ವಿಶ್ವದ ಶ್ರೇಷ್ಠ ಕ್ರೀಡಾಪಟುಗಳ ಜೀವನವನ್ನೇ ಬದಲಿಸಿದ 'ಯೋಗ'

ಪ್ರತಿ ವರ್ಷ ಜೂನ್ 21 ರಂದು ಇಡೀ ಪ್ರಪಂಚದಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಗುತ್ತದೆ. ಯೋಗದ ಪ್ರಾಚೀನ ಭಾರತೀಯ ಅಭ್ಯಾಸ ಮತ್ತು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಯೋಗಕ್ಷೇಮದ ಮೇಲೆ ಅದರ ಆಳವಾದ ಪ್ರಭಾವವನ್ನು ತಿಳಿಸುತ್ತದೆ.

ಯೋಗ ಎಂಬ ಪದವು ಸಂಸ್ಕೃತ ಪದ "ಯುಜ್" ನಿಂದ ಬಂದಿದೆ, ಇದರರ್ಥ "ಸೇರಲು" ಅಥವಾ "ಒಗ್ಗೂಡಿಸಲು", ಮತ್ತು ಮನಸ್ಸು, ದೇಹ ಮತ್ತು ಆತ್ಮಕ್ಕೆ ಸಾಮರಸ್ಯವನ್ನು ತರುವ ತತ್ವಶಾಸ್ತ್ರದ ಸಂಕೇತಿಸುತ್ತದೆ. ಉಸಿರಾಟದ ವ್ಯಾಯಾಮಗಳು, ಧ್ಯಾನ ಮತ್ತು ನೈತಿಕ ತತ್ವಗಳನ್ನು ಸಂಯೋಜಿಸುತ್ತದೆ. ಈಗ ವಿಶ್ವದಲ್ಲೇ ಯೋಗ ಪಸರಿಸಿದೆ. ಈ ಮೂಲಕ ಮನುಷ್ಯರು ತಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಲು ಇದು ಸಹಾಯಕ.

How Yoga Became a Game-Changer for These 3 Professional Athletes

ಯೋಗ ಮಾಡುವುದರಿಂದ ದೈಹಿಕ ಸಾಮರ್ಥ್ಯ ವರ್ಧನೆ, ಒತ್ತಡದಿಂದ ಮುಕ್ತಿ ಮತ್ತು ವಿಶ್ರಾಂತಿಗೆ ಯೋಗ ಸಹಾಯ ಮಾಡುತ್ತದೆ. ಸ್ನಾಯು ಬಲವನ್ನು ಸುಧಾರಿಸಿ, ರಕ್ತ ಪರಿಚಲನೆ ಉತ್ತಮಗೊಳಿಸುತ್ತದೆ. ಯೋಗದಿಂದ ಉತ್ತಮ ನಿದ್ರೆ ಹಾಗೂ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇದರಿಂದ ಏಕಾಗ್ರತೆ ಹೆಚ್ಚಿಸಿಕೊಳ್ಳಲು ಸಹಾಯಕ.

ಯೋಗಾಸನ ಮಾಡಲು ಸಮಯ ಇಲ್ಲವೇ?

ಒಮ್ಮೆ ಯೋಗಾಸನದ ಆಸನಗಳನ್ನು ಕಲಿತರೆ ನೀವು ಎಲ್ಲಿ ಆದರೂ ನೀವು ಯೋಗಾಸನ ಮಾಡಬಹುದು. ಒಂದು ವೇಳೆ ನಿಮಗೆ ಯೋಗಾ ಮಾಡಲೂ ಸಹ ಸಮಯದ ಅಭಾವ ಇದ್ದರೆ, ಆಫೀಸ್‌ನಲ್ಲಿ ಕುಳಿತು, ಎರಡೂ ಕಾಲಗಳ ಆಸನ, ಕೈಗಳ ಆಸನವನ್ನು ನೀವು ಬಿಡುವಿದ್ದಾಗ ಮಾಡಬಹದು. ಅಲ್ಲದೆ ಕಂಪ್ಯೂಟರ್ ನೋಡಿ ನೋಡಿ ಕತ್ತು ಹಾಗೂ ಕಣ್ಣು ನೋವು ಬಂದರೆ, ಕಣ್ಣಿನ ಆರೋಗ್ಯಕ್ಕೆ ಕೆಲವು ಆಸನಗಳು ಇವೆ ಅವನ್ನು ಮಾಡಬಹುದು. ಅಲ್ಲದೆ ಸುಮ್ಮನೆ ಚೇರ್‌ ಮೇಲೆ ಕುಳಿತಾಗ ಕುತ್ತಿಗೆಯನ್ನು ಒಮ್ಮೆ ಕ್ಲಾಕ್‌ ವೈಸ್‌ ಹಾಗೂ ಇನ್ನೊಮ್ಮೆ ಆಂಡ್‌ಟಿ ಕ್ಲಾಕ್‌ ವೈಸ್‌ ತಿರುಗಿಸಿ ಲಾಭ ಪಡೆಯಬಹುದು.

