Smart Aadhaar Card: ಸ್ಮಾರ್ಟ್ ಆಧಾರ್ ಕಾರ್ಡ್ ಪಡೆಯುವುದು ಹೇಗೆ? ಇಷ್ಟು ಮಾಡಿ ಸಾಕು..
ಬೆಂಗಳೂರು, ಜನವರಿ 07: ಭಾರತದ ಪ್ರತಿಯೊಬ್ಬ ಪ್ರಜೆಗೂ ಕೇಂದ್ರ ಸರ್ಕಾರ ಆಧಾರ್ ಕಾರ್ಡ್ ಗುರುತಿನ ಚೀಟಿ ನೀಡಿದೆ. ದೈನಂದಿನ ಕಾರ್ಯ ಚಟುವಟಿಕೆಗಳ ಅಗತ್ಯಕ್ಕೆ ತಕ್ಕಂತೆ ಎಲ್ಲರೂ ಆಧಾರ ಬಳಸುತ್ತಿದ್ದಾರೆ. ನಿಮ್ಮ ಆಧಾರ್ ಕಾರ್ಡ್ ದುರ್ಬಳಕೆದಾರರ ಕೈಗೆ ಸಿಕ್ಕೆ ಮುಗಿಯಿತು, ವಿವಿಧ ರೂಪದಲ್ಲಿ ದುರುಪಯೋಗ ಆಗುವ ಸಾಧ್ಯತೆ ಇದೆ. ಈ ಕಾರಣದಿಂದಲೇ ಉದ್ದನೆಯ ಆಧಾರ್ ಬದಲಾಗಿ ಪಾಕೆಟ್ ಸೈಜ್‌ನ ಪಿವಿಸಿ ಆಧಾರ್ ಪಡೆಯಲು 'ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ' (UIDAI) ಅವಕಾಶ ಮಾಡಿಕೊಟ್ಟಿದೆ.
ಹಣಕಾಸು, ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಮಾತ್ರವಲ್ಲದೇ ಭಾರತೀಯ ನಾಗರಿಕರು ಎಂಬುದಕ್ಕೂ ಆಧಾರ್ ಹೊಂದಿರುವುದು ಅತ್ಯವಶ್ಯವಾಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರವರೆಗೂ ಆಧಾರ್ ಹೊಂದಿರುವುದು ಕಡ್ಡಾಯವಾಗಿದೆ. 12 ಸಂಖ್ಯೆಯ ಆಧಾರ್ ಕಾರ್ಡ್‌ಅನ್ನು ಕಾಲಕ್ಕೆ ತಕ್ಕಂತೆ ತಿದ್ದುಪಡಿ, ಅಪ್‌ಗ್ರೇಡ್ ಮಾಡಲು ಸರ್ಕಾರ ಸೂಚನೆ ನೀಡುತ್ತಲೇ ಬಂದಿದೆ.

ಎಟಿಎಂ ಕಾರ್ಡ್ ರೀತಿಯ ಆಧಾರ್ ಕಾರ್ಡ್
ಇದೀಗ 'ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ' (UIDAI) ಪಾಕೇಟ್ ಸೈಜಿನ ಆಧಾರ್ ಕಾರ್ಡ್ ಪಡೆಯಲು ಅವಕಾಶ ನೀಡಿದೆ. ಆಸಕ್ತರು ನಿಮಗೆ ಆನ್‌ಲೈನ್ ಮೂಲಕ ಪಡೆಯಬಹುದಾಗಿದೆ. ಪ್ಯಾನ್ ಕಾರ್ಡ್, ಎಟಿಎಂ ಡೆಬಿಟ್ ಕಾರ್ಡ್ ಮತ್ತು ಕ್ರಿಡಿಟ್ ಕಾರ್ಡ್ ರೀತಿಯಲ್ಲಿ PVS Aadhaar Card ಅನ್ನು ಪರಿಚಯಿಸಲಾಗಿದೆ.
ಈ ಸ್ಮಾರ್ಟ್ ಆಧಾರ್ ಕಾರ್ಡ್ ಹೊಂದಿದ್ದ ನೀವು ಎಲ್ಲಿ ಬೇಕಾದರೂ ಒಯ್ಯಬಹುದು. ಜೇಬಿನಲ್ಲಿ ಇಟ್ಟುಕೊಳ್ಳಲು, ಇಲ್ಲವೇ ವಾಲೆಟ್‌ನಲ್ಲಿ ಇರಿಸಲು ಅನುಕೂಲವಾಗುವ ಸೈಜಿನಲ್ಲಿ ಆಧಾರ್ ನೀಡುತ್ತಿದೆ. ಇಂತಹ ಸ್ಮಾರ್ಟ್ ಆಧಾರ್ ಕಾರ್ಡ್ ನಿಮ್ಮಲ್ಲಿ ಇಲ್ಲದಿದ್ದರೆ ಕೂಡಲೇ ಪ್ರಾಧಿಕಾರ ನೀಡಿರುವ ಸೂಚನೆಗಳನ್ನು ಪಾಲಿಸಿ, ಆನ್‌ಲೈನ್ ಮೂಲಕವೇ ಆರ್ಡರ್ ಮಾಡಬಹುದಾಗಿದೆ.
ಪಿವಿಸಿ ಆಧಾರ್ ಕಾರ್ಡ್ ಪಡೆಯುವುದು ಹೇಗೆ?
* ಆನ್‌ಲೈನ್ ಮೂಲಕ ಆರ್ಡರ್ ಮಾಡಿ ನೀವು ಈ ಪಿವಿಸಿ ಆಧಾರ್ ಕಾರ್ಡ್ ಪಡೆಯಬಹುದಾಗಿದೆ.
* ಮೊದಲು ನೀವು 'ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ' (UIDAI) ಅಧಿಕೃತ ವೆಬ್‌ಸೈಟ್‌ಗೆ https://myaadhaar.uidai.gov.in/genricPVC ಭೇಟಿ ನೀಡಬೇಕು.
* ಬಳಿಕ ತೆರೆದುಕೊಳ್ಳುವ ಪರದೆ ಮೇಲೆ ಕೇಳುವ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ, ಕ್ಯಾಪ್ಚಾ ನಮೂದಿಸಬೇಕು.
* ನಂತರ ಆಧಾರ್ ಜೊತೆಗೆ ಲಿಂಕ್ ಆಗಿರುವ ಸಂಖ್ಯೆಗೆ ಓಟಿಪಿ ಬರಲು ಇರುವ ಬಾಕ್ಸ್ ಮೇಲೆ ಕ್ಲಿಕ್ ಮಾಡಬೇಕು.
* ಅಲ್ಲಿಯೇ ಕೆಳಗೆ ಇರುವ ಸೆಂಟ್ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು.
* ಆಧಾರ್ ಜೊತೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಬರುವ ಓಟಪಿಯನ್ನು ನಮೂದಿಸಬೇಕು.
* ಹೊಸ ಆಧಾರ್ ಕಾರ್ಡ್ ನೀಡಲು ಅಗತ್ಯವಾದ 50 ರೂಪಾಯಿಯನ್ನು ನೀವು ಪಾವತಿಸಬೇಕು.
* ನಂತರ ಮುಂದಿನ ವಿಧಾನಗಳನ್ನು ಆಯ್ಕೆ ಮಾಡಿಕೊಂಡರೆ ನಿಮ್ಮ ಮನೆಗೆ ಸ್ಪೀಡ್ ಪೋಸ್ಟ್ ಮೂಲಕ ಬರಲಿದೆ..












Click it and Unblock the Notifications