ಉಚಿತವಾಗಿ "ಏನ್ರೀ ಮೀಡಿಯಾ" ಶರ್ಟ್‌ ವಿತರಣೆ: ಈ ಸಮಾಜ ಸೇವೆಗೆ ಸಿಕ್ಕಿದ್ದೇನು ಗೊತ್ತಾ?

ದರ್ಶನ್‌ ಅವರದ್ದು ಎನ್ನಲಾದ ಏನ್ರೀ ಮೀಡಿಯಾ ಡೈಲಾಗ್‌ ಹಲವು ವರ್ಷಗಳಷ್ಟು ಹಳೆಯದಾದ್ರೂ ಅದು ಟ್ರೆಂಡ್‌ ಆಗಿದ್ದು ಇತ್ತೀಚೆಗೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ ಅವರು ಜೈಲು ಸೇರಿದ ಬಳಿಕ ಅವರ ಕಟ್ಟಾಭಿಮಾನಿಗಳು ಮಾಧ್ಯಮಗಳ ಮೇಲೆ ಮುಗಿಬಿದ್ದಿದ್ದರು. ನಟನಿಗೆ ಹೀಗಾಯ್ತಲ್ಲ ಅಂತ ನೋವಿನಲ್ಲಿ ಎಲ್ಲೆಲ್ಲೂ ಏನ್ರೀ ಮೀಡಿಯಾ ಅನ್ಕೊಂಡು ತಿರುಗಾಡ್ತಿದ್ರು. ಈಗ ಏನ್ರೀ ಮೀಡಿಯಾ ಅಂದೋರ ಕಥೆ ಪೊಲೀಸ್‌ ಠಾಣೆವರೆಗೆ ಕರೆದೊಯ್ದಿದೆ.

ನಟನ ಮೇಲಿನ ಅಭಿಮಾನದ ಹೆಸರಲ್ಲಿ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಸಿಕ್ಕದಕ್ಕೆಲ್ಲ ಏನ್ರೀ ಮೀಡಿಯಾ ಅಂತಿದ್ರು. ಗಾಡಿಗಳ ಮೇಲೆ ಸ್ಟಿಕರ್‌ ಕೂಡ ಹಾಕಿಸಿಕೊಂಡು ಮೆರೆಯುತ್ತಿದ್ರು. ಇದಕ್ಕೆ ಆಗಾಗ ತಕ್ಕ ಶಾಸ್ತಿಯೇನೋ ಆಗುತ್ತಿತ್ತು. ಆದರೆ ಮೈಸೂರಿನಲ್ಲಿ ಏನ್ರೀ ಮೀಡಿಯಾ ಹೆಸರಲ್ಲಿ ಎಲ್ಲರ ಗಮನ ಸೆಳೆಯೋಣ ಅಂತ ಮಾಡಿರೋ ಪ್ಲ್ಯಾನ್‌ ಇದೀಗ ಅವರನ್ನು ಪೊಲೀಸ್‌ ಠಾಣೆ ಮೆಟ್ಟಿಲೇರುವಂತೆ ಮಾಡಿದೆ.

Free T-Shirt Chaos In Mysuru Case Filed Against Shop Owner

ಈ ಏನ್ರೀ ಮೀಡಿಯಾ ಎಲ್ಲಿಂದ ಶುರುವಾಯ್ತೋ ಅದೇ ಸೋಶಿಯಲ್‌ ಮೀಡಿಯಾದಿಂದಲೇ ಆಪತ್ತು ತಲೆ ಮೇಲೆ ಎಳೆದುಕೊಂಡಿದ್ದಾರೆ. ಮೈಸೂರಿನ ಬೋಗಾದಿಯಲ್ಲಿರುವ ಬಟ್ಟೆ ಅಂಗಡಿಯವರು ದೊಡ್ಡ ಸ್ಟಾರ್‌ ಆಗಲು ಹೊರಟು, ಪೊಲೀಸರ ಅತಿಥಿಗಳಾಗಿದ್ದಾರೆ. ಈ ಮಳಿಗೆಯವರು ನಾವು ಏನ್ರೀ ಮೀಡಿಯಾ ಅನ್ನೋ ಟೀಶರ್ಟ್‌ನ ಫ್ರೀಯಾಗಿ ಕೊಡ್ತೀವಿ ಎಂದು ವಿಡಿಯೋ ಶೇರ್‌ ಮಾಡಿದ್ದರು.

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಏನ್ರೀ ಮೀಡಿಯಾ ಎಂದು ಪ್ರಿಂಟ್‌ ಆಗಿದ್ದ ಟೀಶರ್ಟ್‌ಗಳನ್ನು ಪ್ರದರ್ಶಿಸಿ, ಇದನ್ನು ಉಚಿತವಾಗಿ ಕೊಡ್ತೀವಿ ಎಂದು ವಿಡಿಯೋ ಮಾಡಿ ಹರಿಬಿಟ್ಟಿದ್ದರು. ಇದನ್ನು ಕಂಡು ನೂರಾರು ಮಂದಿ ಟೀಶರ್ಟ್‌ಗಾಗಿ ಅಂಗಡಿ ಬಳಿ ಸೇರಿಕೊಂಡಿದ್ದರು. ಸಮಯ ಕಳೆದಂತೆ ಬಟ್ಟೆ ಅಂಗಡಿ ಬಳಿ ಯುವಕರ ಸಂಖ್ಯೆ ಹೆಚ್ಚಾಗುತ್ತಲೇ ಇತ್ತು. ಕೊನೆಗೆ ಟೀಶರ್ಟ್‌ ಆಸೆಗಾಗಿ ನೂಕುನುಗ್ಗಲು ಕೂಡ ಶುರುವಾಗಿತ್ತು.

ಇದು ಪೊಲೀಸರ ಗಮನಕ್ಕೆ ಬಂದಿತ್ತು. ಅಲ್ಲಿನ ಜನರ ನೂಕುನುಗ್ಗಲು ವಿಡಿಯೋ ಕೂಡ ವೈರಲ್‌ ಆಗಿತ್ತು. ಸ್ಥಳಕ್ಕೆ ಬಂದ ಪೊಲೀಸರು ಕೂಡಲೇ ಬಟ್ಟೆ ಅಂಗಡಿಯವರ ಮೇಲೆ ಕಾನೂನು ಕ್ರಮ ತೆಗೆದುಕೊಂಡಿದ್ದಾರೆ. ಏನ್ರೀ ಮೀಡಿಯಾ ಅಂದೋರನ್ನ ಪೊಲೀಸರು ಏನ್ರೀ ನಿಮ್‌ ಕಥೆ ಎಂದು ವಿಚಾರಿಸಿಕೊಂಡಿದ್ದಾರೆ.

Free T-Shirt Chaos In Mysuru Case Filed Against Shop Owner

ಬೋಗಾದಿಯ ಸಿಎಫ್‌ಟಿಆರ್‌ಐ ಬಡಾವಣೆಯ ಮಳಿಗೆಯಲ್ಲಿ ಹಂಚುತ್ತಿದ್ದ ಫ್ರೀ ಟೀಶರ್ಟ್‌ ಪಡೆಯಲು ನೂರಾರು ಯುವಕರು ತಳ್ಳಾಟ ನಡೆಸಿದ್ದರು. ಪೊಲೀಸ್‌ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಿದ್ದರಿಂದ ಅಂಗಡಿ ಮಾಲೀಕ ಮಂಜುನಾಥ್‌ ವಿರುದ್ಧ ಸರಸ್ವತಿಪುರಂ ಠಾಣೆಯಲ್ಲಿ ಕೇಸ್‌ ಕೂಡ ದಾಖಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಫಂಕಿ ವರ್ಲ್ಡ್‌ ಎನ್ನುವ ತಂಡದವರು ಚಾಮುಂಡಿ ಬೆಟ್ಟದಲ್ಲಿ 'ಏನ್ರೀ ಮೀಡಿಯಾ' ಎನ್ನುವ ಹೆಸರಿದ್ದ ಟೀಶರ್ಟ್‌ ಕೊಡ್ತೀವಿ ಎಂದು ವಿಡಿಯೋ ಮಾಡಿದ್ದರು. ಅದನ್ನು ನೋಡಿ ನೂರಾರು ಯುವಕರು ಮಳಿಗೆಯ ಬಳಿ ಜಮಾಯಿಸಿದ್ದರು. ಇವರ ನೂಕುನುಗ್ಗಲಿನಿಂದ ಸಾರ್ವಜನಿಕರ ಸಂಚಾರಕ್ಕೂ ಸಮಸ್ಯೆಯಾಗಿತ್ತು. ಈ ಹಿನ್ನೆಲೆ ಅವರ ವಿರುದ್ಧ ಕ್ರಮ ತೆಗೆದುಕೊಂಡಿದ್ದಾಗಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+