#Thankyou Doctor ಟ್ರೆಂಡ್, ರಾಷ್ಟ್ರೀಯ ವೈದ್ಯ ದಿನ ಸಂಭ್ರಮ
ಭಾರತರತ್ನ, ಸ್ವಾತಂತ್ರ್ಯ ಹೋರಾಟಗಾರ, ಮಹಾತ್ಮಾ ಗಾಂಧೀ ಅವರ ಆಪ್ತ ವೈದ್ಯ, ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಡಾ.ಬಿದನ್ ಚಂದ್ರ ರಾಯ್ ಅವರ ನೆನಪಿನಲ್ಲಿ ಜುಲೈ1ರಂದು ದೇಶದೆಲ್ಲೆಡೆ ರಾಷ್ಟ್ರೀಯ ವೈದರ ದಿನಾಚರಣೆ ನಡೆಯುತ್ತಿದೆ. ಈ ದಿನ ಮಹಾವೈದ್ಯ ಬಿಸಿ ರಾಯ್ ಅವರ ಜಯಂತಿ ಹಾಗೂ ವರ್ಧಂತಿ ದಿನವಾಗಿರುವುದು ವಿಶೇಷ.
'ಸೇವೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು, ರೋಗಿಗಳಿಗೆ ಹೊಸ ಬದುಕು ನೀಡುವ ವೈದ್ಯ ವೃತ್ತಿಯನ್ನು ದೇವರ ಕೆಲಸಕ್ಕೆ ಹೋಲಿಸುತ್ತಾರೆ. ಅದಕ್ಕೆಂದೇ ವೈದ್ಯೋ ನಾರಾಯಣೋ ಹರಿಃ ಎಂಬ ಮಾತು ಚಾಲ್ತಿಯಲ್ಲಿದೆ. ಇಂದು ರಾಷ್ಟ್ರೀಯ ವೈದ್ಯ ದಿನದ ಅಂಗವಾಗಿ ಸಾಮಾಜಿಕ ಜಾಲ ತಾಣಗಳಲ್ಲಿ ವೈದ್ಯರಿಗೆ ಶುಭಹಾರೈಸಿದ್ದಾರೆ.
ವಿಶೇಷವಾಗಿ ಕೊರೊನಾವೈರಸ್ ಸೋಂಕು ಹರಡದಂತೆ ನಿಯಂತ್ರಿಸುವಲ್ಲಿ, ಕೊವಿಡ್ 19 ರೋಗಿಗಳ ಚಿಕಿತ್ಸೆಯಲ್ಲಿ ಮಹಾಮಾರಿಗೆ ಲಸಿಕೆ ಔಷಧ ಕಂಡು ಹಿಡಿಯುವಲ್ಲಿ ವೈದ್ಯರ ಪಾತ್ರ ಹಿರಿದಾಗಿದೆ.
Recommended Video
ವೈದ್ಯಕೀಯ ಕ್ಷೇತ್ರಕ್ಕೆ ಮಹಾವೈದ್ಯ ಬಿ.ಸಿ ರಾಯ್ ನೀಡಿದ ಕಾಣಿಕೆಯನ್ನು ಮನಗಂಡು ಅವರ ಹುಟ್ಟಿದ ದಿನವನ್ನು ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತದೆ.
|
ಮಹಾವೈದ್ಯ ಡಾ.ಬಿದನ್ ಚಂದ್ರ ರಾಯ್
ಡಾ.ಬಿದನ್ ಚಂದ್ರ ರಾಯ್ ಅವರು ಲಂಡನ್ನಿನಿಂದ ಎಫ್.ಆರ್.ಸಿ.ಎಸ್ ಹಾಗೂ ಎಂ.ಆರ್.ಸಿ.ಪಿ ಪದವಿ ಪಡೆದ ನಂತರ ಭಾರತದಲ್ಲಿ ವೈದ್ಯ ವೃತ್ತಿ ಆರಂಭಿಸಿದವರು.. ಮಹಾವೈದ್ಯನಿಗೆ ನಮನ ಸಲ್ಲಿಸಿರುವ ಸಿಆರ್ ಪಿಎಫ್ ಟ್ವೀಟ್ ಮಾಡಿ, ಕಾಯಿಲೆ, ಸೋಂಕಿನ ವಿರುದ್ಧ ನಿರಂತರ ಯುದ್ಧ ಮಾಡುತ್ತಿರುವ ವಾರಿಯರ್ ಗಳಿಗೆ ನಮ್ಮ ನಮನ, ನಮಗಾಗಿ ಜೀವ ಪಣಕ್ಕಿಟ್ಟಿರುವ ನೀವೆ ನಿಜವಾದ ಹೀರೋಗಳು ನಿಮಗೆ ಧನ್ಯವಾದ ನಮ್ಮ ನಮನ ಎಂದಿದ್ದಾರೆ.
