
ದೀಪಾವಳಿ: ಆನ್‌ಲೈನ್‌ನಲ್ಲಿ ಸೂರ್ಯಗ್ರಹಣ ಎಲ್ಲಿ ವೀಕ್ಷಿಸಬಹುದು?
ದೀಪಾವಳಿ ಹಬ್ಬದ ಸಂದರ್ಭದಲ್ಲಿ 2022ರ ಅಕ್ಟೋಬರ್ 25ರಂದು ಭಾಗಶಃ ಸೂರ್ಯಗ್ರಹಣ ಸಂಭವಿಸಲಿದೆ. ಅಮಾವಾಸ್ಯೆಯ ದಿನದಂದು ಚಂದ್ರನು ಪೃಥ್ವಿ ಮತ್ತು ಸೂರ್ಯನ ನಡುವೆ ಬಂದಾಗ ಮತ್ತು ಈ ಎಲ್ಲಾ 3 ಗ್ರಹಗಳು ಜೋಡಣೆಯಾದಾಗ(ಸಾಲುಗೂಡಿದಾಗ) ಸೂರ್ಯಗ್ರಹಣ ಸಂಭವಿಸುತ್ತದೆ. ಚಂದ್ರ ಮುದ್ರಿಕೆಯು(ಡಿಸ್ಕ್) ಸೌರ ಮುದ್ರಿಕೆಯನ್ನು ಭಾಗಶಃ ಆವರಿಸಿದಾಗ ಭಾಗಶಃ ಸೂರ್ಯಗ್ರಹಣ ಸಂಭವಿಸುತ್ತದೆ.
ಈ ಬಾರಿ ಭಾರತ ಮಾತ್ರವಲ್ಲದೆ ವಿಶ್ವದ ಹಲವೆಡೆ ಗ್ರಹಣ ನೋಡಬಹುದಾಗಿದು, ಖಗೋಳ ಕೌತುಕ ನೋಡಲು ಆಸಕ್ತರು, ವಿದ್ಯಾರ್ಥಿಗಳು, ಸಂಶೋಧಕರು ಕಾತುರದಿಂದ ಕಾದಿದ್ದಾರೆ.
Solar Eclipse 2022: ಭಾಗಶಃ ಸೂರ್ಯಗ್ರಹಣ ಭಾರತದಲ್ಲಿ ಎಲ್ಲೆಲ್ಲಿ ಗೋಚರಿಸಲಿದೆ? ಕಾಲಾವಧಿ ವಿವರ
ಭಾರತದಲ್ಲಿ ಎಲ್ಲೆಲ್ಲಿ ಕಾಣಿಸುತ್ತದೆ?:
ದೆಹಲಿ ಮತ್ತು ಮುಂಬೈನಲ್ಲಿ, ಗ್ರಹಣದ ಪರ್ವ(ಉತ್ತುಂಗ) ಸಮಯದಲ್ಲಿ ಚಂದ್ರನು ಸೂರ್ಯನನ್ನು ಆವರಿಸಿಕೊಳ್ಳುವ ಶೇಕಡಾವಾರು ಪ್ರಮಾಣ ಕ್ರಮವಾಗಿ 44% ಮತ್ತು 24% ಇರುತ್ತದೆ.
ಚೆನ್ನೈ ಮತ್ತು ಕೋಲ್ಕತ್ತಾದಲ್ಲಿ ಸೂರ್ಯಾಸ್ತದಿಂದ ಸೂರ್ಯಾಸ್ತಮಾನದವರೆಗೆ ಗ್ರಹಣದ ಅವಧಿ ಕ್ರಮವಾಗಿ 31 ನಿಮಿಷ ಮತ್ತು 12 ನಿಮಿಷ ಇರುತ್ತದೆ. ಇತರೆಡೆ ಗ್ರಹಣ ಗೋಚರಿಸುವ ಪ್ರಮಾಣ ಶೇ 20ಕ್ಕಿಂತ ಕಡಿಮೆ ಇರಲಿದೆ.
ಭಾರತದಲ್ಲಿ ಎಲ್ಲೆಲ್ಲಿ ಕಾಣಿಸಲ್ಲ?:
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ಈಶಾನ್ಯ ಭಾರತದ ಕೆಲವು ಭಾಗಗಳಲ್ಲಿ (ಐಜ್ವಾಲ್, ದಿಬ್ರುಗಢ್, ಇಂಫಾಲ್, ಇಟಾನಗರ, ಕೊಹಿಮಾ, ಸಿಬ್ಸಾಗರ್, ಸಿಲ್ಚಾರ್, ತಮೆಲಾಂಗ್ ಇತ್ಯಾದಿ) ಇದನ್ನು ನೋಡಲು ಸಾಧ್ಯವಿಲ್ಲ.
Solar Eclipse 2022: ದ್ವಾದಶಿ ರಾಶಿಗಳ ಮೇಲೆ ಸೂರ್ಯಗ್ರಹಣದ ಪರಿಣಾಮಗಳು ತಿಳಿಯಿರಿ
ವಿಶ್ವದಲ್ಲಿ ಎಲ್ಲೆಲ್ಲಿ ಗೋಚರಿಸಲಿದೆ?
