ಒನ್ ಪ್ಲಸ್ ಫೋನ್ ಮೇಲೆ 12000 ರೂ ಕಡಿತ: ಇದುವೆ ಕೊಳ್ಳಲು ಬೆಸ್ಟ್ ಟೈಮ್
ಒನ್ ಪ್ಲಸ್ ತನ್ನ ಗ್ರಾಹಕರನ್ನು ಸೆಳೆಯಲು ಭರ್ಜರಿ ಪ್ಲ್ಯಾನ್ ಮಾಡಿಕೊಂಡಿದೆ. ಇತ್ತೀಚಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟ ಒನ್‌ಪ್ಲಸ್ 11 ಆರ್ 5ಜಿ ಫೋನ್ ಮೇಲೆ ಭರ್ಜರಿ ಡಿಸ್ಕೌಂಟ್ ಸಿಗಲಿದೆ. ಈ ಮೂಲಕ ಮಿಡ್ ರೇಂಜ್ ಗ್ರಾಹಕರು ಸಹ ಇನ್ನು ಪ್ರೀಮಿಯಂ ಫೋನ್‌ಗಳನ್ನು ಬಳಸುವ ಆಸೆ ಈಡೇರುತ್ತದೆ.
OnePlus 11R 5G ಫೋನ್ ಅನ್ನು ಖರೀದಿಸಲು ಯೋಜಿಸುತ್ತಿದ್ದರೆ, ಇದು ಅತ್ಯುತ್ತಮ ಸಮಯ. ಏಕೆಂದರೆ ಇದರ ಮೇಲೆ ಭಾರೀ ರಿಯಾಯಿತಿ ಇದೆ, ನೀವು ಈ ಫೋನ್ ಅನ್ನು ರಿಯಾಯಿತಿಯೊಂದಿಗೆ ಹೇಗೆ ಖರೀದಿಸಬಹುದು ಎಂಬ ಬಗ್ಗೆ ವಿವರಣೆ ಇಲ್ಲಿದೆ. ಈ ಫೋನ್ ಲಾಂಚ್ ಪ್ರೈಸ್‌ಗಿಂತಲೂ ಕಡಿಮೆ ಬೆಲೆಗೆ ಗ್ರಾಹಕರ ಕೈ ಸೇರಲಿದೆ.

ಬೆಲೆ ಎಷ್ಟು?
ಈ OnePlus ಫೋನ್‌ನ ಬಿಡುಗಡೆ ಆದಾಗ ರೂ 39,999 ಆಗಿತ್ತು. ಮಾರಾಟವು ಅಮೆಜಾನ್‌ನಲ್ಲಿ ಪ್ರಾರಂಭವಾಗಿದೆ. ಈ ಫೋನ್ ಮೇಲೆ ಕಂಪನಿ ಭರ್ಜರಿ ರಿಯಾಯಿತಿ ನೀಡುತ್ತಿದೆ. ಅಮೇಜಾನ್‌ನಲ್ಲಿ ಈ ಫೋನ್ ಮೇಲೆ ಶೇಕಡಾ 30 ರಷ್ಟು ರಿಯಾಯಿತು ನೀಡಲಾಗುತ್ತಿದೆ. ಸದ್ಯ ಈ ಫೋನ್ 27,999 ರೂಗೆ ಗ್ರಾಹಕರ ಕೈ ಸೇರಲಿದೆ. ಅಲ್ಲದೆ ಬೇರೆ ಆಫರ್‌ಗಳು ಈ ಫೋನ್ ಮೇಲೆ ಇವೆ.
ಏನೆಲ್ಲಾ ಆಫರ್‌ಗಳು ಇವೆ?
ಈ ಫೋನ್ ಮೇಲೆ EMI ಆಫರ್ ಸಹ ಲಭ್ಯವಿದೆ. ಕಾರ್ಡ್‌ಗಳ ಮೂಲಕ ಪಾವತಿ ಮಾಡಿದರೆ ಬಳಕೆದಾರರು 1500 ರೂ.ವರೆಗೆ ರಿಯಾಯಿತಿ ಪಡೆಯಬಹುದು. ಇನ್ನು ಈ ಫೋನ್ ಕೊಂಡು ನಿಮ್ಮ ಹಳೆಯ ಫೋನ್ ಬದಲಾಯಿಸುತ್ತೀರಿ ಎನ್ನುವುದಾದರೂ ಸಹ ನೀವು ಭಾರೀ ಮೊತ್ತವನ್ನು ಸೇವ ಮಾಡಬಹುದು. ನೀವು ಹಳೆಯ ಫೋನ್ ಅನ್ನು ಅಮೆಜಾನ್‌ಗೆ ಹಿಂತಿರುಗಿಸಿದರೆ, ಪ್ರತಿಯಾಗಿ ನೀವು 25,000 ರೂಪಾಯಿಗಳ ರಿಯಾಯಿತಿಯನ್ನು ಪಡೆಯಬಹುದು.

ಹೊಸ ಫೋನ್ ತೆಗೆದುಕೊಳ್ಳಲು ನೀವು ನಿಮ್ಮ ಹಳೆಯ ಫೋನ್ ಬದಲಾವಣೆಗೆ ಮುಂದಾಗಿದ್ದರೆ, ನಿಮ್ಮ ಹಳೆಯ ಫೋನ್‌ನ ಸ್ಥಿತಿಯು ಉತ್ತಮವಾಗಿರಬೇಕು. ಅಂದರೆ, ಒಟ್ಟಾರೆಯಾಗಿ ನೋಡಿದರೆ, ಈ ಫೋನ್ ಉತ್ತಮ ಆಯ್ಕೆಯಾಗಿದೆ ಎಂದು ಸಾಬೀತಾದ ನಂತರವೇ ನೀವು ಫೋನ್ ಮೇಲೆ ರಿಯಾಯಿತಿ ಪಡೆಯಬಹುದು.
ಫೋನ್ ಹೇಗಿದೆ?
ಈ ಫೋನ್ ಸಖತ್ ಲುಕ್ ಹೊಂದಿದೆ. ಈ ಫೋನ್ 6.7 ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿದೆ ಮತ್ತು ಇದು 120Hz ರಿಫ್ರೆಶ್ ದರದೊಂದಿಗೆ ಬರುತ್ತದೆ. ಇದರ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಪ್ರೈಮರಿ ಕ್ಯಾಮೆರಾ 50 ಮೆಗಾ ಪಿಕ್ಸಲ್ ಹೊಂದಿದೆ. ಈ ಫೋನ್ 8 ಜಿಬಿ ರ್ಯಾಮ್ 128 ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿದೆ.












Click it and Unblock the Notifications