ಗೋವಾ ಚುನಾವಣೆ: ನಾಮಪತ್ರ ಸಲ್ಲಿಸಲು ಶುಭದಿನಕ್ಕಾಗಿ ಅಭ್ಯರ್ಥಿಗಳ ಕಾತುರ!
ಪಣಜಿ, ಜನವರಿ 26: ದೇಶದಲ್ಲಿ ಮುಂದಿನ ತಿಂಗಳು ಪಂಚ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ನಿಟ್ಟಿನಲ್ಲಿ ಎಲ್ಲಾ ರಾಜ್ಯಗಳಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಆಯಾ ಪಕ್ಷಗಳು ಬಿಡುಗಡೆ ಮಾಡಿದೆ. ಈ ನಡುವೆ ಗೋವಾದಲ್ಲಿ ಚುನಾವಣಾ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಲು ಶುಭ ಗಳಿಗೆಗಾಗಿ ಪುರೋಹಿತರ ಮೊರೆ ಹೋಗಿದ್ದಾರೆ.
ಗೋವಾದಲ್ಲಿ ಅಭ್ಯರ್ಥಿಗಳು ಜನವರಿ 27 ರಂದು ತಮ್ಮ ನಾಮಪತ್ರಗಳನ್ನು ಸಲ್ಲಿಸುವ ನಿರೀಕ್ಷೆಯಿದೆ. ರಾಜ್ಯ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇದು ಅಧಿಕೃತವಾಗಿ ಎರಡನೇ ಕೊನೆಯ ದಿನವಾಗಿದೆ. ಆದರೆ ಹಿಂದೂ ಕ್ಯಾಲೆಂಡರ್ ಪ್ರಕಾರ ಈ ದಿನವು ಶುಭ ದಿನವೂ ಕೂಡಾ ಆಗಿದೆ. ಬೆಳಿಗ್ಗೆ 8.50 ರಿಂದ ಮಧ್ಯಾಹ್ನ 3.28 ರವರೆಗೆ ಶುಭ ಮುಹೂರ್ತವಾಗಿದೆ ಎಂಬ ನಂಬಿಕೆ ಇದೆ. ಇನ್ನು ಈ ನಡುವೆ ಶುಭ ಮುಹೂರ್ತಗಳನ್ನು ನಂಬುವವರಿಗೆ, ನಾಮಪತ್ರ ಸಲ್ಲಿಕೆ ಮಾಡಲು ಪ್ರಾರಂಭವಾದ ದಿನಾಂಕ ಜನವರಿ 21 ಮತ್ತು ಅದು ಕೊನೆಗೊಳ್ಳುವ ಜನವರಿ 28 ರ ನಡುವೆ ಶುಭ ದಿನವನ್ನು ಹುಡುಕಾಟ ನಡೆಸುವ ಅಗತ್ಯವೇ ಇಲ್ಲ ಎಂದು ಕೂಡಾ ತಿಳಿದು ಬಂದಿದೆ.
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23 ಮತ್ತು ಮಾರ್ಚ್ 3 ಮತ್ತು 7 ರಂದು ಚುನಾವಣೆ ನಡೆಯಲಿದೆ. ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆಯಲಿದೆ. ಪಂಜಾಬ್‌ನಲ್ಲಿ ಫೆಬ್ರವರಿ 20 ರಂದು ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

ಯಾವಾಗ ಒಳ್ಳೆಯ ದಿನವಾಗಿದೆ?
