Govind M Karjol Profile: ನೀರಾವರಿ-ನದಿ ಯೋಜನೆಗಳ ಜಾರಿಗೆ ಶ್ರಮಿಸುತ್ತಿರುವ ಉ.ಕ.ರಾಜಕಾರಣಿ ಪರಿಚಯ
ಸತತ ಐದು ಭಾರಿ ಶಾಸಕರಾಗಿರುವ ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಮುಧೋಳ ಶಾಸಕ ಮತ್ತು ಹಾಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳರ ಜೀವನ, ಪರಿಚಯದ ಮಾಹಿತಿ ಇಲ್ಲಿದೆ.
ಬೆಂಗಳೂರು, ಮಾರ್ಚ್ 01: ಬಿಜೆಪಿಯಲ್ಲಿ ದಲಿತ ಎಡಗೈ ಸಮುದಾಯದ ಪ್ರಭಾವಿ ನಾಯಕರೆಂದು ಗುರುತಿಸಿಕೊಂಡಿರುವ ಸಚಿವ ಗೋವಿಂದ ಎಂ. ಕಾರಜೋಳ ಅವರು. ಇವರು ಬಾಗಲಕೋಟೆ ಜಿಲ್ಲೆ ಮುಧೋಳ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ ಬಿ. ಎಸ್. ಯಡಿಯೂರಪ್ಪ ಅವರ ಅವಧಿಯಲ್ಲಿ ಸಂಪುಟದಲ್ಲಿ ಉಪಮುಖ್ಯಮಂತ್ರಿ ಆಗಿದ್ದರು. ಗಳಾಗಿದ್ದ ಇವರು ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಜಲಸಂಪನ್ಮೂಲ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇವರು ಒಟ್ಟು ಐದು ಬಾರಿ ಶಾಸಕರಾಗಿ ಆಯ್ಕೆಯಾದವರು. ಇವರು ಒಂದು ಕಾಲದಲ್ಲಿ ಲೋಕೋಪಯೋಗಿ ಇಲಾಖೆಯ ಮಾಜಿ ನೌಕರರು ಆಗಿದ್ದರು. ವರ್ಷಗಳ ನಂತರ ಅದೇ ಲೋಕೋಪಯೋಗಿ ಇಲಾಖೆ ಸಚಿವರಾಗಿ ಕೆಲಸ ಮಾಡಿರುವುದು ವಿಶೇಷ ಸಂಗತಿ. ಇವರ ಪೂರ್ತಿ ಹೆಸರು ಗೋವಿಂದ ಮುಕ್ತಪ್ಪ ಕಾರಜೋಳ (72).

ಡಿಪ್ಲೊಮಾ ಪದವೀಧರರಾದ ಗೋವಿಂದ ಕಾರಜೋಳಯವರು ವಿಜಯಪುರ ಜಿಲ್ಲೆಯ ಕಾರಜೋಳ ಊರಿನಲ್ಲಿ 1951ರ ಜನವರಿ 25ರಂದು ಜನಿಸಿದರು. ಕೃಷಿ ಮತ್ತು ಸಮಾಜ ಸೇವೆಯಲ್ಲಿ ಹೆಚ್ಚಿನ ಆಸಕ್ತಿ ಇದ್ದು, ಅದರಲ್ಲಿ ತೊಡಗಿಸಿಕೊಂಡಿದ್ದಾರೆ. ಜನಪರ ಕಾಳಜಿ ಅವರಲ್ಲಿ ಹೆಚ್ಚಿದೆ.
ರಾಜಕೀಯ ಜೀವನ
ಕಾರಜೋಳರು 1994ರಲ್ಲಿ ನಡೆದ ಚುನಾವಣೆಯಲ್ಲಿ ಜನತಾದಳದಿಂದ ಅಭ್ಯರ್ಥಿಯಾಗಿ ಮೊಲದ ಬಾರಿಗೆ ರಾಜಕೀಯ ಅಂಗಳಕ್ಕೆ ಇಳಿದರು. ಮೊದಲ ಪ್ರಯತ್ನದಲ್ಲೇ ಗೆದ್ದು ಬೀಗಿದರು. ನಂತರ 1999ರ ಚುನಾವಣೆಯಲ್ಲಿ ಜೆಡಿಯು ಅಭ್ಯರ್ಥಿಯಾಗಿ ಕಣಕ್ಕಿಳಿದರು ಆದರೆ ಅದೃಷ್ಟ ಅವರ ವಿರುದ್ಧವಾಗಿತ್ತು, 52000ಕ್ಕೂ ಹೆಚ್ಚು ಮತ ಪಡೆದರೂ ಸಹಿತ ಸೋಲು ಅನುಭವಿಸಿದರು.
ಬಿಜೆಪಿ ಸೇರ್ಪಡೆ
ಇದಾದ ಹಲವು ದಿವಸಗಳ ಬಳಿಕ ಕಾರಜೋಳರು ಭಾರತೀಯ ಜನತಾ ಪಕ್ಷ (BJP) ಸೇರ್ಪಡೆಯಾದರು. ಅಲ್ಲಿಂದ ಅವರು ತಿರುಗಿ ನೋಡಲೇ ಇಲ್ಲ. 2004 ರಿಂದಲೂ ಅವರು ಮುಧೋಳ ವಿಧಾನಸಭಾ ಕ್ಷೇತ್ರದಿಂದ ಸತತವಾಗಿ ಆಯ್ಕೆ ಆಗುತ್ತಾ ಬಂದರು.ವಿರೋಧ ಪಕ್ಷದ ನಾಯಕರಾಗಿಯು ಅನುಭವ ಪಡೆದರು. 2006-2007ರ ಸುಮಾರು ಒಂದು ವರ್ಷ ಅವರು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ನಿರ್ವಹಿಸಿದರು.

