Get Updates
Get notified of breaking news, exclusive insights, and must-see stories!

Happy Friendship Day 2025: ಫ್ರೆಂಡ್‌ಶಿಪ್‌ ಡೇ 25 + ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ!

Happy Friendship Day 2025: ಫ್ರೆಂಡ್‌ಶಿಪ್‌ ಡೇ: ಸ್ನೇಹಿತರ ದಿನ.. ಸ್ನೇಹ ಸಂಬಂಧ ಎನ್ನುವುದು ಉಳಿದೆಲ್ಲಾ ಸಂಬಂಧಕ್ಕಿಂತಲೂ ಭಿನ್ನವಾದದ್ದು. ಯಾರೊಂದಿಗೂ ಹಂಚಿಕೊಳ್ಳಲಾಗದ, ಯಾರಿಗೂ ಹೇಳಿಕೊಳ್ಳಲಾಗದ ಮಾತುಗಳನ್ನು ನಾವು ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತೇವೆ. ನಾವು ಸ್ನೇಹಿತರೊಂದಿಗೆ ಕಳೆಯುವ ಕ್ಷಣಗಳು ಯಾವಾಗಲೂ ನಮ್ಮ ಗುಡ್‌ಮೆಮೋರಿಯಲ್ಲಿ ಉಳಿಯುತ್ತದೆ. ತುಂಬಾ ಸಂತೋಷವಾದರೆ ಇಲ್ಲ, ತುಂಬಾ ದುಃಖವಾದರೆ ನಾವು ಕರೆ ಮಾಡುವುದು ನಮ್ಮ ಗೆಳೆಯರಿಗೇ. ಗೆಳತಕ್ಕೆ ಅಪಾರವಾದ ಶಕ್ತಿ ಇದೆ.

ಶಾಲಾ - ಕಾಲೇಜು ಹಾಗೂ ಕೆಲಸದ ಸ್ಥಳಗಳಲ್ಲಿ ನಮಗೆ ಗೆಳೆಯರು ಸಿಗುತ್ತಾರೆ. ಆದರೆ ಎಲ್ಲಾ ಗೆಳೆಯರೂ ಆತ್ಮೀಯರಾಗುವುದಿಲ್ಲ. ಎಲ್ಲರೂ ನಮ್ಮೊಂದಿಗೆ ನಮ್ಮ ಜೀವನದ ಪಯಣದಲ್ಲಿ ಹೆಜ್ಜೆ ಇರಿಸುವುದಿಲ್ಲ. ನಮ್ಮೊಂದಿಗೆ ಹೆಜ್ಜೆ ಇರಿಸುವವರು ಕೆಲವೇ ಕೆಲವರು. ಸಂಕಷ್ಟ - ಸಂತೋಷದಲ್ಲಿ ಒಂದಾಗುವ ನಮಗೆ ಹೆಗಲಾಗುವ ಗೆಳೆಯರಿಗೆ ಶುಭಕೋರುವ ದಿನ ಇದು. ನಾಳೆ ಅಂದರೆ ಆಗಸ್ಟ್‌ 3ಕ್ಕೆ ಅಂತಾರಾಷ್ಟ್ರೀಯ ಗೆಳೆಯರ ದಿನ ಈ ದಿನ ನಿಮ್ಮ ಸ್ನೇಹಿತರಿಗೆ ಹಾಗೂ ಪ್ರೀತಿ ಪಾತ್ರರಿಗೆ ವಿಶ್ ಮಾಡುವುದಕ್ಕೆ 25ಕ್ಕೂ ಹೆಚ್ಚು ಸಂದೇಶಗಳು ಹಾಗೂ ಚಿತ್ರಗಳು ಇಲ್ಲಿವೆ.

Happy Friendship Day 2025 Happy Friendship Day 25 Messages Greetings and whatsapp Status Lines

ನಿಮ್ಮ ಸ್ನೇಹಿತರೊಂದಿಗೆ ನೀವು ಹಂಚಿಕೊಳ್ಳಬಹುದಾದ 25 + ಶುಭಾಶಯಗಳು, ಸಂದೇಶ ಹಾಗೂ ಫೋಟೋಗಳು ಇಲ್ಲಿವೆ.

