ಮದುವೆ ಮನೆಗೂ ಬಂತು ಬುಲ್ಡೋಜರ್: ಅಳಿಯನಿಗೆ ಮಾವ ಕೊಟ್ಟ ಉಡುಗೊರೆ

ಹಮೀರ್‌ಪುರ ಡಿಸೆಂಬರ್ 17: ಉತ್ತರ ಪ್ರದೇಶದ ಹಮೀರ್‌ಪುರ ಜಿಲ್ಲೆಯಲ್ಲಿ ವಿಶಿಷ್ಟ ಮದುವೆಯೊಂದು ನಡೆದಿದೆ. ಅದರ ಬಗ್ಗೆ ಕೇಳಿದರೆ ನೀವು ಶಾಕ್ ಆಗ್ತೀರಾ. ವಾಸ್ತವವಾಗಿ, ಹುಡುಗಿಯ ತಂದೆ ವರನಿಗೆ ಬೈಕು ಅಥವಾ ಕಾರನ್ನು ಉಡುಗೊರೆಯಾಗಿ ನೀಡುತ್ತಾರೆ. ಆದರೆ ಹಮೀರ್‌ಪುರ ಜಿಲ್ಲೆಯಲ್ಲಿ ವಧುವಿನ ತಂದೆ ವರ ಯೋಗೇಂದ್ರನಿಗೆ 'ಬುಲ್ಡೋಜರ್' ಉಡುಗೊರೆಯಾಗಿ ನೀಡಿದ್ದಾರೆ. ವರದಕ್ಷಿಣೆಗಾಗಿ ಬುಲ್ಡೋಜರ್‌ಗಳನ್ನು ವರದಕ್ಷಿಣೆಯಾಗಿ ನೀಡುತ್ತಿರುವ ಫೋಟೋಗಳು ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಮದುವೆಯಲ್ಲಿ ವರನಿಗೆ ಬುಲ್ಡೋಜರ್ ಕೊಡುವ ಮೊದಲ ಪ್ರಕರಣ ಇದಾಗಿದೆ. ಹೀಗಾಗಿ ಈ ಮದುವೆ ಆ ಪ್ರದೇಶದಲ್ಲಿ ಮಾತ್ರವಲ್ಲದೆ ಮಾಧ್ಯಮಗಳಲ್ಲಿಯೂ ಸುದ್ದಿಯಾಗಿದೆ. ಯುಪಿ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಬುಲ್ಡೋಜರ್‌ಗಳ ಬಗ್ಗೆ ಸಾಕಷ್ಟು ಚರ್ಚೆಯಾಯಿತು. ಆದರೆ, ಈಗ ಬುಲ್ಡೋಜರ್ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮದುವೆಯಲ್ಲಿ ವರನಿಗೆ ಬುಲ್ಡೋಜರ್ ನೀಡಿದ ನಂತರ ಈ ಮದುವೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದೆ.

Father-in-law gave the son-in-law a bulldozer as a wedding gift

ಹಮೀಪುರ್ ಜಿಲ್ಲೆಯ ಡೆವೆಲಪ್‌ಮೆಂಟ್ ಬ್ಲಾಕ್‌ನ ಸುಮೇರ್‌ಪುರ ಗ್ರಾಮ ದೇವಗಾಂವ್‌ನಲ್ಲಿ ಈ ವಿಶಿಷ್ಟ ವಿವಾಹ ನಡೆದಿದೆ. ವರದಿಗಳ ಪ್ರಕಾರ, ಗ್ರಾಮದ ನಿವಾಸಿ ನಿವೃತ್ತ ಯೋಧ ಪರಶುರಾಮ್ ಅವರ ಪುತ್ರಿ ನೇಹಾ ಅವರನ್ನು ಡಿಸೆಂಬರ್ 15 ರಂದು ನೌಕಾಪಡೆಯಲ್ಲಿ ಕೆಲಸ ಮಾಡುತ್ತಿರುವ ಸೋಂಖಾರ್ ನಿವಾಸಿ ಯೋಗೇಂದ್ರ ಅಲಿಯಾಸ್ ಯೋಗಿ ಪ್ರಜಾಪತಿ ಅವರೊಂದಿಗೆ ವಿವಾಹ ಮಾಡಲಾಗಿತ್ತು. ಸುಮೇರ್‌ಪುರದ ಅತಿಥಿಗೃಹದಲ್ಲಿ ವಿವಾಹ ಸಮಾರಂಭ ನಡೆಯಿತು. ಮದುವೆಯಲ್ಲಿ ನಿವೃತ್ತ ಯೋಧ ವರದಕ್ಷಿಣೆಯಲ್ಲಿ ವರನಿಗೆ ಐಷಾರಾಮಿ ಕಾರು ನೀಡದೆ ಬುಲ್ಡೋಜರ್ ನೀಡಿದ್ದಾನೆ.

Father-in-law gave the son-in-law a bulldozer as a wedding gift

ಡಿಸೆಂಬರ್ 16 ರಂದು ಮಗಳು ಬುಲ್ಡೋಜರ್‌ನಲ್ಲಿ ಕುಳಿತು ಗಂಡನ ಮನೆಗೆ ಹೊರಟಾಗ ಜನರು ಅದನ್ನು ಕಣ್ತುಂಬಿಕೊಳ್ಲುತ್ತಿದ್ದರು. ಮಗಳು ಪ್ರಸ್ತುತ ಯುಪಿಎಸ್‌ಸಿಗೆ ತಯಾರಿ ನಡೆಸುತ್ತಿದ್ದಾಳೆ ಎಂದು ನೇಹಾ ತಂದೆ ಪರಶುರಾಮ್ ಪ್ರಜಾಪತಿ ಹೇಳುತ್ತಾರೆ. ಕಾರು ಕೊಟ್ಟರೆ ನಿಂತಿರುತ್ತಿತ್ತು, ಬುಲ್ಡೋಜರ್ ಕೆಲಸ ಮಾಡುತ್ತೆ, ನನ್ನ ಮಗಳಿಗೆ ಬೆಲೆ ಸಿಗುತ್ತೆ ಎಂದರು. ಮತ್ತೊಂದೆಡೆ, ಯೋಗಿ ಪಡೆದ ಬುಲ್ಡೋಜರ್‌ನ ಚರ್ಚೆ ಜನರ ಬಾಯಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+