Sucess: ಸಾಧನೆಗೆ ಈ ಒಂದು ಸರಳ ಸೂತ್ರ ಅನುಸರಿಸಿ...!
ಬಡವನಾಗಿ ಹುಟ್ಟುವುದು ಯಾರೊಬ್ಬರ ಆಯ್ಕೆಯಾಗಿರುವುದಿಲ್ಲ. ಆದರೆ, ಬಡವನಾಗಿಯೇ ಜೀವಿಸುವುದು, ಸಾಯುವುದು ಬಹುತೇಕ ನಮ್ಮದೇ ತಪ್ಪು ಆಯ್ಕೆ ಆಗಿರುತ್ತದೆ ಎಂದರೆ ತಪ್ಪಾಗಲಾರದು. ಈಗಾಗಲೇ ಸಾಧಕರಾಗಿರುವವರ ಪಟ್ಟಿಯನ್ನು ಗಮಹಿಸಿದರೆ ಬಹುತೇಕರು ಬಡತನದಲ್ಲಿ ಹುಟ್ಟಿ ತಮ್ಮ ಸ್ವಪ್ರಯತ್ನದಿಂದ ಸಾಧಕರ ಹಂತಕ್ಕೆ ತಲುಪಿರುತ್ತಾರೆ. ಅಂತಹ ಸಾಧನೆಗೆ ಬಹುಮುಖ್ಯವಾಗಿ ಈ ಒಂದು ಸರಳ ಸೂತ್ರ ಕಡ್ಡಾಯವಾಗಿ ಪಾಲಿಸುತ್ತಾರೆ. ಅದು ಯಾವುದು ಅಂತಿರಾ, ಈ ಸ್ಟೋರಿ ನೋಡಿ.
ಮುಂಜಾನೆಯ ಆರಂಭ
ಸೂರ್ಯ ಸಂಜೆ ಮುಳುಗಿ, ಬೆಳಗ್ಗೆ ಏಳುವಾಗ ಹೊಸ ಪ್ರಪಂಚವನ್ನೆ ಸೃಷ್ಟಿಯಾಗಿರುತ್ತದೆ. ಪ್ರತಿದಿನವೂ ಹೂ ಗಿಡಗಳಲ್ಲಿ ಹೂವುಗಳು ಅರಳುವಂತೆ ಮಾಡುತ್ತಾನೆ. ಕಾಯಿಗಳು ಹಣ್ಣಾಗುತ್ತವೆ. ಇದಕ್ಕಾಗಿಯೇ ಕಾದು ಕುಳಿತಿರುವ ಹಕ್ಕಿಗಳು ಆ ದಿನದ ಹಣ್ಣುಗಳನ್ನು ತಿಂದು, ನಾಳೆಯ ಹೊಸ ಹಣ್ಣಿಗಾಗಿ ಕಾದಿರುತ್ತದೆ. ಈ ಹೂವು ಬಿಡುವುದು ಸೇರಿದಂತೆ ಎಲ್ಲ ಫಲವತ್ತತೆಯ ಪ್ರಕ್ರಿಯೆಯು ಬೆಳಗ್ಗೆಯೇ ಘಟಿಸುವುದು ಎಂಬುದನ್ನು ನಾವು ತಿಳಿದುಕೊಳ್ಳಬೇಕಿದೆ.

ಮುಂಜಾನೆಯೇ ಏಳುವ ಅಭ್ಯಾಸ
ಈಗಾಗಲೇ ವಿವಿಧ ಕ್ಷೇತ್ರಗಳಲ್ಲಿ ಸಾಧನೆಯ ದಾಪುಗಾಲು ಇಟ್ಟಿರುವ ಬಹುತೇಕರ ಜೀವನ ವಿಧಾನವನ್ನು ಗಮನಿಸಿದ್ದೆ ಆದರೆ, ಅವರ ದಿನನಿತ್ಯದ ಚುಟುವಟಿಕೆಯು ಬೆಳಗ್ಗೆ 4 ರಿಂದ 5 ಗಂಟೆಯೊಳಗೆ ಪ್ರಾರಂಭವಾಗುತ್ತದೆ. ಇಡೀ ಪ್ರಕೃತಿ ನಮ್ಮ ಚಿಂತನೆಗಳಿಗೆ, ಯೋಜನೆಗಳಿಗೆ ಅಸ್ತು ಎನ್ನಲು ಕಾದುಕುಳಿತಿರುವಂತಹ ಸಮಯ ಅದಾಗಿರುತ್ತದೆ. ಈ ಸಮಯದಲ್ಲಿ ನಾವು ಏನೇ ಯೋಜನೆ ಮಾಡಿದರೂ ಅದು ಯಶಸ್ವಿಯಾಗುವು ಸಾಧ್ಯತೆ ಹೆಚ್ಚಾಗಿರುತ್ತದೆ ಎಂಬುದು ಯಶಸ್ವಿ ಉದ್ಯಮಿಗಳ ಅಭಿಪ್ರಾಯವಾಗಿದೆ.
