Happy Birthday Bengaluru: ಬೆಂಗಳೂರಿಗೆ ಇಂದು ಹ್ಯಾಪಿ ಬರ್ತಡೇ ಹೇಗೆ ಎನ್ನುವ ವಿವರ ಇಲ್ಲಿದೆ

ನಮ್ಮ ಬೆಂಗಳೂರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಹೌದು ಬೆಂಗಳೂರಲ್ಲಿ ಇಂದು ಸಂಕ್ರಾಂತಿ ಸಂಭ್ರಮ ಮಾತ್ರವಲ್ಲ ಬೆಂಗಳೂರಿನ ಹುಟ್ಟು ಹಬ್ಬದ ಸಂಭ್ರಮವೂ ಹೌದು. ಬೆಂಗಳೂರಿನ ಜನಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಲ್ಲೇ ಇದೆ. ಕೋಟಿಗೂ ಹೆಚ್ಚು ಜನ ಇಂದು ಬೆಂಗಳೂರಿನಲ್ಲಿ ಇದ್ದಾರೆ. ಇಂದು ಬೆಂಗಳೂರು ವಿಶ್ವವಿಖ್ಯಾತ ನಗರಗಳಲ್ಲಿ ಒಂದಾಗಿದೆ. ಇಲ್ಲಿಗೆ ಹೊರ ರಾಜ್ಯದವರು ಹಾಗೂ ಹೊರ ದೇಶದವರು ಸಹ ಬರುತ್ತಿದ್ದು.

ಬೆಂಗಳೂರಿನ ಖ್ಯಾತಿ ಇದು ಜಗದಗಲ ಹಬ್ಬಿದೆ. ಹಾಗಾದರೆ ಬೆಂಗಳೂರಿಗೆ ಇಂದು ಹುಟ್ಟು ಹಬ್ಬ ಅಂತ ಹೇಳುವುದಕ್ಕೆ ಕಾರಣವೇನು. ಕರ್ನಾಟಕ ರಾಜಧಾನಿ ಬೆಂಗಳೂರಿಗೆ ಸಂಕ್ರಾಂತಿಯ ದಿನವೇ ಹುಟ್ಟು ಹಬ್ಬ ಎನ್ನುವ ವಿಚಾರವನ್ನು ಮೈಸೂರಿನ ಕಥೆಗಳು ಖ್ಯಾತಿಯ ಧರ್ಮೇಂದ್ರ ಕುಮಾರ್‌ ಅವರು ಅತ್ಯಂತ ಸೊಗಸಾಗಿ ಹೇಳಿದ್ದಾರೆ. ನಗರದ ಹುಟ್ಟುಹಬ್ಬದ ಹಿನ್ನೆಲೆಯನ್ನು ಅವರು ವಿವರಿಸಿರುವ ಮಾಹಿತಿ ಇಲ್ಲಿದೆ.

Happy Birthday Bengaluru know More About History

ಬೆಂಗಳೂರು.. ಇಂದು ವಿಶ್ವದ ಭೂಪದಲ್ಲಿ ತನ್ನದೇ ಖ್ಯಾತಿಯನ್ನು ಗಳಿಸಿರುವ ನಗರ. ಐಟಿ - ಬಿಟಿಯಿಂದ ದೇಶದಲ್ಲೇ ಯಾಕೆ ವಿಶ್ವದಲ್ಲೇ ಜನ ಬೆಂಗಳೂರು ನೋಡಬೇಕು ಅಂತ ಕನಸು ಕಾಣುವುದು ಇದೆ. ಹೌದು ಇದು ಅಚ್ಚರಿ ಏನಿಸಿದರೂ ನಿಜ. ಅಂತಹ ಊರು ನಮ್ಮ ಬೆಂಗಳೂರಿಗೆ ಇಂದು ಜನುಮ ದಿನ. ಅದು ಯಾವ ರೀತಿ ಸಂಕ್ರಾಂತಿ ದಿನ ಬೆಂಗಳೂರಿಗೆ ಹುಟ್ಟು ಹಬ್ಬ ಎನ್ನುವ ಮಾಹಿತಿ ಇಲ್ಲಿದೆ.

