• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

Explained: ಲಸಿಕೆ ಕೊಟ್ಟ ಕ್ಷಣಕ್ಕೆ ಕಡಿಮೆಯಾಯ್ತಾ ಕೊರೊನಾವೈರಸ್!?

|

ನವದೆಹಲಿ, ಮಾರ್ಚ್.07: ಕೊರೊನಾವೈರಸ್ ಸೋಂಕಿಗೆ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿದೆ. ಕೊವಿಡ್-19 ಲಸಿಕೆ ವಿತರಣೆ ನಡುವೆ ಸೋಂಕಿನ ಅಪಾಯ ಕಡಿಮೆ ಆಗಿ ಹೋಯ್ತಾ. ಈ ಪ್ರಶ್ನೆಗೆ ಮಾತ್ರ ಇಂದಿಗೂ ಉತ್ತರ ಸಿಕ್ಕಿಲ್ಲ.

ವಿಶ್ವದಾದ್ಯಂತ 11,70,67,724 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಮಹಾಮಾರಿಗೆ 25,99,178 ಮಂದಿ ಪ್ರಾಣ ಬಿಟ್ಟಿದ್ದಾರೆ. ಒಟ್ಟು ಪ್ರಕರಣಗಳ ಪೈಕಿ 9,26,44,767 ಸೋಂಕಿತರು ಗುಣಮುಖರಾಗಿದ್ದು, 2,18,23,779 ಸಕ್ರಿಯ ಪ್ರಕರಣಗಳಿವೆ ಎಂದು ಗೊತ್ತಾಗಿದೆ.

ಹೆಚ್ಚು ಕೊರೊನಾ ಸೋಂಕಿತರಿರುವ ರಾಜ್ಯಗಳಲ್ಲಿ ಕರ್ನಾಟಕ ಕೂಡಾ ಒಂದು

ಕೊರೊನಾವೈರಸ್ ಸೋಂಕಿನ ಲಸಿಕೆ ವಿತರಣೆ ನಡುವೆ ಮಹಾಮಾರಿಯಿಂದ ಜನರಿಗೆ ಅಪಾಯ ಕಡಿಮೆಯಾಗಿದೆಯಾ. ವಿಶ್ವದಲ್ಲಿ ಅತಿಹೆಚ್ಚು ಅಪಾಯವನ್ನು ಎದುರಿಸುತ್ತಿರುವ ರಾಷ್ಟ್ರಗಳು ಯಾವುವು. ಯಾವ ರಾಷ್ಟ್ರವು ಹೆಚ್ಚು ಪ್ರಕರಣಗಳನ್ನು ದಾಖಲಿಸುತ್ತಿದೆ. ಯಾವ ದೇಶದಲ್ಲಿ ಎಷ್ಟು ಸೋಂಕಿತ ಪ್ರಕರಣಗಳಿವೆ. ವಿಶ್ವದಲ್ಲೇ ಅತಿಹೆಚ್ಚು ಸೋಂಕಿನಿಂದ ತತ್ತರಿಸಿರುವ ಟಾಪ್-5 ರಾಷ್ಟ್ರಗಳು ಯಾವುವು ಎನ್ನುವುದರ ಕುರಿತು ಒಂದು ವಿಶೇಷ ವರದಿ ಇಲ್ಲಿದೆ.

ಅಮೆರಿಕಾ ಜನರ ಎದೆಯಲ್ಲಿ ನಡುಕ ಹುಟ್ಟಿಸಿದ ಕೊರೊನಾ

ಅಮೆರಿಕಾ ಜನರ ಎದೆಯಲ್ಲಿ ನಡುಕ ಹುಟ್ಟಿಸಿದ ಕೊರೊನಾ

ಕೊರೊನಾವೈರಸ್ ಎಂದರೆ ಅಮೆರಿಕಾದ ಮಂದಿ ಕನಸಿನಲ್ಲೂ ಬೆಚ್ಚಿ ಬೀಳುವಂತಾ ಸ್ಥಿತಿ ನಿರ್ಮಾಣವಾಗಿದೆ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ 2,96,53,891 ಸೋಂಕಿತ ಪ್ರಕರಣಗಳು ವರದಿಯಾಗಿವೆ. 5,37,119 ಜನರು ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ. 2,02,73,915 ಸೋಂಕಿತರು ಗುಣಮುಖರಾಗಿದ್ದರೆ, 88,42,857 ಸಕ್ರಿಯ ಪ್ರಕರಣಗಳಿವೆ.

