಿಗೆಯಲ್ಲಿ ಹಳತಿನಿಂದ ಹೊಸತಿಗೆ ನಾವು ಪಾದಾರ್ಪಣೆ ಮಾಡುತ್ತೇವೆ ಒಂದು ಯುಗ ಮುಕ್ತಾಯವಾಗುತ್ತದೆ ದೀರ್ಘಕಾಲದಿಂದ ಅದುಮಿ ಹಿಡಿಯಲ್ಪಟ್ಟ ರಾಷ್ಟçವೊಂದರ ಚೇತನ ನುಡಿಯ ತೊಡಗುತ್ತದೆ ಎಂದು ಹೇಳಿದ್ದರು.
ಈ ಮಾತು ಇಂದಿಗೂ ಅನುರಣಿಸುತ್ತಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಹೋರಾಟಗಳು ನಡೆದವು ಮಹಾತ್ಮ ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟದ ಕೊನೆಯಲ್ಲಿ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ, ಮಾಡು ಇಲ್ಲವೇ ಮಡಿಯಿರಿ ಎಂಬ ಕರೆ ನೀಡಿದ್ದು ಇತಿಹಾಸ ಸೃಷ್ಟಿಸಿತು. ಸ್ವಾತಂತ್ರ್ಯ ನಂತರ ನಾವು ಹತ್ತು ಹಲವು ಮೈಲಿಗಲ್ಲುಗಳನ್ನು ನೆಡುತ್ತಾ ಮುಂದೆ ಸಾಗಿದ್ದೇವೆ. ಆದರೆ ಸ್ವಾತಂತ್ರ್ಯ ಕಳೆದುಕೊಂಡು ಬ್ರಿಟೀಷರು ಅಧಿಪತ್ಯ ಸಾಧಿಸಲು ನಾವೇ ಕಾರಣ ಎನ್ನುವುದು ಅಷ್ಟೇ ಸತ್ಯ ಇದಕ್ಕೆ ನಮ್ಮೊಳಗಿನ ಒಳಜಗಳವೂ ಕಾರಣ ಎನ್ನುವುದು ಇತಿಹಾಸದ ಸತ್ಯವಾಗಿ ಉಳಿದಿದೆ.
ವ್ಯಾಪಾರಕ್ಕೆ ಬಂದವರು ಆಡಳಿತಗಾರರಾದರು
ಭಾರತ ದೇಶ 18ನೇ ಶತಮಾನದ ಪ್ರಾರಂಭದಲ್ಲಿ ರಾಜ ಮಹಾರಾಜರ ನವಾಬರ ಒಳಜಗಳದಿಂದ ಛಿದ್ರ ಛಿದ್ರವಾಗಿ ಯುದ್ಧಗಳು ನಡೆಯತ್ತಲೇ ಇದ್ದವು. ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿಯವರು ಆ ವೇಳೆಗೆ ಸರಿಯಾಗಿ ವ್ಯಾಪಾರಕ್ಕಾಗಿ ಭಾರತಕ್ಕೆ ಬಂದರು. ಇಲ್ಲಿನ ಪರಿಸ್ಥಿತಿಯನ್ನು ಉಪಯೋಗಿಸಿಕೊಂಡು ದೇಶದ ಆಡಳಿತವನ್ನು ವ್ಯಾಪಾರಕ್ಕಾಗಿ ತಮ್ಮ ವಶಕ್ಕೆ ತೆಗೆದುಕೊಳ್ಳುವುದರಲ್ಲಿ ಯಶಸ್ವಿಯಾದರು. ಅಷ್ಟೇ ಅಲ್ಲದೆ ಕ್ರಮೇಣ ಈ ರಾಷ್ಟ್ರದ ಆಡಳಿತಗಾರರಾದರು ಎನ್ನುವುದನ್ನು ಒಂದೇ ಮಾತಿನಲ್ಲಿ ಹೇಳಿ ಮುಗಿಸಿಬಿಡಬಹುದು.
ಬ್ರಿಟಿಷರು ತಮ್ಮ ರಾಜ್ಯ ವಿಸ್ತರಣಾ ನೀತಿಯಿಂದ ನಮ್ಮದೇ ರಾಜರುಗಳನ್ನು ಮುಂದಿಟ್ಟುಕೊಂಡೇ ರಾಜ್ಯವನ್ನು ಪಡೆಯುವಲ್ಲಿ ಯಶಸ್ವಿಯಾದರು. ಈ ವೇಳೆ ಕೆಲವು ಭಾರತೀಯ ರಾಜರುಗಳು ವಿರೋಧಿಸಿದರೆ ಮತ್ತೆ ಕೆಲವರು ಕೈಜೋಡಿಸಿದರು ಇದರ ಪರಿಣಾಮದಿಂದಾಗಿ ದೇಶವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾದರು. ನಂತರ ಏನೇನು ನಡೆಯಿತು? ಅದರ ವಿರುದ್ಧ ಭಾರತೀಯರು ಹೇಗೆ ದಂಗೆ ಎದ್ದು ಹೋರಾಟ ನಡೆಸಿದರು ಎಂಬುದು ಇತಿಹಾಸದ ಪುಟಗಳಲ್ಲಿ ದಾಖಲೆಯಾಗಿದೆ.