ಮಕರ ಸಂಕ್ರಾಂತಿಯ ನಂತರದ ಅವಧಿಯು ಹಿಂದೂ ತಿಂಗಳ ಪೂರ್ಣಿಮ ಹುಣ್ಣಿಮೆಯನ್ನು ಗೋವಾದಲ್ಲಿ ಅನೇಕರು ಹೊಸ ಆರಂಭಕ್ಕೆ "ಅತ್ಯುತ್ತಮ ಸಮಯವಲ್ಲ" ಎಂದು ನಂಬಿಕೆ ಹೊಂದಿದ್ದಾರೆ. ಆದರೆ ಈ ಅವಧಿಯಲ್ಲಿ ಜನವರಿ 23 ಮತ್ತು 26 ಮಂಗಳಕರ ದಿನಗಳಾಗಿವೆ. ಜನವರಿ 23, ಭಾನುವಾರ ಮತ್ತು ಜನವರಿ 26, ಗಣರಾಜ್ಯೋತ್ಸವ, ಸಾರ್ವಜನಿಕ ರಜಾದಿನಗಳು ಆಗಿದೆ. ಈ ದಿನಗಳು ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಸಲ್ಲಿಸಲು ಸಾಧ್ಯವಿಲ್ಲ. ಜನವರಿ 21 ಅನ್ನು ಒಳ್ಳೆಯ ದಿನ ಎಂದು ಪರಿಗಣಿಸಲಾಗಿದೆ. ಈ ದಿನ ಸಂಕಷ್ಟ ಚತುರ್ಥಿ ಆಗಿದೆ. ಆದರೆ ನಾಮಪತ್ರಗಳ ಮೊದಲ ದಿನ, ಪಕ್ಷಗಳು ಇನ್ನೂ ಟಿಕೆಟ್ ಘೋಷಿಸುವ ಪ್ರಕ್ರಿಯೆಯಲ್ಲಿರುವುದರಿಂದ ಅನೇಕರು ಈ ದಿನ ನಾಮಪತ್ರ ಸಲ್ಲಿಕೆ ಮಾಡಲು ಸಾಧ್ಯವಾಗಿಲ್ಲ.

ನಾಮಪತ್ರ ದಿನ ವಿಸ್ತರಣೆಗೆ ಮನವಿ
"ಅಭ್ಯರ್ಥಿಗಳು ನಿರ್ದಿಷ್ಟ ದಿನಾಂಕದೊಳಗೆ ತಮ್ಮ ಪತ್ರಗಳನ್ನು ಸಲ್ಲಿಸಲು ಮಂಗಳಕರ ಸಮಯವನ್ನು ನೋಡುತ್ತಾರೆ," ಎಂದು ಮಾರ್ಕೈಮ್ ಶಾಸಕ ಮತ್ತು ಮಾಜಿ ಪಿಡಬ್ಲ್ಯೂಡಿ ಸಚಿವ ರಾಮಕೃಷ್ಣ 'ಸುದಿನ್' ಧವಲಿಕರ್ ಹೇಳಿದರು. "ಜನವರಿ 23 ಮತ್ತು 26 ರಂದು ಸಾರ್ವಜನಿಕ ರಜಾದಿನಗಳು, ಇದು ನಾಮಪತ್ರ ಸಲ್ಲಿಸಲು ಲಭ್ಯವಿರುವ ದಿನಗಳನ್ನು ಕಡಿತಗೊಳಿಸುತ್ತದೆ. ಈ ನಿಟ್ಟಿನಲ್ಲಿ ನಾವು ಮುಖ್ಯ ಚುನಾವಣಾ ಅಧಿಕಾರಿಗೆ ಪತ್ರ ಬರೆದಿದ್ದೇವೆ. ವಾಸ್ತವವಾಗಿ, ಕೋವಿಡ್ ಪರಿಸ್ಥಿತಿಯನ್ನು ಪರಿಗಣಿಸಿ ನಾಮನಿರ್ದೇಶನಗಳನ್ನು ಸಲ್ಲಿಸುವಾಗ ಜನಸಂದಣಿಯನ್ನು ತಪ್ಪಿಸಲು ಅವರು ಈ ವರ್ಷ ಹೆಚ್ಚಿನ ದಿನಗಳು ನಾಮಪತ್ರ ಸಲ್ಲಿಕೆಗೆ ಅವಕಾಶ ಮಾಡಿಕೊಡಬೇಕಾಗುತ್ತದೆ," ಎಂದು ತಿಳಿಸಿದ್ದಾರೆ.

ಚುನಾವಣಾ ಆಯೋಗ ಮತ್ತು ಪುರೋಹಿತರು!
