• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಪ್ಯಾಂಡಮಿಕ್ ನಂತರ ದಕ್ಷಿಣ ಭಾರತ ಸಿನಿಮಾಗಳು ಬಾಲಿವುಡ್‌ಗೆ ಸೆಡ್ಡು ಹೊಡೆದಿದ್ದು ಹೇಗೆ?

|
Google Oneindia Kannada News

ಬೆಂಗಳೂರು, ಏಪ್ರಿಲ್ 16: ಕೆಜಿಎಫ್ ಚಾಪ್ಟರ್ -2. ಸ್ಯಾಂಡಲ್ ವುಡ್ ಅಂಗಳದಲ್ಲಿ ಇದೇ ಕೆಜಿಎಫ್ ಚಾಪ್ಟರ್ -2 ಹೊಸ ಚಾಪ್ಟರ್ ಅನ್ನು ತೆರೆದಿದೆ. ದಕ್ಷಿಣ ಭಾರತದ ಚಿತ್ರರಂಗವು ಪ್ಯಾನ್ ಇಂಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಂತರ ಬಾಲಿವುಡ್ ಬಿಗ್ ಸ್ಕ್ರೀನ್ ಗಳಲ್ಲಿ ದಕ್ಷಿಣ ಭಾರತದ ಚಿತ್ರಗಳೇ ಗುಲ್ ಎಬ್ಬಿಸುತ್ತಿವೆ. ಹಿಂದಿ ಚಿತ್ರರಂಗದಲ್ಲಿ ಹಿಂದಿ ಚಿತ್ರಗಳನ್ನೇ ಹಿಂದಿಕ್ಕುವ ಮಟ್ಟಕ್ಕೆ ದುನಿಯಾ ಚೇಂಜ್ ಆಗಿದೆ. ಕೆಜಿಎಫ್ ಚಾಪ್ಟರ್ -2 ಮಾತ್ರವಲ್ಲದೇ, ಅಲ್ಲು ಅರ್ಜುನ್ ಅಭಿನಯದ ಪುಷ್ಪ, ಜೂನಿಯರ್ ಎನ್ ಟಿಆರ್ ಮತ್ತು ರಾಮ್ ಚರಣ್ ಅಭಿನಯದ ಆರ್ಆರ್ಆರ್ ಸಿನಿಮಾಗಳು ಓಟಿಟಿ ಮತ್ತು ಸೋಷಿಯಲ್ ಮೀಡಿಯಾದ ಈ ಯುಗದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳಾಗಿ ಮಿಂಚುತ್ತಿವೆ.

KGF Chapter 2 : ಕೆಜಿಎಫ್ - 2 ಬಿಡುಗಡೆಗೆ ತಡೆ ಕೋರಿ ಕೋರ್ಟ್‌ನಲ್ಲಿ ದಾವೆ ಸಲ್ಲಿಕೆKGF Chapter 2 : ಕೆಜಿಎಫ್ - 2 ಬಿಡುಗಡೆಗೆ ತಡೆ ಕೋರಿ ಕೋರ್ಟ್‌ನಲ್ಲಿ ದಾವೆ ಸಲ್ಲಿಕೆ

ಬಾಲಿವುಡ್ ಚಿತ್ರರಂಗಕ್ಕೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ದಕ್ಷಿಣ ಭಾರತದ ಸಿನಿಮಾಗಳು ಬೆಳೆದಿದ್ದು ಹೇಗೆ?, ಹಿಂದಿ ಸಿನಿಮಾಗಳನ್ನು ಹಿಂದಿಕ್ಕಿ ದಕ್ಷಿಣದ ಚಿತ್ರಗಳು ಮುಂದೆ ನುಗ್ಗುತ್ತಿರುವುದಕ್ಕೆ ಕಾರಣಗಳೇನು?, ಒಂದು ಕಾಲದಲ್ಲಿ ಸಿನಿಮಾಗಳಿಗೆ ಸಣ್ಣ ಮಾರುಕಟ್ಟೆ ಎನಿಸಿಕೊಂಡಿದ್ದ ಚಂದನವನದಲ್ಲೇ ನಿರ್ಮಾಣವಾಗಿರುವ ಕೆಜಿಎಫ್ ಚಾಪ್ಟರ್ -2 ಸಿನಿಮಾ ದೇಶ-ವಿದೇಶಗಳಲ್ಲಿ ದಾಖಲೆ ಬರೆದಿದ್ದು ಹೇಗೆ ಎನ್ನುವುದರ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ಓದಿ.