ಪಾಸಿಟಿವ್ ಎನರ್ಜಿಯ ಸಮಯ
ಬೆಳಗ್ಗೆ 4, 5ಗಂಟೆಯ ಸಮಯದಲ್ಲಿ ವಾತಾವರಣದಲ್ಲಿ ಆಮ್ಲಜನಕದ ಪ್ರಮಾಣ ಹೆಚ್ಚಿರುತ್ತದೆ. ಶುದ್ಧವಾದ ಗಾಳಿ ಸೇವನೆ ಮಾಡುತ್ತಿದ್ದಂತೆ ಮೆದುಳು ಚುರುಕಾಗುತ್ತದೆ. ಹಾಗೆಯೇ ಒಂದಷ್ಟು ಹೊತ್ತು ಧ್ಯಾನ ಮಾಡಿದರೆ ಪಾಸಿಟಿವ್ ಎನರ್ಜಿ ಸಿಗುತ್ತದೆ. ಈ ಎನರ್ಜಿ ಇಡೀ ದಿನ ನಮ್ಮೊಳಗಿದ್ದು ನಮ್ಮೆಲ್ಲ ಕೆಲಸಗಳು ಸರಾಗವಾಗಿ ಆಗುವಂತೆ ಪ್ರೇರೇಪಿಸುತ್ತದೆ.
ಪ್ರಕೃತಿ ಜೊತೆ ಬೆರೆಯಲು ಸಕಾಲ
ಪ್ರಕೃತಿಯನ್ನು ನಾವು ಗುರುವೆಂದು ಭಾವಿಸಿದರೆ, ನಮ್ಮ ಸುತ್ತಮುತ್ತ ನಡೆಯುವ ಪ್ರತಿಯೊಂದು ಚಲನವಲನಗಳಿಂದಲೂ ಏನನ್ನಾದರು ಕಲಿಯಬಹುದು. ಈ ಕಲಿಕೆಗೆ ಸೂಕ್ತವಾದ ಸಮಯವೆಂದರೆ ಅದು ಬೆಳಗ್ಗೆಯೇ ಆಗಿರುತ್ತದೆ. ಕೋಳಿ ಕೂಗುವುದು, ಹಕ್ಕಿಗಳು ಚಿಲಿಪಿಲಿ ಗುಟ್ಟುವುದು, ಹೂ ಹರಳುವುದು ಬೆಳಗ್ಗೆಯೇ ಆಗಿದೆ. ಅವುಗಳಿಗೆಯೇ ಬೆಳಗ್ಗೆ ಎಂಬುದು ಅಮೃತಗಳಿಗೆಯೆಂದು ತಿಳಿದಿರುವಾಗ ಬುದ್ಧಿವಂತರೆಂದು ಹೇಳಿಕೊಳ್ಳುವ ನಾವು ಬೆಳಗಿನ ಸಮಯದ ಪ್ರಾಮುಖ್ಯತೆಯನ್ನು ಅರಿಯದಿದ್ದರೆ ಹೇಗೆ. ನಮ್ಮೆಲ್ಲ ಸಾಧನೆಗೆ ಬೆಳಗ್ಗೆ 5ರಲ್ಲಿದೆ ಗುಟ್ಟು ಎಂದರೆ ತಪ್ಪಾಗಲಾರದು.












Click it and Unblock the Notifications