1538ರ ಸಂಕ್ರಾಂತಿ ದಿನದಂದೇ ನಾಡಪ್ರಭು ಹಿರಿಯ ಕೆಂಪೇಗೌಡ ಅವರು ಬೆಂಗಳೂರನ್ನು ಕಟ್ಟಲು ಪ್ರಾರಂಭಿಸಿದರು. ಬೆಂಗಳೂರಿನ ಅವೆನ್ಯೂ ರಸ್ತೆಯ ರಾಜಾ ಮಾರ್ಕೆಟ್ ಸರ್ಕಲ್‌ನಲ್ಲಿ ಬೆಂಗಳೂರನ್ನು ಕಟ್ಟುವುದಕ್ಕೆ ಕೆಂಪೇಗೌಡ ಅವರು ಗುದ್ದಲಿ ಪೂಜೆ ಮಾಡಿದ್ದರು. ಬೆಂಗಳೂರು ಹುಟ್ಟಿದ್ದು ಸಂಕ್ರಾಂತಿಯಂದು.. ಇದೇ ದಿನದಿಂದ ಬೆಂಗಳೂರು ಬೆಳೆಯಲು (ವಿಸ್ತೀರ್ಣದಲ್ಲಿ) ಪ್ರಾರಂಭವಾಯಿತು ಎಂದು ಧರ್ಮೇಂದ್ರ ಅವರು ವಿವರಿಸಿದ್ದಾರೆ.

ಇಂದಿಗೂ ನೀವು ರಾಜಾ ಮಾರ್ಕೆಟ್ ಬಳಿ ನಿಂತುಕೊಂಡರೆ ನಾಲ್ಕು ಗೇಟುಗಳು ಕಾಣಿಸುತ್ತವೆ. ಯಲಹಂಕ ಗೇಟ್‌, ಹಲಸೂರು ಗೇಟ್‌, ಕೆಂಗೇರಿ ಗೇಟ್‌ ಹಾಗೂ ಕೋಟೆಗೇಟ್‌ ಇಲ್ಲಿ ಕಾಣಿಸುತ್ತದೆ. ಇದೇ ಬೆಂಗಳೂರನ್ನು ಕಟ್ಟುವುದಕ್ಕೆ ಶ್ರೀಕಾರ ಹಾಕಿದ ಜಾಗವಾಗಿದೆ. ನಾಲ್ಕು ದ್ವಾರಗಳ ಮಾರ್ಗದಲ್ಲಿ ರಸ್ತೆಗಳನ್ನು ಕಟ್ಟುವುದಕ್ಕೆ ಕೆಂಪೇಗೌಡರು ಪ್ರಾರಂಭಿಸಿದ್ದರು.

ಅದಾದ ಮೇಲೆ ಪೇಟೆಕೋಟೆ ಹಾಗೂ ಕಲಾಸಿಪಾಳ್ಯ ಕೋಟೆಯನ್ನು ನಿರ್ಮಿಸಿದ್ದರು. ಈ ಎರಡೂ ಕೋಟೆಗಳನ್ನು ಕಟ್ಟಿ ಬೆಂಗಳೂರನ್ನು ನಿರ್ಮಾಣ ಮಾಡಿದರು. ಈ ರೀತಿ ಪೇಟೆಗಳನ್ನು ಕಟ್ಟಿದ ಮೇಲೆ ಬೆಂಗಳೂರು ಅಭಿವೃದ್ಧಿ ಆಗಿದೆ. ಹೀಗಾಗಿ ಇಂದು ಬೆಂಗಳೂರಿಗೆ ಹುಟ್ಟು ಹಬ್ಬದ ಸಂಭ್ರಮ. ಸಂಕ್ರಾಂತಿಯ ವಿಶೇಷ ದಿನವೇ ಬೆಂಗಳೂರು ತನ್ನ ವಿಸ್ತಾರವನ್ನು ಹೆಚ್ಚಿಸಿಕೊಳ್ಳಲು ಶುರು ಮಾಡಿತು. ಇದಕ್ಕೆ ನಾಡಪ್ರಭು ಕೆಂಪೇಗೌಡ ಅವರ ದೂರದೃಷ್ಟಿಯೇ ಕಾರಣವಾಗಿದೆ.

ನಗರವೊಂದು ಯಾವ ರೀತಿ ಇರಬೇಕು ಎನ್ನುವ ಕಲ್ಪನೆ ಕೆಂಪೇಗೌಡ ಅವರಿಗೆ ಇತ್ತು. ಹೀಗಾಗಿ ಬೆಂಗಳೂರನ್ನು ಅವರು ನದಿಗಳ ಮೂಲಕವೇ ಕಟ್ಟಿದರು. ಅವರು ಆಗ ಮಾಡಿದ ದೂರದೃಷ್ಟಿಯ ಯೋಜನೆಗಳು ಇಂದಿಗೂ ಬೆಂಗಳೂರಿನಲ್ಲಿ ಇವೆ. ಅಲ್ಲದೆ ಬೆಂಗಳೂರು ವ್ಯಾಪಾರ ಕೇಂದ್ರವಾಗಿ ಬೆಳೆಯುವುದಕ್ಕೂ ಇದೇ ಕಾರಣವಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+