1. ಸ್ನೇಹದ ಪಯಣದಲ್ಲಿ ನನ್ನೊಂದಿಗೆ ಜೊತೆಯಾಗಿದ್ದಕ್ಕೆ ಧನ್ಯವಾದ. ಹ್ಯಾಪಿ ಫ್ರೆಂಡ್‌ಶಿಪ್‌ ಡೇ..

2. ನಿಮ್ಮ ಸ್ನೇಹಕ್ಕಾಗಿ ನಾನು ಎಂದೆಂದಿಗೂ ಕೃತಜ್ಞನಾಗಿದ್ದೇನೆ. ಸ್ನೇಹಿತರ ದಿನದ ಶುಭಾಶಯಗಳು.

3. ನೀವು ನನ್ನ ಜೀವನದಲ್ಲಿ ಬಂದ ಮೇಲೆ ಎಲ್ಲವೂ ಬದಲಾಗಿದೆ. ಫ್ರೆಂಡ್‌ಶಿಪ್‌ ಡೇ ದೋಸ್ತಾ

4. ನನ್ನೇಲ್ಲ ಖುಷಿ - ನೋವಿನ ಕ್ಷಣದಲ್ಲಿ ನನ್ನೊಂದಿಗೆ ಇರುವುದಕ್ಕೆ ಥ್ಯಾಂಕ್ಸ್‌... ಹ್ಯಾಪಿ ಫ್ರೆಂಡ್‌ಶಿಪ್‌ ಡೇ..

5. ನಾವಿಬ್ಬರೂ ಈಗ ದೂರು - ದೂರು ಇರಬಹುದು. ನಾವು ಕಳೆದ ಕ್ಷಣಗಳ ನೆನಪು ಯಾವಾಗೂ ಜೀವಂತ ಹ್ಯಾಪಿ ಫ್ರೆಂಡ್‌ಶಿಪ್‌ ಡೇ..

6. ನನ್ನ ಜೀವನದ ಪ್ರತಿ ಪಯಣದಲ್ಲೂ ಜೊತೆಗಿರುವುದಕ್ಕೆ ಥ್ಯಾಂಕ್ಸ್‌ ಹ್ಯಾಪಿ ಫ್ರೆಂಡ್‌ಶಿಪ್‌ ಡೇ..

7. ನಿನ್ನ ಗೆಳತನ ನನಗೆ ವರ.. ಯಾವಾಗಲೂ ಖುಷಿಯಾಗಿರೋಣ ಹ್ಯಾಪಿ ಫ್ರೆಂಡ್‌ಶಿಪ್‌ ಡೇ..

8. ಮಾತುಗಳು ಬರದಷ್ಟು ನೋವಾದಾಗ ನೀನು ನನ್ನೊಂದಿದ್ದೆ ಧನ್ಯವಾದಗಳು. ಸ್ನೇಹಿತರ ದಿನದ ಶುಭಾಶಯಗಳು.

9. ನಿಮ್ಮಂತಹ ಸ್ನೇಹಿತರಿಂದ ನನ್ನ ಜೀವನ ಬಂಗಾರವಾಗಿದೆ. ಹ್ಯಾಪಿ ಫ್ರೆಂಡ್‌ಶಿಪ್‌ ಡೇ..

10. ನಮ್ಮಲ್ಲಿ ಹಣವಿಲ್ಲದಿದ್ದಾಗಲೂ ಮೋಜಿನಿಂದ ಕಳೆದ ದಿನಗಳು ನೆನಪಿದೆಯಾ ಫ್ರೆಂಡ್‌ಶಿಪ್ ಡೇ ಶುಭಾಶಯಗಳು

11. ಊಟದ ಡಬ್ಬಿ ಹಂಚಿಕೊಳ್ಳುವುದರಿಂದ ಜೀವನದ ಪಾಠಗಳನ್ನು ಹಂಚಿಕೊಳ್ಳುವವರೆಗೆ ಸುಂದರ ಪಯಣಕ್ಕೆ ಜೊತೆಯಾಗಿದ್ದಕ್ಕೆ ಥ್ಯಾಂಕ್ಸ್‌. ಹ್ಯಾಪಿ ಫ್ರೆಂಡ್‌ಶಿಪ್‌ ಡೇ..