ಈ ನಡುವೆ ಅಲ್ಡೋನಾ ಶಾಸಕ ಗ್ಲೆನ್ ಟಿಕ್ಲೋ, ಸಾಮಾನ್ಯವಾಗಿ ತಮ್ಮ ನಾಮಪತ್ರ ಸಲ್ಲಿಸಲು "ಒಳ್ಳೆಯ ದಿನ" ನೋಡುತ್ತಿದ್ದರು ಎಂದು ಹೇಳಿದರು. ಚರ್ಚ್‌ನಲ್ಲಿ ಆಶೀರ್ವಾದ ಪಡೆದ ನಂತರ ನಾನು ನಾಮಪತ್ರ ಸಲ್ಲಿಸುತ್ತೇನೆ. ನಾನು ಒಳ್ಳೆಯ ಸಮಯವನ್ನು ನಂಬುವುದಿಲ್ಲ, ಆದರೆ ನಾನು ಒಳ್ಳೆಯ ದಿನಕ್ಕಾಗಿ ಕಾಯುತ್ತೇನೆ ಎಂದಿದ್ದಾರೆ. ಗೋವಾದ ಮುಖ್ಯ ಚುನಾವಣಾಧಿಕಾರಿ ಕುನಾಲ್, ಸಾರ್ವಜನಿಕ ರಜಾದಿನಗಳ ಹೊರತಾಗಿಯೂ, ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಸಲ್ಲಿಸಲು ಇನ್ನೂ ಐದು ಪೂರ್ಣ ದಿನಗಳಿಗಿಂತ ಹೆಚ್ಚಿನ ಸಮಯವನ್ನು ಪರಿಗಣಿಸಿ ನಾಮನಿರ್ದೇಶನ ವೇಳಾಪಟ್ಟಿಯನ್ನು ಅಂತಿಮಗೊಳಿಸಲಾಗಿದೆ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಚುನಾವಣಾ ಅಧಿಕಾರಿಗಳು ದಿನಾಂಕವನ್ನು ವಿಸ್ತರಣೆ ಮಾಡಲು ನಿಯಮದ ಪರಿಶೀಲನೆ ಮಾಡುತ್ತಿರುವ ಸಂದರ್ಭದಲ್ಲಿ ಪುರೋಹಿತರುಗಳು ಅಭ್ಯರ್ಥಿಗಳ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕಲು ಪಂಚಾಂಗವನ್ನು ನೋಡುತ್ತಿದ್ದಾರೆ.

"ಜನವರಿ 27 ಶುಭ ದಿನ"
"ಜನವರಿ 27 ಹೆಚ್ಚಾಗಿ ಒಳ್ಳೆಯ ದಿನ ಎಂದು ನನ್ನನ್ನು ಸಂಪರ್ಕಿಸಿದ ಅಭ್ಯರ್ಥಿಗಳಿಗೆ ನಾನು ಹೇಳಿದ್ದೇನೆ," ಎಂದು ಪೊರ್ವೊರಿಮ್ ಮೂಲದ ಪೂಜಾರಿ ಕೃಷ್ಣ ಭಟ್ ಹೇಳಿದರು. "ವಾಸ್ತವವಾಗಿ, ಗೃಹ ಪ್ರವೇಶ ಮಾಡಲು ಮದುವೆ ಮಾಡಲು 'ಪುಷ್ಯ' ತಿಂಗಳು ಉತ್ತಮ ಸಮಯವಲ್ಲ ಎಂದು ಪರಿಗಣಿಸಲಾಗಿದೆ. ಆದರೆ ಗೋವಾದಲ್ಲಿ, ನಂಬಿಕೆಯು ಇದನ್ನು ಮೀರಿದೆ. ನಿಗದಿತ ಅವಧಿಯೊಳಗೆ ನಾಮಪತ್ರ ಸಲ್ಲಿಕೆ ಮಾಡಲು ಉತ್ತಮ ದಿನಗಳು ಲಭ್ಯವಿವೆ," ಎಂದು ತಿಳಿಸಿದ್ದಾರೆ. ಪ್ರಮುಖ ಪಕ್ಷಗಳು ಈಗ ಹೆಚ್ಚಿನ ಸ್ಥಾನಗಳಿಗೆ ತಮ್ಮ ಅಭ್ಯರ್ಥಿಗಳನ್ನು ಘೋಷಿಸಿದ್ದರೂ, ಹೆಚ್ಚಿನವರು ನಾಮಪತ್ರ ಸಲ್ಲಿಸಲು ಮುಂದಾಗಿಲ್ಲ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications