ಜನ್ಮಾಷ್ಟಮಿ ವಿಶೇಷ: ಕೃಷ್ಣವೇಷಧಾರಿಗಳ ಅಂದ ಚೆಂದ ನೋಡಿ
ಜಗದೇಕ ಪಿತ, ಮಾಧವ, ಮುಕುಂದ, ಕೇಶವ ಹೀಗಾಗಿ ನೂರಾರು ನಾಮಗಳಿಂದ ಕರೆಸಿಕೊಳ್ಳುವ ನವನೀತ ಚೋರ ಶ್ರೀಕೃಷ್ಣನ ಹುಟ್ಟುಹಬ್ಬದ ಸಂಭ್ರಮ ಇಂದು ಕೂಡಾ ದೇಶದೆಲ್ಲೆಡೆ ಮನೆ ಮಾಡಿದೆ. ದೇಶ, ಭಾಷೆ, ಪ್ರಾಂತ್ಯ, ಗಡಿ ಮೀರಿದ ಭಕ್ತಿ ಭಾವದಿಂದ ಕೃಷ್ಣನ ಭಜನೆ ಮಾಡುತ್ತಿದ್ದಾರೆ.
ಸಾವಿರಾರು ಜನ ತಮ್ಮ ಪುಟ್ಟ ಪುಟ್ಟ ಮಕ್ಕಳಿಗೆ ಕೃಷ್ಣನ ವೇಷ ತೊಡಿಸಿ ಮುದ್ದು ಕೃಷ್ಣನನ್ನು ಜತೆಗೆ ಪುಟ್ಟ ರಾಧೆಯನ್ನು ಮನೆಯಲ್ಲಿಯೇ ನೋಡಿ ಖುಷಿಪಟ್ಟಿದ್ದಾರೆ. ಜಗವೆಂಬ ನಾಟಕ ರಂಗದ ಸೂತ್ರಧಾರನಾದ ಮಾಧವನನ್ನು ಮನಸಾರೇ ಹಾಡಿ ಹೊಗಳಿ, ಪೂಜಿಸಿ ಕೃಷ್ಣ ಜನ್ಮಾಷ್ಟಮಿ ಆಚರಿಸಿದ್ದಾರೆ.
ಉಡುಪಿ, ಮಥುರಾ, ಪಂಡರಾಪುರ, ಗುರುವಾಯೂರು, ದ್ವಾರಕಾ ಸೇರಿದಂತೆ ಅನೇಕ ಕಡೆಗಳಲ್ಲಿ ಕೃಷ್ಣ ದೇಗುಲಗಳು ಸಂಭ್ರಮ, ಸಡಗರ ಮನೆ ಮಾಡಿದೆ. ಮಥುರಾ ನಗರದ್ದಲ್ಲಂತೂ ಹಿಂದೂ ಮುಸ್ಲಿಮರು ಕಲೆತು ಒಟ್ಟಿಗೆ ಕೃಷ್ಣನ ಸೇವೆಗೆ ನಿಲ್ಲುತ್ತಾರೆ, ಕರ್ನಾಟಕದ ವಿವಿಧೆಡೆ ಮುಸ್ಲಿಂ ಬಾಂಧವರ ಮಕ್ಕಳು ಕೂಡಾ ನವನೀತ ಚೋರ ಕೃಷ್ಣನ ವೇಷ ಧರಿಸಿ ಈ ದಿನ ಸಂಭ್ರಮಿಸುತ್ತಾರೆ
ಕೃಷ್ಣ ಎಂದರೆ ಕಷ್ಟ ಒಂದಿಷ್ಟಿಲ್ಲ ಎನ್ನುತ್ತಾ ದೇಶದೆಲ್ಲೆಡೆ ಮುರಾರಿಯ ಅಲೆಯಲ್ಲಿ ಎಲ್ಲರೂ ಮಿಂದೆದ್ದಿದಾರೆ.ಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆಯ ಕೆಲ ಚಿತ್ರಗಳು ಇಲ್ಲಿವೆ ನೋಡಿ ಅನಂದಿಸಿ... ಚಿತ್ರಗಳ ಕೃಪೆ: ಪಿಟಿಐ

ಶ್ರೀಕೃಷ್ಣನ ಕಾಣಲು ಹಾತೊರೆದ ಭಕ್ತ ಸಮೂಹ
ಮಥುರಾ: ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಶನಿವಾರದಿಂದಲೇ ಭಕ್ತಾದಿಗಳು ಕೃಷ್ಣದೇಗುಲಕ್ಕೆ ಹೆಚ್ಚಿನ ಸಂಖ್ಯೆಯಿಂದ ಬರುತ್ತಿದ್ದಾರೆ. ಕಳೆದ ಮೂರು ದಿನಗಳಲ್ಲಿ ಇಲ್ಲಿ ಕೃಷ್ಣ ಭಜನೆ ಮುಗಿಲು ಮುಟ್ಟಿದೆ.

