• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Children's day 2022 Wishes: ಇಲ್ಲಿವೆ ಮಕ್ಕಳ ದಿನಾಚರಣೆಯ ಶುಭಾಶಯಗಳು, ಸಂದೇಶಗಳು

|
Google Oneindia Kannada News

1964 ರಿಂದ ಪ್ರತಿ ವರ್ಷ ನವೆಂಬರ್ 14 ಅನ್ನು ಭಾರತದಲ್ಲಿ ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನ ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮದಿನವನ್ನು ಸೂಚಿಸುತ್ತದೆ. ಇದನ್ನು ಚಾಚಾ ನೆಹರು ಎಂದು ಪ್ರೀತಿಯಿಂದ ಸ್ಮರಿಸಲಾಗುತ್ತದೆ. ಪಂಡಿತ್ ಜವಾಹರಲಾಲ್ ನೆಹರು ಭಾರತದ ಮೊದಲ ಪ್ರಧಾನಿ. ಮಕ್ಕಳ ಮೇಲಿನ ಪ್ರೀತಿ ಅವರಿಗೆ "ಚಾಚಾ ನೆಹರು" ಎಂಬ ಬಿರುದನ್ನು ತಂದುಕೊಟ್ಟಿತು. ಅವರ ಜನ್ಮ ವಾರ್ಷಿಕೋತ್ಸವ - ನವೆಂಬರ್ 14. ಈ ದಿನ ರಾಷ್ಟ್ರದ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಮತ್ತು ಮಕ್ಕಳ ಮೇಲಿನ ಪ್ರೀತಿಗೆ ಗೌರವವಾಗಿ ದೇಶದಲ್ಲಿ ಮಕ್ಕಳ ದಿನವನ್ನು ಆಚರಿಸಲಾಗುತ್ತದೆ.

ಮಕ್ಕಳ ಹಕ್ಕುಗಳು, ಕಾಳಜಿ ಮತ್ತು ಶಿಕ್ಷಣದ ಅರಿವನ್ನು ಹೆಚ್ಚಿಸಲು ಭಾರತದಾದ್ಯಂತ ನವೆಂಬರ್ 14 ಅನ್ನು ಆಚರಿಸಲಾಗುತ್ತದೆ. ಈ ದಿನ ಚಾಕೊಲೇಟ್ಗಳು ಮತ್ತು ಉಡುಗೊರೆಗಳನ್ನು ಹೆಚ್ಚಾಗಿ ಮಕ್ಕಳಿಗೆ ವಿತರಿಸಲಾಗುತ್ತದೆ. ಶಾಲೆಗಳು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಈ ದಿನದಂದು ಅನಾಥ ಮಕ್ಕಳಿಗೆ ಬಟ್ಟೆ, ಆಟಿಕೆಗಳು ಮತ್ತು ಪುಸ್ತಕಗಳಂತಹ ಉಡುಗೊರೆಗಳನ್ನು ವಿತರಿಸುವುದು ಸಾಮಾನ್ಯ ಅಭ್ಯಾಸವಾಗಿದೆ. ಮಕ್ಕಳ ದಿನದಂದು ಹಂಚಿಕೊಳ್ಳಲು ಕೆಲವು ಶುಭಾಶಯಗಳು, ಸಂದೇಶಗಳು, ಉಲ್ಲೇಖಗಳು, ಚಿತ್ರಗಳು, Facebook ಮತ್ತು WhatsApp ಸ್ಥಿತಿಗಳು ಇಲ್ಲಿವೆ.

1. ಈ ಜಗತ್ತಿನಲ್ಲಿ ಅತ್ಯಮೂಲ್ಯವಾದ ವಸ್ತುವೆಂದರೆ ಮಗುವಿನ ಮುಖದಲ್ಲಿರುವ ನಗು. ಪ್ರಪಂಚದ ಪ್ರತಿ ಮಗುವಿಗೆ ಮಕ್ಕಳ ದಿನಾಚರಣೆಯ ಶುಭಾಶಯಗಳು.

2. ಪ್ರತಿಯೊಬ್ಬರ ಜೀವನದ ಮಧುರವಾದ ಅವಧಿ ಅಂದರೆ ಅವರ ಬಾಲ್ಯ. ಜಗತ್ತಿನ ಎಲ್ಲಾ ಮಕ್ಕಳಿಗೆ ಮಕ್ಕಳ ದಿನಾಚರಣೆಯ ಶುಭಾಶಯಗಳು. ಈ ದಿನವನ್ನು ಮೋಜಿನೊಂದಿಗೆ ಕಳೆಯಿರಿ!