2008ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ಪಡೆಯಿತು. ಆಗ ಅವರು ಸಣ್ಣ ನೀರಾವರಿ ಖಾತೆ, ಕನ್ನಡ ಮತ್ತು ಸಂಸ್ಕೃತಿ, ಮಾಹಿತಿ ಹಾಗೂ ಪ್ರವಾಸೋದ್ಯಮ ಸಚಿವರಾಗಿ ಶ್ರಮಿಸಿದರು. ಕೆಲ ಕಾಳ ಸಮಾಜ ಕಲ್ಯಾಣ ಸಚಿವರಾಗಿಯೂ ಸೇವೆ ಸಲ್ಲಿಸಿದರು. ಈ ವೇಳೆ ಸ್ವಕ್ಷೇತ್ರವನ್ನು ಅಭಿವೃದ್ಧಿಗೊಳಿಸಲು ಹಲವು ಯೋಜನೆಗಳನ್ನು ಜಾರಿ ಮಾಡಿದರು. ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಬರೋಬ್ಬರಿ 64,727 ಮತ ಪಡೆದು ಜಯಬೇರಿ ಬಾರಿಸಿದರು. ನಂತರ ವರ್ಷ 2019ರಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಉಪ ಮುಖ್ಯಮಂತ್ರಿಗಳಾಗಿ, ಲೋಕೋಪಯೋಗಿ, ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಅನುಭವ ಅವರಿಗಿದೆ.
ಕರ್ನಾಟಕದಲ್ಲಿ ಹಾಲಿ ಜಲಸಂಪನ್ಮೂಲ ಸಚಿವರಾಗಿರುವ ಗೋವಿಂದ ಕಾರಜೋಳ ಅವರು ಉತ್ತರ ಕರ್ನಾಟಕದ ಜೀವನಾಡಿ ನದಿಗಳ ಯೋಜನೆ, ನೀರಾವರಿ ಯೋಜನೆಗಳ ಅನುಷ್ಠಾನ ಬಗ್ಗೆ ವಿಶೇಷ ಕಾಳಜಿ ಹೊಂದಿದವರು. ಈಗಾಗಲೇ ಮಹದಾಯಿ ನದಿ ನೀರು ಯೋಜನೆಗೆ ಸಂಬಂಧಿಸಿದಂತೆ ಹಲವು ಭಾರಿ ಕೇಂದ್ರದ ವರಿಷ್ಠರನ್ನು ಭೇಟಿ ಮಾಡಿದ್ದಾರೆ.
ಇತ್ತೀಚೆಗೆ ಕಳಸಾ-ಬಂಡೂರಿ ನಾಲಾ ಯೋಜನೆಗೆ ಅನುಮೋದನೆ ನೀಡುವಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಮ್ಮುಖದಲ್ಲಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಗೆ ಮನವಿ ಸಲ್ಲಿಸಿದ್ದರು. ಕಂದಾಯ ಇಲಾಖೆ ದಾಖಲಾತಿಗಳಲ್ಲಿ ಪಾರದರ್ಶಕತೆಗೆ ಕ್ರಮ ವಹಿಸಿದ್ದರು.
ಮುಖ್ಯವಾಗಿ ಇಂಡಿ, ನಾಗಠಾಣ, ವಿಜಯಪುರ ಹಾಗೂ ಬಬಲೇಶ್ವರ ತಾಲ್ಲೂಕಿನ ರೈತರ ದಶಕಗಳ ಕಾಲದ ಬೇಡಿಕೆಯಾಗಿದ್ದ ರೇವಣ ಸಿದ್ದೇಶ್ವರ ಏತ ನೀರಾವರಿ ಯೋಜನೆ ಜಾರಿಗೆ ಸಚಿವ ಸಂಪುಟ ಅನುಮೋದನೆ ನೀಡಲಾಯಿತು. ಇದಕ್ಕೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರ ಒತ್ತಾಸೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಈ ರೀತಿಯ ರೈತ, ಗ್ರಾಮೀಣ ಜನಪರ ಯೋಜನೆಗಳು ಸಾಕಾರಗೊಳ್ಳುವಲ್ಲಿ ಕಾರಜೋಳರು ಪ್ರಮುಖ ಪಾತ್ರ ವಹಿಸಿದವರು.
ಸಚಿವರ ಆಸ್ತಿ ವಿವರ:
ಗೋವಿಂದ ಕಾರಜೋಳರು ಒಟ್ಟು 2.08 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಇವರು ಫೇಸ್ ಬುಕ್ https://www.facebook.com/GovindkarjolWRDMinister?mibextid=ZbWKwL, ಮತ್ತು ಟ್ವಿಟ್ಟರ್ https://twitter.com/GovindKarjol?s=20 ನಲ್ಲಿ ಸಕ್ರಿಯರಾಗಿದ್ದಾರೆ.












Click it and Unblock the Notifications