ಭಾರತದ ಮಾರುಕಟ್ಟೆಗೆ ಇಂದು ಲಗ್ಗೆ ಇಡಲಿದೆ ಎಚ್‌ಎಂಡಿ ಫೋನ್
ಭಾರತದ ಮಾರುಕಟ್ಟೆಯಲ್ಲಿ ಈಗಾಗಲೇ ಹಲವು ಕಂಪನಿಯ ಫೋನ್‌ಗಳು ಹವಾ ಕ್ರಿಯೆಟ್ ಮಾಡಿವೆ. ಅದರಲ್ಲಿ ಚೀನಾ ಕಂಪನಿಯ ಫೋನ್‌ಗಳ ಪ್ರಭಾವ ಹೆಚ್ಚು. ಈ ಕಂಪನಿಗಳ ಫೋನ್‌ಗಳ ಜೊತೆ ಪೈಪೋಟಿ ನಡೆಸಲು ಎಚ್‌ಎಂಡಿ ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿದೆ. ಈ ಫೋನ್‌ಗಳು ಗುರುವಾರ (ಜುಲೈ 25) ಮಾರುಕಟ್ಟೆಗೆ ಲಗ್ಗೆ ಇಡಲಿವೆ.
ಭಾರತದಲ್ಲಿ ಮೊದಲು ಮೊಬೈಲ್ ಫೋನ್‌ಗಳ ಲಾಂಚ್ ಆದಾಗ ನೋಕಿಯಾ ಕಂಪನಿ ಫೋನ್‌ಗಳ ಕ್ರೇಜ್ ಹೆಚ್ಚೆ ಇತ್ತು. ಈಗ ನೋಕಿಯಾ ಹಾಗೂ ಎಚ್‌ಎಂಡಿ ಕಂಪನಿಗಳು ಭಾರತದಲ್ಲಿ ಮತ್ತೊಮ್ಮೆ ಸದ್ದು ಮಾಡಲು ತಯಾರಿ ನಡೆಸಿವೆ. ಈ ಫೋನ್‌ಗಳು ನಿಜಕ್ಕೂ ಕ್ಲಾಸಿಕ್ ಆಗಿದ್ದು, ಗ್ರಾಹಕರ ಚಿತ್ತವನ್ನು ತನ್ನತ್ತ ಸೆಳೆಯಲು ಪ್ಲ್ಯಾನ್ ಮಾಡಿಕೊಂಡಿವೆ.

ಏನೆಲ್ಲಾ ವಿಶೇಷತೆ ಹೊಂದಿದೆ?
ಎಚ್‌ಎಂಡಿ ಕಂಪನಿಯ ಫೋನ್‌ಗಳು ಕಾಣಲು ಸಾಕಷ್ಟು ಆಕರ್ಷಕವಾಗಿವೆ. ಈ ಫೋನ್‌ಗಳನ್ನು ಅಮೆಜಾನ್ ವೆಬ್‌ಸೈಟ್ ಅಥವಾ ಕಂಪನಿಯ ವೆಬ್‌ಸೈಟ್‌ನಲ್ಲಿ ಪಡೆಯಬಹುದು. ಗ್ಲಾಸ್ ಬ್ಯಾಕ್ ಕವರ್ ಹೊಂದಿರುವ ಈ ಫೋನ್‌ಗಳು, ರಿಪೇರಿ ಮಾಡಲು ಸುಲಭವಾಗಿರುತ್ತವೆ. ಈ ಫೋನ್ ಭಾರತದಲ್ಲಿ 8 ಜಿಬಿ ರ್ಯಾಮ್ ಹಾಗೂ ಆಂಡ್ರಾಯ್ಡ್ 14 ಬೆಂಬಲದೊಂದಿಗೆ ಬರಲಿದೆ. ಇದರಲ್ಲಿ ಸುಧಾರಿತ ಯುನಿಸ್ಕೋ ಟಿ760 ಚಿಪ್ ಸೆಟ್ ಅಳವಡಿಸಲಾಗಿದೆ. ಈ ಮೊಬೈಲ್‌ಗಳು ಮಿಡ್ ರೇಂಜ್ ಗ್ರಾಹಕರನ್ನೇ ಟಾರ್ಗೆಟ್ ಮಾಡಲಿವೆ.
ಸುಲಭ ರಿಪೇರಿ?
