ಇದೆಂಥಾ ವ್ಯವಸ್ಥೆ: ನೀಟ್ ಪರೀಕ್ಷೆ ಬರೆಯಬೇಕಾದರೆ, ವಿದ್ಯಾರ್ಥಿನಿಯರು ಬ್ರಾ ಬಿಚ್ಚಿಡಬೇಕೇ!?

ತಿರುವನಂತಪುರಂ, ಜುಲೈ 19: ಕೇರಳದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯು ತೀವ್ರ ವಿವಾದಕ್ಕೆ ಕಾರಣವಾಗಿದೆ. ನೀಟ್ ಪರೀಕ್ಷೆಗೆ ಕುಳಿತುಕೊಳ್ಳುವುದಕ್ಕೂ ಮೊದಲು ವಿದ್ಯಾರ್ಥಿನಿಯರು ತಮ್ಮ ಒಳ ಉಡುಪುಗಳನ್ನು ತೆಗೆದಿಟ್ಟು ಕೂರುವಂತೆ ಮಾಡಿರುವ ಬಗ್ಗೆ ವರದಿ ಆಗಿದೆ.

ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಮೊದಲ ಬಾರಿಗೆ ನೀಟ್ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿನಿಗೆ ಮುಜುಗರ ಉಂಟು ಮಾಡುವಂತೆ ಸಿಬ್ಬಂದಿ ವರ್ತಿಸಿರುವ ಬಗ್ಗೆ ದೂರು ಕೇಳಿ ಬಂದಿದೆ. ನೀಟ್ ಪರೀಕ್ಷಾ ಸಿಬ್ಬಂದಿ ವಿರುದ್ಧ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಪರೀಕ್ಷಾ ಕೇಂದ್ರದ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಮಿತಿ ಮೀರಿ ವರ್ತಿಸಿದ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ಕೇರಳದ ಸಚಿವರು ಒತ್ತಾಯಿಸಿದ್ದಾರೆ. ಕಳೆದ ಭಾನುವಾರ ನಡೆದ ನೀಟ್ ಪರೀಕ್ಷೆಯಲ್ಲಿ ಸಿಬ್ಬಂದಿ ನಾಚಿಕೆಗೇಡಿನ ವರ್ತನೆ ತೋರಿಸಿದ್ದು ನಿಜವೇ?, ವಿದ್ಯಾರ್ಥಿನಿಯ ಪೋಷಕರು ಆರೋಪ ಮಾಡುತ್ತಿರುವುದೇನು?, ದೇವರನಾಡಿನಲ್ಲಿ ದೆವ್ವದ ವರ್ತನೆ ತೋರಿಸಿದ ಸಿಬ್ಬಂದಿಯ ಹುಚ್ಚಾಟಕ್ಕೆ ಯಾರು ಹೊಣೆ?, ಅಸಲಿಗೆ ಕೇರಳದಲ್ಲಿ ನಡೆದಿರುವ ಹಾಗೂ ದೇಶದಲ್ಲಿ ವಿವಾದದ ಕಿಚ್ಚು ಹೊತ್ತಿಸಿರುವ ಈ ಪ್ರಕರಣದ ಸುತ್ತಮುತ್ತ ಆಗಿರುವುದೇನು ಎಂಬುದನ್ನು ವರದಿಯಲ್ಲಿ ತಿಳಿದುಕೊಳ್ಳೋಣ.

ಬ್ರಾ ವಿವಾದ ಭುಗಿಲೆದಿದ್ದೇ ಸೋಮವಾರ

ಬ್ರಾ ವಿವಾದ ಭುಗಿಲೆದಿದ್ದೇ ಸೋಮವಾರ

ಕೇರಳದ ಮಾರ್ ಥೋಮಾ ಇನ್‌ಸ್ಟಿಟ್ಯೂಟ್ ಆಫ್ ಇನ್‌ಫರ್ಮೇಷನ್ ಟೆಕ್ನಾಲಜಿಯ ಪರೀಕ್ಷಾ ಕೇಂದ್ರದಲ್ಲಿ ನೀಟ್ ಪರೀಕ್ಷೆಗಳನ್ನು ಭಾನುವಾರ ನಡೆಸಲಾಯಿತು. ಈ ವೇಳೆ ಮೊದಲ ಬಾರಿಗೆ ಪರೀಕ್ಷೆಗೆ ಹಾಜರಾದ 17 ವರ್ಷದ ವಿದ್ಯಾರ್ಥಿನಿಯ ಜೊತೆಗೆ ಸಿಬ್ಬಂದಿಯು ಕೆಟ್ಟದಾಗಿ ವರ್ತಿಸಿದ್ದಾರೆ. ಭದ್ರತಾ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ವಿದ್ಯಾರ್ಥಿನಿ ಧರಿಸಿದ ಬಟ್ಟೆಯಲ್ಲಿನ ಲೋಹದ ಕೊಕ್ಕೆಗಳಿರುವ ಹಿನ್ನೆಲೆ ಬೀಪ್ ಸದ್ದು ಕೇಳಿದೆ. ಇದರಿಂದ ಅನುಮಾನಗೊಂಡ ಸಿಬ್ಬಂದಿಯು ವಿದ್ಯಾರ್ಥಿನಿಯ ಒಳ-ಉಡುಪು ತೆರೆಯುವಂತೆ ಒತ್ತಾಯಿಸಿದ್ದಾರೆ," ಎಂದು ತಂದೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ವಿವಾದವು ಸೋಮವಾರ ದೇಶಾದ್ಯಂತ ಭುಗಿಲೆದ್ದಿದೆ.

ಪೋಷಕರು ಮಾಡುತ್ತಿರುವ ಆರೋಪವೇನು?

ಪೋಷಕರು ಮಾಡುತ್ತಿರುವ ಆರೋಪವೇನು?

ಕೊಲ್ಲಂ ಜಿಲ್ಲೆಯ ನೀಟ್ ಪ್ರವೇಶ ಪರೀಕ್ಷಾ ಕೇಂದ್ರದಲ್ಲಿ ಸಿಬ್ಬಂದಿಯು ವಿದ್ಯಾರ್ಥಿನಿಯರ ಜೊತೆಗೆ ವ್ಯಾಘ್ರದಂತೆ ವರ್ತಿಸಿದ್ದಾರೆ. ವಿದ್ಯಾರ್ಥಿನಿಯರು ಎಂಬುದನ್ನೂ ನೋಡದೇ ಅವರ ಒಳ-ಉಡುಪುಗಳನ್ನು ಕಳಚಿಟ್ಟು ಕೂರುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ವಿರೋಧಿಸಿದ ವಿದ್ಯಾರ್ಥಿನಿಯರಿಗೆ ಆವಾಜ್ ಹಾಕಲಾಗಿದೆ. "ನಿಮಗೆ ಭವಿಷ್ಯ ಮುಖ್ಯವೋ, ಒಳಉಡುಪು ಮುಖ್ಯವೋ" ಎಂದು ಪ್ರಶ್ನೆ ಮಾಡಿರುವ ಬಗ್ಗೆ ವಿದ್ಯಾರ್ಥಿನಿಯ ಪೋಷಕರು ದೂಷಿಸಿದ್ದಾರೆ.

ಪರೀಕ್ಷೆಗೆ ಹಾಜರಾದ ಶೇ.90ರಷ್ಟು ವಿದ್ಯಾರ್ಥಿನಿಯರಿಗೆ ಎಂಥಾ ಶಿಕ್ಷೆ?

ಪರೀಕ್ಷೆಗೆ ಹಾಜರಾದ ಶೇ.90ರಷ್ಟು ವಿದ್ಯಾರ್ಥಿನಿಯರಿಗೆ ಎಂಥಾ ಶಿಕ್ಷೆ?

ಕೇರಳದ ಕೊಲ್ಲಂ ಜಿಲ್ಲೆಯ ಮಾರ್ ಥೋಮಾ ಇನ್‌ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಷನ್ ಟೆಕ್ನಾಲಜಿ ಪರೀಕ್ಷಾ ಕೇಂದ್ರದಲ್ಲಿ ನೀಟ್ ಪರೀಕ್ಷೆಗೆ ಕಟ್ಟುನಿಟ್ಟಿನ ನಿಯಮ ಪಾಲನೆ ಮಾಡಲಾಗಿದೆ. ಶಿಸ್ತು ಪಾಲನೆ ಹೆಸರಿನಲ್ಲಿ ಅಸಹ್ಯಕರ ವ್ಯವಸ್ಥೆಯನ್ನು ಸೃಷ್ಟಿಸಿದ ಆರೋಪ ಕೇಳಿ ಬಂದಿದೆ. ಈ ಕೇಂದ್ರದಲ್ಲಿ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿನಿಯರಲ್ಲಿ ಶೇ.90ರಷ್ಟು ವಿದ್ಯಾರ್ಥಿನಿಯರು ತಮ್ಮ ಒಳ-ಉಪುಡುಗಳನ್ನು ಬಿಚ್ಚಿಟ್ಟು ಪರೀಕ್ಷೆಗೆ ಹಾಜರಾಗಿದ್ದರು ಎಂದು ಗೊತ್ತಾಗಿದೆ. ಈ ಎಲ್ಲ ವಿದ್ಯಾರ್ಥಿನಿಯರು ಒಳ-ಉಡುಪನ್ನು ಬಿಚ್ಚಿ ಸ್ಟೋ-ರೂಮಿನಲ್ಲಿ ಇರಿಸಿದ್ದರು ಎಂದು ಗೊತ್ತಾಗಿದೆ.