ಭಾರತದಲ್ಲಿ ಕೊವಿಡ್-19 ಸೋಂಕಿನ ಪ್ರಕರಣಗಳು

ಭಾರತದಲ್ಲಿ ಕೊವಿಡ್-19 ಸೋಂಕಿನ ಪ್ರಕರಣಗಳು

ಭಾರತದಲ್ಲಿ 24 ಗಂಟೆಗಳಲ್ಲೇ 18,711 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ದೇಶದಲ್ಲಿ ಒಂದು ದಿನದಲ್ಲಿ 100 ಮಂದಿ ಮಹಾಮಾರಿಯಿಂದ ಪ್ರಾಣ ಬಿಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 1,57,756 ಕ್ಕೆ ಏರಿಕೆಯಾಗಿದೆ. ಭಾನುವಾರದ ಅಂಕಿ-ಅಂಶಗಳ ಪ್ರಕಾರ, ದೇಶದಲ್ಲಿ ಒಟ್ಟು 1,12,10,799 ಕೊರೊನಾವೈರಸ್ ಸೋಂಕಿತ ಪ್ರಕರಣಗಳಿವೆ. ಒಂದು ದಿನದಲ್ಲಿ 14,392 ಸೋಂಕಿತರು ಗುಣಮುಖರಾಗಿದ್ದು, ಈವರೆಗೂ 1,08,68,520 ಜನರಿಗೆ ನೀಡಿದ ಚಿಕಿತ್ಸೆ ಯಶಸ್ವಿಯಾಗಿದೆ. ಇದರ ಹೊರತಾಗಿ 1,84,523 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಬ್ರೆಜಿಲ್ ರಾಷ್ಟ್ರವನ್ನು ಬೆಚ್ಚಿ ಬೀಳಿಸಿದ ಕೊರೊನಾ

ಬ್ರೆಜಿಲ್ ರಾಷ್ಟ್ರವನ್ನು ಬೆಚ್ಚಿ ಬೀಳಿಸಿದ ಕೊರೊನಾ

ಕೊರೊನಾವೈರಸ್ ಸೋಂಕಿನ ಹಾವಳಿಗೆ ಬ್ರೆಜಿಲ್ ಅಕ್ಷರಶಃ ಬೆಚ್ಚಿ ಬಿದ್ದಿದೆ. ಬ್ರೆಜಿಲ್ ನಲ್ಲಿ ಒಟ್ಟು 1,09,39,320 ಕೊರೊನಾವೈರಸ್ ಸೋಂಕಿತ ಪ್ರಕರಣಗಳ ವರದಿಯಾಗಿವೆ. ಮಹಾಮಾರಿಗೆ 2,64,446 ಮಂದಿಯು ಕೊವಿಡ್-19 ಸೋಂಕಿನಿಂದಲೇ ಪ್ರಾಣ ಬಿಟ್ಟಿದ್ದಾರೆ. ಈ ಪೈಕಿ 97,04,351 ಸೋಂಕಿತರು ಗುಣಮುಖರಾಗಿದ್ದು, 9,70,523 ಸಕ್ರಿಯ ಪ್ರಕರಣಗಳಿವೆ.

ರಷ್ಯಾದಲ್ಲಿ ರಣಕೇಕೆ ಹಾಕಿದ ಕೊರೊನಾವೈರಸ್

ರಷ್ಯಾದಲ್ಲಿ ರಣಕೇಕೆ ಹಾಕಿದ ಕೊರೊನಾವೈರಸ್

ಕೊರೊನಾವೈರಸ್ ಸೋಂಕಿಗೆ ರಷ್ಯಾದಲ್ಲಿ ಈವರೆಗೂ 88,726 ಜನರು ಬಲಿಯಾಗಿದ್ದಾರೆ. ಒಟ್ಟು 43,12,181 ಸೋಂಕಿತ ಪ್ರಕರಣಗಳು ವರದಿಯಾಗಿದೆ. 39,00,348 ಸೋಂಕಿತರು ಗುಣಮುಖರಾಗಿದ್ದರೆ, 3,23,107 ಸಕ್ರಿಯ ಪ್ರಕರಣಗಳು ವರದಿಯಾಗಿವೆ.

ಕೊವಿಡ್-19 ಸೋಂಕಿನಿಂದ ನಲುಗಿದ ಇಂಗ್ಲೆಂಡ್

ಕೊವಿಡ್-19 ಸೋಂಕಿನಿಂದ ನಲುಗಿದ ಇಂಗ್ಲೆಂಡ್

ಕೊರೊನಾವೈರಸ್ ಸೋಂಕಿನಿಂದ ಯುನೈಟೆಡ್ ಕಿಂಗ್ ಡಮ್(ಇಂಗ್ಲೆಂಡ್) ತತ್ತರಿಸಿ ಹೋಗಿದೆ. ರಷ್ಯಾಗಿಂತಲೂ ಅಧಿಕ ಮಂದಿ ಇಂಗ್ಲೆಂಡ್ ನಲ್ಲಿ ಕೊವಿಡ್-19 ಸೋಂಕಿಗೆ ಬಲಿಯಾಗಿದ್ದಾರೆ. 1,24,419 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. 31,99,565 ಸೋಂಕಿತರು ಗುಣಮುಖರಾಗಿದ್ದು, 8,89, 359 ಸಕ್ರಿಯ ಪ್ರಕರಣಗಳಿವೆ ಎಂದು ಗೊತ್ತಾಗಿದೆ.

English summary
Explained: Coronavirus Cases Across World Amid Distribution Of Covi-19 Vaccine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X