ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Exit Poll 2019: ದಕ್ಷಿಣದಲ್ಲಿ ಎನ್ಡಿಎಗಿಂತ ಪ್ರಾದೇಶಿಕ ಪಕ್ಷಗಳದ್ದೇ ಮೇಲುಗೈ

|
Google Oneindia Kannada News

2019ರ ಲೋಕಸಭೆ ಚುನಾವಣೆಯಲ್ಲಿ ಹೇಗಾದರೂ ಮಾಡಿ ದಕ್ಷಿಣ ಭಾರತದಲ್ಲಿ ಕಮಲ ಅರಳುವಂತೆ ಮಾಡಲು ಯತ್ನಿಸಿದ ಮೋದಿ- ಅಮಿತ್ ಶಾ ಜೋಡಿಗೆ ಹಿನ್ನಡೆಯಾಗಿದೆ. ಕರ್ನಾಟಕ ಬಿಟ್ಟು ಉಳಿದೆಡೆ ಪ್ರಾದೇಶಿಕ ಪಕ್ಷಗಳಿಗೆ ಹೆಚ್ಚಿನ ಮತ ಸಿಗಲಿದೆ ಎಂದು ಎಕ್ಸಿಟ್ ಟೋಲ್ ಫಲಿತಾಂಶಗಳ ದಕ್ಷಿಣ ಭಾರತ ವರದಿ ಹೇಳಿದೆ.

543 ಸ್ಥಾನಗಳಿಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಮತದಾನ ಪ್ರಕ್ರಿಯೆ, ಶೇಕಡಾವಾರು ಮತದಾನದ ಆಧಾರದ ಮೇಲೆ ವಿವಿಧ ಮಾಧ್ಯಮ ಸಂಸ್ಥೆಗಳು 2019ರಲ್ಲಿ ಯಾರು ಅಧಿಕಾರಕ್ಕೇರಲಿದ್ದಾರೆ ಎಂಬುದರ ಮುನ್ಸೂಚನೆ ಸಿಗಲಿದೆ. ತಮಿಳುನಾಡಿನ ವೆಲ್ಲೂರಿನಲ್ಲಿ ಚುನಾವಣಾ ಅಕ್ರಮ ಅಧಿಕವಾಗಿದ್ದರಿಂದ ಚುನಾವಣೆ ಮುಂದೂಡಲಾಗಿದೆ. ಹೀಗಾಗಿ, 542 ಸ್ಥಾನಗಳನ್ನು ಮಾತ್ರ ಪರಿಗಣಿಸಿ ಎಕ್ಸಿಟ್ ಪೋಲ್ ಫಲಿತಾಂಶ ನೀಡಲಾಗಿದೆ.

 Exit poll results suggest setback for NDA in south India, regional parties to do well

ಕರ್ನಾಟಕದಲ್ಲಿ ಕಾಂಗ್ರೆಸ್​-ಜೆಡಿಎಸ್ ಮೈತ್ರಿಯಿಂದ ಹೆಚ್ಚಿನ ಲಾಭವಾದಂತೆ ಕಂಡು ಬಂದಿಲ್ಲ. ಸೀಟು ಹಂಚಿಕೆ ಗೊಂದಲ, ಮಿತ್ರಪಕ್ಷಗಳ ನಡುವಿನ ಸಾಮರಸ್ಯದ ಕೊರತೆ, ಭಿನ್ನಮತೀಯ ಚಟುವಟಿಕೆಗಳಿಂದ ಬಳಲಿದ ಕಾಂಗ್ರೆಸ್ ಹಾಗೂ ಜೆಡಿಎಸ್ ಗೆ ಎಕ್ಸಿಟ್ ಪೋಲ್ ನಿಂದ ಕಹಿ ಸುದ್ದಿ ಸಿಕ್ಕಿದೆ. ಬಿಜೆಪಿ ಸರಾಸರಿ 20 -23 ರ ತನಕ ಗೆಲ್ಲುವ ಕುರುಹು ತೋರಿದೆ. ಇನ್ನು ಬಿಜೆಪಿ ಬೆಂಬಲಿತ ಮಂಡ್ಯದ ಅಭ್ಯರ್ಥಿ ಸುಮಲತಾ ಅವರ ಗೆಲುವು 50:50 ರ ಅನುಪಾತದಲ್ಲಿದ್ದು, ಕುತೂಹಲ ಮುಂದುವರೆದಿದೆ. ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಕೇವಲ 5 ರಿಂದ 8 ಸ್ಥಾನ ಗಳಿಸುವ ಸಾಧ್ಯತೆಯಿದೆ.

English summary
If exit polls are to be believed, not only was there a Modi wave in the 2019 Lok Sabha elections, but this wave was bigger than the 'TsuNamo' of 2014. However, the south Indian states appear to have halted the juggernaut of the saffron once again.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X