ಹೋರಾಟದ ದಿಕ್ಕು ಬದಲಿಸಿದ ಗಾಂಧಿ
1857ರಲ್ಲಿ ಬ್ರಿಟಿಷರ ವಿರುದ್ಧ ಮಹಾ ಪ್ರತಿರೋಧದ ಸಿಪಾಯಿ ದಂಗೆಯಿಂದ ಶುರುವಾಗಿ ಸ್ವಾತಂತ್ರ್ಯ ಹೋರಾಟ ವಿವಿಧ ಆಯಾಮಗಳಲ್ಲಿ ನಡೆದಿದೆ. ಬಿಪಿನ್ ಚಂದ್ರಪಾಲ್, ಅರವಿಂದ್ ಘೋಷ್, ಲಾಲ ಲಜಪತ್ ರಾಯ್, ಭಗತ್ಸಿಂಗ್, ಸಾಹೋರ್ಕರ್ ಮುಂತಾದ ಅನೇಕ ನಾಯಕರುಗಳು ಬ್ರಿಟೀಷರ ವಿರುದ್ಧ ಕ್ರಾಂತಿ ಮಾರ್ಗ ಅನುಸರಿಸಿದರು. ಈ ವೇಳೆಗೆ ಸರಿಯಾಗಿ ದಕ್ಷಿಣ ಆಫ್ರಿಕಾದಲ್ಲಿ ವಕೀಲಿ ವೃತ್ತಿ ಮಾಡುತ್ತಿದ್ದ ಮೋಹನದಾಸ ಕರಮಚಂದ ಗಾಂಧಿಯವರು ಭಾರತಕ್ಕೆ ಹಿಂದಿರುಗಿ ತಮ್ಮ ಅಹಿಂಸಾತ್ಮಕ ಚಳವಳಿ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಆಯಾಮ ನೀಡಿದರು.
ಕ್ವಿಟ್ ಇಂಡಿಯಾ, ಅಸಹಕಾರ ಚಳವಳಿ ಹೀಗೆ ಅಹಿಂಸಾತ್ಮಕ ಚಳುವಳಿಗಳನ್ನು ನಡೆಸಿದರು. ಅಂತಹ ಹೋರಾಟಗಳು ಹೆಚ್ಚು ಹೆಚ್ಚು ನಡೆದವು ಈ ಹೋರಾಟಕ್ಕೆ ಮಣಿದ ಬ್ರಿಟೀಷರು ಸ್ವಾತಂತ್ರ್ಯ ನೀಡಿ ಹೊರಟು ಹೋದರು. ಸ್ವಾತಂತ್ರ್ಯ ನಂತರದ ಭಾರತಕ್ಕೆ ಇನ್ನು ಕೂಡ ಹಲವು ವಿಚಾರದಲ್ಲಿ ಸ್ವಾತಂತ್ರ್ಯ ಸಿಕ್ಕಿಲ್ಲ ಎನ್ನುವುದನ್ನು ನಾವು ಒಪ್ಪಿಕೊಳ್ಳಬೇಕಾಗಿದೆ. ಇವತ್ತು ಹಲವು ರೀತಿಯಲ್ಲಿ ನಮ್ಮ ಸ್ವಾತಂತ್ರ್ಯ ಹರಣದ ಕೆಲಸಗಳು ನಡೆಯುತ್ತಿವೆ. ಶ್ರೀಮಂತರು ಶ್ರೀಮಂತರಾಗಿ ಮೆರೆಯುತ್ತಿದ್ದರೆ, ಬಡವ ಇನ್ನೂ ಹೊತ್ತಿನ ಕೂಳಿಗೆ ಹೋರಾಟ ಮಾಡುತ್ತಿದ್ದಾನೆ.