ಹಿಂದಿಯಲ್ಲಿ ರೀಮೇಕ್ ಆಗಿದ್ದ ಸಿನಿಮಾ ಹಿಂದಿನ ಕಥೆ

ಹಿಂದಿಯಲ್ಲಿ ರೀಮೇಕ್ ಆಗಿದ್ದ ಸಿನಿಮಾ ಹಿಂದಿನ ಕಥೆ

ಬಾಲಿವುಡ್ ಚಿತ್ರರಂಗದಲ್ಲಿ ಅದೆಷ್ಟೋ ಸಿನಿಮಾಗಳಿಗೆ ಈ ಹಿಂದೆ ಕಥೆಗಳನ್ನು ನೀಡಿದ್ದೇ ದಕ್ಷಿಣ ಭಾರತದ ಚಿತ್ರಗಳು. ನೀವು ಸಲ್ಮಾನ್ ಖಾನ್ ಅಭಿಮಾನಗಳಾದ್ದರೆ ಅವರು ಅಭಿನಯಿಸಿದ "ವಾಂಟೆಡ್" ಸಿನಿಮಾವನ್ನು ನೋಡಿಯೇ ಇರುತ್ತೀರ. ಅದು 2009ರಲ್ಲಿ ತೆಲುಗಿನ ನಟ ಮಹೇಶ್ ಬಾಬು ಅಭಿನಯಿಸಿದ ಪೋಕಿರಿ ಚಿತ್ರದ ರೀಮೇಕ್ ಆಗಿತ್ತು. ಮತ್ತು, ಬಾಲಿವುಡ್‌ನಲ್ಲಿ ಅತಿದೊಡ್ಡ ಹಿಟ್‌ಗಳನ್ನು ನೀಡಿದ ಸಿನಿಮಾಗಳೆಲ್ಲ ದಕ್ಷಿಣದ ಚಲನಚಿತ್ರಗಳ ನೇರ ರಿಮೇಕ್‌ಗಳು ಅಥವಾ ಅವುಗಳಿಂದ ಪ್ರೇರಿತವಾಗಿವೆ ಎಂಬುದು ಸಾಬೀತಾಗಿದೆ.

ಯಾವುದೇ ಸಿನಿಮಾ ಗೆಲ್ಲಲು ಚಿತ್ರಕಥೆಯೇ ಕಾರಣ

ಯಾವುದೇ ಸಿನಿಮಾ ಗೆಲ್ಲಲು ಚಿತ್ರಕಥೆಯೇ ಕಾರಣ

'ಕಂಟೆಂಟ್ ಈಸ್ ಕಿಂಗ್' ಅನ್ನೋ ಮಾತುಗಳು ಸಿನಿಮಾ ಅಂಗಳದಲ್ಲಿ ಯಾವಾಗಲೂ ಕೇಳಿ ಬರುತ್ತಿರುತ್ತದೆ. ಈ ವಿಷಯದಲ್ಲಿ ಅಲ್ಲು ಅರ್ಜುನ್ ನಟನೆಯ ಪುಷ್ಪ ಚಿತ್ರವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳುವುದಾದರೆ, ಅದರಲ್ಲಿ ಅದ್ಭುತವಾದ ವಿಷಯವಿದೆ. ದಕ್ಷಿಣ ಚಿತ್ರರಂಗದಲ್ಲಿ ಅವರು ವಿಶಿಷ್ಟ ಕಥೆಗಳ ಆಯ್ಕೆ ಮೂಲಕ ತಮ್ಮದೇ ಆಗಿರುವ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಆ ಮೂಲಕ ವಿಭಿನ್ನ ಚಿತ್ರಗಳ ನಿರೀಕ್ಷೆಯನ್ನು ಹುಟ್ಟು ಹಾಕಿದ್ದಾರೆ.

