Hanuman Jayanti 2022 : ಹನುಮ ಜಯಂತಿ : ಆಂಜನೇಯ ಪೂಜೆಗೆ ಯಾವ ಸಮಯ ಸೂಕ್ತ? ಇಲ್ಲಿದೆ ಮಾಹಿತಿ
ಭಾರತ ಹಬ್ಬಗಳ ನಾಡು. ಈ ದೇಶದಲ್ಲಿ ನಾವು ಹಲವಾರು ಹಬ್ಬಗಳನ್ನು ಆಚರಿಸುತ್ತೇವೆ. ಹಿಂದೂಗಳು ಆಚರಿಸುವ ಅಂತಹ ಹಬ್ಬಗಳಲ್ಲಿ ಹನುಮ ಜಯಂತಿಯೂ ಒಂದು. ಈ ದಿನದಂದು ಜನರು ಭಜರಂಗ ಬಲಿ ಎಂದು ಕರೆಯಲ್ಪಡುವ ಹನುಮಂತನನ್ನು ಪೂಜಿಸುತ್ತಾರೆ. ನಾವೆಲ್ಲರೂ ರಾಮಾಯಣದ ಕಥೆಗಳನ್ನು ಮತ್ತು ಹನುಮಂತನ ರಾಮನ ಭಕ್ತಿಯನ್ನು ಕೇಳಿದ್ದೇವೆ. ದ್ರೋಣಗಿರಿ ಪರ್ವತವನ್ನು ಎತ್ತುವುದರಿಂದ ಹಿಡಿದು ಲಂಕಾದಿಂದ ಸೀತೆಯನ್ನು ಮರಳಿ ಕರೆತರುವವರೆಗೆ ರಾಮನಿಗೆ ತನ್ನ ಜೀವನದುದ್ದಕ್ಕೂ ಹನುಮಂತ ಸಹಾಯ ಮಾಡುತ್ತಾನೆ.
ಹನುಮಾನ್ ಜಯಂತಿಯು ಭಗವಾನ್ ಹನುಮಾನ್ ಅವರ ಜನ್ಮದಿನವನ್ನು ಸೂಚಿಸುತ್ತದೆ. ಹನುಮಂತನನ್ನು ಹಿಂದೂಗಳ ಪ್ರಬಲ ದೇವರು ಎಂದು ಪರಿಗಣಿಸಲಾಗಿದೆ. ಭಕ್ತರು ಅವರನ್ನು ಸರ್ವಮಯವಿಭಂಜನ ಮತ್ತು ಸಂಕಟ ಮೋಚನ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಭಗವಾನ್ ಹನುಮಂತನನ್ನು ಪೂಜಿಸಿದರೆ ಎಲ್ಲಾ ಭಯ ಮತ್ತು ಕಷ್ಟಗಳು ದೂರವಾಗುತ್ತವೆ ಎಂದು ನಂಬಲಾಗುತ್ತದೆ.
ಹನುಮಾನ್ ಜಯಂತಿ 2022: ದಿನಾಂಕ ಮತ್ತು ಸಮಯ
ಹಿಂದೂ ಕ್ಯಾಲೆಂಡರ್ ಪ್ರಕಾರ ಚೈತ್ರ ಪೂರ್ಣಿಮಾ ಎಂದೂ ಕರೆಯಲ್ಪಡುವ ಚೈತ್ರ ಮಾಸದ ಹುಣ್ಣಿಮೆಯ ದಿನದಂದು ಹನುಮಾನ್ ಜಯಂತಿಯನ್ನು ಆಚರಿಸಲಾಗುತ್ತದೆ. ಹನುಮಂತನು ಸೂರ್ಯೋದಯದ ಸಮಯದಲ್ಲಿ ಜನ್ಮ ಪಡೆದನೆಂದು ನಂಬಲಾಗಿದೆ. ಆದ್ದರಿಂದ ದೇವಾಲಯಗಳು ಸೂರ್ಯೋದಯಕ್ಕೆ ಮುಂಚಿತವಾಗಿ ಆಚರಣೆಯನ್ನು ಪ್ರಾರಂಭಿಸುತ್ತವೆ ಮತ್ತು ಅದನ್ನು ಇಡೀ ದಿನ ಆಚರಣೆಯನ್ನು ಮಾಡಲಾಗುತ್ತದೆ.

ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ, ಹನುಮಾನ್ ಜಯಂತಿ ಈ ವರ್ಷ ಏಪ್ರಿಲ್ 16 ರಂದು ಬರುತ್ತದೆ ಮತ್ತು ಪೂರ್ಣಿಮಾ ತಿಥಿ ಏಪ್ರಿಲ್ 16, 2022 ರಂದು ಬೆಳಗ್ಗೆ 2.27 ಕ್ಕೆ ಪ್ರಾರಂಭವಾಗುತ್ತದೆ ಮತ್ತು 17 ಏಪ್ರಿಲ್ 2022 ರಂದು ಬೆಳಗ್ಗೆ 12.24 ಕ್ಕೆ ಕೊನೆಗೊಳ್ಳುತ್ತದೆ.
ಹನುಮಾನ್ ಜಯಂತಿ 2022: ಪೂಜಾ ವಿಧಿ
ಹನುಮ ಜಯಂತಿಯಂದು ಜನರು ಇಡೀ ದಿನ ಉಪವಾಸ ಮಾಡುತ್ತಾರೆ. ಬೆಳಗ್ಗೆ ಸ್ನಾನ ಮಾಡಿ ಶುಭ್ರವಾದ ಬಟ್ಟೆಗಳನ್ನು ಧರಿಸುತ್ತಾರೆ. ಹನುಮಾನ್ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಹೂವುಗಳು ಮತ್ತು ಹೂಮಾಲೆಗಳನ್ನು ಅರ್ಪಿಸುತ್ತಾರೆ. ಈ ದಿನದಂದು ಭಕ್ತರು ಹನುಮಾನ್ ಚಾಲೀಸಾವನ್ನು ಪಠಿಸುತ್ತಾರೆ. ಈ ದಿನದಂದು ಹನುಮಂತನನ್ನು ಪೂಜಿಸುವುದರಿಂದ ಭಕ್ತರು ತಮ್ಮ ಭಯ ಮತ್ತು ವೈಫಲ್ಯಗಳಿಂದ ದೂರವಾಗುತ್ತಾರೆ. ಹನುಮಂತನನ್ನು ಪೂಜಿಸುವುದರಿಂದ ಜನ ತಮ್ಮ ತೊಂದರೆಗಳಿಂದ ದೂರವಾಗುತ್ತಾರೆ ಎನ್ನುವ ನಂಬಿಕೆ ಇದೆ. ಆತನ ಅನುಗ್ರಹದಿಂದ ಧನಾತ್ಮಕತೆಯನ್ನು ಆಕರ್ಷಿಸುತ್ತಾರೆ.

ಹನುಮಾನ್ ಜಯಂತಿ 2022: ಮಹತ್ವ
ಹಿಂದೂ ನಂಬಿಕೆಯ ಪ್ರಕಾರ, ಹನುಮಾನ್ ಶಕ್ತಿ, ಧೈರ್ಯ, ಪರಿಶ್ರಮ ಮತ್ತು ಭಕ್ತಿಯ ಸಂಕೇತವಾಗಿದೆ. ಹನುಮಂತ ರಾಮನಿಗೆ ಶ್ರದ್ಧೆ ಹೊಂದಿದ್ದರು. ಅತ್ಯಂತ ಕಷ್ಟದ ಸಮಯದಲ್ಲಿಯೂ ತನ್ನ ರಾಮನನ್ನು ಬಿಡಲಿಲ್ಲ. ರಾವಣನು ಸೀತೆಯನ್ನು ಅಪಹರಿಸಿದ ನಂತರ ಲಂಕೆಯಿಂದ ಸೀತೆಯನ್ನು ಮರಳಿ ಕರೆತರುವಲ್ಲಿ ಅವನು ಪ್ರಮುಖ ಪಾತ್ರ ವಹಿಸಿದನು. ಭಗವಾನ್ ಹನುಮಂತನಿಂದ ನಾವು ತಾಳ್ಮೆಯ ಬಗ್ಗೆ ಕಲಿಯುತ್ತೇವೆ. ನಮ್ಮ ದಾರಿಯಲ್ಲಿ ಬರುವ ಎಲ್ಲಾ ತೊಂದರೆಗಳು ಮತ್ತು ಅಡೆತಡೆಗಳನ್ನು ಜಯಿಸುವುದನ್ನು ಅವನು ನಮಗೆ ಕಲಿಸುತ್ತಾನೆ ಮತ್ತು ನಮ್ಮ ಗುರಿಗಳನ್ನು ಮುಟ್ಟಲು ನಮಗೆ ಮಾರ್ಗದರ್ಶನ ನೀಡುತ್ತಾನೆ.












Click it and Unblock the Notifications