ಕೇರಳದ ಸಚಿವೆ ಕೆ ಬಿಂದುರಿಂದ ಕೇಂದ್ರ ಸಚಿವರಿಗೆ ಪತ್ರ

ಕೇರಳದ ಸಚಿವೆ ಕೆ ಬಿಂದುರಿಂದ ಕೇಂದ್ರ ಸಚಿವರಿಗೆ ಪತ್ರ

ನೀಟ್ ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸುವುದಕ್ಕೂ ಮೊದಲು ವಿದ್ಯಾರ್ಥಿನಿಯರು ತಮ್ಮ ಒಳಉಡುಪನ್ನು ತೆಗೆದಿಡುವಂತೆ ಒತ್ತಡ ಹೇರಿದ ಸಿಬ್ಬಂದಿಯನ್ನು ಗುರುತಿಸಿ ಅವರ ವಿರುದ್ಧ ಶಿಸ್ತು ಕ್ರಮವನ್ನು ತೆಗೆದುಕೊಳ್ಳುವಂತೆ ಆಗ್ರಹಿಸಿದ ಕೇರಳದ ಪ್ರೌಢಶಿಕ್ಷಣ ಸಚಿವೆ ಕೆ ಬಿಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಿಗೆ ಪತ್ರ ಬರೆದಿದ್ದಾರೆ.

"ನೀಟ್ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿನಿಯರ ಜೊತೆಗೆ ಸಿಬ್ಬಂದಿ ತೋರಿಸಿದ ವರ್ತನೆಯು ಅಸಹ್ಯ, ಅವಮಾನ ಮತ್ತು ಆಘಾತಕಾರಿಯಾಗಿದೆ. ಇಂಥ ಅನಿರೀಕ್ಷಿತ ಘಟನೆಗಳು ಪರೀಕ್ಷೆಗೆ ಹಾಜರಾಗು ವಿದ್ಯಾರ್ಥಿನಿಯರ ಮನೋಸ್ಥೈರ್ಯದ ಮೇಲೆ ಪರಿಣಾಮ ಬೀರುತ್ತದೆ. ಇಂಥ ದುಸ್ಥಿತಿಗೆ ಕಾರಣವಾದ ಸಿಬ್ಬಂದಿಯ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು. ಉತ್ತಮ ವಾತಾವರಣದಲ್ಲಿ ಪರೀಕ್ಷೆಗಳನ್ನು ನಡೆಸುವ ನಿಟ್ಟಿನಲ್ಲಿ ದುರ್ವರ್ತನೆ ತೋರಿದ ಸಿಬ್ಬಂದಿಗೆ ತಕ್ಕ ಶಿಕ್ಷೆ ನೀಡುವಂತೆ ಕೇಂದ್ರ ಸಚಿವರಿಗೆ ಬರೆದ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದೇನೆ," ಎಂದು ಕೇರಳದ ಸಚಿವೆ ಕೆ. ಬಿಂದು ತಿಳಿಸಿದ್ದಾರೆ.

ಕೇಸ್ ದಾಖಲಿಸಿಕೊಂಡ ಕೇರಳ ಪೊಲೀಸರು

ಕೇಸ್ ದಾಖಲಿಸಿಕೊಂಡ ಕೇರಳ ಪೊಲೀಸರು

ಕೇರಳದಲ್ಲಿ ನೀಟ್ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿನಿಯರ ಒಳಉಡುಪನ್ನು ತೆಗೆದಿಡುವಂತೆ ಒತ್ತಡ ಹೇರಿದ್ದಾರೆ ಎನ್ನಲಾದ ಸಿಬ್ಬಂದಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ವಿದ್ಯಾರ್ಥಿನಿಯ ತಂದೆ ಮಾಡುತ್ತಿರುವ ಎಲ್ಲಾ ಆರೋಪಗಳು ಕಾಲ್ಪನಿಕವಾಗಿದ್ದು, ದುರುದ್ದೇಶಪೂರಿತವಾಗಿ ಈ ದೂರನ್ನು ದಾಖಲಿಸಲಾಗಿದೆ ಎಂದು ಕೊಲ್ಲಂನ ನೀಟ್ ಪರೀಕ್ಷಾ ಕೇಂದ್ರದ ಸೂಪರಿಂಟೆಂಡೆಂಟ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+