3. ಭೂಮಿ ತನ್ನ ಮುಗ್ಧತೆಯನ್ನು ಮಕ್ಕಳ ನಗುವಿನ ಮೂಲಕ ಬಹಿರಂಗಪಡಿಸುತ್ತದೆ. ಈ ವಿಶೇಷ ದಿನದಂದು ಎಲ್ಲಾ ಮಕ್ಕಳಿಗೆ ಬೆಚ್ಚಗಿನ ಹಾರೈಕೆಗಳು. ಮಕ್ಕಳ ದಿನಾಚರಣೆಯ ಶುಭಾಷಯಗಳು!

4. ನಿಮ್ಮ ನಗುವಿನ ಮುಗ್ಧತೆ ಮತ್ತು ಅವರ ಹೃದಯದ ಪರಿಶುದ್ಧತೆಯು ಶಾಶ್ವತವಾಗಿ ಉಳಿಯಲಿ. ಪ್ರಪಂಚದ ಪ್ರತಿ ಮಗುವಿಗೆ ಸಂತೋಷದಾಯಕ ಮಕ್ಕಳ ದಿನಾಚರಣೆಯ ಶುಭಾಶಯಗಳು!

5. ಮಕ್ಕಳನ್ನು ಸ್ವರ್ಗದಿಂದ ಬಂದ ಹೂವುಗಳು ಎಂದು ಕರೆಯಲಾಗುತ್ತದೆ ಮತ್ತು ಆ ಹೂವುಗಳು ದೇವರಿಗೆ ಪ್ರಿಯವಾಗಿವೆ. ಆದ್ದರಿಂದ ಈ ಭೂಮಿಯನ್ನು ಮಕ್ಕಳಿಗಾಗಿ ಸಂತೋಷ ಮತ್ತು ಉತ್ತಮ ಸ್ಥಳವನ್ನಾಗಿ ಮಾಡಲು ಪ್ರತಿಜ್ಞೆ ಮಾಡೋಣ. ಮಕ್ಕಳ ದಿನಾಚರಣೆಯ ಶುಭಾಷಯಗಳು.

Happy Childrens Day

6. ಅವರ ಮುಗ್ಧತೆ, ಅವರ ಶುದ್ಧ ಹೃದಯ ಶಾಶ್ವತವಾಗಿ ಉಳಿಯಲಿ ಮತ್ತು ಪ್ರತಿಯೊಬ್ಬರಿಗೂ ಉತ್ತಮವಾದದ್ದನ್ನು ಜಗತ್ತಿಗೆ ಕೊಡುಗೆಯಾಗಿ ನೀಡಲಿ. ಮಕ್ಕಳ ದಿನಾಚರಣೆಯನ್ನಿ ಆಚರಿಸುತ್ತಿರುವ ಎಲ್ಲರಿಗೂ ಶುಭಾಶಯಗಳು.

7. ಏನನ್ನು ಯೋಚಿಸಬೇಕು ಎನ್ನುವುದಕ್ಕಿಂತ ಹೇಗೆ ಯೋಚಿಸಬೇಕು ಎಂಬುದನ್ನು ಮಕ್ಕಳಿಗೆ ಕಲಿಸಿ. ನೀವು ಕಲಿಸಿದಂತೆ ಮಕ್ಕಳು ಕಲಿಯುತ್ತವೆ. ಆದ್ದರಿಂದ, ಮಕ್ಕಳೊಂದಿಗೆ ದಯೆಯಿಂದ ವರ್ತಿಸಿ. ಮಕ್ಕಳ ದಿನಾಚರಣೆಯ ಶುಭಾಷಯಗಳು.

8. ಈ ವಿಶೇಷ ದಿನದಂದು ನಾವೆಲ್ಲರೂ ನಮ್ಮ ಮಕ್ಕಳ ಮುಗ್ಧತೆ ಮತ್ತು ಪರಿಶುದ್ಧತೆಯನ್ನು ಆಚರಿಸೋಣ. ಅವರು ನಮ್ಮ ಭವಿಷ್ಯವಾಗಿರುವುದರಿಂದ ಅವರು ನಮ್ಮಿಂದ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಜ್ಞಾನವನ್ನು ನೀಡೋಣ. ಮಕ್ಕಳ ದಿನಾಚರಣೆಯ ಶುಭಾಷಯಗಳು!