HMD ಯ ಮುಂಬರುವ ಎರಡೂ ಫೋನ್‌ಗಳ ದೊಡ್ಡ ವಿಶೇಷವೆಂದರೆ ಅವುಗಳನ್ನು ನೀವೇ ರಿಪೇರಿ ಮಾಡಿಕೊಳ್ಳಬಹುದು. HMD ಯ ಎರಡೂ ಸ್ಮಾರ್ಟ್‌ಫೋನ್‌ಗಳನ್ನು ಕಂಪನಿಯು ಡಿಸ್‌ಪ್ಲೇ ರಿಪ್ಲೇಸ್‌ಮೆಂಟ್‌ನಂತಹ ಕೆಲಸವನ್ನು ಸಹ ಕೆಲವೇ ಹಂತಗಳಲ್ಲಿ ಪೂರ್ಣಗೊಳಿಸುವ ರೀತಿಯಲ್ಲಿ ವಿನ್ಯಾಸಗೊಳಿಸಿದೆ.
ಕಂಪನಿಯು ಅದರ ಬೆಲೆ, ವೈಶಿಷ್ಟ್ಯಗಳು ಮತ್ತು ವಿನ್ಯಾಸದ ಬಗ್ಗೆ ಯಾವುದೇ ಬಹಿರಂಗಪಡಿಸುವಿಕೆಯನ್ನು ಮಾಡಿಲ್ಲ. ಅಮೆಜಾನ್‌ನ ಪಟ್ಟಿಯು ವೃತ್ತಾಕಾರದ ಆಕಾರದ ಕ್ಯಾಮೆರಾ ಮಾಡ್ಯೂಲ್ ಅನ್ನು ಹೊಂದಿರುತ್ತದೆ ಎಂದು ತೋರಿಸುತ್ತದೆ.
ಭಾರತದಲ್ಲಿ ಬಿಡುಗಡೆ ಆಗಲಿರುವ hmd crest ಗ್ಲೋಬಲಿ ಲಾಂಚ್ ಆಗಿರುವ ಇದೇ ಕಂಪನಿಯ ಸ್ಕೈ ಲೈನ್‌ಗೆ ಹೋಲುತ್ತದೆ ಎಂದು ಹೇಳಲಾಗುತ್ತಿದೆ. ಈ ಫೋನ್‌ಗಳ ರಿಪೇರ್ ಕೆಲಸವನ್ನು ತ್ವರಿತಗತಿಯಲ್ಲಿ ಮಾಡಿಕೊಳ್ಳಬಹುದು. ಅಲ್ಲದೆ ಸ್ಕೈ ಲೈನ್ ಮೊಬೈಲ್‌ನ ಅಪ್‌ಗ್ರೇಡ್ ವರ್ಷನ್ ಅಂಸು ಸಹ ಹೇಳಲಾಗುತ್ತಿದೆ.
ಸ್ಕೈ ಲೈನ್ ಮೊಬೈಲ್‌ಗಳ ವಿಶೇಷತೆ ಏನು?
ಸ್ಕೈ ಲೈನ್ ಮೊಬೈಲ್‌ಗಳು 12 ಜಿಬಿ ರ್ಯಾಮ್ ಹಾಗೂ 128 ಜಿಬಿ ಹಾಗೂ 256 ಜಿಬಿ ಇಂಟರ್ನಲ್ ಸ್ಟೋರೆಜ್‌ನೊಂದಿಗೆ ಬರುತ್ತವೆ. ಅಲ್ಲದೆ ಇದರಲ್ಲಿ ಕ್ವಾಲಕಂ ಸ್ನ್ಯಾಪ್‌ಡ್ರ್ಯಾಗನ್ 7 ಜನರೇಷನ್ 2 ಚಿಪ್‌ಸೆಟ್ ಬಳಿಸಲಾಗಿದೆ. ಈ ಮೊಬೈಲ್ ಫೋನ್ ಪ್ರೈಮರಿ ಕ್ಯಾಮೆರಾ 108 ಎಂಪಿ ಇದ್ದು, ಮುಂಭಾಗದಲ್ಲಿ 50 ಎಂಪಿ ಕ್ಯಾಮೆರಾ ನೀಡಲಾಗಿದೆ.
ಭಾರತದಲ್ಲಿ ಬಿಡುಗಡೆ ಆಗಲಿರುವ hmd crest ಇದರಂತೆ ಇರಲಿದೆಯೋ ಅಥವಾ ಹೆಚ್ಚಿನ ಫೀಚರ್ಸ್ ಹೊಂದಿರಲಿದೆಯೋ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications