ಸಂಪೂರ್ಣ ಲಸಿಕೆ ಹಾಕಿಸಿಕೊಂಡಿದ್ದೀರಾ? ಓಮಿಕ್ರಾಮ್‌ನಿಂದ ನೀವೆಷ್ಟು ಸುರಕ್ಷಿತ ಎಂದು ತಿಳಿಯಿರಿ
ನವದೆಹಲಿ 30 ನವೆಂಬರ್: ಕೋವಿಡ್ -19 ರೂಪಾಂತರ ವೈರಸ್ ಓಮಿಕ್ರಾನ್ ಪತ್ತೆಯಾದ ನಂತರ ಜನರಲ್ಲಿ ಹಲವಾರು ಪ್ರಶ್ನೆಗಳು ಉದ್ಭವಿಸಿದೆ. ಪ್ರಮುಖವಾದ ಪ್ರಶ್ನೆ ಎಂದರೆ ಹೊಸದಾಗಿ ಪತ್ತೆಯಾದ ಓಮಿಕ್ರಾನ್ ವೈರಸ್ ವಿರುದ್ಧ ಕೊರೊನಾ ಲಸಿಕೆ ಕಾರ್ಯನಿರ್ವಹಿಸುತ್ತದೆಯೇ ಅಥವಾ ಇಲ್ಲವೇ ಎಂಬುದು. ಕೊರೊನಾ ಲಸಿಕೆಯ ಎರಡು-ಡೋಸ್ ಪಡೆದವರು ಮತ್ತು ಒಂದೇ ಡೋಸ್ ಪಡೆದವರಲ್ಲಿ ಜೊತೆಗೆ ಲಸಿಕೆಯೇ ಪಡೆಯದೇ ಇರುವವರಲ್ಲಿ ಇದು ಕುತೂಹಲಕಾರಿ ಪ್ರಶ್ನೆಯಾಗಿದೆ.
ಲಸಿಕೆ ಕಾರ್ಯ: ಈ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು SARS-CoV-2 ವಿರುದ್ಧ ಲಸಿಕೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಮೊದಲು ನೋಡೋಣ. ಹೆಚ್ಚಿನ ಲಸಿಕೆಗಳು ವೈರಸ್‌ನ ಸ್ಪೈಕ್ ಪ್ರೋಟೀನ್ ಪ್ರದೇಶವನ್ನು ಗುರಿಯಾಗಿರಿಸಿಕೊಳ್ಳುತ್ತವೆ. ಜೊತೆಗೆ ಮಾನವ ಜೀವಕೋಶವನ್ನು ವೈರಸ್ ಪ್ರವೇಶಿಸದಂತೆ ತಡೆಯುತ್ತವೆ. SARS-CoV-2 ನ ಸ್ಪೈಕ್ ಪ್ರೋಟೀನ್ ಅನ್ನು ಗುರುತಿಸಲು ಮತ್ತು ವೈರಸ್ ದೇಹವನ್ನು ಪ್ರವೇಶಿಸಲು ಪ್ರಯತ್ನಿಸಿದಾಗ ಅದರ ಮೇಲೆ ದಾಳಿ ಮಾಡಲು ಮಾನವನ ಪ್ರತಿರಕ್ಷಣಾ ವ್ಯವಸ್ಥೆಯನ್ನು ತರಬೇತಿ ಮಾಡುವ ಮೂಲಕ ಲಸಿಕೆಗಳು ಕಾರ್ಯನಿರ್ವಹಿಸುತ್ತವೆ.

ಓಮಿಕ್ರಾನ್ ಅಪಾಯಕಾರಿ ಹೇಗೆ?
ಓಮಿಕ್ರಾನ್ ರೂಪಾಂತರದಲ್ಲಿ ಕಂಡುಬರುವ ಅಂಶವೆಂದರೆ ಅದರ ಸ್ಪೈಕ್ ಪ್ರೋಟೀನ್ 30 ಕ್ಕೂ ಹೆಚ್ಚು ರೂಪಾಂತರಗಳನ್ನು ಹೊಂದಿದೆ. ಸ್ಪೈಕ್ ಪ್ರೋಟೀನ್‌ನಲ್ಲಿ ರಿಸೆಪ್ಟರ್-ಬೈಂಡಿಂಗ್ ಡೊಮೇನ್ ಅಥವಾ RBD ಎಂದು ಕರೆಯಲ್ಪಡುವ ಹತ್ತು ರೂಪಾಂತರಗಳು ಕಂಡುಬರುತ್ತವೆ. RBD ಎಂಬುದು ಸ್ಪೈಕ್ ಪ್ರೋಟೀನ್‌ನ ಭಾಗವಾಗಿದ್ದು ಅದು ಮಾನವ ಜೀವಕೋಶಕ್ಕೆ ಅಂಟಿಕೊಳ್ಳುತ್ತದೆ. ಹೆಚ್ಚು ರೂಪಾಂತರಗೊಂಡ RBD ದೇಹದ ಪ್ರತಿರಕ್ಷಣಾ ಶಕ್ತಿಯನ್ನು ಕುಗ್ಗಿಸಿ ಓಮಿಕ್ರಾನ್ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ.

ರೋಗಕಾರಕಗಳ ವಿರುದ್ಧ ಹೋರಾಡುವ ಸಾಮರ್ಥ್ಯ
ಆದಾಗ್ಯೂ, ಸ್ಪೈಕ್ ಪ್ರೋಟೀನ್‌ಗಳು ಪ್ರತಿರಕ್ಷಣಾ ವ್ಯವಸ್ಥೆಯನ್ನು ಗುರುತಿಸುತ್ತದೆ. ಅದರ ವಿರುದ್ಧ ಹೋರಾಡುತ್ತದೆ. ಹಿಂದಿನ ಸೋಂಕಿಗೆ ಅನುಗುಣವಾಗಿ ಲಸಿಕೆ ತಯಾರಿಸಲಾಗಿದೆ. ದೇಹದಲ್ಲಿ ಬೆಳೆಯುವ ಪ್ರತಿಕಾಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಲಸಿಕೆಯನ್ನು ತಯಾರಿಸಲಾಗಿದೆ. ಜೊತೆಗೆ ಇದು ರೋಗಕಾರಕಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿತ್ತು. ಲಸಿಕೆಗಳು ರೂಪಾಂತರಿತ SARS-CoV-2 ವಿರುದ್ಧ ರಕ್ಷಣೆ ನೀಡುತ್ತವೆ. ಓಮಿಕ್ರಾನ್ ವಿರುದ್ಧ ಹೋರಾಡುತ್ತದೆ ಎಂದು ಭಾವಿಸಬಹುದು. ಆದರೆ ಅದು ಓಮಿಕ್ರಾನ್‌ನಲ್ಲಿರುವ ರೂಪಾಂತರಿ ವೈರಸ್‌ಗಳ ವಿರುದ್ಧ ಹೋರಾಡುವ ಮಟ್ಟಿಗೆ ಕೆಲಸ ಮಾಡುತ್ತದೆ ಎಂದು ನಿಖರವಾಗಿ ಹೇಳಿಕೆಗಳಿಲ್ಲ.