9. ಮಕ್ಕಳಿಲ್ಲದಿದ್ದರೆ ಜಗತ್ತು ನಗು ಮತ್ತು ಪ್ರೀತಿಯಿಂದ ದೂರವಾಗುತ್ತಿತ್ತು. ಅದಕ್ಕಾಗಿಯೇ ಮಕ್ಕಳು ವಿಶ್ವದ ಅತ್ಯಂತ ಅಮೂಲ್ಯವಾದ ಸೃಷ್ಟಿ ಎಂದು ನಾವು ನಂಬುತ್ತೇನೆ. ನಾವು ಅವರನ್ನು ನಮ್ಮ ಎಲ್ಲಾ ಶಕ್ತಿಯಿಂದ ರಕ್ಷಿಸಬೇಕು. ಮಾರ್ಗದರ್ಶನ ಮಾಡಬೇಕು ಮತ್ತು ಪ್ರೀತಿಸಬೇಕು, ಏಕೆಂದರೆ ಅವರು ನಮ್ಮ ಆಸ್ತಿ. ಮಕ್ಕಳ ದಿನಾಚರಣೆಯ ಶುಭಾಷಯಗಳು!

10. ಹಣದಿಂದ ಸಂತೋಷವನ್ನು ಖರೀದಿಸಲು ಸಾಧ್ಯವಿಲ್ಲ. ಪ್ರತಿ ಮಗುವಿನ ಬಾಲ್ಯವು ಹಾಗೆನೇ. ಅದನ್ನು ಖರೀದಿಸಲು ಸಾಧ್ಯವಿಲ್ಲ. ಅದೊಂದು ಅದ್ಭುತ ಕೊಡುಗೆ. ಮಕ್ಕಳ ದಿನಾಚರಣೆಯ ಶುಭಾಷಯಗಳು!

11. "ಪ್ರತಿ ಬಾರಿ ಮಗುವನ್ನು ಜೀವನದ ಕರಾಳ ಭಾಗದಿಂದ ಉಳಿಸಿದಾಗ, ಮಗುವಿನ ಜೀವನದಲ್ಲಿ ಬದಲಾವಣೆಯನ್ನು ಮಾಡಲು ಪ್ರಯತ್ನಿಸಿದಾಗ, ನಾವು ನಮ್ಮ ಸ್ವಂತ ಜೀವನಕ್ಕೆ ಬೆಳಕು ತಂದಂತೆ" - ಓಪ್ರಾ ವಿನ್ಫ್ರೇ

12. "ನಮ್ಮ ಮಕ್ಕಳು ನಮ್ಮ ಸಂಪತ್ತು. ಅವರೇ ನಮ್ಮ ಭವಿಷ್ಯ. ಅವರನ್ನು ನಿಂದಿಸುವವರು ನಮ್ಮ ಸಮಾಜದ ರಚನೆಯನ್ನು ಹರಿದು ನಮ್ಮ ರಾಷ್ಟ್ರವನ್ನು ದುರ್ಬಲಗೊಳಿಸುತ್ತಾರೆ. - ನೆಲ್ಸನ್ ಮಂಡೇಲಾ

13. "ಮಗುವು ಯಾವಾಗಲೂ ವಯಸ್ಕರಿಗೆ ಮೂರು ವಿಷಯಗಳನ್ನು ಕಲಿಸಬಹುದು: ಯಾವುದೇ ಕಾರಣವಿಲ್ಲದೆ ಸಂತೋಷವಾಗಿರುವುದು, ಯಾವಾಗಲೂ ಯಾವುದಾದರೂ ಕೆಲಸಕಾರ್ಯದಲ್ಲಿ ನಿರತರಾಗಿರುವುದು ಮತ್ತು ಬೇಕಾದುದನ್ನು ಎಲ್ಲಾ ಶಕ್ತಿಯನ್ನು ಹಾಕಿ ಹೇಗೆ ತೆಗೆದುಕೊಳ್ಳಬೇಕೆಂದು ತಿಳಿಯಿರಿ" - ಪಾಲೊ ಕೊಯೆಲೊ

14. "ನನ್ನ ಪುಟ್ಟ ಮಕ್ಕಳು ಒಂದು ದಿನ ದೇಶದಲ್ಲಿ ಹೆಸರು ಮಾಡುತ್ತಾರೆಂದು ಎಂದು ನಾನು ಕನಸು ಹೊಂದಿದ್ದೇನೆ. ಅವರೇ ನಮ್ಮ ಕನಸಿನ ಕೂಸುಗಳು" - ಮಾರ್ಟಿನ್ ಲೂಥರ್ ಕಿಂಗ್

15. "ನಮ್ಮ ಮಕ್ಕಳು ಉತ್ತಮ ನಾಳೆಯನ್ನು ಹೊಂದಲು ನಮ್ಮ ಇಂದಿನ ದಿನವನ್ನು ತ್ಯಾಗ ಮಾಡೋಣ." - ಎ.ಪಿ.ಜೆ ಅಬ್ದುಲ್ ಕಲಾಂ

English summary
Jawaharlal Nehru birthday celebrated as Children's day on Nov 14. Here are the Children's Day 2022 wishes, messages, quotes, images, greetings, posters, Facebook and WhatsApp status in kannada to share with children.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X