ಯುರೋಪ್, ಪಶ್ಚಿಮ ಏಷ್ಯಾ, ಈಶಾನ್ಯ ಆಫ್ರಿಕಾದಲ್ಲಿ ಗೋಚರಿಸಲಿದೆ. ಯುಎಸ್ ಸೇರಿದಂತೆ ಕೆಲವೆಡೆ ನೇರ ವೀಕ್ಷಣೆ ಸಾಧ್ಯವಿಲ್ಲದಿದ್ದರೂ ಆನ್‌ಲೈನ್‌ನಲ್ಲಿ ಸೂರ್ಯಗ್ರಹಣ ವೀಕ್ಷಿಸಬಹುದು.
ಸಮಯ: ಅ. 25 ರಂದು 4:58 a.m. EDT (0858 GMT). ಗ್ರಹಣ ಪರ್ವಕಾಲ 9:01 a.m. EDT (1301 GMT).
ರೋಮ್, ಇಟಲಿ ಸೇರಿದಂತೆ ವಿವಿಧೆಡೆ ಟೆಲಿಸ್ಕೋಪ್ ಅಳವಡಿಸಲಾಗಿದ್ದು, ಇದಲ್ಲದೆ, ಖಗೋಳ ವಿದ್ಯಮಾನ ವೀಕ್ಷಿಸಲು ವಚ್ಯುವಲ್ ಟೆಲಿಸ್ಕೋಪ್ ಪ್ರಾಜೆಕ್ಟ್ 2.0 ಆನ್ ಲೈನ್ ವ್ಯವಸ್ಥೆ ಮಾಡಿದೆ. ಲೈವ್ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ
ಟೈಮ್ ಅಂಡ್ ಡೇಟ್ ತಂಡ ಕೂಡಾ ಲೈವ್ ಸ್ಟ್ರೀಮಿಂಗ್ ಮಾಡುತ್ತಿದ್ದು, ಭಾಗಶಃ ಸೂರ್ಯಗ್ರಹಣವನ್ನು ಈ ಯೂಟ್ಯೂಬ್ ಚಾನೆಲ್ ಮೂಲಕ ವೀಕ್ಷಿಸಬಹುದು.
ಅಕ್ಟೋಬರ್ 25 ರ ಗ್ರಹಣದ ಸಮಯದಲ್ಲಿ, ಕೇಂದ್ರ ಗ್ರಹಣದ ಬಿಂದುವು ಉತ್ತರ ಧ್ರುವದಲ್ಲಿರುತ್ತದೆ. ಇಲ್ಲಿಂದ ಚಲಿಸುವಾಗ, ಬಿಂದುವಿನಿಂದ ದೂರದಲ್ಲಿರುವ ಪ್ರದೇಶಗಳು ಸೂರ್ಯನ ಡಿಸ್ಕ್ ಗ್ರಹಣವನ್ನು ಕಡಿಮೆ ಮತ್ತು ಕಡಿಮೆ ನೋಡುತ್ತವೆ. ರಷ್ಯಾದಲ್ಲಿ, 80% ಸೂರ್ಯನ ಗ್ರಹಣ ಸಂಭವಿಸುತ್ತದೆ, ಈ ನೆರಳಿನ ಪ್ರದೇಶವು ಚೀನಾದಲ್ಲಿ 70%, ನಾರ್ವೆಯಲ್ಲಿ 63% ಮತ್ತು ಫಿನ್‌ಲ್ಯಾಂಡ್‌ನಲ್ಲಿ 62% ಕ್ಕೆ ಇಳಿಯುತ್ತದೆ.
ಈ ಗ್ರಹಣವು ಪ್ರಪಂಚದಲ್ಲಿ ಎಲ್ಲಿಯೂ ಸಂಪೂರ್ಣ ಸೂರ್ಯಗ್ರಹಣವಾಗುವುದಿಲ್ಲ ಏಕೆಂದರೆ ಈ ಸಂದರ್ಭದಲ್ಲಿ ಚಂದ್ರ ಮತ್ತು ಸೂರ್ಯನು ಸಂಪೂರ್ಣವಾಗಿ ಒಂದೇ ಸಾಲಿನಲ್ಲಿ ಜೋಡಿಸಲ್ಪಡುವುದಿಲ್ಲ, ಆದ್ದರಿಂದ ಭೂಮಿಯ ಮೇಲೆ ಎಲ್ಲಿಯೂ ಚಂದ್ರನು ಸೂರ್ಯನನ್ನು ಸಂಪೂರ್ಣವಾಗಿ ಆವರಿಸುವುದಿಲ್ಲ.
ಆಕಾಶವೀಕ್ಷಕರು ಭಾಗಶಃ ಸೂರ್ಯಗ್ರಹಣವನ್ನು ವೈಯಕ್ತಿಕವಾಗಿ ಅಥವಾ ಆನ್‌ಲೈನ್‌ನಲ್ಲಿ ವೀಕ್ಷಿಸಲು ಈ ಅವಕಾಶವನ್ನು ಕಳೆದುಕೊಂಡರೆ, ಅವರು ಮುಂದಿನ ಸಂಪೂರ್ಣ ಸೂರ್ಯಗ್ರಹಣ ಸಂಭವಿಸಿದಾಗ ಏಪ್ರಿಲ್ 20, 2023 ರಂದು ನೋಡಬಹುದು.