ಭಾರತೀಯರಾದ ನಾವು ಯೋಗಾಸನದ ಬೆನಿಫ್ಟ್‌ಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡಿಲ್ಲ. ಆದರೆ ವಿದೇಶಿಯರು ಈ ಯೋಗದ ಪ್ರಯೋಜನಗಳನ್ನು ಹೆಚ್ಚಾಗಿ ತಿಳಿದುಕೊಂಡಿದ್ದಾರೆ. ಈ ಮೂಲಕ ತಮ್ಮ ವೃತ್ತಿಯಲ್ಲಿ ಎತ್ತರಕ್ಕೆ ಏರಿದ್ದಾರೆ. ಕ್ರೀಡಾ ಕ್ಷೇತ್ರದಲ್ಲೂ ಹಲವು ವಿದೇಶಿ ಸಾಧಕರು ಯೋಗಾವನ್ನು ಮೈ ಗೂಡಿಸಿಕೊಂಡಿದ್ದಾರೆ.

How Yoga Became a Game-Changer for These 3 Professional Athletes

ಟೀಮ್ ಇಂಡಿಯಾ ಆಟಗಾರರಿಗೂ ಯೋಗ ತರಬೇತಿ

ಯೋಗಾದ ಮಹತ್ವವನ್ನು ಅರಿತ ಬಿಸಿಸಿಐ ಟೀಮ್ ಇಂಡಿಯಾ ಆಟಗಾರರಿಗೆ ಯೋಗ ತರಬೇತಿಯನ್ನು ನೀಡುತ್ತದೆ. ತನ್ನ ಆಟಗಾರರ ಮಾನಸಿಕ ಹಾಗೂ ದೈಹಿಕ ಕ್ಷಮತೆಯನ್ನು ವೃದ್ಧಿಸಲು ಯೋಗ ಸಹಾಯಕ. ಬೆಂಗಳೂರಿನ ಎನ್‌ಸಿಎನಲ್ಲಿ ಈಗಾಗಲೇ ಹಲವು ಬಾರಿ ಯೋಗ ತರಬೇತಿಯನ್ನು ನೀಡಲಾಗಿದೆ. ಇನ್ನು ಟೀಮ್ ಇಂಡಿಯಾದ ಫುಟ್ಬಾಲ್ ಆಟಗಾರರು, ಹಾಕಿ ತಂಡ ಸಹ ಯೋಗವನ್ನು ಮಾಡುತ್ತದೆ.

ಟೆನಿಸ್‌ ಆಟಗಾರ ಜೋಕೊ

ಟೆನಿಸ್‌ ಲೋಕದ ಧೃವ ತಾರೆ ಸರ್ಬಿಯಾದ ನೋವಾಕ್‌ ಜೋಕೊವಿಚ್. ಇವರ ಬಗ್ಗೆ ಯಾರಿಗೂ ಪರಿಚಯ ಕೊಡುವ ಅಗತ್ಯವೇ ಇಲ್ಲ. ಇವರು ಆಡುವ ಆಟದಲ್ಲಿ ಫಿಟ್ನೆಸ್‌ ತುಂಬ ಮುಖ್ಯ. 36 ವರ್ಷದ ಜೋಕೊ ತಮ್ಮ ಫಿಟ್ನೆಸ್‌ ಸಿಕ್ರೆಟ್ ಯೋಗ ಎಂದು ಹೇಳಿದ್ದಾರೆ. ಇನ್ನು ನೋವಾಕ್‌ ಜೋಕೊವಿಚ್‌ ಅವರಿಗೆ ಯೋಗಾಸನ ಮಾಡುವಂತೆ ಅವರ ವೈದ್ಯರಿಗೆ ತಿಳಿಸಿದ್ದರು ಎನ್ನಲಾಗಿದೆ.

How Yoga Became a Game-Changer for These 3 Professional Athletes

ಪೋಲೆಂಡ್ ನ 23 ವರ್ಷದ ಇಗಾ ಸ್ವಿಟಿಕಾ ಮಹಿಳಾ ಟೆನಿಸ್ ಆಟಗಾರ್ತಿ ಕೂಡ ಯೋಗವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ಅವರಿಗೆ ಕೊಂಚ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತು. ಹೀಗಾಗಿ ಅವರು ಸಹ ಯೋಗಾಸನದ ಮೊರೆ ಹೋಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+