Flashback 2021: ರಾಜ್ಯ, ದೇಶ, ವಿದೇಶಗಳಲ್ಲಿನ ಪ್ರಮುಖ ಘಟನಾವಳಿ
ಕೋವಿಡ್ 19 ಸಾಂಕ್ರಾಮಿಕದ ಜೊತೆ ಹೋರಾಡುತ್ತಲ್ಲೇ 2021 ವರ್ಷ ಕೊನೆಗೊಳ್ಳುತ್ತಿದೆ. ಕೊರೊನಾ ಸಾಂಕ್ರಾಮಿಕವಲ್ಲದೆ ಈ ವರ್ಷದಲ್ಲಿ ರೈತರ ಪ್ರತಿಭಟನೆಗಳು, ಸರಣಿ ಚಂಡಮಾರುತ, ಪ್ರಾಕೃತಿಕ ವಿಕೋಪ, ಹವಾಮಾನ ಏರುಪೇರು, ಒಲಿಂಪಿಕ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದು ಇತಿಹಾಸ ಸೃಷ್ಟಿಸಿದ್ದು, ಸೆಲೆಬ್ರಿಟಿಗಳ ಆಘಾತಕಾರಿ ಸಾವು ಸೇರದಂತೆ ಹಲವಾರು ಪ್ರಮುಖ ಘಟನೆಗಳನ್ನು ಕಂಡಿದೆ.
ನೋವು-ನಲಿವು, ರೋಗ ರುಜಿನ, ಪ್ರತಿಭಟನೆ ಸಂಘರ್ಷ, ರಾಜಕೀಯ ತಲ್ಲಣಗಳ ನಡುವೆ 2021ರ ಘಟನಾವಳಿಗಳನ್ನು ಹಿಂತಿರುಗಿ ಒಮ್ಮೆ ನೋಡುವ ಮನಸ್ಸಾಗುತ್ತದೆ. 2022 ಸ್ವಾಗತಕ್ಕೂ ಮುನ್ನ 2021ರ ಅತ್ಯಂತ ಗಮನಾರ್ಹ ಘಟನೆಗಳು ಮತ್ತು ಕ್ಷಣಗಳ ತಿಂಗಳ ಅನುಕ್ರಮದಲ್ಲಿ ಸಿಂಹಾವಲೋಕನ ಇಲ್ಲಿದೆ.

Recommended Video
Rishabh Pant ಅತಿ ವೇಗವಾಗಿ Dhoni ರೆಕಾರ್ಡ್ ಬ್ರೇಕ್ ಮಾಡಿದ್ದು ಹೇಗೆ? | Oneindia Kannada
December 2021
- Dec 21
ಹೊಸ ವರ್ಷಾಚರಣೆಗೆ ನಿರ್ಬಂಧರಾಜ್ಯದಾದ್ಯಂತ 2022ರ ಹೊಸ ವರ್ಷಾಚರಣೆಗೆ ಸರ್ಕಾರ ನಿರ್ಬಂಧ ವಿಧಿಸಿದೆ. ಡಿಸೆಂಬರ್ 30ರಿಂದ ಜನವರಿ 2ರವರೆಗೆ ಬಹಿರಂಗವಾಗಿ ಜನರು ಗುಂಪು ಸೇರುವುದನ್ನು ನಿರ್ಬಂಧಿಸಲಾಗಿದೆ. ಈ ಸಮಯದಲ್ಲಿ ಜನ ಗುಂಪುಗೂಡಿ ಪಾರ್ಟಿಗಳನ್ನು ಮಾಡುವಂತಿಲ್ಲ. ಅಪಾರ್ಟ್‌ಮೆಂಟ್‌ಗಳಲ್ಲಿ ಡಿಜೆ ಪಾರ್ಟಿ ಮಾಡುವಂತಿಲ್ಲ. ಕ್ಲಬ್‌ಗಳಲ್ಲಿ ಸ್ಪೆಷಲ್ ಈವೆಂಟ್ ಮಾಡಲು ಶೇ. 50ರಷ್ಟು ಜನರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. - Dec 14
ವಿಧಾನ ಪರಿಷತ್ ಚುನಾವಣೆ ಫಲಿತಾಂಶಕರ್ನಾಟಕದ ವಿಧಾನ ಪರಿಷತ್ ಚುನಾವಣೆ ಮತ ಎಣಿಕೆ ಮಂಗಳವಾರ ನಡೆದಿದ್ದು, ಆಡಳಿತಾರೂಢ ಬಿಜೆಪಿ ಹೆಚ್ಚು ಸ್ಥಾನಗಳಲ್ಲಿ ಗೆದ್ದು, ವಿಧಾನ ಪರಿಷತ್‌ನಲ್ಲಿ ತನ್ನ ಬಲ ಹೆಚ್ಚಿಸಿಕೊಂಡಿತು. 25 ವಿಧಾನ ಪರಿಷತ್ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 12, ಕಾಂಗ್ರೆಸ್ 11, ಜೆಡಿಎಸ್ 1 ಹಾಗೂ 1 ಕ್ಷೇತ್ರ ಪಕ್ಷೇತರ ಅಭ್ಯರ್ಥಿ ಪಾಲಾಯಿತು. - Dec 01
ಶಾಸಕ ಎಸ್.ಆರ್. ವಿಶ್ವನಾಥ್ ಹತ್ಯೆಗೆ ಸಂಚುಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಹತ್ಯೆಗೆ ಸಂಚು ರೂಪಿಸಿರುವ ಪ್ರಕರಣ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಎಸ್.ಆರ್. ವಿಶ್ವನಾಥ್ ಅವರ ಕೊಲೆ ಮಾಡುವ ಬಗ್ಗೆ ಮಾತನಾಡಿರುವ ವಿಡಿಯೋ ರೆಕಾರ್ಡ್ ಮಾಡಿದ ಕುಳ್ಳ ದೇವರಾಜ್ ಅನ್ನು ಸಿಸಿಬಿ ಪೊಲೀಸರು ಬಂಧಿಸಿದರು. ಇನ್ನು ಕೊಲೆ ಮಾಡುವ ಬಗ್ಗೆ ಮಾತನಾಡಿದ ಕಾಂಗ್ರೆಸ್ ಮುಖಂಡ, ಪರಾಜಿತ ಅಭ್ಯರ್ಥಿ ಗೋಪಾಲಕೃಷ್ಣರನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದರು. ಎಸ್.ಆರ್. ವಿಶ್ವನಾಥ್ ಆಪ್ತನೇ ಎದುರಾಳಿ ಅಭ್ಯರ್ಥಿಯ ರಹಸ್ಯ ಕಾರ್ಯಾಚರಣೆ ನಡೆಸಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿತ್ತು.
November 2021
-
58 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಕರ್ನಾಟಕದ 58 ನಗರ ಸ್ಥಳೀಯ ಸಂಸ್ಥೆಗಳಿಗೆ ರಾಜ್ಯ ಚುನಾವಣಾ ಆಯೋಗ ಚುನಾವಣೆ ಘೋಷಿಸಿತು. ಡಿಸೆಂಬರ್ 27ರಂದು ಮತದಾನ, ಡಿಸೆಂಬರ್ 30ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. 2016ನೇ ಸಾಲಿನಲ್ಲಿ ಸಾರ್ವತ್ರಿಕ ಚುನಾವಣೆ ನಡೆಸಲಾದ 51 ನಗರ ಸ್ಥಳೀಯ ಸಂಸ್ಥೆಗಳ ಅವಧಿಯು 2021ಗೆ ಮುಕ್ತಾಯಗೊಳ್ಳಲಿದೆ. ಕ್ಷೇತ್ರ ವಿಂಗಡನೆ ಮಾಡಿ, ವಾರ್ಡ್‌ವಾರು ಮೀಸಲಾತಿ ನಿಗದಿಪಡಿಸಲು ಅಧಿಸೂಚನೆ ಹೊರಡಿಸಲಾಯಿತು.Nov 29 -
15 ಮಂದಿ ಸರ್ಕಾರಿ ನೌಕರರ ಮನೆ ಮೇಲೆ ಎಸಿಬಿ ದಾಳಿಕರ್ನಾಟಕದ ಭ್ರಷ್ಟಾಚಾರ ನಿಗ್ರಹದಳ (ಎಸಿಬಿ) ಅಧಿಕಾರಿಗಳು ಅತಿ ದೊಡ್ಡ ದಾಳಿ ನಡೆಸಿದ್ದರು. 15 ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 68 ಸ್ಥಳಗಳಲ್ಲಿ ದಾಳಿ ನಡೆದಿತ್ತು, ತಡರಾತ್ರಿ ತನಕ ದಾಖಲೆಗಳ ಪರಿಶೀಲನೆ ನಡೆದಿತ್ತು. ಲಾಕರ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಎಸಿಬಿಯ ಒಟ್ಟು 503 ಅಧಿಕಾರಿ ಹಾಗೂ ಸಿಬ್ಬಂದಿಯು ಒಟ್ಟು 68 ತಂಡಗಳಾಗಿ ವಿವಿಧ ಜಿಲ್ಲೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದರು.Nov 25 -
ವಿಧಾನ ಪರಿಷತ್: ಚುನಾವಣೆ ಘೋಷಣೆರಾಜ್ಯ ವಿಧಾನ ಪರಿಷತ್‌ನ 25 ಸ್ಥಾನಗಳಿಗೆ ಚುನಾವಣೆ ಘೋಷಣೆ ಆಯಿತು. ಡಿಸೆಂಬರ್ 10ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 14 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಮಂಗಳವಾರ ಚುನಾವಣಾ ಆಯೋಗ 25 ಸ್ಥಾನಗಳ ಚುನಾವಣೆಗೆ ವೇಳಾಪಟ್ಟಿ ಘೋಷಣೆ ಮಾಡಿತು. ನವೆಂಬರ್ 16ರಂದು ಚುನಾವಣಾ ಅಧಿಸೂಚನೆ ಹೊರಬೀಳಲಿದ್ದು, ಡಿಸೆಂಬರ್ 10ರಂದು ಮತದಾನ ನಡೆಯಲಿದೆ ಎಂದು ಆಯೋಗ ಮಾಹಿತಿ ನೀಡಿತು.Nov 09
October 2021
- Oct 29
ಹ್ಯಾಕರ್ ಶ್ರೀಕೃಷ್ಣ ಬಂಧನಕರ್ನಾಟಕ ರಾಜಕಾರಣದಲ್ಲಿ ಬಿಟ್‌ಕಾಯಿನ್ ಸದ್ದು ಮಾಡಲು ಕಾರಣಕರ್ತನಾದ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯನ್ನು ಸಿಸಿಬಿ ಪೊಲೀಸರು ಬಂಧಿಸಿದರು. ಆತನಿಂದ 9 ಕೋಟಿ ಮೌಲ್ಯದ ಬಿಟ್‌ಕಾಯಿನ್ ವಶಪಡಿಸಿಕೊಳ್ಳಲಾಗಿತ್ತು. ಇದೇ ಬಿಟ್‌ಕಾಯಿನ್ ದಂಧೆಯಲ್ಲಿ ಕರ್ನಾಟಕದ ಇಬ್ಬರು ಪ್ರಭಾವಿಗಳಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು. ಇದರ ಬೆನ್ನಲ್ಲಾ ರಾಜ್ಯ ರಾಜಕರಾಣದಲ್ಲಿ ಬಿಟ್‌ಕಾಯಿನ್ ಸದ್ದು ಜೋರಾಯಿತು. - Oct 29ಪುನೀತ್ ರಾಜ್‌ಕುಮಾರ್ ನಿಧನವ್ಯಾಯಾಮ ಮಾಡುವ ಸಂದರ್ಭದಲ್ಲಿ ಲಘು ಹೃದಯಾಘಾತದಿಂದ ಆಸ್ಪತ್ರೆಗೆ ಸೇರಿದ್ದ ನಟ ಪುನೀತ್ ರಾಜ್‌ಕುಮಾರ್ ನಿಧನರಾದರು. ಶನಿವಾರ ಪುನೀತ್ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಹರಿದು ಬಂದ ಅಭಿಮಾನಿಗಳು ದೊಡ್ಮನೆ ಹುಡುಗನ ಅಂತಿಮ ದರ್ಶನ ಪಡೆದರು. ಅಕ್ಟೋಬರ್ 31ರಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಡಾ. ರಾಜ್‌ಕುಮಾರ್ ಸಮಾಧಿ ಪಕ್ಕದಲ್ಲಿ ಪುನೀತ್ ರಾಜ್‌ಕುಮಾರ್ ಅಂತ್ಯಕ್ರಿಯೆ ನಡೆಸಲಾಯಿತು.
- Oct 28
ಕನ್ನಡ ಗೀತೆಗಳ ಗಾಯನ66ನೇ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಇಡೀ ನಾಡನ್ನು ಕನ್ನಡಮಯವನ್ನಾಗಿ ಮಾಡಲು ಕನ್ನಡ ಗೀತೆಗಳ ಗಾಯನ ಕಾಯ್ರಕ್ರಮ ನಡೆಯಿತು. ಏಕ ಕಾಲದಲ್ಲಿ ಸಾವಿರಕ್ಕೂ ಹೆಚ್ಚು ಸ್ಥಳಗಳಲ್ಲಿ ಐದು ಲಕ್ಷ ಕಂಠಗಳಲ್ಲಿ ಕನ್ನಡ ಗೀತೆಯ ಗಾಯನ ಮೊಳಗಿತು. ರಾಷ್ಟ್ರಕವಿ ಕುವೆಂಪು ಅವರ 'ಬಾರಿಸು ಕನ್ನಡ ಡಿಂಡಿಂಮವ', ನಿಸಾರ್ ಅಹಮ್ಮದ್ ಅವರ 'ಜೋಗದ ಸಿರಿ ಬೆಳಕಿನಲ್ಲಿ' ಹಾಗೂ ಡಾ. ಹಂಸಲೇಖ ಅವರ 'ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು' ಗೀತೆಗಳನ್ನು ಹಾಡಲಾಯಿತು.
