ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನೆಯಿಂದ ಜೀವಂತ ಪ್ರಮಾಣ ಪತ್ರ ಸಲ್ಲಿಸುವುದು ಹೇಗೆ?

|
Google Oneindia Kannada News

ಬೆಂಗಳೂರು, ನವೆಂಬರ್ 09: ಪಿಂಚಣಿಗಳನ್ನು ಪಡೆಯುವ ನಿವೃತ್ತ ಸರ್ಕಾರಿ ನೌಕರರು ಪ್ರತಿ ವರ್ಷ ಜೀವಂತ ಪ್ರಮಾಣ ಪತ್ರ ಸಲ್ಲಿಸುವುದು ಅಗತ್ಯವಾಗಿದೆ. ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಅಂಚೆ ಕಚೇರಿಯಲ್ಲಿಯೇ ಪ್ರಮಾಣ ಪತ್ರವನ್ನು ಸಲ್ಲಿಕೆ ಮಾಡಲು ಅವಕಾಶ ನೀಡಲಾಗಿದೆ.

ನಿವೃತ್ತ ನೌಕರರು ಪ್ರತಿ ವರ್ಷದ ನವೆಂಬರ್‌ನಲ್ಲಿ ಜೀವಂತ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯವಾಗಿತ್ತು. ಈ ಬಾರಿ ಕೋವಿಡ್ ಪರಿಸ್ಥಿತಿಯ ಹಿನ್ನಲೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಹಿಂದಿನ ವರ್ಷದ ಯಾವ ತಿಂಗಳಿನಲ್ಲಿ ಜೀವಂತ ಪ್ರಮಾಣ ಪತ್ರ ಸಲ್ಲಿಸಿದ್ದಾರೋ ಆ ತಿಂಗಳಿನಿಂದ ಮುಂದಿನ ಒಂದು ವರ್ಷದ ತನಕ ಪತ್ರ ಸಲ್ಲಿಸಬೇಕು.

ಪಿಂಚಣಿ; ಜೀವಂತ ಪ್ರಮಾಣ ಪತ್ರ ಸಲ್ಲಿಕೆ ಬದಲಾವಣೆ ಪಿಂಚಣಿ; ಜೀವಂತ ಪ್ರಮಾಣ ಪತ್ರ ಸಲ್ಲಿಕೆ ಬದಲಾವಣೆ

ಕೋವಿಡ್ ಪರಿಸ್ಥಿತಿಯಲ್ಲಿ ನಿವೃತ್ತ ನೌಕರರು ಜೀವಂತ ಪ್ರಮಾಣ ಪತ್ರ ಸಲ್ಲಿಕೆ ಮಾಡಲು ಅಲೆದಾಟ ನಡೆಸುವುದನ್ನು ತಪ್ಪಿಸಲು ಮನೆ ಬಾಗಿಲಿನಲ್ಲಿಯೇ ಪ್ರಮಾಣ ಪತ್ರ ಸಲ್ಲಿಸಲು ಅವಕಾಶ ನೀಡಲಾಗಿದೆ. ಇದಕ್ಕಾಗಿ ಅಂಚೆ ಇಲಾಖೆ ಸಹಾಯ ಪಡೆಯಲಾಗಿದ್ದು, ಪೋಸ್ಟ್ ಮ್ಯಾನ್ ಮನೆಯಲ್ಲಿಯೇ ಪತ್ರ ಪಡೆಯಲಿದ್ದಾನೆ.

ಪಿಂಚಣಿ ಪಡೆಯುವ ನಿವೃತ್ತ ನೌಕರರಿಗೆ ಸಿಹಿ ಸುದ್ದಿ ಪಿಂಚಣಿ ಪಡೆಯುವ ನಿವೃತ್ತ ನೌಕರರಿಗೆ ಸಿಹಿ ಸುದ್ದಿ

How To Submit Life Certificate In Post Office

70 ರೂ. ಪಾವತಿಸಿ; ಜೀವಂತ ಪ್ರಮಾಣ ಪತ್ರ ನೋಂದಾಯಿಸಲು ಪಿಂಚಣಿದಾರರು ತಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಗಳು ಮತ್ತು ಬ್ಯಾಂಕ್‍ಗಳಿಗೆ ಭೇಟಿ ನೀಡಬಹುದು. ಮನೆಗಳಿಂದಲೇ ಪೋಸ್ಟ್ ಮ್ಯಾನ್/ಡಾಕ್ ಸೇವಕರ ಮೂಲಕವೂ ಪ್ರಮಾಣ ಪತ್ರ ಸಲ್ಲಿಸಬಹುದು.

ಪಿಂಚಣಿ ಹಣಕ್ಕೆ ಕಿತ್ತಾಟ: ಪತ್ನಿಯನ್ನು ಕೊಂದ 92ರ ವೃದ್ಧಪಿಂಚಣಿ ಹಣಕ್ಕೆ ಕಿತ್ತಾಟ: ಪತ್ನಿಯನ್ನು ಕೊಂದ 92ರ ವೃದ್ಧ

ಪಿಂಚಣಿ ಪಡೆಯುವ ಜನರು ಪೋಸ್ಟ್‌ ಮೆನ್‌ ಅನ್ನು ಮನೆಗಳಿಗೆ ಕಳುಹಿಸುವಂತೆ ಅಂಚೆ ಇಲಾಖೆ ಅಧಿಕಾರಿಗಳಿಗೆ ವಿನಂತಿಸಬಹುದು. ತಮ್ಮ ಹತ್ತಿರದ ಅಂಚೆ ಕಚೇರಿಗೆ ಖುದ್ದಾಗಿ ಭೇಟಿ ನೀಡಿ ರೂ. 70 ರೂ.ಗಳನ್ನು ಪಾವತಿಸಿ ಜೀವಂತ ಪ್ರಮಾಣ ಪತ್ರವನ್ನು ಸಲ್ಲಿಸಬಹುದು.

ಜೀವಂತ ಪ್ರಮಾಣ ಪತ್ರ ಸಲ್ಲಿಸುವ ಸೇವೆಯನ್ನು ಬುಕ್ ಮಾಡಲು ಪಿಂಚಣಿದಾರರು ಕರೆ ಮಾಡಬೇಕಾದ ಉಚಿತ ಸಹಾಯವಾಣಿ ಸಂಖ್ಯೆ 155299.

English summary
People who getting pension now submit life certificate in post office. Postman will collect life certificate from your door step. How to submit it here are the details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X