Best Employee: ಕೆಲಸ ಮಾಡುವ ಸ್ಥಳದಲ್ಲಿ ಆತಂಕ ಬೇಡ; ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಸಲಹೆಗಳು
ಹೊಸ ಪ್ರದೇಶ, ಜನ, ವಾತಾವರಣಕ್ಕೆ ಹೋದಾಗ ಸಹಜವಾಗಿ ಎಲ್ಲರಿಗೂ ಹೊಂದಿಕೊಳ್ಳಲು ಸ್ವಲ್ಪ ಕಷ್ಟವಾಗುವುದು ಸಹಜ. ನಗರ ಪ್ರದೇಶದ ಜನ ಕೆಲವರು ಬೇಗನೆ ಹೊಸ ಜಾಗ, ಜವಾಬ್ದಾರಿ, ಕೆಲಸಕ್ಕೆ ಹೊಂದಿಕೊಂಡುಬಿಡುತ್ತಾರೆ. ಆದರೆ, ಗ್ರಾಮೀಣ ಭಾಗದ ಮಂದಿ ಹೊಂದಿಕೊಳ್ಳಲು ಹೆಣಗಾಡಬೇಕಾಗುತ್ತದೆ. ಬಹುತೇಕ ಮಂದಿ ಆತಂಕದಿಂದ ಹೊಂದಿಕೊಳ್ಳಲಾಗದೆ ಆ ಪ್ರದೇಶದಿಂದಲೇ ಪಲಾಯನಗೈಯ್ಯುತ್ತಾರೆ.
ಸಾಮಾನ್ಯ ಸಂದರ್ಭಗಳಲ್ಲಿ ಕೆಲವು ಪ್ರದೇಶಗಳಿಂದ ಹೊರ ಹೋದರೆ ನಷ್ಟವೇನು ಇಲ್ಲ. ಆದರೆ, ಕೆಲಸ ಮಾಡುವ ವಾತಾವರಣದಲ್ಲಿ ಆತಂಕದಿಂದ ಹೊರಬಾರಲಾಗದಿದ್ದರೆ ಸಾಕಷ್ಟು ಸಮಸ್ಯೆಯನ್ನು ಎದುರಿಸಬೇಕಾಗಿದೆ. ಹೀಗಾಗಿ ಆತಂಕವನ್ನು ನಿವಾರಿಸಿಕೊಳ್ಳುವ ನಿಟ್ಟಿನಲ್ಲಿ ಕೆಲವೊಂದು ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಅತ್ಯಗತ್ಯವಾಗಿರುತ್ತದೆ.

ಚಿಕ್ಕ ಕೆಲಸಕ್ಕೂ ಇರಲಿ ಪ್ರಾಮುಖ್ಯತೆ
ಸಾಮಾನ್ಯವಾಗಿ ನಾವು ದೊಡ್ಡ ದೊಡ್ಡ ವಿಷಯ, ಕೆಲಸಗಳ ಬಗ್ಗೆ ಗಮನ ಕೊಡುವಷ್ಟು ಸಾಮಾನ್ಯ ಎನ್ನುವಂತಹ ಚಿಕ್ಕ ಚಿಕ್ಕ ಕೆಲಸಗಳ ಬಗ್ಗೆ ಅಷ್ಟೊಂದು ಗಮನ ಕೊಡುವುದಿಲ್ಲ. ಆದರೆ, ಆ ಚಿಕ್ಕ ವಿಷಯಗಳೆ ನಮಗೆ ಹಲವು ಬಾರಿ ಆತಂಕಕ್ಕೆ ದೂಡುತ್ತಿರುತ್ತವೆ.
ಉದಾಹರಣೆಗೆ ಹೇಳುವುದಾದರೆ, ಕಂಪೆನಿಯೊಂದರ ಎಚ್.ಆರ್ ಹುದ್ದೆಗೆ ಸಂದರ್ಶನಕ್ಕೆ ಹೋಗುವಾಗ ವಿಷಯಕ್ಕೆ ಸಂಬಂಧಪಟ್ಟಂತೆ ಎಲ್ಲದಕ್ಕೂ ತಯಾರಿ ಆಗಿರುತ್ತೇವೆ. ಆದರೆ, ದೈಹಿಕವಾಗಿ ನಮ್ಮನ್ನು ನಾವು ಸಂದರ್ಶಕರ ಮುಂದೆ ಹೇಗೆ ಕಾಣಿಸಿಕೊಳ್ಳುತ್ತೇವೆ ಎಂಬುದರ ಬಗ್ಗೆ ಸ್ವಲ್ಪ ಎಡವಿರುತ್ತೇವೆ. ಹಲ್ಲಿನ ಸ್ವಚ್ಛತೆ ಬಗ್ಗೆ ಕೆಲವರು ಕಾಳಜಿ ವಹಿಸುವುದಿಲ್ಲ, ದಂತ ವೈದ್ಯರಿಗೆ ಆ ಕರೆ ಹೋಗಲಾಡಿಸಲು ಐದು ನಿಮಿಷ ಸಾಕು. ಆದರೆ, ನಾವು ಹೋಗಿರುವುದಿಲ್ಲ. ಇನ್ನೇನು ಸಂದರ್ಶನಕ್ಕೆ ಹೋಗಬೇಕು ಎನ್ನುವ ಸಂದರ್ಭದಲ್ಲಿ ಆ ಹಲ್ಲುಗಳ ನೋಡಿ ನಮಗೆ ನಾವೆ ಕೀಳರಮೆ ಅನುಭವಿಸುತ್ತೇವೆ. ತಕ್ಷಣವೇ ಆತಂಕಕ್ಕೆ ಒಳಗಾಗುತ್ತೇವೆ. ಅದೊಂದು ಕೊರಗು ಸಂದರ್ಶಕರನ್ನು ಎದುರಿಸುವಾಗ ಕಾಡುತ್ತಿರುತ್ತದೆ.