September 2021
-
ಪಂಜಾಬ್ ಮುಖ್ಯಮಂತ್ರಿಯಾಗಿ ಚರಣ್‌ಜೀತ್ ಚೆನ್ನಿ ಪ್ರಮಾಣವಚನಚರಣ್ಜೀತ್ ಸಿಂಗ್ ಚನ್ನಿ ಸೆಪ್ಟೆಂಬರ್ 20ರಂದು ಪಂಜಾಬ್‌ನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯದಲ್ಲಿ ಈ ಹುದ್ದೆಯನ್ನು ಅಲಂಕರಿಸಿದ ಮೊದಲ ದಲಿತ ಸಿಎಂ ಎನಿಸಿಕೊಂಡಿದ್ದಾರೆ. ಜತೆಗೆ 79 ವರ್ಷದ ಅಮರಿಂದರ್ ಸಿಂಗ್ ಅವರ ಸ್ಥಾನವನ್ನು ಅಲಂಕರಿಸಿದ್ದಾರೆ. ಅಮರಿಂದರ್ ಸಿಂಗ್ ಅವರು ನವಜೋತ್‌ಸಿಂಗ್ ಸಿಧು ಅವರೊಂದಿಗಿನ ಭಿನ್ನಾಭಿಪ್ರಾಯದಿಂದಾಗಿ ಮುಖ್ಯಮಂತ್ರಿ ಹುದ್ದೆ ತ್ಯಜಿಸಿದ್ದರು. ಕ್ಯಾಪ್ಟನ್ ಅಮರಿಂದರ್ ಸಿಂಗ್ ಸರ್ಕಾರದಲ್ಲಿ ಪಂಜಾಬ್‌ನ ತಾಂತ್ರಿಕ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದರು. ಚನ್ನಿ ಚಮ್ಕೌರ್ ಸಾಹಿಬ್ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ ಮತ್ತು ಕ್ಷೇತ್ರದಿಂದ ಮೂರು ಬಾರಿ ಗೆದ್ದಿದ್ದಾರೆ.Sep 20 -
ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಅಮರಿಂದರ್ ಸಿಂಗ್ಕ್ಯಾಪ್ಟನ್ ಅಮರಿಂದರ್ ಸಿಂಗ್ ಮತ್ತು ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ (PPCC) ಮುಖ್ಯಸ್ಥ ನವಜೋತ್ ಸಿಂಗ್ ಸಿಧು ನಡುವಿನ ತಿಂಗಳ ಒಳಜಗಳದ ನಂತರ ಸೆಪ್ಟೆಂಬರ್ 18 ರಂದು ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. 2022ರ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿರುವಾಗಲೇ ಈ ಬೆಳವಣಿಗೆ ನಡೆದಿದೆ.Sep 18 - ಜರ್ಮನ್ ಚಾನ್ಸಲರ್‌ಆಯ್ಕೆಗೆ ಮತದಾನಸೆಪ್ಟೆಂಬರ್ 26ರಂದು ಜರ್ಮನಿಯಲ್ಲಿ ಚಾನ್ಸಲರ್ ಚುನಾವಣೆ ನಡೆಯಿತು.ಜರ್ಮನಿ ಚಾನ್ಸೆಲರ್ ಆಂಜೆಲಾ ಮರ್ಕೆಲ್ ಸೆಪ್ಟೆಂಬರ್ ನಲ್ಲಿ ನಡೆದ ಚುನಾವಣೆಯಲ್ಲಿ ತೀವ್ರ ರೀತಿಯಲ್ಲಿ ಮುಖಭಂಗ ಅನುಭವಿಸಿದ್ದರು. ಅವರ ಕನ್ಸರ್ವೇಟಿವ್ ಪಕ್ಷ ಚುನಾವಣೆಯಲ್ಲಿ ಸೋತು ಅಭಿಮಾನಿಗಳಲ್ಲಿ ನಿರಾಶೆ ಮೂಡಿಸಿತ್ತು. ಯಾವುದೇ ಪಕ್ಷಕ್ಕೂ ತನ್ನ ಸ್ವಂತ ಬಲದಿಂದ ಸರ್ಕಾರ ರಚಿಸುವಷ್ಟು ಬಹುಮತ ಲಭಿಸಿಲ್ಲ. ಹೀಗಾಗಿ ಸೋಶಿಯಲ್ ಡೆಮಾಕ್ರೆಟ್, ಇತರೆ ಪಕ್ಷಗಳ ಜೊತೆಗೂಡಿ ಅಧಿಕಾರ ನಡೆಸಲು ಮುಂದಾಯಿತು. ಅತ್ತ ಆಂಜೆಲಾ ಮರ್ಕೆಲ್‌ರ ಕನ್ಸರ್ವೇಟಿವ್ ಪಕ್ಷ ಕೂಡ ಇತರೆ ಪಕ್ಷಗಳ ಜೊತೆಗೂಡಿ ಅಧಿಕಾರಕ್ಕೇರಬಹುದು ಎನ್ನಲಾಗಿತ್ತು. ಆದರೆ ಇದು ಸಾಧ್ಯವಾಗಲಿಲ್ಲ.Sep 18
-
ಗುಜರಾತ್ ಮುಖ್ಯಮಂತ್ರಿಯಾಗಿ ವಿಜಯ್ ರೂಪಾನಿ ಜಾಗಕ್ಕೆ ಭೂಪೇಂದ್ರ ಸಿಂಗ್ ನೇಮಕಗುಜರಾತ್ನ ನೂತನ ಮುಖ್ಯಮಂತ್ರಿ ಆಗಿ ಭೂಪೇಂದ್ರ ಪಟೇಲ್ ಆಯ್ಕೆಯಾಗಿದ್ದಾರೆ. ನಿರ್ಗಮಿತ ಮುಖ್ಯಮಂತ್ರಿ ವಿಜಯ್ ರೂಪಾನಿ ಹಠಾತ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಅಚ್ಚರಿ ಎಂಬಂತೆ ಘಟ್ಲೋಡಿಯಾ ಕ್ಷೇತ್ರದ ಶಾಸಕ ಭೂಪೇಂದ್ರ ಪಟೇಲ್ ಅವರನ್ನು ಬಿಜೆಪಿ ಶಾಸಕಾಂಗ ಸಭೆಯಲ್ಲಿ ಆಯ್ಕೆ ಮಾಡಲಾಗಿತ್ತು. ಉತ್ತರ ಪ್ರದೇಶದ ಗವರ್ನರ್ ಮತ್ತು ಗುಜರಾತ್ ಮಾಜಿ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಆಪ್ತರಾಗಿದ್ದಾರೆ ಎಂದು ಹೇಳಲಾದ ಭೂಪೇಂದ್ರ ಪಟೇಲ್ ಗುಜರಾತ್ ನ ಘಟ್ಲೋಡಿಯಾದ ಮೊದಲ ಬಾರಿಗೆ ಶಾಸಕರಾಗಿದ್ದು, 2017ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಶಶಿಕಾಂತ್ ಪಟೇಲ್ ವಿರುದ್ಧ 1 ಲಕ್ಷಕ್ಕೂ ಅಧಿಕ ಮತಗಳಿಂದ ಗೆದ್ದಿದ್ದರು.Sep 11 -
4 ಲಕ್ಷ ಮನೆಗೆ ಅನುಮತಿಮನೆಯಿಲ್ಲದ ನಿರ್ಗತಿಕರಿಗೆ ವಿವಿಧ ವಸತಿ ಯೋಜನೆಗಳಡಿ 4 ಲಕ್ಷ ಮನೆಗಳಿಗೆ ಅರ್ಹ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ಕೂಡಲೇ ಪ್ರಾರಂಭಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಸತಿ ಇಲಾಖೆ ಹಾಗೂ ಅಧಿಕಾರಿಗಳಿಗೆ ಸೂಚಿಸಿದರು.Sep 10 -
ನ್ಯಾಯಮೂರ್ತಿಗಳ ಸೇವೆ ಕಾಯಂಕೇಂದ್ರ ಸರ್ಕಾರ ಕರ್ನಾಟಕ ಹೈಕೋರ್ಟ್‌ನ ಆರು ಹೆಚ್ಚುವರಿ ನ್ಯಾಯಮೂರ್ತಿಗಳ ಸೇವೆಯನ್ನು ಸೆಪ್ಟೆಂಬರ್ 08 ರಂದು ಖಾಯಂಗೊಳಿಸಿ ಆದೇಶ ಹೊರಡಿಸಿದೆ. ಇತ್ತೀಚೆಗೆ ಹೈಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿ ಪದೋನ್ನತಿ ಪಡೆದಿದ್ದರು. ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಎನ್. ವಿ. ರಮಣ ನೇತೃತ್ವದ ಕೊಲಿಜಿಯಂ ಮಾಡಿದ ಶಿಫಾರಸು ಅಂಗೀಕರಿಸಿರುವ ಕೇಂದ್ರ ಕಾನೂನು ಸಚಿವಾಲಯ ಈ ಕುರಿತು ಆದೇಶ ಹೊರಡಿಸಿದೆ.Sep 08 -
ಜಮ್ಮು ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗಿಲಾನಿ ನಿಧನತೆಹ್ರಿಕ್-ಎ-ಹುರಿಯತ್ ಎಂಬ ಕಟ್ಟರ್ ಪ್ರತ್ಯೇಕತಾವಾದಿ ಸಂಘಟನೆಯ ಸಂಸ್ಥಾಪಕ ಸಯದ್ ಅಲಿ ಶಾ ಗಿಲಾನಿ ಬುಧವಾರ ರಾತ್ರಿ ಮೃತಪಟ್ಟಿದ್ದಾರೆ. ದೀರ್ಘ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಗಿಲಾನಿ ಅವರಿಗೆ 92 ವರ್ಷ ವಯಸ್ಸಾಗಿತ್ತು. 29 ಸೆಪ್ಟೆಂಬರ್ 1929 ರಂದು, ಕಾಶ್ಮೀರದಲ್ಲಿ ಪ್ರಮುಖ ಪ್ರತ್ಯೇಕತಾವಾದಿ ನಾಯಕನಾಗಿ ಗುರುತಿಸಲ್ಪಟ್ಟರು. ಕಾಶ್ಮೀರದ ಉತ್ತರ ಭಾಗದಲ್ಲಿರುವ ಬಾರಮುಲ್ಲಾದ ಸೋಪೋರ್ ಪಟ್ಟಣದಲ್ಲಿ ಜನಿಸಿದ ಸಯದ್ ಗಿಲಾನಿ ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕರಲ್ಲಿ ಪ್ರಮುಖರಾಗಿ ಗುರುತಿಸಿಕೊಂಡಿದ್ದಾರೆ. ಕಾಶ್ಮೀರದಲ್ಲಿ ನಡೆಯುವ ಉಗ್ರ ಚಟುವಟಿಕೆಗಳನ್ನು ಬೆಂಬಲಿಸುತ್ತಿದ್ದವರಲ್ಲಿ ಗಿಲಾನಿ ಪ್ರಮುಖರು. ಕಾಶ್ಮೀರದ ಪ್ರತ್ಯೇಕತಾವಾದಿಗಳ ಪೈಕಿ ಅತಿ ಉಗ್ರ ಹಾಗೂ ಪಾಕಿಸ್ತಾನದ ಪರ ನಿಲುವು ಹೊಂದಿದ್ದ ನಾಯಕರಲ್ಲಿ ಗಿಲಾನಿ ಕೂಡಾ ಒಬ್ಬರು ಎಂಬುವುದು ಉಲ್ಲೇಖನೀಯ.Sep 01
August 2021
- Aug 28
ಬಿಎಚ್-ಸರಣಿ ನೋಂದಣಿ ಪರಿಚಯವಾಹನಗಳ ತಡೆರಹಿತ ವರ್ಗಾವಣೆಗೆ ಅನುಕೂಲವಾಗುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಹೊಸ ವಾಹನಗಳಿಗೆ ಹೊಸ ನೋಂದಣಿ ಗುರುತು ಪರಿಚಯಿಸಿದೆ. ಭಾರತ್ ಸರಣಿ’ (ಬಿಎಚ್-ಸರಣಿ). ವಾಹನದ ಮಾಲೀಕರು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸ್ಥಳಾಂತರಗೊಂಡಾಗ ಈ ನೋಂದಣಿ ಗುರುತು ಹೊಂದಿರುವ ವಾಹನಕ್ಕೆ ಹೊಸ ನೋಂದಣಿ ಗುರುತು ನೀಡುವ ಅಗತ್ಯವಿಲ್ಲ. - Aug 28
6 ರಿಂದ 8ನೇ ತರಗತಿ ಪುನರಾರಂಭರಾಜ್ಯದಾದ್ಯಂತ ಶಾಲೆಗಳನ್ನು ಬಂದ್ ಮಾಡಿ ಎರಡು ವರ್ಷಗಳ ನಂತರ ಶಾಲೆಗಳನ್ನು ಪುನರಾರಂಭಿಸಲು ರಾಜ್ಯ ಸರ್ಕಾರ ತೀರ್ಮಾನಿಸಿತು. ಸೆಪ್ಟಂಬರ್ 6 ರಿಂದ ರಾಜ್ಯದಲ್ಲಿ 6 ರಿಂದ 8ನೇ ತರಗತಿ ಮಕ್ಕಳಿಗೆ ಶಾಲೆ ಪುನರಾರಂಭಿಸಲಾಯಿತು. - Aug 21
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ನಿಧನಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರು ಬಹು ಅಂಗಾಂಗ ವೈಫಲ್ಯದಿಂದ ನಿಧನರಾಗಿದ್ದಾರೆ. ಅವರಿಗೆ 89 ವರ್ಷ. ಕಲ್ಯಾಣ್ ಸಿಂಗ್ ಅವರು ರಾಜಸ್ಥಾನದ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದಾರೆ. ಜನವರಿ 5, 1932 ರಂದು ಜನಿಸಿದ ಕಲ್ಯಾಣ್ ಸಿಂಗ್ ಅವರು 1967 ರಲ್ಲಿ ಮೊದಲ ಬಾರಿಗೆ ಶಾಸಕರಾದರು. ಅಂದಿನಿಂದ ಅವರು ಹಲವಾರು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದರು. ಬಿಜೆಪಿಯಲ್ಲಿ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದರು ಮತ್ತು ಅವರ ಸಾರ್ವಜನಿಕ ಜೀವನದ ಕೊನೆಯ ಹಂತದಲ್ಲಿ ರಾಜಸ್ಥಾನದ ರಾಜ್ಯಪಾಲರಾಗಿ ನೇಮಕಗೊಂಡರು. - Aug 10
ಲೋಕಸಭೆಯಲ್ಲಿ ಸಂವಿಧಾನದ 127 ನೇ ತಿದ್ದುಪಡಿ ಮಸೂದೆ ಅಂಗೀಕಾರರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ರಚನೆ, ಕರ್ತವ್ಯಗಳು, ಅಧಿಕಾರಗಳನ್ನು ತಿಳಿಸುವ 338ಬಿ ಕಲಂ ಹಾಗೂ ನಿರ್ದಿಷ್ಟ ಜಾತಿಯನ್ನು ಎಸ್‌ಇಬಿಸಿ ಎಂದು ಘೋಷಿಸಲು ಮತ್ತು ಅಧ್ಯಕ್ಷರ ಅಧಿಕಾರಗಳನ್ನು ತಿಳಿಸುವ 342ಎ ಕಲಂಗಳನ್ನು 2018ರ 102ನೇ ಸಂವಿಧಾನ ತಿದ್ದುಪಡಿ ಕಾಯ್ದೆಗೆ ಸೇರಿಸಿತ್ತು. ಆರ್ಟಿಕಲ್ 366 (26C) SEBC ಗಳನ್ನು ವ್ಯಾಖ್ಯಾನಿಸುತ್ತದೆ. - Aug 07
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಜಾವೆಲಿನ್ ಥ್ರೋ ಮೂಲಕ ಚಿನ್ನದ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ ನೀರಜ್ ಚೋಪ್ರಾಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದ ಜಾವೆಲಿನ್ ಥ್ರೋ ವಿಭಾಗದಲ್ಲಿ ಭಾರತದ ನೀರಜ್ ಚೋಪ್ರಾ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಆ ಮೂಲಕ ಒಲಿಂಪಿಕ್ಸ್ ಕ್ರೀಡಾಕೂಟದ ಟ್ರ್ಯಾಕ್ ಹಾಗೂ ಫೀಲ್ಡ್ ವಿಭಾಗದಲ್ಲಿ ಸ್ವರ್ಣ ಪದಕದ ಸಾಧನೆ ಮಾಡಿದ ಭಾರತದ ಮೊದಲ ಅಥ್ಲಿಟ್ ಎಂಬ ದಾಖಲೆಯನ್ನು ನೀರಜ್ ಮಾಡಿದ್ದಾರೆ. ಪುರುಷರ ಜಾವೆಲಿನ್ ಥ್ರೋ ಫೈನಲ್ ಸುತ್ತಿನಲ್ಲಿ 87.58 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ನೀರಜ್ ಚೋಪ್ರಾ ಪ್ರಸಕ್ತ ಆವೃತ್ತಿಯ ಕ್ರೀಡಾಕೂಟದಲ್ಲಿ ಭಾರತಕ್ಕೆ ಚೊಚ್ಚಲ ಚಿನ್ನದ ಪದಕ ತಂದುಕೊಟ್ಟರು. ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದ ನೀರಜ್ ಚೋಪ್ರಾ ಆರಂಭಿಕ ಕ್ರೀಡಾಕೂಟದಲ್ಲೇ ಭಾರತಕ್ಕೆ ಬಂಗಾರದ ಪದಕ ಜಯಿಸಿ ಮೆರಗು ತಂದಿದ್ದಾರೆ. ಪುರುಷರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ಪಾಲ್ಗೊಂಡಿದ್ದ ಭಾರತದ ನೀರಜ್ ಚೋಪ್ರಾ 87.58 ಮೀಟರ್ ದೂರು ಎಸೆಯುವ ಸಾಧನೆಯೊಂದಿಗೆ ಚಿನ್ನಕ್ಕೆ ಮುತ್ತಿಕ್ಕಿದ್ದಾರೆ. ಮೂರು ಪ್ರಯತ್ನಗಳಲ್ಲಿ ಚೋಪ್ರಾ ತನ್ನ ದ್ವಿತೀಯ ಪ್ರಯತ್ನದಲ್ಲಿ ದೇಶಕ್ಕೆ ಚಿನ್ನದ ಪದಕ ತಂದುಕೊಟ್ಟರು. ನೀರಜ್ ಚೋಪ್ರಾಗೆ ದೇಶಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಜತೆಗೆ ಸರ್ಕಾರವೂ ಬಹುಮಾನ ಘೋಷಿಸಿದ್ದು, ಹರ್ಯಾಣ ಸರ್ಕಾರ 6 ಕೋಟಿ ರೂಪಾಯಿ ಬಹುಮಾನ ಘೋಷಿಸಿದೆ. - Aug 06ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ, ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿದೇಶದ ಹಾಕಿ ಕ್ರೀಡೆಯ ದಿಗ್ಗದ ಮೇಜರ್ ಧ್ಯಾನ್ ಚಂದ್ ಅವರ ಹೆಸರನ್ನು ಈ ಮಹಾನ್ ಪ್ರಶಸ್ತಿಗೆ ಇರಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ. 'ದೇಶದೆಲ್ಲೆಡೆಯ ನಾಗರಿಕರ ಭಾವನೆಗಳನ್ನು ಗೌರವಿಸಿ, 'ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ' ಎಂದು ಹೆಸರು ಬದಲಾವಣೆ ಮಾಡಲಾಗಿದೆ. ಕ್ರೀಡಾ ಕ್ಷೇತ್ರದ ಅತ್ಯುನ್ನತ ಗೌರವವಾಗಿರುವ 'ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ'ಯ ಹೆಸರು ಬದಲಾವಣೆ ಮಾಡುತ್ತಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ್ದಾರೆ
- Aug 04
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ ಕಂಚು ಗೆದ್ದಿದ್ದಾರೆಭಾರತದ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ (69 ಕೆಜಿ) ತನ್ನ ಚೊಚ್ಚಲ ಒಲಿಂಪಿಕ್ "ಕ್ರೀಡಾಕೂಟದಲ್ಲಿ ಹಾಲಿ ವಿಶ್ವ ಚಾಂಪಿಯನ್ ಬುಸೆನಾಜ್ ಸುರ್ಮೆನೆಲಿ ವಿರುದ್ಧ ಸಮಗ್ರ 0-5 ಸೋಲಿನ ನಂತರ ಕಂಚಿನ ಪಡೆದರು. ದೇಶದ ಅಭಿಮಾನವನ್ನು ಇಮ್ಮಡಿಗೊಳಿಸಿದರು. ರಿಂಗ್‌ನಲ್ಲಿಬುಲ್ಲಿ ವಿರುದ್ಧ, ಚಿನ್ನದ ಪದಕದ ನೆಚ್ಚಿನ ಟರ್ಕಿಶ್ ಬಾಕ್ಸರ್‌ನಿಂದ ಬೊ ರ್ಗೊಹೈನ್ ಸಂಪೂರ್ಣವಾಗಿ ಔಟ್-ಪಂಚ್ ಆಗಿದ್ದರು, ಅವರು ಸಂಪೂರ್ಣವಾಗಿ ಪ್ರಾಬಲ್ಯ ಸಾಧಿಸಿದರು. ಬೊರ್ಗೊಹೈನ್ ಅವರ ಗೆಲುವಿಗಾಗಿ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ, ಅವರ ದೃಢತೆ ಮತ್ತು ದೃಢತೆ ಪ್ರಶಂಸನೀಯ ಎಂದು ಹೇಳಿದರು. - Aug 04
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತೀಯ ಪುರುಷರ ಹಾಕಿ ತಂಡ ಕಂಚು ಗೆದ್ದಿದೆಭಾರತದ ಪುರುಷರ ಹಾಕಿ ತಂಡವು 41 ವರ್ಷಗಳ ನಂತರ ಒಲಿಂಪಿಕ್ ಪದಕವನ್ನು ಗಳಿಸುವ ಮೂಲಕ ಇತಿಹಾಸವನ್ನು ಪುನಃ ಬರೆಯಿತು, ಟೋಕಿಯೊ ಒಲಿಂಪಿಕ್ಸ್‌ನಲ್ಲಿನ ಎಡ್ಜ್ ಆಫ್ ದಿ ಸೀಟ್ ಪ್ಲೇ-ಆಫ್ ಪಂದ್ಯದಲ್ಲಿ ಕಂಚಿನ ಪದಕವನ್ನು ಪಡೆಯಲು ದುರ್ಬಲವಾದ ಜರ್ಮನಿಯನ್ನು 5-4 ರಿಂದ ಸೋಲಿಸಿತು. ಭಾರತವು 1980 ರ ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ನಂತರ ವೇದಿಕೆಯ ಮೇಲೆ ನಿಂತ ಸಮಯ, ಅವರ ಎಂಟನೆಯದು. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪ್ರಬಲ ಜರ್ಮನ್ ತಂಡದ ವಿರುದ್ಧ ಗಮನಾರ್ಹವಾದ ಪುನರಾಗಮನವನ್ನು ದಾಖಲಿಸಲು ಮೆನ್ ಇನ್ ಬ್ಲೂ ಸಂಪೂರ್ಣ ಸ್ಥಿತಿಸ್ಥಾಪಕತ್ವ, ಶಕ್ತಿ ಮತ್ತು ಗೆಲುವಿನ ಮನೋಭಾವವನ್ನು ತೋರಿಸಿದೆ. - Aug 01
ಟೋಕಿಯೋ ಒಲಿಂಪಿಕ್‌ನಲ್ಲಿ ಪಿವಿ ಸಿಂಧು ಕಂಚಿನ ಪದಕ ಗೆದ್ದಿದ್ದಾರೆಭಾರತದ ಏಸ್ ಷಟ್ಲರ್ ಪಿವಿ ಸಿಂಧು ಅವರು ಟೋಕಿಯೊ 2020 ರಲ್ಲಿ ಬ್ಯಾಡ್ಮಿಂಟನ್ ಮಹಿಳೆಯರ ಸಿಂಗಲ್ಸ್‌ನಲ್ಲಿ ಚೀನಾದ ಹಿ ಬಿಂಗ್ ಜಿಯಾವೊ ಅವರನ್ನು 21-13, 21-15 ರಿಂದ ಸೋಲಿಸಿ ಕಂಚಿನ ಪದಕವನ್ನು ಗೆದ್ದು ಇತಿಹಾಸವನ್ನು ಸೃಷ್ಟಿಸಿದರು. ಕಳೆದ ಐದು ವರ್ಷಗಳಲ್ಲಿ ಕಾಮನ್‌ವೆಲ್ತ್ ಮತ್ತು ಏಷ್ಯನ್ ಗೇಮ್ಸ್ ಮತ್ತು ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್ ಫೈನಲ್ಸ್‌ನಂತಹ ಪ್ರತಿ ಬಿಗ್-ಟಿಕೆಟ್ ಈವೆಂಟ್‌ಗಳಿಂದ ಪದಕಗಳೊಂದಿಗೆ ಸಿಂಧು ಮರಳಿದ್ದಾರೆ. ಎಂಟನೇ ಶ್ರೇಯಾಂಕದ ಬಿಂಗ್ ಜಿಯಾವೊ ಅವರನ್ನು 21-13 21-15 ರಿಂದ ಸೋಲಿಸಿ ಕಂಚಿನ ಪದಕವನ್ನು ಸೇರಿಸಿದರು. 2016ರ ರಿಯೊ ಗೇಮ್ಸ್‌ನಲ್ಲಿ ಆಕೆ ಗಳಿಸಿದ್ದು ಬೆಳ್ಳಿ. ಈ ಮೂಲಕ ಅವರು ಕುಸ್ತಿಪಟು ಸುಶೀಲ್ ಕುಮಾರ್ ನಂತರ ಭಾರತಕ್ಕೆ ಎರಡು ಒಲಿಂಪಿಕ್ ಪದಕಗಳನ್ನು ಗೆದ್ದು ಎರಡನೇ ಅಥ್ಲೀಟ್ ಆದರು.
July 2021
-
ಬಸವರಾಜ ಬೊಮ್ಮಾಯಿ ಪ್ರಮಾಣ ವಚನರಾಜ್ಯದ 23ನೇ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ತಾವರಚಂದ್ ಗೆಹಲೋಟ್ ರಾಜಭವನದಲ್ಲಿ ಪ್ರಮಾಣವಚನ ಬೋಧಿಸಿದರು.Jul 28 -
ರಾಜೀನಾಮೆ ನೀಡುವುದಾಗಿ ಯಡಿಯೂರಪ್ಪ ಘೋಷಣೆಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರದ ಸಾಧನಾ ಸಮಾವೇಶದಲ್ಲಿ ಘೋಷಿಸಿದರು. ವಿಧಾನಸೌಧದಲ್ಲಿ ಬಿಜೆಪಿ ಸರ್ಕಾರದ ಎರಡು ವರ್ಷದ ಸಾಧನಾ ಸಮಾವೇಶದಲ್ಲಿ ಯಡಿಯೂರಪ್ಪ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡಿದರು.Jul 26 -
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕಮೀರಾಬಾಯಿ ಚಾನು 2020 ರಲ್ಲಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದರು, ಇದು ಭಾರತಕ್ಕೆ ಐತಿಹಾಸಿಕ ಕ್ಷಣವಾಗಿತ್ತು, ಏಕೆಂದರೆ ಸ್ಟಾರ್ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಮಹಿಳೆಯರ 49 ಕೆಜಿ ಈವೆಂಟ್‌ನಲ್ಲಿ ಬೆಳ್ಳಿ ಪದಕ ಗೆದ್ದ ಮೊದಲ ಭಾರತೀಯ ವೇಟ್ಲಿಫ್ಟರ್ ಆದರು. ಚಾನು 84 ಕೆಜಿ ಮತ್ತು 87 ಕೆಜಿಯನ್ನು ಯಶಸ್ವಿಯಾಗಿ ಎತ್ತಿದರು ಆದರೆ 89 ಕೆಜಿ ಎತ್ತುವ ಪ್ರಯತ್ನದಲ್ಲಿ ಚಾನು ವಿಫಲರಾದರು ಮತ್ತು ಚೀನಾದ ಹೌಸ್ ಝಿಹು ಅವರು ಒಲಿಂಪಿಕ್ ದಾಖಲೆಯನ್ನು ನಿರ್ಮಿಸಲು 94 ಕೆಜಿ ಎತ್ತುವ ನಂತರ ಎರಡನೇ ಸ್ಥಾನ ಪಡೆದರು.Jul 24 -
ಐಪಿಒ ಬಿಡುಗಡೆ ಮಾಡಿದ ಜೊಮ್ಯಾಟೊಜೊಮ್ಯಾಟೊ ಲಿಮಿಟೆಡ್ ತನ್ನ ಆರಂಭಿಕ ಸಾರ್ವಜನಿಕ ಕೊಡುಗೆಯನ್ನು (ಐಪಿಒ) ಅನ್ನು 76 ರೂಪಾಯಿಗೆ ಚಂದಾದಾರಿಕೆ ಮುಗಿಸಿದ ಬಳಿಕ ಇಂದು ಎನ್‌ಎಸ್‌ಇಯಲ್ಲಿ 120 ರೂ.ಗಳ ದರದಲ್ಲಿ ಪಟ್ಟಿ ಮಾಡಲಾಗಿದೆ. ಈ ಮೂಲಕ ಸುಮಾರು 65 ಪ್ರತಿಶತದಷ್ಟು ಅಧಿಕ ಲಾಭವಿದೆ. ಜೊಮ್ಯಾಟೊ ನೈಕಾ, ಪಾಲಿಸಿಬಜಾರ್, ಡೆಲಿವರಿ, ಫಾರ್ಮ್‌ಈಸಿ, ಓಯೊ, ಡ್ರೂಮ್ ಹಾಗೂ ಇಕ್ಸಿಗೋದಲ್ಲಿ ಆರಂಭಿಕ ಅಲೆ ಸೃಷ್ಟಿಸಿತ್ತು.Jul 23 -
ದೈನಿಕ ಭಾಸ್ಕರ್ ಮೇಲೆ ಐಟಿ ದಾಳಿಆದಾಯ ತೆರಿಗೆ ಇಲಾಖೆಯು ತೆರಿಗೆ ವಂಚನೆ ಆರೋಪದ ಮೇಲೆ ದೇಶಾದ್ಯಂತ ದೈನಿಕ್ ಭಾಸ್ಕರ್ ಗ್ರೂಪ್‌ನ ಕಚೇರಿಗಳಲ್ಲಿ ಶೋಧ ನಡೆಸಿತು. ಮಧ್ಯಪ್ರದೇಶ, ಮಹಾರಾಷ್ಟ್ರ, ದೆಹಲಿ, ರಾಜಸ್ಥಾನ ಮತ್ತು ಗುಜರಾತ್‌ನ 32 ಸ್ಥಳಗಳಲ್ಲಿ ಅದರ ಪ್ರವರ್ತಕರ ವಸತಿ ಮತ್ತು ಕಚೇರಿ ಆವರಣದಲ್ಲಿ ಶೋಧ ನಡೆಸಲಾಯಿತು. ದಾಳಿ ಬಳಿಕ, ಐಟಿ ಇಲಾಖೆಯು ದೈನಿಕ್ ಭಾಸ್ಕರ್ ಗ್ರೂಪ್ ಎಂದೂ ಕರೆಯಲ್ಪಡುವ ಡಿಬಿ ಕಾರ್ಪ್ ಆರು ವರ್ಷಗಳ ಅವಧಿಯಲ್ಲಿ 700 ಕೋಟಿ ರೂಪಾಯಿ ಆದಾಯದ ಮೇಲಿನ ತೆರಿಗೆಯನ್ನು ವಂಚಿಸಿದೆ ಎಂದು ಹೇಳಿತ್ತು.Jul 22 -
ಉದ್ಯಮಿ ರಾಜ್ ಕುಂದ್ರಾ ಬಂಧನಅಶ್ಲೀಲ ಸಿನಿಮಾಗಳ ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ರಾಜ್ ಕುಂದ್ರಾ ಬಂಧನ ಅಶ್ಲೀಲ ಚಿತ್ರಗಳನ್ನು ರಚಿಸಿ ಕೆಲವು ಆ್ಯಪ್‌ಗಳ ಮೂಲಕ ಪ್ರಕಟಿಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ಉದ್ಯಮಿ ರಾಜ್ ಕುಂದ್ರಾ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ಕುಂದ್ರಾ ಅವರು ಯುವತಿಯರನ್ನು ಶೋಷಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಪೊಲೀಸರು ಅಶ್ಲೀಲ ಚಿತ್ರಗಳನ್ನು ಚಂದಾದಾರಿಕೆಯ ಮೂಲಕ ಮಾರಾಟ ಮಾಡಿದ್ದಾರೆ ಎಂದು ಹೇಳಿದ್ದಾರೆ. ವರದಿಯ ಪ್ರಕಾರ, ಅವರು ಆಗಸ್ಟ್ ಮತ್ತು ಡಿಸೆಂಬರ್ 2020 ರ ನಡುವೆ ಆಪಲ್‌ನ ಆಪ್ ಸ್ಟೋರ್‌ನಲ್ಲಿ ಹಾಟ್‌ಶಾಟ್ಸ್ ಅಪ್ಲಿಕೇಶನ್‌ನ ಚಂದಾದಾರರಿಂದ ರೂ 1.17 ಕೋಟಿ ಗಳಿಸಿದ್ದಾರೆ.Jul 19 -
ಪುಲಿಟ್ಜರ್ ಪ್ರಶಸ್ತಿ ವಿಜೇತ ಫೋಟೋ ಜರ್ನಲಿಸ್ಟ್ ದಾನಿಶ್ ಸಿದ್ದಿಕಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ದಾಳಿಗೆ ಬಲಿಯಾದರು.ಪುಲಿಟ್ಜರ್ ಪ್ರಶಸ್ತಿ ವಿಜೇತ ಭಾರತೀಯ ಛಾಯಾಗ್ರಾಹಕ ದಾನಿಶ್ ಸಿದ್ದಿಕಿ ಅಫ್ಘಾನಿಸ್ತಾನದಲ್ಲಿ ಕೊಲ್ಲಲ್ಪಟ್ಟರು. ಪತ್ರಕರ್ತ ಕಂದಹಾರ್ ನಗರದ ಸ್ಪಿನ್ ಬೋಲ್ಡಾಕ್ ಜಿಲ್ಲೆಯಲ್ಲಿ ಅಫ್ಘನ್ ಪಡೆಗಳು ಮತ್ತು ತಾಲಿಬಾನ್ ನಡುವಿನ ಘರ್ಷಣೆಯನ್ನು ವರದಿ ಮಾಡಲು ತೆರಳಿದಾಗ ಸಾವನ್ನಪ್ಪಿದ್ದರು. ರೋಹಿಂಗ್ಯಾ ಬಿಕ್ಕಟ್ಟಿನ ವರದಿಗಾಗಿ ಸಿದ್ದಿಕಿ 2018 ರಲ್ಲಿ ಪುಲಿಟ್ಜರ್ ಪ್ರಶಸ್ತಿಯನ್ನು ಗೆದ್ದರು. ಅವರು ಅಫ್ಘಾನಿಸ್ತಾನ ಸಂಘರ್ಷ, ಹಾಂಗ್ ಕಾಂಗ್ ಪ್ರತಿಭಟನೆಗಳು ಮತ್ತು ಏಷ್ಯಾ, ಮಧ್ಯಪ್ರಾಚ್ಯ ಮತ್ತು ಯುರೋಪ್ನಲ್ಲಿನ ಇತರ ಪ್ರಮುಖ ಘಟನೆಗಳನ್ನು ಚಿತ್ರೀಕರಿಸಿದ್ದರು.Jul 16 -
ದಿಲೀಪ್ ಕುಮಾರ್ ನಿಧನಹಿಂದಿ ಚಿತ್ರರಂಗದ ದಿಗ್ಗಜ ನಟ ದಿಲೀಪ್ ಕುಮಾರ್ ಮುಂಬೈನ ಹಿಂದೂಜಾ ಆಸ್ಪತ್ರೆಯಲ್ಲಿ ನಿಧನರಾದರು. 98 ವರ್ಷ ವಯಸ್ಸಿನ ಬಾಲಿವುಡ್ ಹಿರಿಯ ನಟ ದಿಲೀಪ್ ಕುಮಾರ್ ಬಹುಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಬಾಲಿವುಡ್‌ನ 'ಟ್ರಾಜಿಡಿ ಕಿಂಗ್' ಎಂದೇ ಕರೆಯಲ್ಪಡುವ ಹಿರಿಯ ನಟ ಆರು ದಶಕಗಳವರೆಗಿನ ತಮ್ಮ ವೃತ್ತಿಜೀವನದಲ್ಲಿ 65 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.Jul 07 -
ಉತ್ತರಾಖಂಡದಲ್ಲಿ ಮತ್ತೆ ಮುಖ್ಯಮಂತ್ರಿ ಬದಲಾವಣೆ.ಉತ್ತರಾಖಂಡ ರಾಜ್ಯದ 11ನೇ ಮುಖ್ಯಮಂತ್ರಿಯಾಗಿ ಪುಷ್ಕರ್ ಸಿಂಗ್ ಧಾಮಿ ನೇಮಕ. ಉತ್ತರಾಖಂಡದಲ್ಲಿ ಮತ್ತೆ ಮುಖ್ಯಮಂತ್ರಿ ಬದಲಾವಣೆಯಾಗಿದ್ದು, ಪುಷ್ಕರ್ ಸಿಂಗ್ ಧಾಮಿ ಉತ್ತರಾಖಂಡದ 11 ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ನಾಲ್ಕು ತಿಂಗಳ ಅಲ್ಪಾವಧಿಯಲ್ಲಿ ಮೂರನೇ ಬಾರಿಗೆ ಸ್ಥಾನ ಬದಲಾವಣೆಯಾಗಿದೆ. ಮತ್ತು ಪುಷ್ಕರ್ ಸಿಂಗ್ ಧಾಮಿ 11 ನೇ ಸಿಎಂ ಆಗಿ ನೇಮಕಗೊಂಡರು. ಖತಿಮಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿರುವ ಧಾಮಿ (45) ಉತ್ತರಾಖಂಡದ ಅತ್ಯಂತ ಕಿರಿಯ ಮುಖ್ಯಮಂತ್ರಿಯಾಗಿದ್ದಾರೆ. ಧಾಮಿ ರಾಜ್ಯ ಸರ್ಕಾರದಲ್ಲಿ ಇದುವರೆಗೆ ಸಚಿವರಾಗಿಲ್ಲ.Jul 04 -
ಪಾದ್ರಿ ಸ್ಟಾನ್ ಸ್ವಾಮಿ ನಿಧನಎಲ್ಗಾರ್ ಪರಿಷದ್ ಪ್ರಕರಣದಲ್ಲಿ ಕಠಿಣ ಭಯೋತ್ಪಾದನಾ ವಿರೋಧಿ ಕಾನೂನಿನಡಿ ಬಂಧಿತರಾಗಿದ್ದ ಪಾದ್ರಿ ಸ್ಟಾನ್ ಸ್ವಾಮಿ ನಿಧನ. ಸ್ಟಾನ್ ಸ್ವಾಮಿ ಅವರು ಜಾರ್ಖಂಡ್ ರಾಜ್ಯದ ಸಾಂವಿಧಾನಿಕ ಹಕ್ಕುಗಳು, ಭೂಮಿ ಹಕ್ಕುಗಳು, ಅರಣ್ಯ ಹಕ್ಕುಗಳು, ಕಾರ್ಮಿಕ ಹಕ್ಕುಗಳು ಮತ್ತು ಸಮುದಾಯದ ಸದಸ್ಯರ ಪ್ರಾತಿನಿಧ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ತೆಗೆದುಕೊಳ್ಳುವ ಮೂಲಕ ಆದಿವಾಸಿ ಸಮುದಾಯಗಳ ಉನ್ನತಿ ಮತ್ತು ಕಲ್ಯಾಣಕ್ಕಾಗಿ ಕೆಲಸ ಮಾಡುವ ಮೂಲಕ ಹೆಸರುವಾಸಿಯಾಗಿದ್ದರು. ಸ್ಟಾನ್ ಸ್ವಾಮಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು, ಜತೆಗೆ ಪಾರ್ಕಿನ್‌ಸನ್ ರೋಗವೂ ಇತ್ತು. 2020ರ ಅಕ್ಟೋಬರ್ 08ರಂದು ರಾಂಚಿಯಲ್ಲಿ ಫಾದರ್ ಸ್ಟಾನ್ ಸ್ವಾಮಿಯನ್ನು ಬಂಧಿಸಲಾಗಿತ್ತು. ಅವರು ಭೀಮಾ ಕೋರೆಗಾಂವ್‌ಗೆ ಎಂದಿಗೂ ಹೋಗಿಲ್ಲ ,ಪ್ರತಿಭಟನೆಗಳ ಹೊರತಾಗಿಯೂ, ಅವರನ್ನು ಮುಂಬೈಗೆ ಕರೆದೊಯ್ಯಲಾಯಿತು, ಅಲ್ಲಿ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು ಮತ್ತು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಬಹುಶಃ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ (UAPA) ಅಡಿಯಲ್ಲಿ ಅವರನ್ನು ಬಂಧಿಸಲಾಗಿತ್ತು. ಅವರು CPI (ಮಾವೋವಾದಿ) ನೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂದು ತನಿಖೆಗಳಿಂದ ದೃಢಪಟ್ಟಿವೆ ಎಂದು ಎನ್‌ಐಎ ಅಧಿಕಾರಿಗಳು ಹೇಳಿದ್ದಾರೆ.Jul 04
June 2021
- Jun 19
ಕರ್ನಾಟಕದಲ್ಲಿ ಅನ್‌ಲಾಕ್ ಘೋಷಣೆಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಜೂನ್ 19ರಂದು ಅನ್‌ಲಾಕ್ ಘೋಷಣೆ ಮಾಡಿದರು. ಅನ್‌ಲಾಕ್ ಘೋಷಣೆಯಾದ ಜಿಲ್ಲೆಗಳಲ್ಲಿ ಎಲ್ಲಾ ಅಂಗಡಿಗಳನ್ನು ಸಂಜೆ 5 ಗಂಟೆಯ ತನಕ ತೆರೆಯಲು ಅವಕಾಶ ನೀಡಲಾಗಿದೆ. ಎಸಿ ಇಲ್ಲದ ಹೋಟೆಲ್, ಕ್ಲಬ್, ರೆಸ್ಟೋರೆಂಟ್‌ಗಳಲ್ಲಿ ಶೇ 50ರಷ್ಟು ಸಾಮರ್ಥ್ಯದೊಂದಿಗೆ ಕುಳಿತು ತಿನ್ನಲು ಅವಕಾಶ ಕೊಡಲಾಯಿತು. - Jun 18
ಫ್ಲೈಯಿಂಗ್ ಸಿಖ್ ಮಿಲ್ಕಾ ಸಿಂಗ್ ಇನ್ನಿಲ್ಲಫ್ಲೈಯಿಂಗ್ ಸಿಖ್ ಮಿಲ್ಕಾ ಸಿಂಗ್ ಅವರು ಕೊನೆಯುಸಿರೆಳೆದರು ಜುಲೈನಲ್ಲಿ, ಸ್ವತಂತ್ರ ಭಾರತದ ಅತಿದೊಡ್ಡ ಕ್ರೀಡಾ ಐಕಾನ್‌ಗಳಲ್ಲಿ ಒಬ್ಬರಾಗಿದ್ದ ಮಿಲ್ಕಾ ಸಿಂಗ್, ಕೊರೊನಾ ಸೋಂಕಿನೊಂದಿಗೆ ನೊಂದಿಗೆ ಹೋರಾಡಿ ಚಿಕಿತ್ಸೆ ಫಲಕಾರಿಯಾಗದೆ ಜೂನ್ 19ಎಂದು ಸಾವನ್ನಪ್ಪಿದ್ದರು. ಅಥ್ಲೀಟ್ ನಾಲ್ಕು ಬಾರಿ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಮತ್ತು 1958 ರ ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ಆಗಿದ್ದಾರೆ ಆದರೆ ಅವರ ಶ್ರೇಷ್ಠ ಪ್ರದರ್ಶನವು 1960 ರ ರೋಮ್ ಒಲಿಂಪಿಕ್ಸ್‌ನ 400 ಮೀ ಫೈನಲ್‌ನಲ್ಲಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ. ಅವರ 45.6 ಸೆಕೆಂಡುಗಳ ಸಮಯವು 38 ವರ್ಷಗಳ ಕಾಲ ರಾಷ್ಟ್ರೀಯ ದಾಖಲೆಯಾಗಿ ಉಳಿಯಿತು, ಪರಮ್‌ಜೀತ್ ಸಿಂಗ್ 1998 ರಲ್ಲಿ ಅದನ್ನು ಮುರಿದರು. ಅವರು 1956 ಮತ್ತು 1964 ರ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದರು ಮತ್ತು 1959 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದರು. - Jun 15
ನಟ ಸಂಚಾರಿ ವಿಜಯ್ ನಿಧನರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ನಟ ಸಂಚಾರಿ ವಿಜಯ್ ಚಿಕಿತ್ಸೆ ಫಲಕಾರಿಯಾಗದೇ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. - Jun 05
ಲಾಕ್ ಡೌನ್ ವಿಸ್ತರಣೆಕರ್ನಾಟಕ ಸರ್ಕಾರ ಕೋವಿಡ್ ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಜೂನ್ 7ರವರೆಗೂ ವಿಧಿಸಲಾಗಿದ್ದ ನಿರ್ಬಂಧಗಳನ್ನು ಜೂನ್ 14ರವರೆಗೆ ವಿಸ್ತರಣೆ ಮಾಡಿತು.