12. ನಾವು ಬೆಳೆದಿದ್ದೇವೆ ನಿಜ.. ಆ ಹಳೆಯ ನೆನಪುಗಳು ಮಾತ್ರ ಈಗಲೂ ಜೀವಂತ...

13. ನಾವಿನ್ನೂ ನೆನ್ನೆಯಷ್ಟೇ ಭೇಟಿಯಾದಂತೆ ಇದೆ. ತುಂಬಾ ದೂರ ಸಾಗಿ ಬಂದಿದ್ದೇವೆ ಹ್ಯಾಪಿ ಫ್ರೆಂಡ್‌ಶಿಪ್‌ ಡೇ..

14. ಹಳೆಯ ಫೋಟೋ ನೋಡಿದಾಗೆಲ್ಲಾ ನಾವು ಆ ದಿನಗಳಲ್ಲಿ ಎಷ್ಟು ಖುಷಿ ಹಾಗೂ ಸಂತೋಷದಿಂದ ಇದ್ದೆವು ಎನ್ನುವುದು ನೆನಪಾಗುತ್ತದೆ. ಹ್ಯಾಪಿ ಫ್ರೆಂಡ್‌ಶಿಪ್‌ ಡೇ..

15. ಜೀವನ ಪ್ರತಿ ಹಂತದಲ್ಲೂ ಬದಲಾಗಿದೆ. ಈ ಪಯಣದಲ್ಲಿ ಬದಲಾಗದೆ ಉಳಿದಿದ್ದು ನೀನು ಮಾತ್ರ ಹ್ಯಾಪಿ ಫ್ರೆಂಡ್‌ಶಿಪ್‌ ಡೇ.. ಗೆಳೆಯ

16. ನನ್ನ ಜೋಕ್‌ಗಳಿಗೆ ನಗುವಂತೆ ನಟಿಸಿದ್ದಕ್ಕೆ, ನನ್ನ ಗೊಂದಲಗಳಿಗೆ ಬ್ರೇಕ್ ಹಾಕಿದ್ದಕ್ಕೆ ಹ್ಯಾಪಿ ಫ್ರೆಂಡ್‌ಶಿಪ್‌ ಡೇ..

17. ನಮ್ಮ ಸ್ನೇಹ ವೈ-ಫೈ ಸಿಗ್ನಲ್‌ನಂತೆ ನಾವು ಹತ್ತಿರವಿದ್ದರೆ ಬಲವಾಗಿರುತ್ತದೆ. ನಾವು ದೂರದಲ್ಲಿರುವಾಗ ಕಡಿಮೆಯಾಗುತ್ತದೆ. ಆದರೆ ಎಂದಿಗೂ ಕನೆಕ್ಷನ್ ಕಳೆದುಕೊಳ್ಳುವುದಿಲ್ಲ. ಹ್ಯಾಪಿ ಫ್ರೆಂಡ್‌ಶಿಪ್‌ ಡೇ..

18. ಕೆಟ್ಟ ನಿರ್ಧಾರಗಳು ಕೂಡ ಒಳ್ಳೆಯ ರಿಸಲ್ಟ್‌ ಕೊಡುತ್ತದೆ ಎನ್ನುವುದಕ್ಕೆ ನಾನು - ನೀನೇ ಸಾಕ್ಷಿ, ಹ್ಯಾಪಿ ಫ್ರೆಂಡ್‌ಶಿಪ್‌ ಡೇ..!

19. ನಾನು ಯಾವಾಗಲೂ ಮುಕ್ತವಾಗಿ ಮಾತನಾಡುವ ಏಕೈಕ ವ್ಯಕ್ತಿ ನೀವು. ಹ್ಯಾಪಿ ಫ್ರೆಂಡ್‌ಶಿಪ್‌ ಡೇ..

20. ಎಲ್ಲಾ ರಹಸ್ಯ ತಿಳಿದಿದ್ದರೂ ಯಾರೊಂದಿಗೂ ಏನನ್ನೂ ಹೇಳಿಕೊಳ್ಳದೆ ಸ್ನೇಹ ಕಾಪಾಡಿದೆ ನಿನಗೆ ಹ್ಯಾಪಿ ಫ್ರೆಂಡ್‌ಶಿಪ್‌ ಡೇ ಗೆಳೆಯ

21. ನಾವು ಸ್ನೇಹಿತರು ಮಾತ್ರವಲ್ಲ ಸಂಬಂಧಿಕರು... ಈ ಸ್ನೇಹದ ಪಯಣಕ್ಕೆ ಧನ್ಯವಾದ ಹ್ಯಾಪಿ ಫ್ರೆಂಡ್‌ಶಿಪ್‌ ಡೇ ಬ್ರೋ..