|
ಮುಂಬೈ ಪೊಲೀಸರಿಂದ ಟ್ವೀಟ್
ಮುಂಬೈ ಪೊಲೀಸ್ ಇಲಾಖೆ ಟ್ವೀಟ್ ಮಾಡಿ, ವೈದ್ಯರು ಬಳಸುವ ಏರ್ಪಾನ್ ಗಳನ್ನು ಸೂಪರ್ ಹೀರೋಗಳ ಜರ್ಸಿ ಜೊತೆಗೆ ತೂಗು ಹಾಕಿದ್ದಾರೆ. ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಡಾಕ್ಟರ್ಸ್ ನಿಜವಾದ ಸೂಪರ್ ಹೀರೋಗಳು ಎಂದು ಕರೆದಿದ್ದಾರೆ.
|
ಡಾ. ಕಿರೀಟ್ ಸೋಲಂಕಿ ಟ್ವೀಟ್
ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳಾಗಿ 14 ವರ್ಷ ಕರ್ತವ್ಯ ನಿಭಾಯಿಸಿದ ರಾಯ್ ಅವರು ಸಿಎಂ ಆಗಿದ್ದಾಗಲೂ ಪ್ರತಿ ದಿನ ಸುಮಾರು 2 ಗಂಟೆಗಳ ಕಾಲ ರೋಗಿಗಳಿಗೆ ಉಚಿತ ಚಿಕಿತ್ಸೆಯನ್ನು ನೀಡುತ್ತಿದ್ದರು. ಅಹಮದಾಬಾದ್ ಲೋಕಸಭೆ ಸಂಸದ, ಸರ್ಜನ್ ಆಗಿದ್ದ ಡಾ. ಕಿರೀಟ್ ಸೋಲಂಕಿ ಅವರು ಟ್ವೀಟ್ ಮಾಡಿ, ವೈದ್ಯರ ವೃತ್ತಿ ಶ್ರೇಷ್ಠವಾದದ್ದು ಎಂದಿದ್ದಾರೆ.
|
ನಿಮ್ಮ ವೈದ್ಯರ ಬಗ್ಗೆ ನಾಲ್ಕು ಒಳ್ಳೆ ಮಾತುಗಳನ್ನಾಡಿ
ನಿಮ್ಮ ವೈದ್ಯರ ಬಗ್ಗೆ ನಾಲ್ಕು ಒಳ್ಳೆ ಮಾತುಗಳನ್ನಾಡಿ, ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನೂ ಬದಿಗಿಟ್ಟು, ರೋಗಿಗಳ ಆರೋಗ್ಯಕ್ಕಾಗಿ ಅವಿರತವಾಗಿ ಹೋರಾಡುವ ಎಲ್ಲ ವೈದ್ಯರಿಗೂ ವೈದ್ಯ ದಿನದ ಶುಭಾಶಯಗಳು
|
ವೈದ್ಯೋ ನಾರಾಯಣೋ ಹರಿ:
ವೈದ್ಯೋ ನಾರಾಯಣೋ ಹರಿ: ಎಂದು ವೈದ್ಯರ ಬಗ್ಗೆ ಮೆಚ್ಚುಗೆ ಮಾತನಾಡಿ, ಕೊವಿಡ್ 19 ನಿಯಂತ್ರಣ ಹಾಗೂ ರೋಗಿಗಳ ಚಿಕಿತ್ಸೆಗಾಗಿ ಹಗಲುರಾತ್ರಿ ಶ್ರಮಿಸುತ್ತಿರುವ ತಂಡಕ್ಕೆ ಧನ್ಯವಾದಗಳು ಎಂದು ಕರ್ನಾಟಕದ ಸಚಿವ ಡಾ. ಸಿ.ಎನ್ ಅಶ್ವಥನಾರಾಯಣ ಹೇಳಿದ್ದಾರೆ.
|
ನನ್ನ ವೈದ್ಯಕೀಯ ಕುಟುಂಬಕ್ಕೆ ಶುಭಾಶಯ
ನಮ್ಮ ಸಮಾಜ ಅತ್ಯಂತ ಗೌರವ, ಪ್ರೀತಿ, ಆದರಣೆಗಳಿಂದ ಕಾಣುವ ವೃತ್ತಿ ಅಂದರೆ ಅದು ವೈದ್ಯ ವೃತ್ತಿ. ಕೋವಿಡ್ ವಿರುದ್ಧ ಹೋರಾಡುತ್ತಿರುವ ಈ ಸಂದರ್ಭದಲ್ಲಿ ವೈದ್ಯರನ್ನು ಆಶಾದೀಪದಂತೆ ಕಾಣಲಾಗುತ್ತಿದೆ. ರಾಷ್ಟ್ರೀಯ ವೈದ್ಯರ ದಿನದಂದು ನನ್ನ ವೈದ್ಯಕೀಯ ಕುಟುಂಬಕ್ಕೆ ಶುಭಾಶಯ ಕೋರುತ್ತಾ ಒಂದು ಸಣ್ಣ ಸಂದೇಶ. #DoctorsDay ಎಂದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್.












Click it and Unblock the Notifications