May 2021
-
ಕರ್ನಾಟಕದಲ್ಲಿ ಬ್ಲಾಕ್ ಫಂಗಸ್ ಪ್ರಕರಣ ಪತ್ತೆಕರ್ನಾಟಕದಲ್ಲಿ ಕೋವಿಡ್ ಸೋಂಕಿನಿಂದ ಗುಣಮುಖಗೊಂಡವರಲ್ಲಿ ಬ್ಲಾಕ್ ಫಂಗಸ್ ಪ್ರಕರಣ ಪತ್ತೆಯಾಯಿತು. ಕರ್ನಾಟಕ ಸರ್ಕಾರ ಸೋಂಕಿತರಿಗೆ ಚಿಕಿತ್ಸೆ ನೀಡಲು ಮಾರ್ಗಸೂಚಿ ಬಿಡುಗಡೆ ಮಾಡಿತು.May 26 -
ಯಾಸ್ ಚಂಡಮಾರುತದ ಅಬ್ಬರಯಾಸ್ ಚಂಡಮಾರುತ ಒಡಿಶಾ ಮತ್ತು ಪಶ್ಚಿಮ ಬಂಗಾಳದ ಕರಾವಳಿಗೆ ಅಪ್ಪಳಿಸಿತ್ತು. ಪಶ್ಚಿಮ ಬಂಗಾಳ ಮತ್ತು ಉತ್ತರ ಒಡಿಶಾದ ಭಾಗಗಳು ಯಾಸ್ ಚಂಡಮಾರುತದಿಂದ ಹಾನಿಗೊಳಗಾದವು, ಈ ಪ್ರಬಲವಾದ ಮತ್ತು ಹಾನಿಕರವಾದ ಚಂಡಮಾರುತವು ಮೇ ತಿಂಗಳಲ್ಲಿ ದೇಶವನ್ನು ಅಪ್ಪಳಿಸಿತು. ಕನಿಷ್ಠ 10 ಮಿಲಿಯನ್ ಜನರು ಪರಿಣಾಮ ಬೀರಿತು ಮತ್ತು 3,00,000 ಮನೆಗಳು ಹಾನಿಗೊಳಗಾದವು. ಯಾಸ್‌ನಿಂದ ಹೆಚ್ಚು ಪ್ರಭಾವಿತವಾಗಿರುವ ಪಶ್ಚಿಮ ಬಂಗಾಳದಲ್ಲಿ ಸುಮಾರು 20 ಸಾವಿರ ಕೋಟಿ ರೂ ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಚಂಡಮಾರುತದಿಂದಾಗಿ ಒಡಿಶಾದಲ್ಲಿ ಅಂದಾಜು 610 ಕೋಟಿ ರೂ.ವಷ್ಟು ಹಾನಿಯುಂಟಾಗಿದೆ. ಚಂಡಮಾರುತವು ಉತ್ತರ-ವಾಯುವ್ಯದ ಕಡೆಗೆ ಚಲಿಸಿತು ಮತ್ತು ಬಿಹಾರ, ಜಾರ್ಖಂಡ್ ಮತ್ತು ಉತ್ತರ ಪ್ರದೇಶದ ಮೇಲೂ ಪರಿಣಾಮ ಬೀರಿತು. ಭಾರತದ ಹೊರಗೆ, ಬಾಂಗ್ಲಾದೇಶ ಮತ್ತು ನೇಪಾಳದ ಮೇಲೂ ಚಂಡಮಾರುತವು ಪರಿಣಾಮ ಬೀರಿತು.May 26 - ಲಕ್ಷದ್ವೀಪದಲ್ಲಿ ಗೋಮಾಂಸ ನಿಷೇಧ ವಿವಾದಗೋಮಾಂಸವನ್ನು ನಿಷೇಧಿಸಿದ್ದಕ್ಕಾಗಿ ಆಡಳಿತಾಧಿಕಾರಿ ವಿರುದ್ಧ ಲಕ್ಷದ್ವೀಪದಲ್ಲಿ ಪ್ರತಿಭಟನೆಗಳು ಭುಗಿಲೆದ್ದವು. ಪಟೇಲ್ ಅವರು ಗೋಮಾಂಸ ನಿಷೇಧ, ಭೂ ತಿದ್ದುಪಡಿ ನಿಯಮಗಳು ಮತ್ತು ಸಮಾಜವಿರೋಧಿ ಚಟುವಟಿಕೆಗಳ ನಿಯಂತ್ರಣ ಮಸೂದೆಯ ಕರಡನ್ನು ಪರಿಚಯಿಸಲು ಮತ್ತು ಇಬ್ಬರಿಗಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಪಂಚಾಯತ್ ಚುನಾವಣೆ ಆಕಾಂಕ್ಷಿಗಳನ್ನು ಅನರ್ಹಗೊಳಿಸುವಂತೆ ಪ್ರಸ್ತಾಪಿಸಿದ್ದರು. ದ್ವೀಪವಾಸಿಗಳು ಈ ವಿಚಾರವಾಗಿ ಪ್ರತಿಭಟಿಸಿದ್ದಾರೆ ಮತ್ತು ಇತರರು ಸ್ಥಳೀಯರ ಜೀವನ ವಿಧಾನಕ್ಕೆ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ದೂರಿದ್ದಾರೆ. ಮುಸ್ಲಿಂ ಬಾಹುಳ್ಯವಿರುವ ಲಕ್ಷದೀಪದಲ್ಲಿ ಪ್ರಫುಲ್ ಪಟೇಲ್ ತಂದಿರುವ ಈ ಹೊಸ ಸುಧಾರಣೆಯನ್ನು ಸ್ಥಳೀಯರು ಜನವಿರೋಧಿ ಎಂದು ಕರೆದರು.May 25
-
ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ನಡುವೆ ಕದನ ವಿರಾಮಹಮಾಸ್ ಉಗ್ರರನ್ನು ಸದೆಬಡೆಯಲು ಇಸ್ರೇಲ್ ಸತತ 11 ದಿನಗಳ ಕಾಲ ಗಾಜಾ ಪಟ್ಟಿಯಲ್ಲಿ ನಡೆಸಿದ ಕದನ ಮೇ.21 ಅಂತ್ಯಗೊಂಡಿತ್ತು. ಈಜಿಪ್ಟ್ ಮಧ್ಯಪ್ರವೇಶದಿಂದ ಇಸ್ರೇಲ್ ಕದನ ವಿರಾಮ ಘೋಷಿಸಿದೆ. ಇತ್ತ ಹಮಾಸ್ ಹೋರಾಟ ಅಂತ್ಯಗೊಳಿಸಲು ಒಪ್ಪಿಕೊಂಡಿದ್ದು, ಮುಂಜಾನೆ 2 ಗಂಟೆಯಿಂದ ಕದನ ವಿರಾಮ ಜಾರಿಯಾಗಿದೆ. 2014 ರ ಕದನ ವಿರಾಮದಂತೆಯೇ, ಇದು ಎರಡೂ ಪಕ್ಷಗಳಿಗೆ ಸರಿಹೊಂದುವವರೆಗೆ ಇರುತ್ತದೆ. ಮತ್ತು ಒಪ್ಪಂದವು ಅವರ ದೀರ್ಘ-ಘರ್ಷಣೆಯ ಇತ್ಯರ್ಥಕ್ಕೆ ಕಾರಣವಾಗಬಹುದಾದ ಯಾವುದೇ ಗಣನೀಯ ಅಂಶಗಳನ್ನು ಒಳಗೊಂಡಿದೆ ಎಂದು ಸೂಚಿಸಲು ಏನೂ ಇಲ್ಲ. ಜೆರುಸಲೇಂನ ಅಲ್ ಅಕ್ಸಾ ಮಸೀದಿಯಲ್ಲಿ ನಡೆದ ಸಂಘರ್ಷ ಕಳೆದ 11 ದಿನಗಳಲ್ಲಿ ಮಿನಿ ಯುದ್ಧವಾಗಿ ಮಾರ್ಪಟ್ಟಿತ್ತು. ಉಗ್ರರ ಸದ್ದಡಗಿಸಲು ಇಸ್ರೇಲ್ ಸಜ್ಜಾಗಿತ್ತು. ಹೀಗಾಗಿ ಗಾಜಾ ಪಟ್ಟಿಯಲ್ಲಿ ಅಡಗಿದ್ದ ಉಗ್ರರ ನೆಲೆಗಳ ಮೇಲೆ ಇಸ್ರೇಲ್ ಸತತ ದಾಳಿ ಮಾಡಿತ್ತು. ಈ ದಾಳಿಯಲ್ಲಿ ಹಲವು ನಾಗರೀಕರು, ಮಕ್ಕಳು ಸಾವನ್ನಪ್ಪಿದ್ದರು. ಕನಿಷ್ಠ 217 ಪ್ಯಾಲೆಸ್ಟೈನ್ ಮಂದಿ ಮತ್ತು 12 ಇಸ್ರೇಲಿಗಳು ಸಂಘರ್ಷದಲ್ಲಿ ಸಾವನ್ನಪ್ಪಿದ್ದಾರೆ.May 23 - ಸುಂದರ್‌ಲಾಲ್ ಬಹುಗುಣ ನಿಧನಹಿರಿಯ ಪರಿಸರವಾದಿ ಸುಂದರ್‌ಲಾಲ್ ಬಹುಗುಣ ಅವರು ಕೊನೆಯುಸಿರೆಳೆದಿದ್ದಾರೆ. 1970 ರ ದಶಕದಲ್ಲಿ ಅಪ್ಪಿಕೋ ಚಳವಳಿ ಮೂಲಕ ಹೆಸರುವಾಸಿಯಾಗಿದ್ದ ಅವರು ಮೇ 21, 2021 ರಂದು ಸಾವನ್ನಪ್ಪಿದ್ದರು. ಅವರು ಹಿಮಾಲಯದ ಕಾಡುಗಳನ್ನು ಉಳಿಸುವ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಅಪ್ಪಿಕೋ ಚಳವಳಿಯ ಪ್ರವರ್ತಕ, ತೆಹ್ರಿ ಅಣೆಕಟ್ಟಿನ ವಿರೋಧಿಗಳಲ್ಲಿ ಒಬ್ಬರು, ಈ ಅಣೆಕಟ್ಟು ಹಲವಾರು ಹಳ್ಳಿಗಳನ್ನು ಮುಳುಗಿಸುವುದರ ಜೊತೆಗೆ ಸಾವಿರಾರು ಮಂದಿಯ ಸ್ಥಳಾಂತರಕ್ಕೆ ಕಾರಣವಾಗಿತ್ತು. ಪರಿಸರ ಸಂರಕ್ಷಣಾ ಕ್ಷೇತ್ರದಲ್ಲಿನ ಅವರ ಕೆಲಸಕ್ಕಾಗಿ ಬಹುಗುಣ ಅವರಿಗೆ ಪದ್ಮವಿಭೂಷಣ ಮತ್ತು ಇತರ ಅನೇಕ ಗೌರವಗಳನ್ನು ನೀಡಲಾಗಿದೆ.May 21
-
ವಿಶೇಷ ಪ್ಯಾಕೇಜ್ ಘೋಷಣೆಲಾಕ್ ಡೌನ್ ಘೋಷಣೆ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೂವು ಬೆಳೆಗಾರರು, ಬೀದಿ ಬದಿ ವ್ಯಾಪಾರಿಗಳು, ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ನೆರವಾಗಲು 1,250 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದರು.May 19 -
ಗುಜರಾತ್‌ನ ಕರಾವಳಿಗೆ ಅಪ್ಪಳಿಸಿದ ತೌಕ್ತೆ ಚಂಡಮಾರುತತೌಕ್ತೆ ಚಂಡಮಾರುತವು ಭಾರತದ ಗುಜರಾತ್‌ನ ಕರಾವಳಿಯನ್ನು ಅಪ್ಪಳಿಸಿತ್ತು. ತೌಕ್ತೆ ಚಂಡಮಾರುತ, ಅರಬ್ಬಿ ಸಮುದ್ರದಲ್ಲಿ ಪ್ರಬಲವಾದ, ಮಾರಣಾಂತಿಕ ಮತ್ತು ಹಾನಿಕಾರಕ ಉಷ್ಣವಲಯದ ಚಂಡಮಾರುತವು ಗುಜರಾತ್‌ಗೆ ಅಪ್ಪಳಿಸಿತು, ಇದು 1998 ರಿಂದ ರಾಜ್ಯದಲ್ಲಿ ಭೂಕುಸಿತವನ್ನು ಉಂಟುಮಾಡುವ ಪ್ರಬಲವಾದ ಉಷ್ಣವಲಯದ ಚಂಡಮಾರುತವಾಗಿದೆ. ಮೇ 14 ರಂದು ಶುರುವಾದ ಚಂಡಮಾರುತವು 174 ಜನರ ಹತ್ಯೆಗೆ ಕಾರಣವಾಯಿತು. ಗುಜರಾತ್‌ನಲ್ಲಿ 200,000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಯಿತು. ಚಂಡಮಾರುತವು ಕೇರಳ ಮತ್ತು ಲಕ್ಷದ್ವೀಪಗಳಲ್ಲಿ ಭಾರೀ ಮಳೆ ಮತ್ತು ಹಠಾತ್ ಪ್ರವಾಹವನ್ನು ತಂದೊಡ್ಡಿತು. ಈ ಅವಧಿಯಲ್ಲಿ ಗೋವಾ, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿಯೂ ಅತಿ ಹೆಚ್ಚು ಮಳೆಯಾಗಿದೆ.May 17 -
ಕರ್ನಾಟಕದಲ್ಲಿ ಲಾಕ್‌ಡೌನ್ ಘೋಷಣೆಕರ್ನಾಟಕದಲ್ಲಿ ಲಾಕ್‌ಡೌನ್ ಘೋಷಣೆ. ಮೇ 10 ರಿಂದ 24ರ ತನಕ ಕರ್ನಾಟಕದಲ್ಲಿ ಸಂಪೂರ್ಣ ಲಾಕ್‌ಡೌನ್ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಘೋಷಣೆ ಮಾಡಿದರು.May 07 -
ಆರ್‌ಎಲ್‌ಡಿ ಮುಖ್ಯಸ್ಥ ಅಜಿತ್ ಸಿಂಗ್ ನಿಧನಭಾರತೀಯ ರಾಜಕಾರಣಿ ಮತ್ತು ಆರ್‌ಎಲ್‌ಡಿ ಮುಖ್ಯಸ್ಥ ಅಜಿತ್ ಸಿಂಗ್ ನಿಧನರಾದರು. "ರಾಷ್ಟ್ರೀಯ ಲೋಕದಳ (RLD) ಮುಖ್ಯಸ್ಥ ಮತ್ತು ಮಾಜಿ ಕೇಂದ್ರ ಸಚಿವ ಚೌಧರಿ ಅಜಿತ್ ಸಿಂಗ್ ಅವರು ಮೇ 6 ರಂದು 82 ನೇ ವಯಸ್ಸಿನಲ್ಲಿ ಕೋವಿಡ್ 19 ನಿಂದಾಗಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು. ಅಜಿತ್ ಸಿಂಗ್ ಅವರು ಗುರುಗ್ರಾಮ್‌ನ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಸೇರಿದಂತೆ ಹಲವು ರಾಜಕೀಯ ಮುಖಂಡರು ಸಂತಾಪ ಸೂಚಿಸಿದ್ದಾರೆ.May 06 -
ಟ್ವಿಟ್ಟರ್ ಕಂಗನಾ ರಣಾವತ್ ಖಾತೆ ಬಂದ್ಟ್ವಿಟ್ಟರ್ ಕಂಗನಾ ರಣಾವತ್ ಅವರ ಖಾತೆಯನ್ನು ಶಾಶ್ವತವಾಗಿ ಅಮಾನತುಗೊಳಿಸಿದೆ. "ಟ್ವಿಟ್ಟರ್ ತನ್ನ ನಿಯಮಗಳ ಪುನರಾವರ್ತಿತ ಉಲ್ಲಂಘನೆಗಾಗಿ ಬಾಲಿವುಡ್ ನಟಿ ಕಂಗನಾ ರಾಣಾವತ್ ಅವರ ಖಾತೆಯನ್ನು ಶಾಶ್ವತವಾಗಿ ಅಮಾನತುಗೊಳಿಸಿದೆ. ಯಾವ ನಿರ್ದಿಷ್ಟ ಟ್ವೀಟ್ ನಟಿಯನ್ನು ತೊಂದರೆಗೆ ಸಿಲುಕಿಸಿದೆ ಎಂಬುದು ಸ್ಪಷ್ಟವಾಗಿಲ್ಲವಾದರೂ, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರನ್ನು "ಪಳಗಿಸಿ" ಎಂದು ಪ್ರಧಾನಿ ನರೇಂದ್ರ ಮೋದಿಗೆ ರಾಣಾವತ್ ಮಾಡಿದ ಟ್ವೀಟ್ ಅವರ ಖಾತೆಯ ಅಮಾನತಿಗೆ ಕಾರಣ ಎಂದು ಹೇಳಲಾಗಿದೆ. ಇದು ಭಯಾನಕವಾದದ್ದು ಗೂಂಡಾನನ್ನು(ಮಮತಾ) ಕೊಲ್ಲಲು ನಮಗೆ ಸೂಪರ್ ಗೂಂಡಾ ಬೇಕು ಅವರನ್ನು ಪಳಗಿಸಲು ಮೋದಿಯವರು ದಯವಿಟ್ಟು ನಿಮ್ಮ ವಿರಾಟ ರೂಪವನ್ನು ತೋರಿಸಿ ಎಂದು ಪಶ್ಚಿಮ ಬಂಗಾಳ ಚುನಾವಣೆ ಘೋಷಣೆಯಾದ ಬಳಿಕ ಕಂಗನಾ ಟ್ವೀಟ್ ಮಾಡಿದ್ದರು.May 04 -
ಮಮತಾ ಬ್ಯಾನರ್ಜಿ ಸತತ ಮೂರನೇ ಅವಧಿಗೆ ಸಿಎಂಮಮತಾ ಬ್ಯಾನರ್ಜಿ ಸತತ ಮೂರನೇ ಅವಧಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಬಲ ಗೆಲುವು ಸಾಧಿಸಿದ್ದಾರೆ, ಮೇ 5 ರಂದು ಮೂರನೇ ಅವಧಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಒಟ್ಟಾರೆಯಾಗಿ, ರಾಜ್ಯದ 294 ವಿಧಾನಸಭೆಗಳಲ್ಲಿ 213 ರಲ್ಲಿ ಟಿಎಂಸಿ ಗೆದ್ದಿದೆ. ಕ್ಷೇತ್ರಗಳಲ್ಲಿ ಬಿಜೆಪಿ 77 ಗೆದ್ದಿದೆ. 292 ಸ್ಥಾನಗಳಿಗೆ ಮತ ಎಣಿಕೆ ನಡೆಯಿತು.May 02 -
ಭಾರತವು 18 ವರ್ಷ ಮೇಲ್ಪಟ್ಟವರಿಗೆ ಸಾಮೂಹಿಕ ಲಸಿಕೆ ಅಭಿಯಾನ“18 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬರೂ ಮೇ 1 ರಿಂದ ಕೊರೊನಾವೈರಸ್ ವಿರುದ್ಧ ಲಸಿಕೆಯನ್ನು ಪಡೆಯಲು ಅರ್ಹರಾಗಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿತ್ತು. ಇದು ರಾಜ್ಯಗಳು, ಖಾಸಗಿ ಆಸ್ಪತ್ರೆಗಳು ಮತ್ತು ಕೈಗಾರಿಕಾ ಸಂಸ್ಥೆಗಳಿಗೆ ತಯಾರಕರಿಂದ ನೇರವಾಗಿ ಡೋಸ್‌ಗಳನ್ನು ಪಡೆಯಲು ಅನುವು ಮಾಡಿಕೊಡುವ ಲಸಿಕೆ ಅಭಿಯಾನವನ್ನು ಶುರುಮಾಡಿತು. ಈ ಬೆಲೆಯ ಆಧಾರದಲ್ಲಿ ರಾಜ್ಯ ಸರ್ಕಾರಗಳು, ಖಾಸಗಿ ಆಸ್ಪತ್ರೆಗಳು, ಕೈಗಾರಿಕಾ ಸಂಸ್ಥೆಗಳು ಇತ್ಯಾದಿಗಳು ತಯಾರಕರಿಂದ ಲಸಿಕೆಗಳನ್ನು ಪಡೆಯಲು ಸಾಧ್ಯವಾಗುತ್ತದೆ.May 01
April 2021
- Apr 30
ಸುದ್ದಿ ನಿರೂಪಕ ರೋಹಿತ್ ಸರ್ದಾನ ನಿಧನಟಿವಿ ಮಾಧ್ಯಮದ ಜನಪ್ರಿಯ ಪತ್ರಕರ್ತ, ನಿರೂಪಕ ರೋಹಿತ್ ಸರ್ದಾನಾ ಅವರು ಕೋವಿಡ್ 19 ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಕೊರೊನಾ ಪಾಸಿಟಿವ್ ಆಗಿದ್ದ ಅವರಿಗೆ ಶುಕ್ರವಾರದಂದು ಹೃದಯ ಸ್ತಂಭನವಾಗಿದ್ದರಿಂದ ಕೊನೆಯುಸಿರೆಳೆದಿದ್ದಾರೆ. ಇಂಡಿಯಾ ಟುಡೇ ಗ್ರೂಪ್‌ನ ಆಜ್ ತಕ್‌ನಲ್ಲಿ ಕಾರ್ಯನಿರ್ವಾಹಕ ಸಂಪಾದಕ ಮತ್ತು ಟಿವಿ ನ್ಯೂಸ್ ಆಂಕರ್ ಆಗಿದ್ದ ಸರ್ದಾನ ಅವರು ಕಾರ್ಯ ನಿರ್ವಹಿಸುತ್ತಿದ್ದರು. ಸರ್ದಾನ ತಮ್ಮ ಪತ್ನಿ, ಇಬ್ಬರು ಪುತ್ರಿಯರು ಮತ್ತು ಪೋಷಕರನ್ನು ಅಗಲಿದ್ದಾರೆ. - Apr 28
ಅಸ್ಸಾಂನಲ್ಲಿ ಭೂಕಂಪಬುಧವಾರ (ಏಪ್ರಿಲ್ 28) ಬೆಳಗ್ಗೆ ಭಾರತದ ಅಸ್ಸಾಂನಲ್ಲಿ ರಿಕ್ಟರ್ ಮಾಪಕದಲ್ಲಿ 6.4 ತೀವ್ರತೆಯ ಭೂಕಂಪ ಸಂಭವಿಸಿದೆ. ಸದ್ಯಕ್ಕೆ ಲಭ್ಯವಿರುವ ಮಾಹಿತಿಯ ಪ್ರಕಾರ, ಭೂಕಂಪವು ಅಸ್ಸಾಂನಲ್ಲಿ ಕೇಂದ್ರಬಿಂದು ಹೊಂದಿದ್ದಾರೂ ಅಸ್ಸಾಂ, ಉತ್ತರ ಬಂಗಾಳ ಮತ್ತು ಈಶಾನ್ಯದ ಇತರ ಭಾಗಗಳಲ್ಲಿ ಕಂಪನದ ಅನುಭವವಾಗಿದೆ. ಆದರೆ, ಯಾವುದೇ ಪ್ರಾಣ ಹಾನಿ ಅಥವಾ ಆಸ್ತಿ ಹಾನಿ ವರದಿಯಾಗಿಲ್ಲ. - Apr 07
ಸಾರಿಗೆ ನೌಕರರ ಪ್ರತಿಭಟನೆಸಾರಿಗೆ ನೌಕರರನ್ನು 6ನೇ ವೇತನ ಆಯೋಗದ ಅಡಿ ತರಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ನೌಕರರು ಪ್ರತಿಭಟನೆ ರಾಜ್ಯದ ಗಮನ ಸೆಳೆದಿತ್ತು. - Apr 03
ಛತ್ತೀಸ್‌ಗಢದ ಸುಕ್ಮಾದಲ್ಲಿ ನಕ್ಸಲರ ದಾಳಿ, 22 ಭದ್ರತಾ ಸಿಬ್ಬಂದಿ ಸಾವುಕಳೆದ ಎರಡು ವರ್ಷಗಳಲ್ಲಿ ಮಾವೋವಾದಿಗಳು ನಡೆಸಿದ ಅತ್ಯಂತ ಭೀಕರ ದಾಳಿಗೆ ಸುಕ್ಮಾ ಸಾಕ್ಷಿಯಾಗಿದೆ. ಸುಮಾರು 400 ದಂಗೆಕೋರರು ನಡೆಸಿದ ಹೊಂಚುದಾಳಿಯಿಂದ ಸುಮಾರು 22 ಯೋಧರು ಸಾವನ್ನಪ್ಪಿದರು ಮತ್ತು 31 ಮಂದಿ ಗಾಯಗೊಂಡರು, ನಕ್ಸಲರು ಮೂರು ಕಡೆಗಳಿಂದ ಯೋಧರನ್ನು ಸುತ್ತುವರೆದು ಹಲವಾರು ಗಂಟೆಗಳ ಕಾಲ ಗುಂಡಿನ ಮಳೆಗೆರೆದಿದ್ದರು. ಎಲ್ ಇ ಡಿ ಸ್ಫೋಟ ಕೂಡಾ ಕೆಲ ಗಂಟೆಗಳಲ್ಲಿ ಸಂಭವಿಸಿತು. - Apr 02
ಕರ್ನಾಟಕ ಸರ್ಕಾರ ಹೊಸ ಮಾರ್ಗಸೂಚಿಕೋವಿಡ್ ಪ್ರಕರಣಗಳು ಹೆಚ್ಚಾದ ಹಿನ್ನಲೆಯಲ್ಲಿ ಕರ್ನಾಟಕ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟಿಸಿತು. ಉನ್ನತ ಶಿಕ್ಷಣ ಹಾಗೂ ವೃತ್ತಿಪರ ಕೋರ್ಸ್‌ಗಳ ತರಗತಿಗಳಲ್ಲಿ ಮಂಡಳಿಯ/ ವಿಶ್ವವಿದ್ಯಾಲಯಗಳ ಪರೀಕ್ಷೆ ಬರೆಯುವ ಹಾಗೂ ವೈದ್ಯಕೀಯ ಶಿಕ್ಷಣದ ತರಗತಿಗಳನ್ನು ಹೊರತುಪಡಿಸಿ ಇತರ ಎಲ್ಲಾ ತರಗತಿಗಳನ್ನು ಸ್ಥಗಿತಗೊಳಿಸಿತು. - Apr 01
10 ಲಕ್ಷದ ಗಡಿ ದಾಟಿದ ಕೋವಿಡ್ ಪ್ರಕರಣಕರ್ನಾಟಕದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 10 ಲಕ್ಷದ ಗಡಿ ದಾಟಿತು. ಏಪ್ರಿಲ್ 1ರಂದು 4,234 ಪ್ರಕರಣಗಳು ದಾಖಲಾಗುವ ಮೂಲಕ ರಾಜ್ಯದ ಪಕರಣಗಳ ಸಂಖ್ಯೆ 10,01,238ಕ್ಕೆ ಏರಿಕೆಯಾಯಿತು. - Apr 01ಬಲವಂತದ ಮತಾಂತರ ತಡೆಗೆ ಗುಜರಾತ್ ಧಾರ್ಮಿಕ ಸ್ವಾತಂತ್ರ್ಯ ಕಾಯಿದೆ, 2003ಗೆ ತಿದ್ದುಪಡಿ"ಧಾರ್ಮಿಕ ಸ್ವಾತಂತ್ರ್ಯ ಕಾಯಿದೆ, 2003 ಗೆ ತಿದ್ದುಪಡಿಗಳನ್ನು ಪ್ರಸ್ತಾಪಿಸುವ ಮಸೂದೆಯನ್ನು ಗುಜರಾತ್ ಅಂಗೀಕರಿಸಿದೆ. ಈ ರೀತಿ ಕಾನೂನು ಜಾರಿಗೆ ತಂದ ರಾಜ್ಯಗಳ ಪೈಕಿ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ನಂತರ ಗುಜರಾತ್ ಮೂರನೇ ಭಾರತೀಯ ಜನತಾ ಪಕ್ಷ (ಬಿಜೆಪಿ)-ಆಡಳಿತದ ರಾಜ್ಯವಾಗಿದೆ. ಗುಜರಾತ್ ಧಾರ್ಮಿಕ ಸ್ವಾತಂತ್ರ್ಯ (ತಿದ್ದುಪಡಿ) ಕಾಯಿದೆ, 2021 ರ ಜೂನ್ 15 ರಂದು ಅಧಿಸೂಚನೆ ಹೊರಡಿಸಲಾಯಿತು. ಈ ಕಾಯಿದೆಯು ಮದುವೆಯ ಮೂಲಕ ಬಲವಂತದ ಧಾರ್ಮಿಕ ಮತಾಂತರಕ್ಕೆ ಕಠಿಣ ಶಿಕ್ಷೆಯನ್ನು ಹೊಂದಿದೆ ಮತ್ತು 3 ರಿಂದ 5 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ರೂ 2 ಲಕ್ಷದವರೆಗೆ ದಂಡವನ್ನು ವಿಧಿಸುತ್ತದೆ. ಸಂತ್ರಸ್ತೆ ಅಪ್ರಾಪ್ತ ವಯಸ್ಕ, ಮಹಿಳೆ, ದಲಿತ ಅಥವಾ ಬುಡಕಟ್ಟು ಆಗಿದ್ದರೆ, ನಂತರ ಅಪರಾಧಿಗಳಿಗೆ 4 ರಿಂದ 7 ವರ್ಷಗಳ ಜೈಲು ಶಿಕ್ಷೆ ಮತ್ತು 3 ಲಕ್ಷ ರೂ.ಗಿಂತ ಕಡಿಮೆಯಿಲ್ಲದ ದಂಡ ವಿಧಿಸಬಹುದು. ಕಾನೂನನ್ನು ಉಲ್ಲಂಘಿಸುತ್ತಿರುವ ಸಂಸ್ಥೆ ಅಥವಾ ಸಂಸ್ಥೆಗೆ, ಅಪರಾಧದ ಸಮಯದಲ್ಲಿ ಉಸ್ತುವಾರಿ ವಹಿಸುವ ವ್ಯಕ್ತಿಯು ಕಾಯಿದೆಯ ಪ್ರಕಾರ ಹತ್ತು ವರ್ಷಗಳವರೆಗೆ ವಿಸ್ತರಿಸುವ ಮೂರು ವರ್ಷಗಳಿಗಿಂತ ಕಡಿಮೆಯಿಲ್ಲದ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ.