ತಜ್ಞರ ಅಭಿಪ್ರಾಯ
ದಿ ಗಾರ್ಡಿಯನ್ ಪತ್ರಿಕೆಗೆ ಪ್ರತಿಕ್ರಿಯಿಸಿದ ಲಂಡನ್‌ನ ಇಂಪೀರಿಯಲ್ ಕಾಲೇಜ್‌ನ ರೋಗನಿರೋಧಕ ಶಾಸ್ತ್ರದ ಪ್ರಾಧ್ಯಾಪಕರಾದ ಡ್ಯಾನಿ ಆಲ್ಟ್‌ಮನ್ ಅವರು, "ನಮಗೆ ತಿಳಿದಿರುವಂತೆ, ಇದು ಭಯಾನಕ ರೀತಿಯಲ್ಲಿ ತೋರುತ್ತಿದೆ. ಯಾಕೆಂದರೆ ಇದು ಪ್ರತಿಕಾಯ ಗುರಿಗಳನ್ನು ತುಂಡುಗಳಾಗಿ ಹೊಡೆದು ಹಾಕುತ್ತದೆ. ಆದ್ದರಿಂದ ನಮ್ಮ ದೇಹದಲ್ಲಿ ವೈರಸ್ ವಿರುದ್ಧ ಹೋರಾಡುವ ಪ್ರತಿಕಾಯಕಗಳು ಕಡಿಮೆಯಾಗಿ ರಕ್ಷಣೆ ಇಲ್ಲದಂತಾಗುತ್ತದೆ. ಆದರೂ, ದಕ್ಷಿಣ ಆಫ್ರಿಕಾದಿಂದ ನಾವು ಪಡೆಯುತ್ತಿರುವ ಮಾಹಿತಿ ಪ್ರಕಾರ ಅದು ತೀವ್ರವಾಗಿ ಕಾಣುತ್ತಿಲ್ಲ ಎಂದು ತೋರುತ್ತಿದೆ ಮತ್ತು ಆಸ್ಪತ್ರೆಗೆ ಹೋಗುವ ಜನರು ಲಸಿಕೆ ಹಾಕಿದವರಿಗಿಂತ ಹೆಚ್ಚಾಗಿ ಲಸಿಕೆ ಹಾಕದವರಾಗಿದ್ದಾರೆ" ಎಂದು ಹೇಳಿದ್ದಾರೆ.

ಲಸಿಕೆಗಳು ಎಷ್ಟು ರಕ್ಷಣೆ ನೀಡುತ್ತವೆ?
ಇನ್ನೂ ಡೆಲ್ಟಾ ರೂಪಾಂತರದ ಸೋಂಕಿಗೆ ಒಳಗಾದ ಸಂದರ್ಭದಲ್ಲಿ ಲಸಿಕೆ ಹಾಕಿದ ಕೋವಿಡ್ -19 ರೋಗಿಗಳು ಸಾಯುವ ಸಾಧ್ಯತೆ ಒಂಬತ್ತು ಪಟ್ಟು ಕಡಿಮೆ ಎಂದು ವರದಿಯಾಗಿದೆ. ಲಸಿಕೆ ಹಾಕದವರಿಗೆ ಹೋಲಿಸಿದರೆ ಸಂಪೂರ್ಣವಾಗಿ ಲಸಿಕೆ ಪಡೆದ ಜನರು ಸೋಂಕಿಗೆ ಒಳಗಾಗುವ ಸಾಧ್ಯತೆ ಮೂರು ಪಟ್ಟು ಕಡಿಮೆ ಎಂದು ಹೇಳಲಾಗುತ್ತದೆ.
ಕಾರ್ಡಿಫ್ ವಿಶ್ವವಿದ್ಯಾನಿಲಯದ ಇಮ್ಯುನೊಲೊಜಿಸ್ಟ್ ಪ್ರೊಫೆಸರ್ ಪಾಲ್ ಮೋರ್ಗಾನ್ ಎಂಬ ಇನ್ನೊಬ್ಬ ತಜ್ಞರು, "ಓಮಿಕ್ರಾನ್ ರೋಗನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ವೈರಸ್‌ನಲ್ಲಿರುವ ಪ್ರತಿಕಾಯಗಳನ್ನು ಗುರಿಯಾಗಿಸಿಕೊಳ್ಳಬಹುದು. ಒಮ್ಮೆ ಅದರ ವಿರುದ್ಧ ದಾಳಿ ಮಾಡಿದರೆ, ಅದು ಕೆಲಸ ಮಾಡುವುದಿಲ್ಲ. ಕೊರೊನಾ ಲಸಿಕೆಯಲ್ಲಿ ಇಂತಹ ಪ್ರತಿಕಾಯಗಳಿವೆ" ಎಂದು ಹೇಳಿದರು.

ಡೆಲ್ಟಾ ರೂಪಾಂತರ
ಇದಕ್ಕೆ ಸಾಕ್ಷಿ ಡೆಲ್ಟಾ ರೂಪಾಂತರದಿಂದ ಸೋಂಕಿಗೆ ಒಳಗಾದ ಸಂಪೂರ್ಣ ಲಸಿಕೆಯನ್ನು ಪಡೆದ ಜನರ ರಕ್ಷಣೆ ಉತ್ತಮವಾಗಿರುವುದು. ಬ್ರಿಸ್ಟಲ್ ವಿಶ್ವವಿದ್ಯಾನಿಲಯದ ವೈರಾಲಜಿ ಪ್ರೊಫೆಸರ್ ಡೇವಿಡ್ ಮ್ಯಾಥ್ಯೂಸ್ ದಿ ಗಾರ್ಡಿಯನ್, "ನೀವು ಡಬಲ್-ಜಾಬ್ಡ್(ಎರಡು ಡೋಸ್ ಲಸಿಕೆ) ಆಗಿದ್ದರೆ ಅಂದರೆ ಡೆಲ್ಟಾದಿಂದ ಸೋಂಕಿಗೆ ಒಳಗಾಗಿದ್ದರೆ ಮತ್ತು ಚೇತರಿಸಿಕೊಂಡಿದ್ದರೆ, ನೀವು ತುಂಬಾ ವಿಶಾಲವಾದ ಅತ್ಯಂತ ಪರಿಣಾಮಕಾರಿಯಾದ ಪ್ರತಿರಕ್ಷಣಾ ಪ್ರತಿಕಾಯಗಳನ್ನು ಪಡೆದಿರುತ್ತೀರಿ. ಅದು ಬಹುಶಃ ನಿಮ್ಮ ದೇಹದಲ್ಲಿ ಕೆಲಸ ಮಾಡಲು ಹೆಚ್ಚಾಗಿ ಸಾಧ್ಯವಾಗದೇ ಇರಬಹುದು. ಕಾರಣ ತುಂಬಾ ಸರಳವಾಗಿದೆ. ಚೀನಾದ ವುಹಾನ್‌ನಲ್ಲಿ ಕೋವಿಡ್ -19 ಅನ್ನು ಸ್ಫೋಟಿಸಿದ ಮೂಲ ವೈರಸ್ ವಿರುದ್ಧ ಅಂತಹ ವ್ಯಕ್ತಿಗಳಿಗೆ ಲಸಿಕೆ ಹಾಕಲಾಯಿತು. ಇವರಲ್ಲಿ ರೂಪಾಂತರಿತ ಡೆಲ್ಟಾ ವಿರುದ್ಧ ಹೋರಾಡುವ ನೈಸರ್ಗಿಕ ರೋಗನಿರೋಧಕ ಶಕ್ತಿ ಅಭಿವೃದ್ಧಿಯಾಗಿತ್ತು" ಎಂದರು.
"ಇದರರ್ಥ ನೀವು ಆಧುನಿಕ ತಳಿಗಳ ವಿರುದ್ಧ ಹೋರಾಡುವ ಅತ್ಯಂತ ವಿಶಾಲವಾದ ಪ್ರತಿಕಾಯವನ್ನು ಪಡೆದುಕೊಂಡಿದ್ದೀರಿ. ಇದು ಕೊರೊನಾ ರೂಪಾಂತರ ವೈರಸ್‌ಗಳ ವಿರುದ್ಧ ಹೋರಾಡಲು ಸಹಾಯಕವಾಗಿದೆ " ಎಂದು ಮ್ಯಾಥ್ಯೂಸ್ ಹೇಳಿದರು. ಹೀಗಾಗಿ ಲಸಿಕೆ ಹಾಕಿಸಿಕೊಳ್ಳದವರಿಗೆ ಈ ಚಿಂತೆ ಕಾಡುತ್ತಿದೆ. ಒಮಿಕ್ರಾನ್ ರೂಪಾಂತರವು ನಿರೀಕ್ಷಿಸಿದಂತೆ ವೇಗವಾಗಿ ಹರಡಿದರೆ, ಈ ವೈರಸ್ ಹೆಚ್ಚು ಲಸಿಕೆ ಹಾಕದ ಜನರಿಗೆ ತಗುಲಬಹುದು ಎಂದು ತಜ್ಞರು ಹೇಳುತ್ತಾರೆ.












Click it and Unblock the Notifications