ಹಾನರ್ ಲಾಂಚ್ ಮಾಡಲಿದೆ ಮೂರು ಸ್ಮಾರ್ಟ್‌ಫೋನ್ಸ್: ಏನೆಲ್ಲಾ ವಿಶೇಷತೆ ಇದೆ ಗೊತ್ತಾ?
ವಿಶ್ವದ ದೈತ್ಯ ಟೆಕ್ ಕಂಪನಿಗಳಲ್ಲಿ ಒಂದಾಗಿರುವ ಹಾನರ್, ಮತ್ತೊಮ್ಮೆ ತನ್ನ ಮೊಬೈಲ್ ಫೋನ್‌ಗಳಿಂದ ಸುದ್ದಿ ಮಾಡಲಿದೆ. ಈಗಾಗಲೇ ವಿಶ್ವದ ಮಾರುಕಟ್ಟೆಯಲ್ಲಿ ಸದ್ದು ಮಾಡಿರುವ ಈ ಫೋನ್ ಇನ್ನೇನು ಕೆಲವೇ ದಿನಗಳಲ್ಲಿ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಏಕಕಾಲಕ್ಕೆ ಕಂಪನಿ ಮೂರು ಮೊಬೈಲ್ ಫೋನ್‌ಗಳನ್ನು ಬಿಡುಗಡೆ ಮಾಡಲಿದ್ದು, ಗ್ರಾಹಕರು ಈ ಫೋನ್‌ಗಾಗಿ ಕಾಯುವಂತೆ ಮಾಡಿದೆ.
Honor 200 ಸರಣಿಯನ್ನು ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಸರಣಿಯನ್ನು ಕಳೆದ ತಿಂಗಳು ಹಾನರ್ ಚೀನಾದ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿತ್ತು. Honor Honor 200 ಸರಣಿಯಲ್ಲಿ ಮೂರು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ, ಇದರಲ್ಲಿ ಇದು ಸ್ಟ್ಯಾಂಡರ್ಡ್ ಮತ್ತು ಪ್ರೊ ರೂಪಾಂತರಗಳು ಸೇರಿವೆ.

Honor 200 ಸರಣಿಯಲ್ಲಿ, ಕಂಪನಿಯು Honor 200, Honor 200 Pro ಮತ್ತು Honor 200 Lite ಮೂರು ಬಗೆಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಈ ಫೋನ್‌ಗಳು ಸೊಗಸಾದ ಲುಕ್ ಹೊಂದಿವೆ. ಈ ಫೋನ್‌ಗಳಲ್ಲಿ ಉತ್ತಮ ಕ್ಯಾಮೆರಾ ಸಹ ಒದಗಿಸಲಾಗಿದ್ದು, ಛಾಯಾಚಿತ್ರ ಸೆರೆ ಹಿಡಿಯಲು ಸಹಾಯಕ.
ಫೋನಿನ ಡಿಸಪ್ಲೇ ಹೇಗಿದೆ?
ನಿಜಕ್ಕೂ ಗ್ರಾಹಕ ಫೋನನ್ನು ಇಷ್ಟ ಪಡುವುದು ಅದರ ಫ್ರಂಟ್ ಹಾಗೂ ಬ್ಯಾಕ್ ಲುಕ್‌ನಿಂದ. ಈ ಫೋನ್ ಫ್ರಂಟ್ ಲುಕ್ ಸಖತ್ ಆಗಿದೆ. ಹಾನರ್ 200 6.7 ಇಂಚಿನ ಡಿಸಪ್ಲೇಯನ್ನು ಹೊಂದಿದೆ. Honor 200 Pro 6.78 ಇಂಚಿನ ಡಿಸಪ್ಲೇ ಹೊಂದಿದೆ. ಎರಡೂ ಸ್ಮಾರ್ಟ್‌ಫೋನ್‌ಗಳು 1.5K ಓ ಎಲ್‌ಇಡಿ ಕರ್ವಡ್ ಡಿಸ್‌ಪ್ಲೇಯನ್ನು ಹೊಂದಿವೆ. ಎರಡೂ ಫೋನ್‌ಗಳು 120Hz ರಿಫ್ರೆಶ್ ರೇಟ್‌ನೊಂದಿಗೆ 4000 ನಿಟ್‌ಗಳ ಗರಿಷ್ಠ ಹೊಳಪನ್ನು ಹೊಂದಿವೆ.

ಇದರಲ್ಲಿ ಯಾವ ಪ್ರೊಸೆಸರ್ ನೀಡಲಾಗಿದೆ?
ಹಾನರ್ 200 ಮೊಬೈಲ್‌ನಲ್ಲಿ ಕಂಪನಿ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 7 ಜನರೇಷನ್ 3 ಆಕ್ಟಾಕೋರ್ ಪ್ರೊಸೆಸರ್ ಅನ್ನು ಹೊಂದಿದೆ. ಆದರೆ ಕಂಪನಿಯು ಹಾನರ್ 200 Pro ನಲ್ಲಿ ಕ್ವಾಲ್ಕಂನ ಇತ್ತೀಚಿನ ಸ್ನ್ಯಾಪ್ ಡ್ರ್ಯಾಗನ್ 8s Gen 3 ಪ್ರೊಸೆಸರ್ ಅನ್ನು ನೀಡಲಿದೆ. ಎರಡೂ ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್ 14 ಸಾಫ್ಟ್‌ವೇರ ಬೆಂಬಲಿಸುತ್ತವೆ.
ಈ ಮೊಬೈಲ್‌ಗಳ ಕ್ಯಾಮೆರಾ ಹೇಗಿದೆ?
ಹಾನರ್ 200 ಸರಣಿ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಹಾನರ್ 200 ನಲ್ಲಿನ ಪ್ರಾಥಮಿಕ ಕ್ಯಾಮೆರಾ 50 ಮೆಗಾಪಿಕ್ಸೆಲ್‌ಗಳಾಗಿದ್ದು, ಇದರಲ್ಲಿ ಸೋನಿಯ ಸಂವೇದಕವನ್ನು ಒದಗಿಸಲಾಗಿದೆ. Honro 200 Pro ನಲ್ಲಿ, ಕಂಪನಿಯು 2.2 ಅಪರ್ಚರ್ OmniVision ನ 50 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ನೀಡಿದೆ. ಇದರೊಂದಿಗೆ, ಎರಡೂ ಫೋನ್‌ಗಳು 12-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 50-ಮೆಗಾಪಿಕ್ಸೆಲ್ ಪೋರ್ಟ್ರೇಟ್ ಟೆಲಿಫೋಟೋ ಕ್ಯಾಮೆರಾವನ್ನು ಹೊಂದಿವೆ. ಈ ಎರಡೂ ಫೋನ್‌ಗಳ ಮುಂಭಾಗದಲ್ಲಿ 50-ಮೆಗಾಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ.
ಈ ಮೊಬೈಲ್‌ಗಳಿಗೆ 5200mAh ಬ್ಯಾಟರಿಯನ್ನು ಒದಗಿಸಿದೆ. ಎರಡೂ ಸ್ಮಾರ್ಟ್‌ಫೋನ್‌ಗಳು 100W ಸೂಪರ್ ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲವನ್ನು ಹೊಂದಿವೆ. ಕಂಪನಿಯು Honor 200 Pro ನಲ್ಲಿ 66W ವೈರ್‌ಲೆಸ್ ಸೂಪರ್ ಚಾರ್ಜಿಂಗ್ ಫೆಸಿಲಿಟಿ ಸಹ ನೀಡಿದೆ.
Honor 200 ಎರಡು ರೂಪಾಂತರಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯ
8 ಜಿಬಿ, 256 ಜಿಬಿ ಇಂಟರ್ನಲ್ ಸ್ಟೋರೇಜ್ ಬೆಲೆ 45,100 ರೂ.
12 ಜಿಬಿ, 512 ಜಿಬಿ ಇಂಟರ್ನಲ್ ಸ್ಟೋರೇಜ್ ಬೆಲೆ 53,000 ರೂ.
Honor 200 Pro ಬೆಲೆ ಎಷ್ಟು?
12 ಜಿಬಿ, 512 ಜಿಬಿ ಇಂಟರ್ನಲ್ ಸ್ಟೋರೇಜ್ ಬೆಲೆ 63,000 ರೂ.
-
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral












Click it and Unblock the Notifications