March 2021
-
ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿಯಾಗಿ ದತ್ತಾತ್ರೇಯ ಹೊಸಬಾಳೆಕರ್ನಾಟಕ ಮೂಲದ ದತ್ತಾತ್ರೇಯ ಹೊಸಬಾಳೆ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸರ್‌ಕಾರ್ಯವಾಹ್ (ಪ್ರಧಾನ ಕಾರ್ಯದರ್ಶಿ) ಆಗಿ ಆಯ್ಕೆಯಾಗಿದ್ದಾರೆ. ಅವರು ಇಲ್ಲಿಯವರೆಗೆ ಸಂಘದ ಸಹ-ಸರಕಾರ್ಯವಾಹ್ (ಜಂಟಿ ಪ್ರಧಾನ ಕಾರ್ಯದರ್ಶಿ) ಆಗಿದ್ದರು. ಶಿವಮೊಗ್ಗದ ಸೊರಬದಲ್ಲಿ ಜನಿಸಿದ ಹೊಸಬಾಳೆ, ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವೀಧರರು, 1968 ರಲ್ಲಿ ಸಂಘಕ್ಕೆ ಸೇರಿ, ಸಂಘದ ಏಳಿಗೆಗೆ ಶ್ರಮಿಸಿದರು. ಅವರು ಆರಂಭದಲ್ಲಿ ಆರ್‌ಎಸ್‌ಎಸ್‌ನ ವಿದ್ಯಾರ್ಥಿ ವಿಭಾಗವಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಯೊಂದಿಗೆ ಸಂಬಂಧ ಹೊಂದಿದ್ದರು ಮತ್ತು ನಂತರ ಆರ್‌ಎಸ್‌ಎಸ್ ಸಂಘಟಕರಾದರು.Mar 20 -
* ದಿನೇಶ್ ಕಲ್ಲಳ್ಳಿ ವಿರುದ್ಧ ರಮೇಶ್ ಜಾರಕಿಹೊಳಿ ದೂರು ದಾಖಲುಮಾರ್ಚ್ 6 ರಂದು ರಮೇಶ್ ಜಾರಕಿಹೊಳಿ ಸಿಡಿ ಬಿಡುಗಡೆ ಮಾಡಿದ್ದ ರಮೇಶ್ ಕಲ್ಲಳ್ಳಿ ವಿರುದ್ಧ ದೂರು ದಾಖಲಾಗಿತ್ತು.Mar 06 -
ಕರ್ನಾಟಕದಲ್ಲಿ ಎರಡನೇ ಹಂತದ ಲಸಿಕಾ ಅಭಿಯಾನಕರ್ನಾಟಕದಲ್ಲಿ ಮಾರ್ಚ್ 1ರಿಂದ ಎರಡನೇ ಹಂತದ ಕೊರೊನಾ ಲಸಿಕೆ ವಿತರಣಾ ಅಭಿಯಾನ ಆರಂಭವಾಯಿತು. 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಹಾಗೂ 45 ವರ್ಷ ದಾಟಿದ ದೀರ್ಘಕಾಲದ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಕೊರೊನಾ ಲಸಿಕೆಗಳನ್ನು ನೀಡಲು ಆರಂಭಿಸಲಾಯಿತು. ಹಾಗೆಯೇ ಆರೋಗ್ಯ ಕಾರ್ಯಕರ್ತರು ಹಾಗೂ ಮುಂಚೂಣಿ ಕಾರ್ಯಕರ್ತರಿಗೆ ಮೊದಲ ಹಂತದಲ್ಲಿ ಆದ್ಯತೆ ನೀಡಲಾಗಿತ್ತು.Mar 01
February 2021
- Feb 24
ನವೀಕೃತ ಮೊಟೆರಾ ಕ್ರಿಕೆಟ್ ಸ್ಟೇಡಿಯಂಗೆ ಮೋದಿ ಹೆಸರು ನಾಮಕರಣಅಹಮದಾಬಾದ್ನ ಮೊಟೆರಾ ಕ್ರಿಕೆಟ್ ಸ್ಟೇಡಿಯಂ ಅನ್ನು ನವೀಕರಿಸಲಾಗಿದೆ ಮತ್ತು ನರೇಂದ್ರ ಮೋದಿಯವರ ಹೆಸರನ್ನು ಮರುನಾಮಕರಣ ಮಾಡಲಾಗಿದೆ "ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಬುಧವಾರ ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವನ್ನು ಉದ್ಘಾಟಿಸಿದರು. ಮೋಟೆರಾದಲ್ಲಿ ನವೀಕರಿಸಿದ ಸರ್ದಾರ್ ಪಟೇಲ್ ಕ್ರೀಡಾಂಗಣ - ಇದು ಅತ್ಯಾಧುನಿಕ ಸೌಲಭ್ಯದಿಂದ ಕೂಡಿದ್ದು, ಸುಮಾರು 1.32 ಲಕ್ಷ ಪ್ರೇಕ್ಷಕರಿಗೆ ಅವಕಾಶ ಕಲ್ಪಿಸುತ್ತದೆ. ಈ ಹಿಂದೆ ಭಾರತದ ಮೊದಲ ಉಪ ಪ್ರಧಾನಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಹೆಸರನ್ನು ಇಡಲಾಗಿದ್ದ ಕ್ರೀಡಾಂಗಣವನ್ನು ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನು ಮರುನಾಮಕರಣ ಮಾಡಲಾಗಿದೆ ಮತ್ತು ಇನ್ನು ಮುಂದೆ ನರೇಂದ್ರ ಮೋದಿ ಸ್ಟೇಡಿಯಂ ಎಂದು ಕರೆಯಲಾಗುತ್ತದೆ. - Feb 14
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪುತ್ರಿ ವಿವಾಹಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಿರಿಯ ಪುತ್ರಿ ಐಶ್ವರ್ಯ ವಿವಾಹ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅಳಿಯ, ಕಾಫಿ ಡೇ ಸಂಸ್ಥಾಪಕ ದಿವಂಗತ ವಿ.ಜಿ. ಸಿದ್ದಾರ್ಥ ಹೆಗ್ಡೆ ಅವರ ಹಿರಿಯ ಪುತ್ರ ಅಮರ್ತ್ಯ ಹೆಗ್ಡೆ ಜತೆ ನಡೆಯಿತು. - Feb 14
ಟೂಲ್-ಕಿಟ್ ಕೇಸ್: ಬೆಂಗಳೂರಿನಲ್ಲಿ ಕಾರ್ಯಕರ್ತೆ ದಿಶಾ ರವಿ ಬಂಧನಕೇಂದ್ರದ ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆಗೆ ಸಂಬಂಧಿಸಿದ ಮಾಹಿತಿಯನ್ನು ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್ ಅವರೊಂದಿಗೆ ಹಂಚಿಕೊಂಡ ಆರೋಪದ ಮೇಲೆ ಹವಾಮಾನ ಕಾರ್ಯಕರ್ತೆ ದಿಶಾ ರವಿ (22) ಅವರನ್ನು ಬೆಂಗಳೂರಿನಲ್ಲಿ ಬಂಧಿಸಲಾಯಿತು. ದಿಶಾ ಅವರು "ಟೂಲ್‌ಕಿಟ್ ಗೂಗಲ್ ಡಾಕ್" ಮತ್ತು ಡಾಕ್ಯುಮೆಂಟ್‌ನ ಸೂತ್ರೀಕರಣ ಮತ್ತು ಪ್ರಸರಣದಲ್ಲಿ "ಪ್ರಮುಖ ಸಂಚುಕೋರ" ಸಂಪಾದಕರಾಗಿದ್ದರು ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಬ್ಯಾಚುಲರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಪದವೀಧರರಾಗಿರುವ ರವಿ ಅವರು 'ಫ್ರೈಡೇಸ್ ಫಾರ್ ಫ್ಯೂಚರ್ ಇಂಡಿಯಾ' ಹೆಸರಿನ ಗುಂಪಿನ ಸ್ಥಾಪಕ ಸದಸ್ಯರಾಗಿದ್ದಾರೆ. - Feb 07
ಉತ್ತರಾಖಂಡದ ಚಮೋಲಿಯಲ್ಲಿರುವ ಬೃಹತ್ ನೀರ್ಗಲ್ಲು ಸ್ಫೋಟ, ಪ್ರವಾಹಉತ್ತರಾಖಂಡ್ನ ಚಮೋಲಿ ಜಿಲ್ಲೆಯ ಜೋಶಿಮಠದ ಬಳಿ ಬೃಹತ್ ನೀರ್ಗಲ್ಲು ಸ್ಫೋಟಗೊಂಡಿದ್ದು, ಹಿಮನದಿಯ ದಿಢೀರ್ ಪ್ರವಾಹದಿಂದಾಗಿ ಅನೇಕ ಜೀವಗಳನ್ನು ಕಳೆದುಕೊಂಡರು ಹಾಗೂ ನೂರಾರು ಮಂದಿ ನಾಪತ್ತೆಯಾದರು. ಭಾರಿ ಹಿಮಪಾತದಿಂದಾಗಿ ಋಷಿಗಂಗಾ ವಿದ್ಯುತ್ ಯೋಜನೆಗೂ ಹಾನಿಯಾಗಿದೆ. ಹಿಮಪರ್ವತ ಸ್ಫೋಟದಿಂದ ಅಲಕ್ ನಂದ್, ದೌಲಿಗಂಗಾ ನದಿಯಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. 171ಕ್ಕೂ ಅಧಿಕ ಮಂದಿ ಕಾರ್ಮಿಕರು ನಾಪತ್ತೆ ಆಗಿದ್ದರು. ಐಟಿಬಿಪಿ ಸಿಬ್ಬಂದಿ ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ಜಂಟಿ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಚಮೋಲಿಯ ತಪೋವನ ಸುರಂಗದಲ್ಲಿ ಸಿಲುಕಿದ್ದವರನ್ನು ರಕ್ಷಿಸಲಾಗಿತ್ತು. - Feb 01
ಕರ್ನಾಟಕದಲ್ಲಿ 9-11ನೇ ತರಗತಿಗಳು ಪ್ರಾರಂಭಕರ್ನಾಟಕದಲ್ಲಿ 9ನೇ ತರಗತಿ ಹಾಗೂ ಪ್ರಥಮ ಪಿಯುಸಿ ತರಗತಿಗಳು ಫೆಬ್ರವರಿ 01ರಿಂದ ಪೂರ್ಣ ಪ್ರಮಾಣದಲ್ಲಿ ಪ್ರಾರಂಭಗೊಂಡವು. ಇದರ ಜೊತೆಗೆ 10 ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಕೂಡ ಪ್ರಮಾಣದಲ್ಲಿ ತರಗತಿಗಳನ್ನು ಆರಂಭಿಸಲಾಯಿತು.
January 2021
-
ಗಣರಾಜ್ಯೋತ್ಸವ- ರೈತರ ಪ್ರತಿಭಟನೆ"ಕೃಷಿ ಸುಧಾರಣೆ, ಪ್ರಸ್ತಾವಿತ ವಿಧೇಯಕರನ್ನು ವಿರೋಧಿಸಿ ಸಾವಿರಾರು ರೈತರು ಜನವರಿ 26 ರಂದು (ಗಣರಾಜ್ಯೋತ್ಸವ) ನವದೆಹಲಿಯ ಐತಿಹಾಸಿಕ ಕೆಂಪು ಕೋಟೆಯತ್ತ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದರು. ಪ್ರತಿಭಟನಾಕಾರರು ಉದ್ದೇಶಿತ ಟ್ರಾಕ್ಟರ್ ಮೆರವಣಿಗೆಗಾಗಿ ಗೊತ್ತುಪಡಿಸಿದ ಮಾರ್ಗದಿಂದ ದೂರ ಸರಿದು ಕೆಂಪು ಕೋಟೆಗೆ ನುಗ್ಗಿದರು. 300 ಕ್ಕೂ ಹೆಚ್ಚು ಅಡೆತಡೆಗಳನ್ನು ಒಡೆದುಹಾಕಲಾಯಿತು ಮತ್ತು 17 ಸರ್ಕಾರಿ ಕಾರುಗಳನ್ನು ಧ್ವಂಸಗೊಳಿಸಲಾಯಿತು ಮತ್ತು ಪೊಲೀಸರ ಮೇಲೆ ದಾಳಿ, ಪೊಲೀಸ್ ವಾಹನ ಜಖಂ ಮತ್ತು ಕೆಂಪು ಕೋಟೆಯ ಟಿಕೆಟ್ ಕೌಂಟರ್ ಧ್ವಂಸಗೊಂಡ ಘಟನೆ ನಡೆಯಿತು. ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ರೈತರ ಆಂದೋಲನ, ಕೆಂಪುಕೋಟೆ ಮೇಲೆ ಬಾವುಟ ಹಾರಿಸಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಯಿತು. ಈ ಘಟನೆ ಭಾರತದ ಪ್ರತಿಷ್ಠೆಗೆ ಹೊಡೆತ ಎಂದು ಪ್ರತಿಪಕ್ಷಗಳು ಮೋದಿ ಸರ್ಕಾರವನ್ನು ಟೀಕೆ ಮಾಡಿದವು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವಿದೇಶಿ ಸೆಲೆಬ್ರಿಟಿಗಳ ಕಾಮೆಂಟ್‌ಗಳು ಸರ್ಕಾರಕ್ಕೆ ತೀವ್ರ ಮುಜುಗರ ಎದುರಿಸುವಂತೆ ಮಾಡಿತು.Jan 26 -
ಬಿಎಸ್ ಯಡಿಯೂರಪ್ಪ ಸರ್ಕಾರದಲ್ಲಿ ಖಾತೆ ಬದಲಾವಣೆಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂಪುಟದಲ್ಲಿ ಮೂವರು ಸಚಿವರ ಖಾತೆ ಬದಲಾವಣೆ ಸದ್ದು ಮಾಡಿತ್ತು. ಡಾ. ಸುಧಾಕರ್‌ಗೆ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ, ಜೆ.ಸಿ. ಮಾಧುಸ್ವಾಮಿಗೆ ಪ್ರವಾಸೋದ್ಯಮ, ಪರಿಸರ ಖಾತೆ ಹಾಗೂ ಆನಂದ್ ಸಿಂಗ್‌ಗೆ ಮೂಲ ಸೌಕರ್ಯ ಹಾಗೂ ಹಜ್ ಮತ್ತು ವಕ್ಫ್ ಖಾತೆಗಳನ್ನು ನೀಡಲಾಯಿತು.Jan 25 -
ಯುಎಸ್ಎಯ 46ನೇ ಅಧ್ಯಕ್ಷರಾಗಿ ಜೋ ಬೈಡನ್ ಪ್ರಮಾಣ ವಚನ ಸ್ವೀಕಾರ"ಜೋ ಬೈಡನ್ ಅವರು ಯುನೈಟೆಡ್ ಸ್ಟೇಟ್ಸ್‌ನ 46ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದರು. ಈ ಐತಿಹಾಸಿಕ ಸಮಾರಂಭಕ್ಕೆ ಸಾವಿರಾರು ಭದ್ರತಾ ಸಿಬ್ಬಂದಿಗಳ ಅಭೂತಪೂರ್ವ ಭದ್ರತೆ ಒದಗಿಸಲಾಗಿತ್ತು. ಕೊವಿಡ್ 19 ಕಾರಣದಿಂದ ಅತಿಥಿಗಳ ಸಂಖ್ಯೆಯನ್ನು ಮಿತಿಗೊಳಿಸಲಾಗಿತ್ತು. ಟ್ರಂಪ್ ಪರ ಕಾರ್ಯಕರ್ತರ ಸಂಭಾವ್ಯ ದಾಳಿಯನ್ನು ತಡೆಯಲ್ಲಿ ಕ್ಯಾಪಿಟಲ್ ಹಿಲ್‌ನ್ನು ಅಕ್ಷರಶಃ ಭದ್ರತಾಕೋಟೆಯಾಗಿ ಪರಿವರ್ತಿಸಲಾಗಿತ್ತು. ಕ್ಯಾಪಿಟಲ್‌ನ ವೆಸ್ಟ್ ಫ್ರಂಟ್‌ನಲ್ಲಿ 78 ವರ್ಷದ ಅನುಭವಿ ಡೆಮಾಕ್ರಟಿಕ್ ನಾಯಕನಿಗೆ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಅವರು ಪ್ರಮಾಣ ವಚನ ಬೋಧಿಸಿದರು. ಅಮೆರಿಕದ ಇತಿಹಾಸದಲ್ಲಿ ಅತ್ಯಂತ ಹಿರಿಯ ಅಧ್ಯಕ್ಷರಾಗಿರುವ ಬೈಡನ್, ಅವರ ಪತ್ನಿ ಜಿಲ್ ಬೈಡನ್ ಅವರ ಕುಟುಂಬಸ್ಥರು ಹೊಂದಿದ್ದ 127 ವರ್ಷ ಹಳೆ ಬೈಬಲ್ ಮೇಲೆ ಎಡಗೈಯನ್ನು ಇರಿಸುವ ಮೂಲಕ ಪ್ರಮಾಣ ವಚನ ಸ್ವೀಕರಿಸಿದರು. ಅವರು ಈ ಹಿಂದೆ ಉಪಾಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸುವಾಗ ಮತ್ತು ಡೆಲವೇರ್‌ನ ಸೆನೆಟರ್ ಆಗಿ ಏಳು ಬಾರಿ ಅಧಿಕಾರ ಸ್ವೀಕರಿಸಿದಾಗಲೂ ಇದೇ ಬೈಬಲ್ ಅನ್ನು ಬಳಸಿದ್ದರು.Jan 20 -
ಆಸ್ಟ್ರೇಲಿಯಾದಲ್ಲಿ ಭಾರತದಕ್ಕೆ ಟೆಸ್ಟ್ ಸರಣಿ ಜಯಸರಿ ಸುಮಾರು 71 ವರ್ಷಗಳ ನಂತರ ಆಸ್ಟ್ರೇಲಿಯಾ ನೆಲದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಗೆದ್ದ ಭಾರತ. ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾದಿಂದ ಹೊಸ ಇತಿಹಾಸ ನಿರ್ಮಾಣ, ಸುವರ್ಣ ಅಧ್ಯಾಯ ಆರಂಭ. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ನಾಲ್ಕನೇ ಹಾಗೂ ಐದನೇ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಮೂಲಕ ಭಾರತ 2-1 ಅಂತರದಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿ ಬಾರ್ಡರ್-ಗವಾಸ್ಕರ್ ಟ್ರೋಫಿ ಎತ್ತಿ ಹಿಡಿದಿದೆ. 1947-48ರಲ್ಲಿ ಲಾಲಾ ಅಮರನಾಥ್ ನೇತೃತ್ವದ ಭಾರತ ತಂಡವು ಸರ್ ಡಾನ್ ಬ್ರಾಡ್ಮನ್ ತಂಡದ ವಿರುದ್ಧ ಮೇಲುಗೈ ಸಾಧಿಸಿದ ಬಳಿಕ ಇದೀಗ ಕೊಹ್ಲಿ ಪಡೆಯಿಂದ ಇಂಥ ಸಾಧನೆ ದಾಖಲಾಗಿದೆ.Jan 19 -
ಮೊದಲ ಬಾರಿಗೆ ಸಾರ್ವಜನಿಕರಿಗೆ ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಲಸಿಕೆ"ಕೋವಿಡ್ 19 ಸಾಂಕ್ರಾಮಿಕಕ್ಕೆ ಸುಮಾರು ಒಂದು ವರ್ಷವಾದ ಬಳಿಕ, ಭಾರತದಲ್ಲಿ ಮೊದಲ ಬಾರಿಗೆ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಬ್ರಿಟಿಷ್-ಸ್ವೀಡಿಷ್ ಕಂಪನಿ ಅಸ್ಟ್ರಾಜೆನೆಕಾ ಸಹ-ಅಭಿವೃದ್ಧಿಪಡಿಸಿದ ಕೊರೊನಾವೈರಸ್ ಲಸಿಕೆಯನ್ನು ಸಾರ್ವಜನಿಕರಿಗೆ ಬಳಸಲು ಅನುಮೋದನೆ ನೀಡಲಾಯಿತು. ಭಾರತದಲ್ಲಿ ಈ ಲಸಿಕೆಯನ್ನು ಕೋವಿಶೀಲ್ಡ್ ಎಂದು ಕರೆಯಲಾಗುತ್ತದೆ, ಇದು ಕೊರೊನಾವೈರಸ್ ಹರಡುವುದನ್ನು ತಡೆಯುವ ಪ್ರಮುಖ ಹೆಜ್ಜೆಯಾಗಿದೆ.Jan 04 -
ರಾಜ್ಯಾದ್ಯಂತ ಶಾಲೆಗಳು ಆರಂಭಕೊರೊನಾದಿಂದಾಗಿ ಮುಚ್ಚಲ್ಪಟ್ಟಿದ್ದ ಶಾಲೆಗಳು ಸತತ ಹತ್ತು ತಿಂಗಳ ಬಳಿಕ ಜನವರಿ 1ರಿಂದ ಪುನರಾರಂಭಗೊಂಡವು. ಕೊರೊನಾವೈರಸ್ ಹಿನ್ನೆಲೆಯಲ್ಲಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಹೊರಡಿಸಿರುವ ಮಾರ್ಗಸೂಚಿಸಿ ಅನ್ವಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಶಾಲೆಗಳಿಗೆ ಸೂಚಿಸಲಾಗಿತ್ತು.Jan 01 -
ಯುಎನ್‌ಎಸ್‌ಸಿಯಲ್ಲಿ ಎಂಟನೇ ಬಾರಿಗೆ ಭಾರತಕ್ಕೆ ತಾತ್ಕಾಲಿಕ ಸದಸ್ಯತ್ವವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ ಎಂಟನೇ ಬಾರಿಗೆ ತಾತ್ಕಾಲಿಕ ಸದಸ್ಯತ್ವ ಪಡೆದುಕೊಂಡಿದೆ. 2021-22ನೇ ಅವಧಿಗೆ ಸದಸ್ಯ ದೇಶವಾಗಿ ಕಾರ್ಯ ನಿರ್ವಹಿಸಲಿದೆ. ಜನವರಿ 01ರಂದು ಭಾರತದ ಧ್ವಜವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸ್ಥಾಪಿಸಲಾಗುತ್ತದೆ ಎಂದು UNSCಯಲ್ಲಿ ಭಾರತದ ಪ್ರತಿನಿಧಿ ಟಿ.ಎಸ್ ತಿರುಮೂರ್ತಿ ಹೇಳಿದರು. ಭಾರತದ ಜೊತೆಗೆ ಬೆಲ್ಜಿಯಂ, ಐವರಿ ಕೋಸ್ಟ್, ಜರ್ಮನಿ, ಇಂಡೋನೇಷ್ಯಾ, ಕುವೈತ್, ಪೆರು, ಪೋಲೆಂಡ್, ದಕ್ಷಿಣ ಆಫ್ರಿಕಾ, ಡೊಮೊನಿಕ್ ರಿಪಬ್ಲಿಕ್, ಈಕ್ವೆಟೋರಿಯಲ್ ಗಿನಿ ತಾತ್ಕಾಲಿಕ ಸದಸ್ಯರಾಷ್ಟ್ರಗಳಾಗಿವೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಬ್ರಿಟನ್, ಚೀನಾ, ಫ್ರಾನ್ಸ್, ರಷ್ಯಾ ಹಾಗೂ ಅಮೆರಿಕ ಶಾಶ್ವತ ಸದಸ್ಯ ರಾಷ್ಟ್ರಗಳಾಗಿವೆ.Jan 01 -
ಕೇಂದ್ರದ ಮಾಜಿ ಗೃಹ ಸಚಿವ ಬೂಟಾ ಸಿಂಗ್ ನಿಧನಹಿರಿಯ ಕಾಂಗ್ರೆಸ್ ಮುಖಂಡ, ರಾಜಸ್ಥಾನದ ಮಾಜಿ ಸಂಸದ ಹಾಗೂ ಕೇಂದ್ರ ಮಾಜಿ ಗೃಹ ಸಚಿವ ಬೂಟಾ ಸಿಂಗ್ (86) ಅವರು ಶನಿವಾರ ಬೆಳಗ್ಗೆ ನಿಧನರಾಗಿದ್ದಾರೆ. ಬ್ರೇನ್ ಹ್ಯಾಮರೇಜ್‌ನಿಂದ ಕೋಮಾ ಸ್ಥಿತಿಯಲ್ಲಿದ್ದ ಬೂಟಾ ಸಿಂಗ್‌ರವರಿಗೆ ದೆಹಲಿಯ ಏಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆರು ದಶಕಗಳ ಕಾಲದ ರಾಜಕೀಯ ಜೀವನದಲ್ಲಿ ನಾಲ್ಕು ಪ್ರಧಾನ ಮಂತ್ರಿಗಳ ಅವಧಿಯಲ್ಲಿ ಸಚಿವರಾಗಿ ಬೂಟಾ ಕಾರ್ಯ ನಿರ್ವಹಿಸಿದ್ದರು. ಗೃಹ ಸಚಿವಾಲಯ ವ್ಯವಹಾರ (1986-1989), ಬಿಹಾರದ ರಾಜ್ಯಪಾಲ (2004-2006) ಹಾಗೂ ಎನ್‌ಸಿಎಸ್‌ಸಿ ಚೇರ್ಮನ್ (2007-2010) ಆಗಿದ್ದರು.Jan 01
More From
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ












Click it and Unblock the Notifications