ಇದು ಕೇವಲ ವಿಷಯವಲ್ಲ, ನಾಯಕ ನಟರು ಸಹ ಎಲ್ಲರೊಂದಿಗೆ ಸಂಪರ್ಕ ಹೊಂದುವ ಚಲನಚಿತ್ರಗಳನ್ನು ಆಯ್ಕೆ ಮಾಡುತ್ತಾರೆ. ತೆಲುಗು ನಟ ಅಲ್ಲು ಅರ್ಜುನ್, ಪ್ರಭಾಸ್, ಮಹೇಶ್ ಬಾಬು, ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ಅಥವಾ ತಮಿಳು ನಟ ಸೂಪರ್ ಸ್ಟಾರ್ ರಜನಿಕಾಂತ್, ದಳಪತಿ ವಿಜಯ್ ಮತ್ತು ಅಜಿತ್ ವಿಭಿನ್ನ ಹಿನ್ನೆಲೆ ಅಭಿಮಾನಿಗಳನ್ನು ಹೊಂದಿದ್ದಾರೆ. ಈಗ ಹೆಚ್ಚಿದ ಜನಪ್ರಿಯತೆಯೊಂದಿಗೆ ಸಾಮಾಜಿಕ ಮಾಧ್ಯಮ ಮತ್ತು OTT ಯಿಂದಾಗಿ ದಕ್ಷಿಣ ಭಾರತದ ನಟರು ಪ್ಯಾನ್-ಇಂಡಿಯಾ ತಾರೆಗಳಾಗಿ ಮಿನುಗುತ್ತಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಪೈಸಾ ವಸೂಲ್ ಮನರಂಜನೆಯೇ ಪ್ರೇಕ್ಷಕರಿಗೆ ಮುಖ್ಯವಾಗಿದೆ.

ಸೌತ್ ಇಂಡಿಯಾ ಸಿನಿಮಾಗಳಿಗೆ ಡಿಮ್ಯಾಂಡ್ ಬಂದಿದ್ದು ಹೇಗೆ?

ಸೌತ್ ಇಂಡಿಯಾ ಸಿನಿಮಾಗಳಿಗೆ ಡಿಮ್ಯಾಂಡ್ ಬಂದಿದ್ದು ಹೇಗೆ?

ಬಾಲಿವುಡ್ ಸಿನಿಮಾಗಳು ಮಾಸ್ ಮಾರ್ಕೆಟ್ ಅನ್ನು ನಿರ್ಲಕ್ಷಿಸಿದ ಹಿನ್ನೆಲೆ ದಕ್ಷಿಣ ಭಾರತದ ಚಿತ್ರರಂಗಕ್ಕೆ ಸಡನ್ ಡಿಮ್ಯಾಂಡ್ ಸೃಷ್ಟಿಯಾಯಿತು ಎಂದು ವ್ಯಾಪಾರ ತಜ್ಞ ರಮೇಶ್ ಬಾಲಾ ಹೇಳುತ್ತಿದ್ದಾರೆ. "ಕಳೆದ ಕೆಲವು ವರ್ಷಗಳಲ್ಲಿ ಬಾಲಿವುಡ್ ಸಮೂಹ ಮಾರುಕಟ್ಟೆಯನ್ನು ನಿರ್ಲಕ್ಷಿಸಿದೆ, ರಾಜ್‌ಕುಮಾರ್ ರಾವ್, ಆಯುಷ್ಮಾನ್ ಖುರಾನಾ ಮುಂತಾದವರು ನಟಿಸಿದ ಚಲನಚಿತ್ರಗಳು ಭಾರತದ ಹೃದಯ ಭಾಗವನ್ನು ಭೇದಿಸುವುದಿಲ್ಲ. ಮಾಸ್ ಸಿನಿಮಾಗಳು ಖಂಡಿತಾ ಚೆನ್ನಾಗಿ ಬರುತ್ತವೆ. ಆದರೆ ಇಂದು ಹೆಚ್ಚು ಸ್ಟಾರ್ ಗಳು ಅಂಥ ಚಿತ್ರಗಳನ್ನು ಮಾಡುತ್ತಿಲ್ಲ? ಅಕ್ಷಯ್ ಕುಮಾರ್ ಕೂಡ ಟಾಯ್ಲೆಟ್ ಏಕ್ ಪ್ರೇಮ್ ಕಥಾ ಅಥವಾ ಹಾಸ್ಯದಂತಹ ಸಾಮಾಜಿಕ ಸಂದೇಶಗಳನ್ನು ಹೊಂದಿರುವ ಚಲನಚಿತ್ರಗಳನ್ನು ಮಾಡುತ್ತಿದ್ದಾರೆ. ಈಗ ಪುಷ್ಪಾಗೆ ಐಟಂ ಸಾಂಗ್ ಇದೆ ನೋಡಿ. ಇದರಲ್ಲಿ ಗ್ಲಾಮರ್ ಮತ್ತು ಆಕ್ಷನ್ ಇದೆ. ಸಲ್ಮಾನ್ ಖಾನ್ ಸಿನಿಮಾಗಳು ಕೂಡ ಜನಸಾಮಾನ್ಯರನ್ನು ಸೆಳೆಯುತ್ತವೆ. ಅಮೀರ್ ಖಾನ್ ಅವರ ಚಿತ್ರಗಳು ತುಂಬಾ ಕ್ಲಾಸಿ ಆಗಿರುತ್ತವೆ. ಆದ್ದರಿಂದ ಕೆಲವೇ ಸ್ಟಾರ್ ನಟರು ಆ ಮಾರುಕಟ್ಟೆಗೆ ಅಗತ್ಯವಾಗಿರುವ ವಿಷಯವನ್ನು ನೀಡುತ್ತಿವೆ," ಎಂದಿದ್ದಾರೆ.


"ದಕ್ಷಿಣದ ಸ್ಟಾರ್ ನಟರು ಎಲ್ಲಾ ಮಾರುಕಟ್ಟೆಗಳನ್ನು ಏಕರೂಪವಾಗಿ ನೀಡುತ್ತಿದ್ದಾರೆ. ಅವರು ಹಣವನ್ನು ಹಿಂಪಡೆಯುವ ರೀತಿಯಲ್ಲಿ ಚಿತ್ರಗಳನ್ನು ಮಾಡುತ್ತಾರೆ. ದಕ್ಷಿಣದ ದೊಡ್ಡ ತಾರೆಯೊಬ್ಬರು ಟಾಯ್ಲೆಟ್ ಏಕ್ ಪ್ರೇಮ್ ಕಥಾ ಚಿತ್ರ ಮಾಡಲು ಸಾಧ್ಯವಿಲ್ಲ, ಅವರು ಬೀಸ್ಟ್, ಬಿಗಿಲ್ ಅಥವಾ ಪುಷ್ಪ ರೀತಿಯ ಚಿತ್ರಗಳನ್ನು ಮಾಡಬೇಕು, ಅದರ ವ್ಯಾಪ್ತಿಯು ವಿಶಾಲವಾಗಿರುತ್ತದೆ. ಬಾಲಿವುಡ್ ನಮ್ಮನ್ನು ಮರೆತಿದೆ ಎಂದು ಸಿಂಗಲ್ ಸ್ಕ್ರೀನ್ ಪ್ರದರ್ಶಕರು ಹೇಳುತ್ತಿದ್ದಾರೆ. ಈಗ ಮಲ್ಟಿಪ್ಲೆಕ್ಸ್‌ಗಳಿಗೆ ಸಿನಿಮಾ ಮಾಡುತ್ತಿದ್ದಾರೆ. ಹಾಗಾಗಿ, ಪ್ಯಾನ್-ಇಂಡಿಯನ್ ಪ್ರೇಕ್ಷಕರನ್ನು ಪೂರೈಸಲು, ಒಂದು ಮಾಸ್ ಚಲನಚಿತ್ರವನ್ನು ಹೊಂದಿರಬೇಕು," ಎಂದು ರಮೇಶ್ ಬಾಲಾ ಹೇಳಿದ್ದಾರೆ.

ಬಾಲಿವುಡ್ ತನ್ನ ಪ್ರೇಕ್ಷಕರನ್ನು ಕಳೆದುಕೊಂಡಿದ್ದು ಹೇಗೆ?

ಬಾಲಿವುಡ್ ತನ್ನ ಪ್ರೇಕ್ಷಕರನ್ನು ಕಳೆದುಕೊಂಡಿದ್ದು ಹೇಗೆ?

ವ್ಯಾಪಾರ ತಜ್ಞ ರಮೇಶ್ ಬಾಲಾ ಉಲ್ಲೇಖಿಸಿದ ಮಾತುಗಳನ್ನು ಥಿಯೇಟರ್ ಮಾಲೀಕ ಮತ್ತು ವ್ಯಾಪಾರ ತಜ್ಞ ವಿಶೇಕ್ ಚೌಹಾಣ್ ಕೂಡ ಒಪ್ಪಿಕೊಂಡಿದ್ದಾರೆ. ಬಾಲಿವುಡ್ ಚಿತ್ರರಂಗದಲ್ಲಿದ್ದ ಗೋಲ್ಡನ್ ಶೋ ಮಾರುಕಟ್ಟೆ ಈಗ ದಕ್ಷಿಣದ ಕಡೆಗೆ ತಿರುಗಿದೆ. ಏಕೆಂದರೆ ಬಾಲಿವುಡ್ ಶೂನ್ಯವಾಗಿ ಬಿಟ್ಟಿದೆ. ಬಾಲಿವುಡ್ ಚಿತ್ರರಂಗವನ್ನು ಎತ್ತಿ ಮೆರೆಸಿದ ತನ್ನ ಮೂಲ ಪ್ರೇಕ್ಷಕರ ವರ್ಗವನ್ನು ಅದು ಮರೆತಿದೆ. ಆ ಪ್ರೇಕ್ಷಕರೆಲ್ಲ ಈಗ ಗ್ರಾಮೀಣ ಪ್ರದೇಶಗಳಿಗೆ ವಾಪಸ್ ಆಗಿದ್ದಾರೆ. ಅಂಥ ಪ್ರೇಕ್ಷಕರನ್ನು ಸೆಳೆಯುವ ನಿಟ್ಟಿನಲ್ಲಿ ಬಾಲಿವುಡ್ ಯಾವುದೇ ಚಿತ್ರಗಳನ್ನು ಮಾಡುತ್ತಿಲ್ಲ. ಆ ಪ್ರೇಕ್ಷಕರನ್ನು ಇವರು ಮರೆತು ಬಿಟ್ಟಿದ್ದಾರೆ. ಒಂದೊಂದು ಬಾರಿ ಸಲ್ಮಾನ್ ಖಾನ್ ಮತ್ತು ಟೈಗರ್ ಶ್ರಾಫ್ ಅಂಥ ಆಕ್ಟನ್ ಚಿತ್ರಗಳನ್ನು ಮಾಡುತ್ತಾರೆ. ಆದರೆ ಮತ್ತೆ ಅದನ್ನು ನಿರ್ಲಕ್ಷಿಸುವುದರಿಂದ ನೀವು ನಿಮ್ಮ ಪ್ರೇಕ್ಷಕರನ್ನು ಕಳೆದುಕೊಂಡಿದ್ದೀರಿ ಎಂದು ಹೇಳುತ್ತಾರೆ.

ಪ್ರಚಾರವಿಲ್ಲದೇ ಬ್ರ್ಯಾಂಡ್ ಆದ ಅಲ್ಲು ಅರ್ಜುನ್

ಪ್ರಚಾರವಿಲ್ಲದೇ ಬ್ರ್ಯಾಂಡ್ ಆದ ಅಲ್ಲು ಅರ್ಜುನ್

ಸೌತ್ ಇಂಡಿಯಾದ ಸ್ಟಾರ್ ನಟರನ್ನು ಹಾಡಿ ಹೊಗಳಿದ ವಿಶೇಕ್ ಚೌಹಾಣ್, "ಈ ವ್ಯಕ್ತಿಗಳು ಸ್ಯಾಟಲೈಟ್ ಮತ್ತು ಮಾರುಕಟ್ಟೆಯಲ್ಲಿ ಇತರೆ ಯಾವುದೇ ಮೂಲಗಳಿಲ್ಲದೇ ಎಷ್ಟು ಪ್ರಬಲ ಬ್ರ್ಯಾಂಡ್ ಆಗಿದ್ದಾರೆ ಎಂದರೆ ಪ್ರಚಾರವಿಲ್ಲದೆ, ಏನೂ ಇಲ್ಲದೆ, ಅಲ್ಲು ಅರ್ಜುನ್ ಉತ್ತರದ ಮಾರುಕಟ್ಟೆಗಳಲ್ಲಿ ಫೇಮಸ್ ಆಗಿ ಬಿಟ್ಟಿದ್ದಾರೆ. ಇಂದು ಅವರು ಉತ್ತರ ಭಾರತದ ಅತ್ಯಂತ ದೊಡ್ಡ ಸ್ಟಾರ್ ನಟರಲ್ಲಿ ಅವರೂ ಒಬ್ಬರಾಗಿದ್ದಾರೆ. ಇನ್ನು ಅಂಕಿ-ಅಂಶಗಳನ್ನು ನೋಡಿದರೆ ನಂಬಲಾಗದಂತಿದೆ. ಯಾವುದೇ ಪ್ರಚಾರವಿಲ್ಲದೆ ಮೊದಲ ಬಾರಿಗೆ ಥಿಯೇಟರ್‌ಗೆ ಬಂದ ನಟರು ಅತಿಹೆಚ್ಚು ಅಭಿಮಾನಿ ವರ್ಗವನ್ನು ಸಂಪಾದಿಸುತ್ತಾರೆ ಎಂದರೆ, ಬಾಲಿವುಡ್ ಅಂಗಳದಲ್ಲಿರುವ ಲೋಪವನ್ನು ತುಂಬುವುದಕ್ಕೆ ದಕ್ಷಿಣ ಭಾರತದ ನಿರ್ಮಾಪಕರು ಮುಂದಾಗುತ್ತಿದ್ದಾರೆ," ಎಂದರು.

ಆರ್‌ಆರ್‌ಆರ್ ಸಿನಿಮಾದ ಬಗ್ಗೆ ಉಲ್ಲೇಖಿಸಿ ಮಾತು

ಆರ್‌ಆರ್‌ಆರ್ ಸಿನಿಮಾದ ಬಗ್ಗೆ ಉಲ್ಲೇಖಿಸಿ ಮಾತು

"ಆರ್‌ಆರ್‌ಆರ್ ಸಿನಿಮಾವನ್ನೊಮ್ಮೆ ನೋಡಿ, ಅದಕ್ಕೆ ಸಿಗುತ್ತಿರುವ ಸ್ವಾಗತ ಹೇಗಿದೆ. ಮುಂಬೈನ ಸ್ಥಳೀಯ ತಾರೆಯರು ಕೂಡ 'ಹಮ್ ಕುಚ್ ನಹೀ ಹೈ ಇಂಕೆ ಸಾಮ್ನೆ (ಅವರ ಮುಂದೆ ನಾವು ಏನೂ ಅಲ್ಲ)' ಎಂದು ಹೇಳುತ್ತಿದ್ದಾರೆ. ಅವರು ಶರಣಾಗಿದ್ದಾರೆ ಮತ್ತು ಸೌತ್ ಚಿತ್ರರಂಗ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳುತ್ತಿದ್ದಾರೆ. ಅವರು ದೊಡ್ಡ ಚಿತ್ರಗಳನ್ನು ಮಾಡುತ್ತಿದ್ದಾರೆ. ರಾಜಮೌಳಿ ಅಥವಾ ಯಾರಿಗೆ ಹೋಲಿಸಿದರೆ ನಮಗೆ ಏನೂ ಇಲ್ಲ. ಹಾಗಾಗಿ ಈ ಹುಡುಗರು ಉತ್ತರದಲ್ಲಿ ಪ್ರಭಾವ ಸೃಷ್ಟಿಸುತ್ತಿದ್ದಾರೆ.

ಪ್ಯಾನ್-ಇಂಡಿಯಾ ಸಿನಿಮಾ ಆಗಿ ಹೊರ ಹೊಮ್ಮಿದ ಕೆಜಿಎಫ್ ಚಾಪ್ಟರ್-2

ಪ್ಯಾನ್-ಇಂಡಿಯಾ ಸಿನಿಮಾ ಆಗಿ ಹೊರ ಹೊಮ್ಮಿದ ಕೆಜಿಎಫ್ ಚಾಪ್ಟರ್-2

ಸ್ಯಾಂಡಲ್ ವುಡ್ ಅಂಗಳದ ಸಿನಿಮಾವೊಂದು ಬಾಲಿವುಡ್ ಮಾತ್ರವಲ್ಲದೇ ದೇಶ-ವಿದೇಶಗಳಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದೆ. ರಾಕಿಂಗ್ ಸ್ಟಾರ್ ಯಶ್ ನಟಿಸಿರುವ ಕೆಜಿಎಫ್ ಚಾಪ್ಟರ್-2 ಚಿತ್ರ ಏಪ್ರಿಲ್ 14ರಂದು ಒಟ್ಟು 10,000ಕ್ಕೂ ಹೆಚ್ಚು ಬಿಗ್ ಸ್ಕ್ರೀನ್ ಗಳಲ್ಲಿ ರಿಲೀಸ್ ಆಗಿದೆ. ಈವರೆಗೂ 130 ಕೋಟಿಗೂ ಅಧಿಕ ಹಣವನ್ನು ಬಾಚಿಕೊಂಡಿದೆ ಎಂದು ಹೇಳಲಾಗುತ್ತಿದೆ. ಕನ್ನಡದ ಕೆಜಿಎಫ್ ಚಾಪ್ಟರ್-2 ಸಿನಿಮಾ ಹಿಂದಿ, ತಮಿಳು, ಮಲಯಾಳಂ, ತೆಲುಗು ಭಾಷೆಗಳಲ್ಲಿ ಡಬ್ ಆಗಿದೆ. ಅಮೆರಿಕಾದಲ್ಲಿ ಮೊದಲ ದಿನವೇ 7 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಹಿಂದಿ ವರ್ಷನ್ ಮೂಲಕ 45 ರಿಂದ 50 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ.

ಬಾಲಿವುಡ್ ಹಿಂದೆ ಬಿದ್ದಿದ್ದು ಎಲ್ಲಿ?

ಬಾಲಿವುಡ್ ಹಿಂದೆ ಬಿದ್ದಿದ್ದು ಎಲ್ಲಿ?

ಬಾಲಿವುಡ್‌ನ ಚಿತ್ರರಂಗವು ಪ್ರೇಕ್ಷಕರನ್ನು ಸೆಳೆಯುವಲ್ಲಿ ಸೋತಿದ್ದು ಎಲ್ಲಿ ಎಂಬುದನ್ನು ವಿಶೇಕ್ ಚೌಹಾಣ್ ವಿವರಿಸಿ ಹೇಳಿದ್ದಾರೆ. "ನೀವು ಕೇವಲ ಸುಂದರವಾದ, ಬುದ್ಧಿವಂತ ವಿಷಯ, ಉತ್ತಮ ಸಿನಿಮಾದ ಮೇಲೆ ಕೇಂದ್ರೀಕೃತರಾಗಿದ್ದೀರಿ, ಅದು ಸರಿ. ಆದರೆ ದಿನದ ಕೊನೆಯಲ್ಲಿ, ನೀವು ಜನರನ್ನು ರಂಜಿಸಬೇಕು. ಏಕೆಂದರೆ ಅವರು ಮನರಂಜನೆಗಾಗಿ ನಿಮ್ಮ ಸಿನಮಾಗಳಿಗೆ ಬರುತ್ತಾರೆ. ನೀವು ಅವರ ದೊಡ್ಡ ಸಹೋದರನಾಗಲು ಸಾಧ್ಯವಿಲ್ಲ ಅಥವಾ ಇದೊಂದು ಸಾಮಾಜಿಕ ಕಥೆ, ಇದನ್ನು ನೋಡಿ) ಎಂದು ಅವರಿಗೆ ಹೇಳಲು ಸಾಧ್ಯವಿಲ್ಲ. ಸಿನಿಮಾ ಪ್ರಚಾರ ಮಾಡಬೇಕು ಎಂದು ಯಾರು ಹೇಳಿದರು? ಸ್ಪೈಡರ್ಮ್ಯಾನ್ ಎಂದರೇನು, ಇದು ಮೋಜಿನ ಸವಾರಿ. ಪುಷ್ಪಾ ಕೂಡ ತುಂಬಾ ಮೋಜಿನ ಸಿನಿಮಾ ಆಗಿದೆ. ಹಾಗಾಗಿ ಜನರು ಚಿತ್ರಮಂದಿರಗಳಿಗೆ ಹೋಗುತ್ತಾರೆ. ಹೀಗಾಗಿಯೇ ಪುಷ್ಪ ಚಿತ್ರ ಕೂಡ ಕೋಟಿ ಕೋಟಿ ರೂಪಾಯಿ ಹಣವನ್ನು ಕಲೆಕ್ಷನ್ ಮಾಡಿದೆ," ಎನ್ನುವುದು ವಿವೇಕ್ ಚೌಹಾಣ್ ಅವರ ವಾದವಾಗಿದೆ.

English summary
How Did South India cinemas has cracked the Hindi market after Covid pandemic; explained in kannada. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X