ಸ್ವಾತಂತ್ರ್ಯ ದಿನಾಚರಣೆ ಅರ್ಥಪೂರ್ಣವಾಗಲಿ
ಬಡವ ಬಲ್ಲಿದ, ಮೇಲ್ಜಾತಿ, ಕೀಳು ಜಾತಿ, ಹೆಣ್ಣು ಗಂಡು ಹೀಗೆ ಹತ್ತಾರು ಅಂತರಗಳು ನಮ್ಮ ಸುತ್ತಲೂ ಇವೆ. ಜತೆಗೆ ಭ್ರಷ್ಟಾಚಾರ, ಅಧಿಕಾರದ ಹಪಾಹಪಿಗಳು, ಕುಟುಂಬ ರಾಜಕಾರಣಗಳು, ವರದಕ್ಷಿಣೆ ಪಿಡುಗು, ಲೈಂಗಿಕ ದೌರ್ಜನ್ಯ, ಮಾನವ ಸಾಗಾಣಿಕೆ, ನಿರುದ್ಯೋಗ ಸಮಸ್ಯೆ, ರೈತರ ಮೇಲೆ ನಿರ್ಲಕ್ಷ್ಯ ಹೀಗೆ ಹತ್ತಾರು ಸಮಸ್ಯೆಗಳಿಂದ ದೇಶ ಬಳಲುತ್ತಿದೆ. ಇದೆಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕೆಲಸ ಸ್ವಾ ತಂತ್ರ್ಯ ನಂತರದ ಈ ಕಾಲಘಟ್ಟದಲ್ಲಿ ಆಗಬೇಕಿದೆ. ನಮ್ಮ ದೇಶದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿದಾಗ ನಾವು ಆಚರಿಸುವ ಸ್ವಾತಂತ್ರ್ಯ ದಿನಾಚರಣೆ ಅರ್ಥಪೂರ್ಣವಾಗಲಿದೆ.
ಇವತ್ತು ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ಧೂರಿಯಾಗಿ ಸಂಭ್ರಮದಿಂದ ಆಚರಿಸುವುದರ ಹಿಂದೆ ಅಷ್ಟೇ ಅಲ್ಲ ನಾವು ನೆಮ್ಮದಿಯಾಗಿ, ಸ್ವತಂತ್ರರಾಗಿ ಬದುಕುತ್ತಿದ್ದೇವೆ ಎನ್ನುವುದಾದರೆ ಈಗಿನ ನಮ್ಮ ಈ ಬದುಕಿಗಾಗಿ ಅಂದು ಹೋರಾಡಿ, ತಮ್ಮ ಜೀವನವನ್ನೇ ತ್ಯಾಗ ಮಾಡಿದ, ತ್ಯಾಗಿಗಳನ್ನು ನಾವು ಸ್ಮರಿಸಲೇ ಬೇಕು. ಜತೆಗೆ ಬ್ರಿಟೀಷರ ಕಪಿ ಮುಷ್ಠಿಯಿಂದ ದೇಶವನ್ನು ಮುಕ್ತಗೊಳಿಸಿ, ಹರಿದು ಹಂಚಿಹೋಗಿದ್ದ ರಾಷ್ಟ್ರವನ್ನು ಅಖಂಡ ಭಾರತವನ್ನಾಗಿ ಮಾಡುವಲ್ಲಿ ಶ್ರಮಿಸಿದ ಅವತ್ತಿನ ಹಿರಿಯ ಎಲ್ಲಾ ನಾಯಕರುಗಳಿಗೆ ಸಲಾಮ್ ಹೊಡೆಯಲೇ ಬೇಕು.
ದೇಶದಲ್ಲಿ ಆಗಬೇಕಾಗಿದ್ದು ಬೇಕಾದಷ್ಟಿದೆ
ಇವತ್ತು ಸ್ವಾತಂತ್ರ್ಯ ಭಾರತ ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರೂ ಎಲ್ಲವೂ ಅಭಿವೃದ್ಧಿ ದಿಕ್ಕಿನೆಡೆಗೆ ಸಾಗಿದೆಯಾ? ಸಾಗಿಲ್ಲವಾದರೆ ಅದಕ್ಕೆ ಕಾರಣಗಳೇನು ಎಂಬುದರ ಬಗ್ಗೆಯೂ ಚಿಂತೆ ಮಾಡಬೇಕಾದ ಕಾಲ ಬಂದಿದೆ. ಯುವಕರಿಗೆ ಉದ್ಯೋಗ... ಬೆಳೆಬೆಳೆದ ರೈತನಿಗೆ ಉತ್ತಮ ದರ... ಶ್ರಮಜೀವಿಗಳಿಗೆ ತಕ್ಕಂತೆ ಫಲ.. ಹೆಣ್ಣು ಮಕ್ಕಳು ನಿರ್ಭಯವಾಗಿ ಬದುಕಬೇಕಾದ ವಾತಾವರಣ.. ಅಪರಾಧ ಕೃತ್ಯಗಳಿಗೆ ಕಡಿವಾಣ... ಭ್ರಷ್ಟಚಾರ ನಿಗ್ರಹ.. ಹೀಗೆ ಒಂದೇ ಎರಡೇ ಆಗಬೇಕಾಗಿದ್ದು ಬಹಳಷ್ಟಿದೆ. ಇದೆಲ್ಲವೂ ಸರಿಹೋದ ದಿನ ಸ್ವಾತಂತ್ರ್ಯ ದಿನಾಚರಣೆಗೆ ಅರ್ಥ ಬರುತ್ತದೆ. ಇಲ್ಲದೆ ಹೋದರೆ ಆಚರಣೆಗಷ್ಟೆ ಸೀಮಿತವಾಗುತ್ತದೆ. ಹಾಗಾಗದಿರಲಿ ಎಂಬುದೇ ನಮ್ಮ ಆಶಯ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications