ಕೊರೊನಾ: ಬಾಲ್ಯ ಶಿಕ್ಷಣದ ಮೇಲೆ ದೂರಗಾಮಿ ಪರಿಣಾಮ!
ಕೊರೊನಾ ಹಾವಳಿಯಿಂದ ಶಾಲೆಗಳು ಆರಂಭವಾಗದೇ ಸುಮಾರು ಹದಿನಾರು ತಿಂಗಳಾಗುತ್ತಾ ಬಂತು. ಇನ್ನು ಮುಂದೆಯಾದರೂ ಆಫ್ಲೈನ್ ತರಗತಿಗಳು ಆರಂಭವಾಗುತ್ತಾ ಎನ್ನುವುದರ ಬಗ್ಗೆ ಯಾವುದೇ ಸ್ಪಷ್ಟನೆಯಿಲ್ಲ.
ಐದರಿಂದ ಏಳನೇ ವಯಸ್ಸಿನ ಮಕ್ಕಳು ಇನ್ನೂ ಶಾಲೆಯ ಬಾಗಿಲನ್ನು ತುಳಿದಿಲ್ಲ. ಇದು, ದೂರಗಾಮಿಯಾಗಿ ಮಕ್ಕಳ ಭವಿಷ್ಯದ ಮೇಲೆ ಯಾವ ರೀತಿ ತೊಂದರೆ ತಂದೊಡ್ಡಲಿದೆ ಎನ್ನುವುದರ ಬಗ್ಗೆ ಮನೋವಿಜ್ಞಾನಿ ಡಾ.ಆಚಾರ್ಯ ಶ್ರೀಧರ ಅವರು ವಿವರಣೆಯನ್ನು ನೀಡಿದ್ದಾರೆ.
ಹದಿನೆಂಟು ಇಪ್ಪತ್ತು ತಿಂಗಳ ಉದಾಹರಣೆಯನ್ನು ತೆಗೆದುಕೊಂಡಾಗ, ಬಾಲ್ಯ ಶಿಕ್ಷಣದ ಮೇಲೆ ಈಗಿನ ವ್ಯವಸ್ಥೆ ದೀರ್ಘಾವಧಿ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಡಾ.ಶ್ರೀಧರ ಅಭಿಪ್ರಾಯ ಪಟ್ಟಿದ್ದಾರೆ.
ಮಕ್ಕಳು ಈಗಿನ ಹೊಸ ತಂತ್ರಜ್ಞಾನಕ್ಕೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಮಕ್ಕಳಿಗೆ ಹೊಸ ತಂತ್ರಜ್ಞಾನವನ್ನು ನೀಡಲು ಶಕ್ತರಾಗಿರುವ ಪೋಷಕರು ಮತ್ತು ನೀಡಲು ಸಾಧ್ಯವಿಲ್ಲದ ಪೋಷಕರು ಇರುತ್ತಾರೆ. ಸ್ಲೈಡಿನಲ್ಲಿ ಮುಂದುವರಿಸಲಾಗಿದೆ:

ಹೊಸ ತಂತ್ರಜ್ಞಾನವನ್ನು ಸರಾಗವಾಗಿ ಅರ್ಥಮಾಡಿಕೊಳ್ಳುವ ಒಂದು ಗುಂಪು
ಹೊಸ ತಂತ್ರಜ್ಞಾನವನ್ನು ಸರಾಗವಾಗಿ ಅರ್ಥಮಾಡಿಕೊಳ್ಳುವ ಒಂದು ಗುಂಪು, ಇನ್ನೊಂದು, ಇದನ್ನು ಅರ್ಥ ಮಾಡಿಕೊಳ್ಳಲು ಕಷ್ಟ ಪಡುವ ಇನ್ನೊಂದು ಗುಂಪಿನ ಮಕ್ಕಳು ಇರುವುದನ್ನು ನಾವು ನೋಡಬಹುದು. ಇನ್ನೊಂದು, ಮಕ್ಕಳು ಮತ್ತು ಶಿಕ್ಷಕರ ನಡುವಿನ ಮುಖಾಮುಖಿ ಭೇಟಿ ಇಲ್ಲ, ಇದು ಕೂಡಾ ಒಂದು ಸಮಸ್ಯೆ ಎಂದು ಡಾ. ಆಚಾರ್ಯ ಶ್ರೀಧರ ಅಭಿಪ್ರಾಯ ಪಟ್ಟಿದ್ದಾರೆ.

ಒನ್ ಇಂಡಿಯಾ ಜೊತೆಗಿನ ಸಂವಾದದಲ್ಲಿ ಡಾ. ಆಚಾರ್ಯ ಶ್ರೀಧರ
ಇದು ಮಕ್ಕಳಿಗೆ ಹೇಗೆ ದೂರಗಾಮಿ ಪರಿಣಾಮ ಬೀರುತ್ತೋ, ಅಷ್ಟೇ ಶಿಕ್ಷಕರ ವ್ಯಕ್ತಿತ್ವದ ಮೇಲೂ ಪರಿಣಾಮ ಬೀರುತ್ತೆ. ಅವರ ಕೌಶಲ್ಯಕ್ಕೂ ಇಂದು ಚಾಲೆಂಜ್ ಆಗಿರುತ್ತದೆ. ಮಕ್ಕಳು ಮೊದಮೊದಲು ಶಾಲೆಗೆ ಹೋಗುವುದು ಯಾವ ಕಾರಣಕ್ಕಾಗಿ. ಓದುಗಿಂತ ಹೆಚ್ಚಾಗಿ, ಹೊಸಹೊಸ ಫ್ರೆಂಡ್ಸ್ ಸಿಗುತ್ತಾರೆ, ಇನ್ನೊಬ್ಬರ ಜೊತೆ ಬೆರೆಯಬಹುದು ಎನ್ನುವ ಕಾರಣಕ್ಕಾಗಿ ಎಂದು ಡಾ.ಶ್ರೀಧರ ಹೇಳಿದ್ದಾರೆ.

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಎನ್ನುವ ಮಾತು ನಿಜವಾಗಬಹುದು
ಒನ್ ಇಂಡಿಯಾ ಕನ್ನಡ ಜೊತೆಗಿನ ಸಂವಾದದಲ್ಲಿ ಮಾತನಾಡುತ್ತಿದ್ದ ಡಾ.ಶ್ರೀಧರ, ಮೊದಲ ದಿನದ ಅನುಭವವನ್ನು ಹೇಳು ಎಂದಾಗ ಮಕ್ಕಳು, ಹೊಸ ಫ್ರೆಂಡ್ಸ್, ಶಾಲೆಯ ವಾತಾವರಣದ ಬಗ್ಗೆ ಹೇಳುತ್ತದೆಯೇ ಹೊರತು, ಏನು ಕಲಿತೆ ಎಂದು ಹೇಳುವುದು ಬಹಳ ಕಮ್ಮಿ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಎನ್ನುವ ಗಾದೆಯ ಮಾತು ನಿಜವಾಗಬಹುದು ಎಂದು ಡಾ.ಶ್ರೀಧರ ಅಭಿಪ್ರಾಯ ಪಟ್ಟಿದ್ದಾರೆ.

ಬಾಲ್ಯದ ದಿನಗಳಲ್ಲಿ ನಾವು ಗಟ್ಟಿ ಮಾಡಿಕೊಂಡಂತಹ ಕೆಲವೊಂದು ಭಾವನೆಗಳು
ಬಾಲ್ಯದ ದಿನಗಳಲ್ಲಿ ನಾವು ಗಟ್ಟಿ ಮಾಡಿಕೊಂಡಂತಹ ಕೆಲವೊಂದು ಭಾವನೆಗಳು ನಮ್ಮ ಉಸಿರಿನ ಕೊನೆಯ ತನಕ ನಮ್ಮ ಜೊತೆಗಿರುತ್ತೆ. ದೊಡ್ಡ ಕಪ್ಪು ಹಲಗೆಯ ಮೇಲೆ ಶಿಕ್ಷಣ ಕಲಿಯುತ್ತಿದ್ದ ಮಕ್ಕಳು ಈಗ ಮೊಬೈಲ್ ನಲ್ಲಿ ಪಾಠ ಕೇಳುತ್ತಿವೆ. ಇವೆಲ್ಲಾ ಕಾರಣಗಳು, ಬಾಲ್ಯ ಶಿಕ್ಷಣವನ್ನು ಮಕ್ಕಳು ಪಡೆದ ರೀತಿಯಿಂದಾಗಿ ದೂರಗಾಮಿ ಪರಿಣಾಮ ಬೀರುವ ಸಾಧ್ಯತೆಯಿಲ್ಲದಿಲ್ಲ ಎಂದು ಡಾ. ಆಚಾರ್ಯ ಶ್ರೀಧರ ಅವರು ಸಂವಾದದಲ್ಲಿ ತಮ್ಮ ಅನುಭವದ ಮಾತನ್ನು ಹಂಚಿಕೊಂಡಿದ್ದಾರೆ.












Click it and Unblock the Notifications