ಜಮ್ಮುವಿನಲ್ಲೂ ಕೃಷ್ಣ ಜನ್ಮಾಷ್ಟಮಿ
ಜಮ್ಮು: ಜನ್ಮಾಷ್ಟಮಿ ಹಬ್ಬದ ಅಂಗವಾಗಿ ಭಕ್ತಾದಿಗಳು ಮೆರವಣಿಗೆ ಮೂಲಕ ಕೃಷ್ಣನನ್ನು ಹೊತ್ತು ತಿರುಗಿ ಸಂಭ್ರಮಿಸಿದರು.

ಆಮೃತಸರ್ ನಲ್ಲಿ ಬಾಲ ಕೃಷ್ಣರ ಜತೆ ಯೋಧ
ಆಮೃತಸರ್ ನಲ್ಲಿ ಬಾಲ ಕೃಷ್ಣರ ಜತೆ ಸೆಲ್ಪಿ ತೆಗೆದುಕೊಳ್ಳುತ್ತಿರುವ ಗಡಿ ಭದ್ರತಾ ಪಡೆಯ ಯೋಧ.

ಕೋಲ್ಕತ್ತಾದಲ್ಲಿ ಜನ್ಮಾಷ್ಟಮಿ ಸಂಭ್ರಮ
ಕೋಲ್ಕತ್ತಾ : ಶ್ರೀಕೃಷ್ಣನ ವೇಷ ಧರಿಸಿ, ಫ್ಯಾನ್ಸಿ ಡ್ರೆಸ್ ಸ್ಪರ್ಧೆಗೆ ಸಿದ್ಧರಾಗಿರುವ ಚಿಣ್ಣರು.

ಕೃಷ್ಣರನ್ನು ಸಿದ್ಧಪಡಿಸುತ್ತಿರುವ ಅಮ್ಮಂದಿರು
ಬೆಂಗಳೂರು: ದೇಶದೆಲ್ಲೆಡೆ ಜನ್ಮಾಷ್ಟಮಿ ಅಂಗವಾಗಿ ಬಾಲ ಕೃಷ್ಣ ವೇಷಧಾರಿಗಳ ಸ್ಪರ್ಧೆ, ಸಂಭ್ರಮ ಕಂಡು ಬಂದಿತು.

ಭೋಪಾಲ್ ನಲ್ಲಿ ಸಿಎಂ ಶಿವರಾಜ್ ಸಿಂಗ್
ಭೋಪಾಲ್ : ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಅವರು ಶ್ರೀಕೃಷ್ಣ ಮೂರ್ತಿಯನ್ನು ಹೊತ್ತು ಮೆರವಣಿಗೆ ಬಂದರು.

ಜೈಪುರದಲ್ಲಿ ನಡೆದ ಕಾರ್ಯಕ್ರಮ
ಜೈಪುರದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕೃಷ್ಣ, ರಾಧೆ ವೇಷಧಾರಿಗಳು.

ಚೆನ್ನೈನಲ್ಲಿ ಚಿಣ್ಣರ ಸಂಭ್ರಮ
ಕೃಷ್ಣ, ಯಾದವರ ವೇಷ ಧರಿಸಿದ ಮಕ್ಕಳು ವಿವಿಧ ಆಟೋಟಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ಗುವಹಾಟಿಯಲ್ಲಿ ಕೃಷ್ಣನಿಗೆ ಅಭಿಷೇಕ
ಗುವಹಾಟಿಯಲ್ಲಿ ಶ್ರೀಕೃಷ್ಣನಿಗೆ ಪಂಚಾಮೃತ ಅಭಿಷೇಕ ಮಾಡುತ್ತಿರುವ ಭಕ್ತರು.

ಪಾಟ್ನದಲ್ಲಿ ಇಸ್ಕಾನ್ ನಿಂದ ಕೃಷ್ಣಪೂಜೆ
ಪಾಟ್ನದಲ್ಲಿ ಇಸ್ಕಾನ್ ನಿಂದ ಕೃಷ್ಣನಿಗೆ ವಿಶೇಷ ಪೂಜೆ, ಆರತಿ, ಭಜನೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ?












Click it and Unblock the Notifications