22. ನನ್ನಂತೆಯೇ ವಿಚಿತ್ರವಾಗಿರುವ ನಿನಗೆ ಹ್ಯಾಪಿ ಫ್ರೆಂಡ್‌ಶಿಪ್‌ ಡೇ

23. ನಿನ್ನ ಜೊತೆಗಿನ ಗೆಳತವು ನನಗೆ ಹೊಸ ಜೀವನುತ್ಸಾಹವನ್ನು ಕೊಟ್ಟಿದೆ. ಹ್ಯಾಪಿ ಫ್ರೆಂಡ್‌ಶಿಪ್‌ ಡೇ ಬ್ರೋ

24. ನೀನು ನನ್ನೊಂದಿಗುರುವುದು ಚಿಕನ್ ಜೊತೆ ಕೆಚಪ್‌ನಂತೆ ಹ್ಯಾಪಿ ಫ್ರೆಂಡ್‌ಶಿಪ್‌ ಡೇ ಗೆಳೆಯ

25. ನನಗೆ ಅಗತ್ಯವಿದೆ ಎಂದು ನನಗೆ ತಿಳಿದಿರಲಿಲ್ಲ.. ಈಗ ನೀನಿಲ್ಲದೆ ಬದುಕು ಸುಂದರವಲ್ಲ ಹ್ಯಾಪಿ ಫ್ರೆಂಡ್‌ಶಿಪ್‌ ಡೇ ಬ್ರೋ

26. ಕೇವಲ ಒಂದು ಎಮೋಜಿಯಿಂದ ನನ್ನ ಮನಸ್ಥಿತಿ ತಿಳಿಯುವ ಗೆಳೆಯ ನೀನು. ಹ್ಯಾಪಿ ಫ್ರೆಂಡ್‌ಶಿಪ್‌ ಡೇ ಗೆಳೆಯ

27. ಜೀವನದ ಪ್ರತಿ ಹಂತದಲ್ಲೂ ಕೆಲವರು ಬಂದು ಹೋಗುತ್ತಾರೆ. ಕೆಲವರು ಮಾತ್ರ ಜೀವನದ ಪ್ರತಿ ಹಂತದಲ್ಲೂ ಇರುತ್ತಾರೆ ಹ್ಯಾಪಿ ಫ್ರೆಂಡ್‌ಶಿಪ್‌ ಡೇ ಗೆಳೆಯ

28. ಎಷ್ಟು ಗೆಳೆಯರು ಇದ್ದಾರೆ ಅಂತಾ ಲೆಕ್ಕವಲ್ಲ... ಆ ಗೆಳೆಯರು ಎಷ್ಟು ವರ್ಷಗಳಿಂದ ಇದ್ದಾರೆ ಎನ್ನುವುದು ಮುಖ್ಯ ಹ್ಯಾಪಿ ಫ್ರೆಂಡ್‌ಶಿಪ್‌ ಡೇ ಗೆಳೆಯ

29. ಗೆಳಯರ ದಿನ ಎನ್ನುವುದು ಒಂದು ನೆಪವಷ್ಟೇ ನಾವು ಜೊತೆಯಾಗಿರುವ ಪ್ರತಿ ದಿನವೂ ಸ್ನೇಹಿತರ ದಿನ. ಹ್ಯಾಪಿ ಫ್ರೆಂಡ್‌ಶಿಪ್‌ ಡೇ ಗೆಳೆಯ

30. ಪ್ರೀತಿಸದವರು ಕೈಕೊಟ್ಟಾಗಲೂ ಜೊತೆಗಿದ್ದ ಗೆಳೆಯ ನೀ.. ಮರೆಯುವುದುಂಟೆ ನಿನ್ನ ಹ್ಯಾಪಿ ಫ್ರೆಂಡ್‌ಶಿಪ್‌ ಡೇ ಗೆಳೆಯ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+