ಬಟ್ಟೆಯ ಮೇಲಿರಲಿ ಕಾಳಜಿ
ನಾವು ತೊಡುವ ಉಡುಪು ದುಬಾರಿ ಬೆಲೆಯೊದ್ದೊ ಎನ್ನುವುದಕ್ಕಿಂತ ಆ ಬಟ್ಟೆ ನಮ್ಮ ದೇಹಕ್ಕೆ ಕಂಫರ್ಟ್ ಆಗಿದೆಯಾ ಅನ್ನುವುದು ಮುಖ್ಯವಾಗಿರುತ್ತದೆ. ದುಬಾರಿಯಾದರೂ ಅದು ನಮಗೆ ಸರಿಯಾಗಿ ಹೊಂದದಿದ್ದರೆ ಅಭಾಸವಾಗುತ್ತದೆ. ತೀರಾ ಬಿಗಿಯಾದ ಅಥವಾ ಸಡಿಲವಾದ ಬಟ್ಟೆಗಳ ಬದಲು ನಿಮಗೆ ಕಂಫರ್ಟ್ ಅನಿಸುವ, ನೋಡಲು ಆಕರ್ಷವಾಗಿಸುವ, ನಿಮ್ಮ ವ್ಯಕ್ತಿತ್ವಕ್ಕೆ ಒಪ್ಪುವಂತಹ ಬಟ್ಟೆಗಳನ್ನು ಧರಿಸುವತ್ತ ಗಮನಹರಿಸಿ.
ಸ್ನೇಹಿತರು, ಸಹೋದ್ಯೋಗಿಗಳ ಜೊತೆ ಒಡನಾಟ
ನಾವು ಯಾರ ಜೊತೆಗೆ ಇರುತ್ತೇವೆಯೋ ಅವರಂತೆ ಆಗುತ್ತೇವೆ ಎಂಬುದು ಸುಪ್ರಸಿದ್ದವಾದ ನಾಣ್ಣುಡಿ. ಅದು ಅಕ್ಷರಶಃ ನಿಜವಾದ ಮಾತು. ನಾವು ನಮ್ಮ ನಮ್ಮ ಜೀವನದಲ್ಲಿ ಮಾಡಿ ಕಲಿಯುವುದು ಎಷ್ಟು ಇರುತ್ತದೆಯೋ ಅಷ್ಟೆ ನೋಡಿ ಕಲಿಯುವುದು ಅಷ್ಟೆ ಇರುತ್ತದೆ. ಹೀಗಾಗಿ ಉತ್ತಮ ವ್ಯಕ್ತಿತ್ವವುಳ್ಳವರ, ಆತ್ಮವಿಶ್ವಾಸವುಳ್ಳವರ, ಮಹಾತ್ವಾಕಾಂಕ್ಷೆವುಳ್ಳವರ ಜೊತೆಗಿದ್ದರೆ ದಿನ ಕಳೆದಂತೆ ನಾವು ಕೂಡ ಅದೇ ದಾರಿ ಸಾಗುವಂತೆ ಪ್ರೇರಣೆಯಾಗುತ್ತದೆ. ನಮ್ಮ ಸಮಸ್ಯೆಗಳನ್ನು, ಆತಂಕಗಳನ್ನು ಮುಕ್ತವಾಗಿ ಅವರೊಂದಿಗೆ ಹಂಚಿಕೊಂಡು ಬಗೆ ಹರಿಸಿಕೊಳ್ಳುವಂತಹ ಮನಃಸ್ಥಿತಿಯನ್ನು, ವಾತಾವರಣವನ್ನು ಸೃಷ್ಟಿಸಿಕೊಳ್ಳಿ.
ಕಲಿಕೆಗೆ ಕೊನೆಯಿಲ್ಲ!
ಅದು ಯಾವುದೇ ಕ್ಷೇತ್ರವಿರಲಿ. ಕಲಿಕೆ ಎನ್ನುವುದು ನಿರಂತರವಾದದ್ದು. ಅದರಲ್ಲೂ ದಿನ ದಿನಕ್ಕೂ ಹೊಸ ಹೊಸ ಆವಿಷ್ಕಾರಗಳಾಗುತ್ತಿರುವ ಆಧುನಿಕ ಜಗತ್ತಿನಲ್ಲಿ ನಿಂತ ನೀರಿನಂತೆ ಇದ್ದರೆ ಒಂದೇ ದಿನದಲ್ಲಿ ಸಾಕಷ್ಟು ಹಿಂದೆ ಹೋಗಿಬಿಡುತ್ತೇವೆ. ಇದರಿಂದ ಕೆಲಸದಲ್ಲಿ ಎಡವಟ್ಟುಗಳಾಗುತ್ತವೆ. ಸಹಜವಾಗಿ ನಮ್ಮ ಮುಖದಲ್ಲಿ. ಮಾತಿನಲ್ಲಿ ಆತಂಕ ಎನ್ನುವುದು ಸುಲಭವಾಗಿ ಕಾಣಿಸಿಕೊಳ್ಳುತ್ತದೆ. ಇಂತಹ ಆತಂಕ ನಿವಾರಣೆಯಾಗಬೇಕಾದರೆ ನಿರಂತರವಾದ ಕಲಿಕೆಯೊಂದೆ ಸೂತ್ರವಾಗಿದೆ.
-
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ












Click it and Unblock the Notifications