Video Viral: ಬರಿಗೈಲೇ ನಾಗರಹಾವು ಹಿಡಿದ ವಿದ್ಯಾರ್ಥಿನಿ: ಈಕೆಯ ಧೈರ್ಯಕ್ಕೆ ನೆಟ್ಟಿಗರು ಮೆಚ್ಚುಗೆ
ಬೆಂಗಳೂರು, ನವೆಂಬರ್ 02: ಚಿಕ್ಕ ಪುಟ್ಟ ವಿಷಯಗಳಿಗೆ ಭಯ ಪಡುವ ಹೆಣ್ಣುಮಕ್ಕಳ ಪೈಕಿ ಕೆಲವರು ಹೆಚ್ಚು ಧೈರ್ಯವಂತರಿರುತ್ತಾರೆ. ಅಂತವರ ಧೈರ್ಯ ಇತರರಿಗೂ ಸ್ಪೂರ್ತಿಯಾಗುತ್ತದೆ. ಜಿರಲೆ, ಹಲ್ಲಿಗಳಿಗೆ ಹೆದರು ಹುಡುಗಿಯರ ಮಧ್ಯೆ ಇಲ್ಲೊಬ್ಬ ವಿದ್ಯಾರ್ಥಿನಿ ಕ್ಯಾಂಪಸ್‌ಗೆ ನುಗ್ಗಿದ ನಾಗರಹಾವನ್ನು ಬರಿಗೈನಲ್ಲೇ ಹಿಡಿದು ಅದನ್ನು ರಕ್ಷಣೆ ಮಾಡಿದ್ದಾರೆ. ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಲ್ಲದೇ ಹಾವು ಹಿಡಿದ ವಿದ್ಯಾರ್ಥಿನಿಯ ಧೈರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ವಿಡಿಯೋಗೆ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಕ್ಯಾಪಂಸ್ ವೊಂದರಲ್ಲಿ ನಾಗರಹಾವು ನುಗ್ಗಿತ್ತು. ವಿಷಯ ತಿಳಿಯುತ್ತಿದ್ದಂತೆ ಅಲ್ಲಿದ್ದ ವಿದ್ಯಾರ್ಥಿಗಳು ಸುರಕ್ಷಿತ ಸ್ಥಳಕ್ಕೆ ಓಡಿ ಹೋದರರೆ. ಆದರೆ ಈ ವಿದ್ಯಾರ್ಥಿನಿ ಮಾತ್ರ ಹಾವಿರುವ ಗಿಡಗಳ ಪೊಟರೆಯೊಳಗೆ ನಿಂತು ಧೈರ್ಯವಾಗಿ ಹಾವು ಹಿಡಿದು ರಕ್ಷಿಸಿದ್ದಾರೆ. ಈ ವಿಡಿಯೋ ಅನ್ನು @introvert_hu_ji ಎಕ್ಸ್ ಹ್ಯಾಂಡ್‌ನಿಂದ ಹಂಚಿಕೊಳ್ಳಲಾಗಿದೆ.

ಈ ವಿಡಯೋ ಅನ್ನು ಅಕ್ಟೋಬರ್ 30ರಂದು ಶೇರ್ ಮಾಡಲಾಗಿದೆ. ಅಲ್ಲಿಂದ ಶನಿವಾರವರೆಗೆ ಮೂರನೇ ದಿನಗಳಲ್ಲಿ 8.25 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. 6000ಕ್ಕೂ ಹೆಚ್ಚು ಲೈಕ್ಸ್‌ಗಳು ಈ ವಿಡಿಯೋಗೆ ಬಂದಿವೆ. ನಾಲ್ಕು ನೂರಕ್ಕೂ ಅಧಿಕ ಕಾಮೆಂಟ್‌ಗಳು ಬಂದಿದ್ದು, ನೆಟ್ಟಿಗರು ಹಾವು ಹಿಡಿದ ವಿದ್ಯಾರ್ಥಿನಿ ಧೈರ್ಯವನ್ನು ಕೊಂಡಿದ್ದಾರೆ. ಇನ್ನೂ ಹಲವರು ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.
ವಿಡಿಯೋದಲ್ಲಿ ಏನಿದೆ?, ಧೈರ್ಯ ಮೆಚ್ಚಿದ ನೆಟ್ಟಿಗರು
ವಿಡಿಯೋದಲ್ಲಿ ನೀಲಿ ಬಣ್ಣದ ಕಾಲೇಜಿನ ಯೂನಿಫಾರ್ಮ್ ನಲ್ಲಿರುವ ವಿದ್ಯಾರ್ಥಿನಿಯೊಬ್ಬರು ಹಾವು ಕಂಡು ಗಿಡಗಳ ಪೊಟರೆಗೆ ನುಗ್ಗಿ ಬರಿಗೈಯಿಂದಲೇ ಹಾವು ಹಿಡಿದಿದ್ದಾರೆ. ಹಾವು ಸ್ವತಃ ಅವರ ಕೈಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರ ಬಿಡದೇ ಗಟ್ಟಿಯಾಗಿ ಹಿಡಿದು ಬೇರೆಡೆಗೆ ಒಯ್ಯುವ ಮೂಲಕ ಅದನ್ನು ರಕ್ಷಿಸಿದ್ದಾರೆ.
ಹಾವು ಹಿಡಿಯುತ್ತಿದ್ದ ಅವರ ಕೈ ಮತ್ತು ಮೈ ಮೇಲೆ ಸುತ್ತಿಕೊಳ್ಳಲು ಯತ್ನಿಸಿದೆ. ಹೀಗಿದ್ದರೂ ಹೆದರದೇ, ಚೂರು ಅಳುಕದೆ ಹಾವನ್ನು ಹಿಡಿದಿರುವುದನ್ನು ನೀವು ವಿಡಿಯೋದಲ್ಲಿ ಕಾಣಬಹುದಾಗಿದೆ. ಸದ್ಯ ಈಕೆಯದ್ದು ಏನು ಧೈರ್ಯ, ಈಕೆಯ ಕಾರ್ಯ ಶ್ಲಾಘನೀಯ, ಜಿರಳೆಗೆ ಹೆದರುವ ಯುವತಿಯರ ಮಧ್ಯೆ ಈಕೆ ವಿಶೇಷ ಎಂದೆಲ್ಲ ನೆಟ್ಟಿಗರು ಶಹಬ್ಬಾಶ್‌ಗಿರಿ ಕೊಟ್ಟಿದ್ದಾರೆ. ಸದ್ಯ ವಿಡಿಯೋ ಆನ್‌ಲೈನ್‌ನಲ್ಲಿ ಹರಿದಾಡುತ್ತಿದೆ.












Click it and Unblock the Notifications